Narada Sanchara: ‘ಸಿಂಗಲ್ ಎಪಿಸೋಡ್’ ಕಥೆ ‘ಮೆಗಾ ಧಾರಾವಾಹಿ’ ಆದಾಗ..!
ಭಾರತೀಯ ಜನತಾ ಪಕ್ಷ’ ಎಂಬ ಹೆಸರನ್ನು ‘ಷಾರ್ಟ್-ಆಂಡ್-ಸ್ವೀಟ್’ ಆಗಿ ‘ಬಿಜೆಪಿ’ ಅಂತ ಕರೀ ತಾರೆ ಅಲ್ವೇ? ಆದರೆ ರಾಜ್ಯ ಬಿಜೆಪಿಯಲ್ಲಿ ನಡೀತಾ ಇರೋ ‘ಬಣ ಜಗಳ’ವನ್ನು ನೋಡ್ತಾ ಇರೋ ಜನರು, ‘ಬಿಜೆಪಿ’ ಅಂದ್ರೆ ‘ಬಣ ಜಗಳದ ಪಕ್ಷ’ ಅಂತ ಆಡಿಕೊಳ್ಳೋ ಹಾಗೆ ಆಗಿಬಿಟ್ಟಿದೆ ನೋಡಿ!


ನಾರದ ಸಂಚಾರ
ಭಾರತೀಯ ಜನತಾ ಪಕ್ಷ’ ಎಂಬ ಹೆಸರನ್ನು ‘ಷಾರ್ಟ್-ಆಂಡ್-ಸ್ವೀಟ್’ ಆಗಿ ‘ಬಿಜೆಪಿ’ ಅಂತ ಕರೀ ತಾರೆ ಅಲ್ವೇ? ಆದರೆ ರಾಜ್ಯ ಬಿಜೆಪಿಯಲ್ಲಿ ನಡೀತಾ ಇರೋ ‘ಬಣ ಜಗಳ’ವನ್ನು ನೋಡ್ತಾ ಇರೋ ಜನರು, ‘ಬಿಜೆಪಿ’ ಅಂದ್ರೆ ‘ಬಣ ಜಗಳದ ಪಕ್ಷ’ ಅಂತ ಆಡಿಕೊಳ್ಳೋ ಹಾಗೆ ಆಗಿಬಿಟ್ಟಿದೆ ನೋಡಿ!
ಇಷ್ಟು ದಿನಗಳವರೆಗೆ ಬಸನಗೌಡ ಪಾಟೀಲ್ ಯತ್ನಾಳರು ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರ ‘ಬಣ’ಗಳ ನಡುವೆ ‘ತೂ ತೂ, ಮೈ ಮೈ’ ಸ್ವರೂಪದಲ್ಲಿ ಆರೋಪ-ಪ್ರತ್ಯಾರೋಪಗಳ ಸುರಿಮಳೆ ನಡೀತಾ ಇತ್ತು. ಸಿಂಗಲ್ ಎಪಿಸೋಡ್‌ನಂತೆ ಇರಬೇಕಿದ್ದ ಈ ಪ್ರಹಸನವು ‘ಜನನಿ’ ಮತ್ತು ‘ಮನೆತನ’ ಧಾರಾವಾಹಿಗಳ ನಿರ್ಮಾತೃಗಳೂ ನಾಚುವಂತೆ ‘ಮೆಗಾ ಧಾರಾವಾಹಿ’ಯಂತೆ ಎಳೆಯ ಲ್ಪಟ್ಟಾಗ ದೆಹಲಿಯ ‘ಬಿಗ್‌ಬಾಸ್’ ಗಳು ಈ ಬಣಗಳನ್ನು ಕಾಲಾನುಕಾಲಕ್ಕೆ ಅಲ್ಲಿಗೇ ಕರೆಸಿಕೊಂಡು ‘ವಾರದ ಕಥೆ, ವರಿಷ್ಠರ ಜತೆ’ ಶೈಲಿಯಲ್ಲಿ ಪಂಚಾಯ್ತಿಗೆ ಕೂರಿಸಿಕೊಂಡು “ಏನ್ರಪ್ಪಾ ನಿಮ್ ಕಥೆ?" ಎಂದು ಕೇಳುತ್ತಿದ್ದುದುಂಟು.
ಇದನ್ನೂ ಓದಿ: Shishir Hegde Column: ಅಮೆರಿಕ ಅಧ್ಯಕ್ಷರ ವೈಟ್ ಹೌಸ್ ಮನೆಯೊಕ್ಕಲು
ಅದಕ್ಕೆ ಎರಡೂ ಬಣದವರು ‘ಇದು ಕಥೆಯಲ್ಲ, ಜೀವನ’ ಶೈಲಿಯಲ್ಲಿ ‘ಭುಸುಭುಸು’ ಅಂತ ಅಸಮಾ ಧಾನದ ಹೊಗೆ ಬಿಡುತ್ತಿದ್ದುದುಂಟು. ’ Multi-Tier’ ನಂತಿದ್ದ ಇವರ ‘ಸಮಸ್ಯಾ TYRE ’ಗಳಿಗೆ ಕಾಲಾ ನುಕಾಲಕ್ಕೆ ‘ಪಂಕ್ಚರ್’ ಹಾಕಿ, ರಾಜ್ಯ ಬಿಜೆಪಿಯಲ್ಲಿ ಅಲ್ಲಾಡುತ್ತಿದ್ದ ಬಾಗಿಲುಗಳ ‘ನಟ್ಟು-ಬೋಲ್ಟು-ಸ್ಕ್ರೂ-ಹಿಂಜಸ್’ ಎಲ್ಲ ಟೈಟ್ ಮಾಡಿ, ಎರಡೂ ಬದಿಗೂ ‘ಪಾಲಿಶ್’ ಲೇಪಿಸಿ ಕಳಿಸುತ್ತಿದ್ದ ವರಿಷ್ಠರು ಕೆಲ ಕಾಲದವರೆಗಾದರೂ ರಿಲ್ಯಾಕ್ಸ್ ಮೂಡಿಗೆ ಹೋಗೋಣ ಅಂದುಕೊಂಡಿದ್ರು. ಅಷ್ಟ ರಲ್ಲಿ, ಈಗ ರಾಜ್ಯದಲ್ಲಿ ಮತ್ತೆರಡು ‘ಬಾಗಿಲುಗಳು’ ಹೀಗೆ ಗಾಳಿಗೆ ಅಲ್ಲಾಡತೊಡಗಿವೆ!
ಇವು ‘ಮಾಮೂಲಿ’ ಒಳಬಾಗಿಲುಗಳಾಗಿದ್ರೆ ಯಾರೂ ಕೇರ್ ಮಾಡ್ತಾ ಇರಲಿಲ್ಲವೇನೋ? ಆದರೆ ಇವುಗಳಲ್ಲಿ ಒಂದು ಪಕ್ಷದ ‘ಮುಂಬಾಗಿಲು’ ಆದ್ರೆ, ಮತ್ತೊಂದು ‘ಹಿಂಬಾಗಿಲು’. ಅ‘ಗಣಿ’ತ ಬಲ ವಿರುವ ಈ ಎರಡನ್ನೂ ಯಾವಾಗಲೂ ಭದ್ರ ಮಾಡ್ಕೊಂಡೇ ಇರಬೇಕು. “ನನ್ನ ಅಳಲನ್ನು ಆಲಿಸ ದಿದ್ದರೆ, ನಾನು ಮತ್ತೊಂದು ಮನೆಯನ್ನು ಅಲಂಕರಿಸಿಬಿಡುವೆ" ಅಂತ ಒಂದು ಬಾಗಿಲು ಈಗಾಗಲೇ ‘ಕಿರ್’ ಅಂತ ಸದ್ದುಮಾಡಿ ಆಗಿದೆ!
ಈ ‘ಬಣ’ಗಳ ಜತೆಗೆ ‘ಮುಕ್ತ ಮುಕ್ತ’ವಾಗಿ ಮಾತಾಡಿ, ವಿಚಾರ‘ಮಂಥನ’ ನಡೆಸಿ ಸಮಸ್ಯೆಯನ್ನ ಬಗೆ ಹರಿಸದಿದ್ರೆ ಹಾಗೂ “ನೀವಿಬ್ಬರೂ ‘ಕಮಲಿ’ ಎಂಬ ‘ಪುಟ್ಟಕ್ಕನ ಮಕ್ಕಳು’ ಕಣ್ರಪ್ಪಾ" ಅಂತ ‘ಫ್ಯಾಮಿಲಿ ಪವರ್’ನ ಮನವರಿಕೆ ಮಾಡಿಕೊಡದಿದ್ರೆ, ಪಕ್ಷದ ಪರಿಸ್ಥಿತಿ ‘ಹರ ಹರ ಮಹಾದೇವ’ ಆಗಿ ಬಿಟ್ಟು ಮುಂಬರುವ ಚುನಾವಣೆಯಲ್ಲಿ ಗೆಲುವೆಂಬುದು ‘ಮಾಯಾಮೃಗ’ ವಾಗಿ ಪರಿಣಮಿಸೋ ದ್ರಲ್ಲಿ ಸಂದೇಹವಿಲ್ಲ.
“ನೀವಿಬ್ರೂ ‘ಜೋಡಿಹಕ್ಕಿ’ಗಳಂತೆ ‘ಜೊತೆ ಜೊತೆಯಲಿ’ ಇದ್ದರೇನೇ ಪಕ್ಷಕ್ಕೆ ಶೋಭೆ. ‘ಶ್ರೀರಸ್ತು ಶುಭಮಸ್ತು’ ನಿಮ್ಮಿಬ್ಬರಿಗೂ" ಅನ್ನೋ ‘ಕಮಲಿ’ಯ ‘ಮನಸಾರೆ’ ಹಾರೈಕೆಗೆ ಈ ಎರಡೂ ಬಾಗಿಲು ಗಳು ಸ್ಪಂದಿಸಲಿ ಅನ್ನೋದು ಎಲ್ಲರ ಬಯಕೆ. ಒಂದೊಮ್ಮೆ ಹಾಗಾಗದ್ರೆ, ಪಕ್ಷದ ಸ್ಥಿತಿಯು ಆಡಿ ಕೊಳ್ಳೋರ ಬಾಯಿಗೆ ಸಿಕ್ಕಿ ‘ಮಜಾ ಟಾಕೀಸ್’ ಆಗಿಬಿಡುತ್ತೆ, ಅಷ್ಟೇ!!