Shashi Tharoor Column: ಅಮೆರಿಕ-ಭಾರತ ಮತ್ತೊಮ್ಮೆ ಮಹೋನ್ನತವಾಗುವ ಕಾಲ ಬಂತು

ಮೂಲಭೂತವಾಗಿ ಅಮೆರಿಕದ ಬಾಹ್ಯ ಹೊಣೆಗಾರಿಕೆಗಳನ್ನು ತಗ್ಗಿಸುವ, ಸರಕಾರಿ ವ್ಯವಸ್ಥೆಯ ಗಾತ್ರ ವನ್ನು ಕುಗ್ಗಿಸುವ ಹಾಗೂ ವಿಶ್ವದ ವಿವಿಧೆಡೆ ಲಭ್ಯವಿರುವ ಅತ್ಯುತ್ತಮ ಪ್ರತಿಭೆಗಳನ್ನು ನೇಮಿಸಿಕೊಳ್ಳುವ ಮೂಲಕ ವ್ಯಾಪಾರ-ವ್ಯವ ಹಾರ ವಲಯವನ್ನು ವಿಸ್ತರಿಸುವ ಅಗತ್ಯವಿದೆ ಎಂದು ನಂಬುವವರು ಒಂದು ಕಡೆ ನಿಲ್ಲುತ್ತಾರೆ

Shashi Tharoor Column
Profile Ashok Nayak January 21, 2025

Source : Vishwavani Daily News Paper

ಶಶಿಪ್ರಭೆ

ಶಶಿ ತರೂರ್

ಟ್ರಂಪ್‌ರ ಒಂದಷ್ಟು ಬೆಂಬಲಿಗರು ವಲಸೆಗಾರಿಕೆಯನ್ನು ವಿರೋಧಿಸುತ್ತಿರುವುದಕ್ಕೆ ವರ್ಣ ಭೇದ ನೀತಿಯೊಂದೇ ಕಾರಣವಲ್ಲ. ಉದ್ಯೋಗ ಸಂಬಂಧಿತ ತೀವ್ರ ಸ್ಪರ್ಧೆಯಿಂದಾಗಿ ಅನೇಕ ಅಮೆರಿಕ ನ್ನರು ಭಯಕ್ಕೆ ಒಳಗಾಗಿದ್ದಾರೆ; ಅದರಲ್ಲೂ ವಿಶೇಷವಾಗಿ, ವೇಗವಾಗಿ ಬೆಳೆಯುತ್ತಿ ರುವ ವ್ಯಾಪಕ ಶ್ರೇಣಿಯ ಉದ್ಯಮಗಳಲ್ಲಿನ ನೌಕರರನ್ನು ಕೃತಕ ಬುದ್ಧಿಮತ್ತೆಯು ಪಲ್ಲಟ ಗೊಳಿಸಿ, ಅವರ ಸ್ಥಾನ ವನ್ನು ತಾನು ಆಕ್ರಮಿಸುತ್ತಿರುವ ಈ ಕಾಲಘಟ್ಟದಲ್ಲಿ, ಅಮೆರಿಕನ್ನರ ಈ ಭಯ ತೀವ್ರವೇ ಆಗಿದೆ ಎನ್ನಲಡ್ಡಿಯಿಲ್ಲ.

Screenshot_2

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಮೇಕ್ ಅಮೆರಿಕ ಗ್ರೇಟ್ ಅಗೇನ್’(MAGA) ಅಭಿಯಾನದ ಕಾರಣ ಹೊರಹೊಮ್ಮಿದ ‘ಅಂತರ್ಯುದ್ಧ’ದಲ್ಲಿ ‌ಭಾರತವು ಪ್ರಮುಖ ಪಾತ್ರಧಾರಿ ಯಾಗಿ ಕಾಣಿಸಿಕೊಂಡಿದೆ. ಕೆಲವರಿಗೆ ಇದು ಅಚ್ಚರಿದಾಯಕವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಅಭಿಯಾನದಲ್ಲಿ ಸೆಣಸುತ್ತಿರುವ ಬಣಗಳ ನಡುವೆ ‘ಭಾರತ-ಸದೃಶ’ ಕಂದಕವು ರೂಪು ಗೊಂಡು ಇಂಥದೊಂದು ಅಚ್ಚರಿಯ ಬೆಳವಣಿಗೆ ಆಗಿರುವುದಂತೂ ಖರೆ.

ಅಭಿಯಾನದ ಒಂದು ಬಣದಲ್ಲಿ ಗುರುತಿಸಿಕೊಂಡಿರುವವರ ನಂಬಿಕೆಗಳೇ ಬೇರೆ. ಅವರ ಪ್ರಕಾರ, ಅಮೆರಿಕದ ಹಿರಿಮೆಯ ಮರುಸ್ಥಾಪನೆ ಆಗಬೇಕೆಂದರೆ, ಪ್ರತ್ಯೇಕತೆ, ತೆರಿಗೆ ಕಡಿತಗಳು ಮತ್ತು ಅನಿ ಯಂತ್ರಣ ಇವುಗಳೇ ಅದಕ್ಕೆ ಕೀಲಿಕೈ ಆಗಿವೆ. ಅಂದರೆ, ಮೂಲಭೂತವಾಗಿ ಅಮೆರಿಕದ ಬಾಹ್ಯ ಹೊಣೆಗಾರಿಕೆಗಳನ್ನು ತಗ್ಗಿಸುವ, ಸರಕಾರಿ ವ್ಯವಸ್ಥೆಯ ಗಾತ್ರವನ್ನು ಕುಗ್ಗಿಸುವ ಹಾಗೂ ವಿಶ್ವದ ವಿವಿಧೆಡೆ ಲಭ್ಯವಿರುವ ಅತ್ಯುತ್ತಮ ಪ್ರತಿಭೆಗಳನ್ನು ನೇಮಿಸಿಕೊಳ್ಳುವ ಮೂಲಕ ವ್ಯಾಪಾರ-ವ್ಯವ ಹಾರ ವಲಯವನ್ನು ವಿಸ್ತರಿಸುವ ಅಗತ್ಯವಿದೆ ಎಂದು ನಂಬುವವರು ಒಂದು ಕಡೆ ನಿಲ್ಲುತ್ತಾರೆ.

ಇನ್ನು, ಮತ್ತೊಂದೆಡೆ ನಿಂತಿರುವವರನ್ನು ಅವಲೋಕಿಸಿದರೆ, ಈ ಅಭಿಯಾನವು ಇವರ ಪಾಲಿಗೆ ಬಹುಸಾಂಸ್ಕೃತಿಕತೆ, ಬಹುತ್ವ ಮತ್ತು ಜಾಗತಿಕ ಸಮುದಾಯ ಪ್ರಜ್ಞೆ ಎಂಬ ಪರಿಕಲ್ಪನೆಗಳಿಗೆ ಪ್ರತಿ ‌ಯಾಗಿ ಇರುವಂಥ ಅಗ್ರಗಣ್ಯ ಪ್ರತಿಕ್ರಿಯೆಯಾಗಿದೆ. ಇವರ ದೃಷ್ಟಿಕೋನದಲ್ಲಿ, ‘ಅಮೆರಿಕನ್ ಹಿರಿಮೆ’ ಎಂಬುದು, ‘ಅಮೆರಿಕನ್ ಶ್ವೇತವರ್ಣೀಯ ಸಿದ್ಧಾಂತ’ಕ್ಕೆ ಸಮಾನಾರ್ಥಕವಾಗಿ ಇರುವಂಥದ್ದು. ಈ ಎರಡೂ ಬಣಗಳ ಪಾಲಿಗೆ ಭಾರತವು ‘ಎಕ್ಸಿಬಿಟ್ ಎ’ ಆಗಿ (ಅಂದರೆ, ಒಂದು ಪ್ರದರ್ಶನ ದಾಖಲೆ ಯಾಗಿ) ಮಾರ್ಪಟ್ಟಿದೆ.

ಯಾವುದೇ ತೆರದಲ್ಲಿ ಲೆಕ್ಕ ಹಾಕಿದರೂ, ಇಲ್ಲಿನ ಭಾರತೀಯರು ‘ಮಾದರಿ ಅಲ್ಪಸಂಖ್ಯಾತ’ರಾಗಿzರೆ. ಅಂದರೆ, ಅಮೆರಿಕದಲ್ಲಿರುವ ಭಾರತೀಯ ವಲಸಿಗರ ಪೈಕಿ ಶೇ.72ರಷ್ಟು ಮಂದಿ ವಿಶ್ವವಿದ್ಯಾಲಯ ಗಳಲ್ಲಿನ ಪದವೀಧರರಾಗಿದ್ದಾರೆ ಮತ್ತು ಅತಿಹೆಚ್ಚು ಗಳಿಕೆ ಮಾಡುವ ವಲಸೆ ಗುಂಪುಗಳ ಪೈಕಿ ಭಾರತೀಯರು ಸೇರಿದ್ದಾರೆ.

ಕಳೆದ ಕಾಲು ಶತಮಾನದಲ್ಲಿ, ಸಿಲಿಕಾನ್ ವ್ಯಾಲಿಯ ‘ಸ್ಟಾರ್ಟ್-ಅಪ್’ಗಳ ಪೈಕಿ ಸುಮಾರು ಶೇ.25 ರಷ್ಟನ್ನು ಭಾರತೀಯರು (ಭಾರತೀಯ-ಅಮೆರಿಕನ್ನರು ಸೇರಿದಂತೆ) ಮುನ್ನಡೆಸಿದ್ದಾರೆ. ಸಾಲ ದೆಂಬಂತೆ, ಆಲ್ಫಾಬೆಟ್ (ಗೂಗಲ್), ಮೈಕ್ರೋಸಾಫ್ಟ್, ಅಡೋಬ್ ಮತ್ತು ಐಬಿಎಂ ಸೇರಿದಂತೆ ಅಮೆರಿಕದ ತಂತ್ರಜ್ಞಾನ ವಲಯದ ಕೆಲ ದೈತ್ಯ ಕಂಪನಿಗಳಿಗೆ ಭಾರತೀಯರ ಸಾರಥ್ಯ ಸಿಕ್ಕಿದೆ.

ಟ್ರಂಪ್ ಅವರು ತಮ್ಮ ಆಡಳಿತಾವಧಿಯಲ್ಲಿ, ಕೆಲ ಆಯಕಟ್ಟಿನ ಸ್ಥಾನಗಳಿಗೆ ಭಾರತೀಯ-ಅಮೆರಿಕ ನ್ನರನ್ನು ನಾಮನಿರ್ದೇಶನ ಮಾಡಿದ್ದನ್ನು ಕಂಡು ‘ಆರ್ಥಿಕತೆ ಮೊದಲು’ ಎಂದೇ ಹೇಳಿಕೊಳ್ಳು ತ್ತಿದ್ದ, MAGA ಅಭಿಯಾನದ ಒಂದು ಬಣಕ್ಕೆ ಭಾರಿ ಖುಷಿಯಾಗಿದ್ದೇಕೆ ಎಂಬುದನ್ನು ವಿವರಿಸಲು ಈ ಅಂಶ ನೆರವಾಗುತ್ತದೆ (ನ್ಯಾಷನಲ್ ಇನ್‌ಸ್ಟಿಟ್ಯೂಟ್ಸ್ ಆಫ್ ಹೆಲ್ತ್ ಸಂಸ್ಥೆಯನ್ನು ಮುನ್ನಡೆಸಲು ಜಯ್ ಭಟ್ಟಾಚಾರ್ಯ ಅವರನ್ನೂ, ಎಫ್ಬಿಐ ಮುಖ್ಯಸ್ಥರಾಗಿ ಕಶ್ಯಪ್ ‘ಕಶ್’ ಪಟೇಲ್ ಅವರನ್ನೂ ನೇಮಿಸಿದ್ದು ಇದಕ್ಕೆ ಸಾಕ್ಷಿ. ‌

ಮಾತ್ರವಲ್ಲ, ಫೆಡರಲ್ ಬಜೆಟ್ ಅನ್ನು ಕಡಿತಗೊಳಿಸುವ ಕಡೆಗೆ ಗಮನವನ್ನು ಕೇಂದ್ರೀಕರಿಸುವ 'Department of Government Efficiency DOGE' ಎಂಬ ಸಲಹಾ ಆಯೋ ಗದ ನೇತೃತ್ವದ ಹೊಣೆ ಯನ್ನು ಎಲಾನ್ ಮ ಅವರೊಂದಿಗೆ ಹಂಚಿಕೊಳ್ಳಲು ವಿವೇಕ್ ರಾಮಸ್ವಾಮಿ ಅವರನ್ನು ಕೂಡ ಟ್ರಂಪ್ ಆಯ್ಕೆ ಮಾಡಿದ್ದುಂಟು). ಆದರೆ, MAGA ಅಭಿಯಾನದ ‘ಶ್ವೇತ ವರ್ಣೀಯ-ರಾಷ್ಟ್ರೀಯ ವಾದಿಗಳ’ ಬಣವು ಸದರಿ ನೇಮಕಾತಿಗಳ ಕುರಿತಂತೆ ಕುದಿಯತೊಡಗಿತು.

ಚೆನ್ನೈ ಸಂಜಾತ ‘ಸಾಹಸೋದ್ಯಮ ಬಂಡವಾಳಗಾರ’ (ವೆಂಚರ್ ಕ್ಯಾಪಿಟಲಿ) ಶ್ರೀರಾಮ್ ಕೃಷ್ಣನ್ ರನ್ನು, ಕೃತಕ ಬುದ್ಧಿಮತ್ತೆ ವಲಯದ ಹಿರಿಯ ಕಾರ್ಯನೀತಿ ಸಲಹೆಗಾರರನ್ನಾಗಿ ಟ್ರಂಪ್ ನೇಮಿ ಸಿದ್ದು ಕೂಡ ಅಸಮಾಧಾನವನ್ನು ಹುಟ್ಟುಹಾಕಿ ಈ ಬಣವು ಮತ್ತಷ್ಟು ಕೆರಳುವಂತೆ ಮಾಡಿತು.

“ಅಮೆರಿಕವನ್ನು ಮುನ್ನಡೆಸಲೆಂದು ನಿಮ್ಮಲ್ಲಿ ಯಾರಾದರೂ ‘ಈ ಭಾರತೀಯನಿಗೆ’ ಮತ ಚಲಾಯಿ ಸಿದ್ದುಂಟಾ?" ಎಂಬುದಾಗಿ ಅದ್ಯಾರೋ ‘ಎಕ್ಸ್’ (ಟ್ವಿಟರ್) ಮಾಧ್ಯಮದಲ್ಲಿ ಬರೆದುಕೊಂಡಿದ್ದೂ ಆಯಿತು. MAGA ಅಭಿಯಾನದ ನಿಷ್ಠುರ ‘ಶ್ವೇತವರ್ಣೀಯ-ರಾಷ್ಟ್ರೀಯವಾದಿ’ಗಳ ಈ ಸಮಸ್ಯೆಯು, ‘ಈ ಭಾರತೀಯನಿಗೆ’ ಎಂಬ ಉಲ್ಲೇಖವನ್ನೂ ಮೀರಿ ವಿಸ್ತರಿಸಿರುವಂಥದ್ದು. ಟ್ವಿಟರ್ (ಈಗ ‘ಎಕ್ಸ್’) ಮಾಧ್ಯಮವನ್ನು ಸ್ವಾಧೀನಪಡಿಸಿಕೊಂಡ ಕೆಲ ಕಾಲದ ನಂತರ, ಅದನ್ನು ಮುನ್ನಡೆಸಲೆಂದು 2022ರಲ್ಲಿ ಶ್ರೀರಾಮ್ ಕೃಷ್ಣನ್‌ರನ್ನು ನೇಮಿಸಿಕೊಂಡಿದ್ದ ಎಲಾನ್ ಮಸ್ಕ್, Department of Government Efficiency (DOGE))ಗೆ ಸಂಬಂಧಿಸಿ ಸಲಹೆ ನೀಡುವಂತೆ ನವೆಂಬರ್ 14ರಂದು ‘ಎಕ್ಸ್’ ಮಾಧ್ಯಮದಲ್ಲಿ ಕರೆ ನೀಡಿದ್ದರು. ‌

ಇದಕ್ಕೆ ಉತ್ತರಿಸಿದ್ದ ಕೃಷ್ಣನ್, “ಗ್ರೀನ್ ಕಾರ್ಡುಗಳಿಗೆ ಸಂಬಂಧಿ ವಿಧಿಸಿರುವ ‘ದೇಶದ ಮಿತಿ’ಯನ್ನು ತೆಗೆದುಹಾಕುವ ಅಥವಾ ಪರಿಣತರ ವಲಸೆಗೆ ಅನುವುಮಾಡಿಕೊಡುವ ಯಾವುದೇ ನಡೆಯು, ಭಾರಿ ಉಪಕ್ರಮವಾಗಿ ಪರಿಣಮಿಸುತ್ತದೆ" ಎಂದು ಅಭಿಪ್ರಾಯಪಟ್ಟಿದ್ದರು. ಟ್ರಂಪ್ ತರುವಾಯದ ತಿಂಗಳ ಕೃಷ್ಣನ್‌ರ ನೇಮಕವನ್ನು ಘೋಷಿಸಿದಾಗ, ತಕ್ಷಣವೇ ಬಲವಾದ ಪ್ರತಿರೋಧ ಕೇಳಿ ಬಂತು.

MAGA ಅಭಿಯಾನದ ಪ್ರಮುಖ ಹೋರಾಟಗಾರ್ತಿ ಲೌರಾ ಲೂಮಾರ್, “ಇದು ತೀರಾ ಆಘಾತಕಾರಿ ಘೋಷಣೆ" ಎಂದು ಎಕ್ಸ್ ಮಾಧ್ಯಮದಲ್ಲಿ ಬರೆದುಕೊಂಡರು. ಗ್ರೀನ್ ಕಾರ್ಡ್ ಮಿತಿಗಳ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಲು ಬಯಸುವಂಥ ವ್ಯಕ್ತಿಯ ಅಡಿಯಲ್ಲಿ ಅಮೆರಿಕವು ‘ವಲಸೆಯನ್ನು ನಿಯಂತ್ರಿಸಲು’ ಮತ್ತು ‘ಅಮೆರಿಕ ಮೊದಲು ಎಂಬ ವಿನೂತನ ಪರಿಕಲ್ಪನೆಯನ್ನು ಉತ್ತೇಜಿಸಲು’ ನಿಜಕ್ಕೂ ಸಾಧ್ಯವಾದೀತೇ?" ಎಂದು ಆಕೆ ಭಾವೋದ್ರಿಕ್ತರಾಗಿ, ಅಬ್ಬರದ ದನಿಯಲ್ಲಿ ಕೇಳಿದ್ದರು.

ಇಂಥ ನಡೆಯಿಂದಾಗಿ, ವಿದೇಶಿ ವಿದ್ಯಾರ್ಥಿಗಳು ಅಮೆರಿಕಕ್ಕೆ ಬರಲು ಹಾಗೂ ಅಮೆರಿಕನ್ನರಿಗೆ ನೀಡಬೇಕಾದ ಉದ್ಯೋಗಗಳನ್ನು ಅವರು ತಮ್ಮದಾಗಿಸಿಕೊಳ್ಳಲು ಅನುವು ಮಾಡಿಕೊಟ್ಟಂತಾ ಗುತ್ತದೆ ಎಂದೂ ಆಕೆ ಸಮರ್ಥಿಸಿಕೊಂಡಿದ್ದರು. ಆದರೆ, ಕೃಷ್ಣನ್‌ರ ಪ್ರತಿಪಾದನೆಯೇ ಬೇರೆಯ ದಾಗಿತ್ತು.

“ಪ್ರತಿ ವರ್ಷ, ನಿರ್ದಿಷ್ಟ ದೇಶದ ವ್ಯಕ್ತಿಗಳಿಗೆ ನೀಡಬಹುದಾದ ಗ್ರೀನ್ ಕಾರ್ಡುಗಳ (ಅಂದರೆ, ಅಮೆರಿ ಕದ ಕಾಯಂ ನಿವಾಸದ ವೀಸಾಗಳ) ಸಂಖ್ಯೆಯನ್ನು ಮಿತಿಗೊಳಿಸುವಂಥ, ‘ದೇಶದ ಮಿತಿ’ಗಳನ್ನು ಮಾತ್ರವೇ ತೆಗೆದುಹಾಕಲಾಗುವುದು" ಎಂಬುದಾಗಿ ಕೃಷ್ಣನ್ ಉಲ್ಲೇಖಿಸಿದರು. ದೊಡ್ಡ ದೇಶಗಳಿಗೆ ಸೇರಿದ, ಅದರಲ್ಲೂ ನಿರ್ದಿಷ್ಟವಾಗಿ ಅತೀವ ಕುಶಲ ಕೆಲಸಗಾರರನ್ನು ಬೃಹತ್ ಸಂಖ್ಯೆಯಲ್ಲಿ ಹೊಂದಿರುವ ಭಾರತದಂಥ ದೇಶಗಳ ವ್ಯಕ್ತಿಗಳ ಮೇಲೆ ‘ದೇಶದ ಮಿತಿಗಳು’ ಅಸಮಾನವಾಗಿ ಪರಿಣಾಮ ಬೀರುತ್ತವೆ.

ಶ್ವೇತಭವನದ ‘ಕೃತಕ ಬುದ್ಧಿಮತ್ತೆ ಹಾಗೂ ಕ್ರಿಪ್ಟೊ ಜಾರ್ ಕರೆನ್ಸಿ’ ವಿನಿಮಯ ಕೇಂದ್ರಕ್ಕೆ ಸಂಬಂ ಧಿಸಿ ಟ್ರಂಪ್‌ರ ನಾಮನಿರ್ದೇಶಿತ ಎನಿಸಿರುವ ಡೇವಿಡ್ ಸ್ಯಾಕ್ಸ್ ಸೂಚಿಸಿರುವಂತೆ, ಪ್ರತಿಯೊಂದು ದೇಶಕ್ಕೂ, ಅದು ಎಷ್ಟು ಸಂಖ್ಯೆಯ ಅರ್ಹ ಅಭ್ಯರ್ಥಿಗಳನ್ನು ಹೊಂದಿದೆ ಎಂಬುದನ್ನೂ ಲೆಕ್ಕಿಸದೆ, ಒಂದೇ ಸಂಖ್ಯೆಯ ಗ್ರೀನ್ ಕಾರ್ಡುಗಳನ್ನು ಪ್ರಸ್ತುತ ನಿಗದಿಪಡಿಸಲಾಗಿದೆ. ಇದರ ಪರಿಣಾಮವಾಗಿ, ಭಾರತದ ಅರ್ಜಿದಾರರು 11 ವರ್ಷಗಳವರೆಗೆ ಕಾಯಬೇಕಾಗಿ ಬಂದರೆ, ಇತರ ಹಲವು ದೇಶಗಳ ಅರ್ಜಿದಾರರಿಗೆ ಯಾವುದೇ ಕಾಯುವಿಕೆ ಇರುವುದಿಲ್ಲ.

ಹಾಗೆ ನೋಡಿದರೆ, ಉನ್ನತ ಕೌಶಲ ಹೊಂದಿರುವ ಕೆಲಸಗಾರಿಗೆ ಮೀಸಲಾದ ಎಚ್ 1-ಬಿ ವೀಸಾ ಗಳನ್ನು ಹೊಂದಿರುವವರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಇದ್ದಾರೆ. ಇವರು, ನೀಡಲಾ ದ ಗ್ರೀನ್ ಕಾರ್ಡುಗಳಲ್ಲಿ ಕೇವಲ ಶೇ.7ರಷ್ಟು ಭಾಗಕ್ಕೆ ಅರ್ಹರಾಗಿದ್ದಾರೆ (ಇದು ಯಾವುದೇ ಏಕ ದೇಶಕ್ಕೆ ಸಂಬಂಧಿಸಿ ವಿಧಿಸಲಾಗಿರುವ ಮಿತಿ).

MAGA ಅಭಿಯಾನ ಅಥವಾ ಅಂತರ್ಯುದ್ಧದ ‘ಆರ್ಥಿಕತೆ-ಮೊದಲು’ ಎಂಬ ಪ್ರತಿಪಾದಕರ ಬಣದಲ್ಲಿರುವ ಡೇವಿಡ್ ಸ್ಯಾಕ್ಸ್, ಎಲಾನ್ ಮ ಮತ್ತು ಇತರರು, ಅಮೆರಿಕನ್ ಶ್ರೇಷ್ಠತೆಯ ಸೇವೆ‌ ಯಲ್ಲಿ ತೊಡಗಿಸಿಕೊಳ್ಳುವ ವಿಶ್ವದ ಅತ್ಯುತ್ತಮ ಮತ್ತು ಉಜ್ವಲ ಪ್ರತಿಭಾವಂತರನ್ನು ಆಕರ್ಷಿಸಲು, ಕಾನೂನುಬದ್ಧ ವಲಸೆಯ ಮಾರ್ಗೋಪಾಯಗಳನ್ನು ಬಳಸಲು ಬಯಸುತ್ತಾರೆ. ಆದರೆ, ಲೂಮಾರ್ ಮತ್ತು ಆಕೆಯ ಒಡನಾಡಿಗಳಿಗೆ ಮಾತ್ರ ಎಲ್ಲ ತೆರನಾದ ವಲಸೆಯೂ ಮೂಲಭೂತವಾಗಿ ಸಮಸ್ಯಾ ತ್ಮಕವಾಗಿದೆ; ಏಕೆಂದರೆ, ಇದು ಅಮೆರಿಕದ ಮೂಲಭೂತ ಕ್ರಿಶ್ಚಿಯನ್, ಯೂರೋಪಿಯನ್ ರಾಷ್ಟ್ರೀಯ ಸ್ವರೂಪಕ್ಕೆ ಬೆದರಿಕೆ ಒಡ್ಡುತ್ತದೆ ಮತ್ತು ‘ಅಮೆರಿಕನ್ನರಿಂದ ವಿದೇಶಿಯರು ಉದ್ಯೋಗ ಗಳನ್ನು ಕಿತ್ತುಕೊಳ್ಳುವುದಕ್ಕೆ’ ಇದು ಅನುವುಮಾಡಿಕೊಡುತ್ತದೆ ಎಂಬುದು ಈ ಗುಂಪಿನ ವಾದ.

ಭಾರತದಿಂದ ಆಗುವ ವಲಸೆಯೂ (ಭಾರತದಲ್ಲಿ ಜನಸಂಖ್ಯೆಯ ಕೇವಲ ಶೇ.2-3ರಷ್ಟು ಮಾತ್ರ ಕ್ರಿಶ್ಚಿಯನ್ನರಾಗಿದ್ದಾರೆ ಮತ್ತು ಇವರಲ್ಲಿ ಬಹುಮಟ್ಟಿಗೆ ಯಾರೂ ಬಿಳಿಯರಲ್ಲ) ಇದಕ್ಕೆ ಹೊರತಾ ಗಿಲ್ಲ. ಆನ್ ಕೌಲ್ಟರ್ ಎಂಬ ಕಟ್ಟಾ ಬಲಪಂಥೀಯ ವ್ಯಾಖ್ಯಾನಕಾರ್ತಿಯ ಮಾತು ಇಲ್ಲಿ ಉಲ್ಲೇಖ ನೀಯ- “ರಿಪಬ್ಲಿಕನ್ ಪಕ್ಷದ ಮಾಜಿ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ವಿವೇಕ್ ರಾಮ ಸ್ವಾಮಿ ಯವರ ಅನೇಕ ಅಭಿಪ್ರಾಯಗಳನ್ನು ನಾನು ಒಪ್ಪುವುದರ ಹೊರತಾಗಿಯೂ, ಅವರೊಬ್ಬ ಭಾರತೀಯ ಎಂಬ ಕಾರಣಕ್ಕೆ ಅವರಿಗೆ ಎಂದಿಗೂ ಮತ ಹಾಕುತ್ತಿರಲಿಲ್ಲ" ಎಂಬ ಆಣಿಮುತ್ತು ಗಳನ್ನು ಉದುರಿಸಿದ್ದರು ಆನ್ ಕೌಲ್ಟರ್.

ಭಾರತೀಯ ಮೂಲದ ಇಬ್ಬರು ಡೆಮೋಕ್ರಾಟ್ ರಾಜಕಾರಣಿಗಳಾದ ರೋ ಖನ್ನಾ ಮತ್ತು ಶ್ರೀ ಥಾನೇ ದಾರ್ ಅವರಿಗೆ ಇತ್ತೀಚೆಗೆ ಆದ ಅನುಭವಗಳೂ ಇದಕ್ಕಿಂತ ಭಿನ್ನವಾಗಿರಲಿಲ್ಲ. “ಕೃಷ್ಣನ್ ಅವರ ರೀತಿಯ ವಿಶ್ವದ ವಿವಿಧೆಡೆ ಇರುವ ಪ್ರತಿಭಾವಂತರು, ಚೀನಾ ದೇಶಕ್ಕೆ ಹೋಗುವುದಕ್ಕಿಂತ ಅಮೆರಿ ಕಕ್ಕೆ ಬರಲು ಬಯಸುತ್ತಾರೆ ಎಂಬ ಸಂಗತಿಯನ್ನು ಅಮೆರಿಕನ್ನರು ಸಂಭ್ರಮಿಸಬೇಕು" ಎಂದು ಖನ್ನಾ ಸೂಚ್ಯವಾಗಿ ಹೇಳಿದ್ದುಂಟು.

ಅವರು ಈ ಮಾತನ್ನು ಆಡಿದ್ದೇ ಆಡಿದ್ದು, ಬೂಮರಾಂಗ್ ರೀತಿಯಲ್ಲಿ ‘ಘಾಟು ಉತ್ತರಗಳು’ ಬರಲು ಶುರುವಾಗಿಬಿಟ್ಟವಲ್ಲ! ಈ ಪೈಕಿ ಒಬ್ಬರಂತೂ, “ಹಾಗೊಮ್ಮೆ ಇಂಥ ಜನರು ಅಷ್ಟೊಂದು ಶ್ರೇಷ್ಠರು/ಪ್ರತಿಭಾವಂತರು ಆಗಿರುವುದೇ ಹೌದಾದಲ್ಲಿ, ತಮ್ಮ ಮೂಲದೇಶದ ಸಮಸ್ಯೆಯನ್ನು ಅವರೇಕೆ ಸರಿಪಡಿಸಲಿಲ್ಲ?" ಎಂದು ಕೇಳಿದ್ದರೆ, ಮತ್ತೊಬ್ಬರು “ನಮಗೆ ಬೇಕಿರುವುದು ‘ಬಿಳಿಯ’ ವಲಸಿಗರೇ ಹೊರತು, ಆಕ್ರಮಣಕಾರಿಗಳಾಗಿರುವ ‘ಕಂದುಬಣ್ಣದ’ ವಲಸಿಗರ ಗುಂಪಲ್ಲ" ಎಂದು ಕೆಂಡ ಕಾರಿದ್ದರು.

ಇದೇ ರೀತಿಯಲ್ಲಿ, ಎಚ್-1 ಬಿ ವೀಸಾ ಸಂಬಂಧಿತ ಚರ್ಚೆಯಲ್ಲಿ, ಭಾರತೀಯ-ಅಮೆರಿಕನ್ನರನ್ನು ಗುರಿಯಾಗಿಸಿಕೊಂಡು ಹೊಮ್ಮಿಸಿದ ‘ಶೋಚನೀಯ ವಾಕ್ಚಾತುರ್ಯ’ವನ್ನು ಥಾನೇದಾರ್ ಖಂಡಿಸಿ ದ್ದು, ಜನಾಂಗೀಯ ನಿಂದನೆಯ ಭರಪೂರ ವಾಗ್ದಾಳಿಗೆ ಪ್ರಚೋದಿಸಿತು. ಆ ಪೈಕಿ ಒಬ್ಬರು ‘ಎಕ್ಸ್’ ಮಾಧ್ಯಮದಲ್ಲಿ, “ನಾನು ನಿಮಗೆ ಮುಂಬೈಗೆ ಟಿಕೆಟ್ ಖರೀದಿಸಿ ಕೊಡಲಾ? ಅಷ್ಟಕ್ಕೂ ಅದು ಒನ್-ವೇ ಟಿಕೆಟ್ ಆಗಿರುತ್ತದೆ ಎನ್ನಿ!" ಎಂದು ಬರೆದುಕೊಂಡಿದ್ದರೆ, ಮತ್ತೊಬ್ಬರಂತೂ “ಓಹೋ, ನನ್ನ ದೇಶಕ್ಕೆ ಪ್ರವಾಹದೋಪಾದಿಯಲ್ಲಿ ಬಂದು, ನನ್ನ ಜನರ ವಿರುದ್ಧವೇ ಸ್ಪರ್ಧೆಗೆ ಇಳಿಯುವು‌ ದಕ್ಕೆ ನಿಮ್ಮ ದೇಶವಾಸಿಗಳನ್ನು ಹೆಚ್ಚೆಚ್ಚು ಸಂಖ್ಯೆಯಲ್ಲಿ ಕೂಗಿ ಕರೆಯುತ್ತಿರುವ ವಿದೇಶಿ ಆಸಾಮಿಯಾ ನೀವು?" ಎಂದು ಅಬ್ಬರಿಸಿದ್ದರು!

ಖಚಿತವಾಗಿ ಹೇಳುವುದಾದರೆ, ಟ್ರಂಪ್‌ರ ಒಂದಷ್ಟು ಬೆಂಬಲಿಗರು ವಲಸೆಗಾರಿಕೆಯನ್ನು ವಿರೋಧಿ ಸುತ್ತಿರುವುದಕ್ಕೆ ವರ್ಣಭೇದ ನೀತಿಯೊಂದೇ ಕಾರಣವಲ್ಲ. ರೋ ಖನ್ನಾ ಮತ್ತು ಶ್ರೀ ಥಾನೇದಾರ್ ಅವರಿಗೆ ಬಂದಿರುವ ಪ್ರತಿಕ್ರಿಯೆಗಳು ಕೂಡ ಒತ್ತಿ ಹೇಳುವಂತೆ, ಉದ್ಯೋಗಳಿಗೆ ಸಂಬಂಧಿಸಿ ಕಾಣ ಬರುತ್ತಿರುವ ತೀವ್ರ ಸ್ಪರ್ಧೆಯಿಂದಾಗಿ ಅನೇಕ ಅಮೆರಿಕನ್ನರು ಭಯಕ್ಕೆ ಒಳಗಾಗಿದ್ದಾರೆ; ಅದರಲ್ಲೂ ವಿಶೇಷವಾಗಿ, ವೇಗವಾಗಿ ಬೆಳೆಯುತ್ತಿರುವ ವ್ಯಾಪಕ ಶ್ರೇಣಿಯ ಉದ್ಯಮಗಳಲ್ಲಿನ ನೌಕರರನ್ನು ಕೃತಕ ಬುದ್ಧಿಮತ್ತೆಯು ಪಲ್ಲಟಗೊಳಿಸಿ, ಅವರ ಸ್ಥಾನವನ್ನು ತಾನು ಆಕ್ರಮಿಸುತ್ತಿರುವ ಈ ಕಾಲಘಟ್ಟದಲ್ಲಿ, ಅಮೆರಿಕನ್ನರ ಈ ಭಯ ತೀವ್ರವೇ ಆಗಿದೆ ಎನ್ನಲಡ್ಡಿಯಿಲ್ಲ.

ಆದರೆ, MAGA ಅಭಿಯಾನ ಅಥವಾ ಅಂತರ್ಯುದ್ಧದ ಎರಡೂ ಬಣಗಳನ್ನು ಮೆಚ್ಚಿಸಬಲ್ಲ ಒಂದು ಸರಳ ಪರಿಹಾರೋಪಾಯವಿದೆ: ಅದೆಂದರೆ, ಭಾರತೀಯ ಕೆಲಸಗಾರರನ್ನು ಅಮೆರಿಕಕ್ಕೆ ಕರೆಸಿಕೊಳ್ಳುವ ಬದಲಿಗೆ, ಅಮೆರಿಕವು ಭಾರತಕ್ಕೆ ಉದ್ಯೋಗ ಸಂಬಂಧಿತ ವಿನೂತನ ಉಪಕ್ರಮಗಳ ಹೊರಗುತ್ತಿಗೆಯನ್ನು ನೀಡಬೇಕು. ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವುಳ್ಳ ಭಾರತೀಯ ಸಂಸ್ಥೆಗಳ ಕಡೆಗೆ ಅಮೆರಿಕದ ಹೂಡಿಕೆದಾರರು ಹಣ ವನ್ನು ಹರಿಸಿದಲ್ಲಿ, ಅಮೆರಿಕವು ತನ್ನೆಡೆಗೆ ಆಗುತ್ತಿರುವ ವಲಸೆಯ ಹರಿವುಗಳನ್ನು ಹೆಚ್ಚಿಸದೆಯೇ ನಾವೀನ್ಯ ಮತ್ತು ಕ್ರಿಯಾಶೀಲತೆಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ.

ಆದರೆ, ಜನಾಂಗೀಯವಾದಿಗಳೇ ಹುಷಾರಾಗಿರಿ, ಇದರಿಂದ ಭಾರತಕ್ಕೂ ಪ್ರಯೋಜನವಾಗಲಿದೆ; ಅಂದರೆ MAGA ಅಭಿಯಾನವು ’ 'MAIGA' (Make America and India Great Again) ಅಭಿಯಾನಕ್ಕೂ ಸ್ಥಳಾವಕಾಶವನ್ನು ನೀಡಬೇಕಾಗುತ್ತದೆ ಎಂದರ್ಥ. ಅಂದರೆ, ಅಮೆರಿಕ ಮತ್ತು ಭಾರತ ಎರಡನ್ನೂ ಮತ್ತೊಮ್ಮೆ ಮಹೋನ್ನತವಾಗಿಸುವ ಉಪಕ್ರಮವಿದು ಎಂಬುದನ್ನು ಈ ಜನಾಂಗೀಯವಾದಿಗಳು ಮರೆಯಬಾರದು!

(ಲೇಖಕರು ಕಾಂಗ್ರೆಸ್ ಸಂಸದರು)

ಇದನ್ನೂ ಓದಿ: R T Vittal Murthy Column: ನಿಖಿಲ್‌ ಇಲ್ಲಿಗೆ, ಕುಮಾರಣ್ಣ ದಿಲ್ಲಿಗೆ

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ