ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Narada Sanchara: ಗೂಗ್ಲಿಗೆ ಇಮ್ರಾನ್ ಔಟ್!

ಇಮ್ರಾನ್ ಅವರು 14 ವರ್ಷ ಹಾಗೂ ಅವರ ಪತ್ನಿ 7 ವರ್ಷಗಳವರೆಗೆ ಜೈಲುಶಿಕ್ಷೆ ಅನುಭವಿಸಬೇಕಾಗಿ ಬಂದಿದೆ ಹಾಗೂ ಕ್ರಮವಾಗಿ 10 ಲಕ್ಷ ರು. ಮತ್ತು 7 ಲಕ್ಷ ರು. ದಂಡವನ್ನೂ ಪಾವತಿಸಬೇಕಾಗಿದೆ

Narada Sanchara: ಗೂಗ್ಲಿಗೆ ಇಮ್ರಾನ್ ಔಟ್!

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಶ್ರಾ ಬೀಬಿ

Profile Ashok Nayak Jan 20, 2025 10:18 AM

Source : Vishwavani Daily News Paper

narada_muni

ನಾರದ ಸಂಚಾರ

ಪಾಕಿಸ್ತಾನ ನ್ಯಾಯಾಲಯವು ಅಲ್ಲಿನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಶ್ರಾ ಬೀಬಿಯವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿಗಳು ಎಂದು ತೀರ್ಪು ನೀಡಿದೆ.

ಇದರನುಸಾರ ಇಮ್ರಾನ್ ಅವರು 14 ವರ್ಷ ಹಾಗೂ ಅವರ ಪತ್ನಿ 7 ವರ್ಷಗಳವರೆಗೆ ಜೈಲುಶಿಕ್ಷೆ ಅನುಭವಿಸಬೇಕಾಗಿ ಬಂದಿದೆ ಹಾಗೂ ಕ್ರಮವಾಗಿ 10 ಲಕ್ಷ ರು. ಮತ್ತು 7 ಲಕ್ಷ ರು. ದಂಡವನ್ನೂ ಪಾವತಿಸಬೇಕಾಗಿದೆ.

ಒಂದೊಮ್ಮೆ ದಂಡವನ್ನು ಪಾವತಿಸಲು ವಿಫಲರಾದಲ್ಲಿ ಇವರಿಬ್ಬರೂ ಕ್ರಮವಾಗಿ ಆರು ತಿಂಗಳು ಮತ್ತು ಮೂರು ತಿಂಗಳು ಹೆಚ್ಚುವರಿಯಾಗಿ ಜೈಲುಶಿಕ್ಷೆಯನ್ನು ಅನುಭವಿಸಬೇಕಾಗುತ್ತದಂತೆ. ಬಹಳ ವರ್ಷಗಳ ಹಿಂದೆ ಇಮ್ರಾನ್ ಖಾನ್ ಅವರು ಕ್ರಿಕೆಟಿಗರಾಗಿ ಹೆಸರು ಮಾಡಿದ್ದಾಗ, ವಿಶ್ವದ ವಿವಿಧ ಕ್ರಿಕೆಟ್ ತಂಡಗಳ ಅತಿರಥ-ಮಹಾರಥರನ್ನು ತಮ್ಮ ಬೌಲಿಂಗ್ ದಾಳಿಯಿಂದ ಕೆಡವಿದ್ದುಂಟು. ಆದರೆ, ಅಂಥ ಕ್ರಿಕೆಟಿಗನನ್ನು ‘ಭ್ರಷ್ಟಾಚಾರ ಪ್ರಕರಣ’ ಎಂಬ ‘ಗೂಗ್ಲಿ’ ಹೀಗೆ ಕೆಡವಿರೋದು (ಕೇಡು) ಕಾಲದ ಮಹಿಮೆಯೋ ಅಥವಾ ಗ್ರಹಚಾರ ವಕ್ಕರಿಸಿಕೊಂಡಿದ್ದರ ದ್ಯೋತಕವೋ? ಎಂಬುದನ್ನು ಬಲ್ಲವರೇ ಹೇಳಬೇಕು!

ಸಂತಸವೋ ಆತಂಕವೋ?

ಚೀನಾದಲ್ಲಿ ಜನಸಂಖ್ಯೆ ತೀವ್ರಗತಿಯಲ್ಲಿ ಕಡಿಮೆಯಾಗುತ್ತಿದೆಯಂತೆ. ಸತತ ಮೂರನೇ ವರ್ಷವೂ ಹೀಗೆ ಕುಸಿತ ದಾಖಲಾಗಿರುವುದನ್ನು ಕಂಡು ಅಲ್ಲಿನ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರಂತೆ. ಚೀನಾದಲ್ಲಿ ಮಕ್ಕಳ ಪಾಲನೆ-ಪೋಷಣೆಯು ವೆಚ್ಚದಾಯಕವಾಗಿರುವುದು, ಜನರ ಜೀವನಶೈಲಿ ಬದಲಾಗಿರುವುದು, ನಿರಂತರವಾಗಿ ಹೆಚ್ಚುತ್ತಲೇ ಇರುವ ಜೀವನೋಪಾಯ ವೆಚ್ಚಗಳು- ಹೀಗೆ ಮಕ್ಕಳ ಜನನದ ಪ್ರಮಾಣದಲ್ಲಿ ತೀವ್ರ ಕುಸಿತವಾಗುವುದಕ್ಕೆ ಸಾಕಷ್ಟು ಕಾರಣಗಳಿವೆಯಂತೆ. ಮುಂಜಾಗ್ರತಾ ಕ್ರಮವಾಗಿ, ಮಕ್ಕಳನ್ನು ಮಾಡಿಕೊಳ್ಳುವುದಕ್ಕೆ ಪೋಷಕರು ಬ್ರೇಕ್ ಹಾಕಿಕೊಂಡು ಒಂದು ಮಟ್ಟಕ್ಕಾದರೂ ನೆಮ್ಮದಿಯನ್ನು ಅನುಭವಿಸುತ್ತಿದ್ದಿರಬಹುದು. ಆದರೆ, ಹೀಗೊಂದು ಜನಸಂಖ್ಯಾ ಕುಸಿತದ ಬೆಳವಣಿಗೆಯಿಂದಾಗಿ ತಜ್ಞರಿಗೇಕೆ ಆತಂಕವಾಗಬೇಕು? ಎಂಬುದು ಮಿಲಿ ಯನ್ ಡಾಲರ್ ಪ್ರಶ್ನೆ!

ನಾರಾಯಣ ನಾರಾಯಣ!

ತಮ್ಮ ಹೇಳಿಕೆ ಮತ್ತು ಧೋರಣೆಗಳಿಂದಾಗಿ ಭಾರತಕ್ಕೆ ಪದೇಪದೆ ಕಿರಿಕಿರಿ ಉಂಟುಮಾಡುತ್ತಿದ್ದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ರಾಜೀನಾಮೆ ನೀಡಿದ್ದರಿಂದಾಗಿ, ಮುಂದೆ ಆ ಗದ್ದುಗೆಯನ್ನು ಅಲಂಕರಿಸುವವರು ಯಾರು ಎಂಬ ಕುತೂಹಲ ಜನರಲ್ಲಿ ಸಹಜವಾಗಿಯೇ ಮನೆ ಮಾಡಿದೆ. ಇದರ ನಡುವೆಯೇ, ಭಾರತ ಮೂಲದ, ಅದರಲ್ಲೂ ಕರ್ನಾಟಕದ, ಅದರಲ್ಲೂ ವಿಶೇಷವಾಗಿ ತುಮಕೂರು ಜಿಲ್ಲೆಗೆ ಸೇರಿದವರಾದ ಚಂದ್ರ ಆರ್ಯ ಎಂಬುವವರು ಕೂಡ ಪ್ರಧಾನಿ ಪಟ್ಟಕ್ಕೆ ನಾಮಪತ್ರ ಸಲ್ಲಿಸಿ ರುವುದು ನಮ್ಮವರಿಗೆ ಶಾನೆ ಸಂತೋಷ ತಂದಿರೋದಂತೂ ಖರೆ. ಹಾಗೇನಾದ್ರೂ ಅವರ ಅದೃಷ್ಟ ಖುಲಾಯಿಸಿ ಪ್ರಧಾನಿಯೂ ಆಗಿಬಿಟ್ರೆ, ‘ಕೆನಡಾ’ದಲ್ಲಿ ‘ಕನ್ನಡ’ ಧ್ವಜದ ಹಾರಾಟ ಎಂಬ ಹೆಡ್‌ಲೈನ್ ನೀಡಲು ಸಾಕಷ್ಟು ಪತ್ರಿಕೆಗಳು ಈಗಾಗಲೇ ತವಕಿಸುತ್ತಿವೆಯಂತೆ!

ಇದನ್ನೂ ಓದಿ: Harish Kera Column: ಕವಿತೆಗೆ ಕಾಲುಗಳಿಲ್ಲ, ಆದರೆ ರೆಕ್ಕೆಗಳಿವೆ