Vishweshwar Bhat Column: ವಿಮಾನಕ್ಕೆ ಬಣ್ಣ ಬಳಿಯುವುದು
ವಿಮಾನದ ಹೊರಭಾಗವನ್ನು ಅಲ್ಯೂಮಿನಿ ಯಂ ಮತ್ತು ಕಾಂಪೋಸಿಟ್ ವಸ್ತುಗಳಿಂದ ಮಾಡಲಾಗಿರು ತ್ತದೆ. ಸರಿಯಾದ ಬಣ್ಣದ ಲೇಪನ ಇಲ್ಲದಿದ್ದರೆ, ಈ ಲೋಹಗಳು ಬೇಗನೆ ತುಕ್ಕು ಹಿಡಿಯುತ್ತವೆ. ಬಣ್ಣವು ಒಂದು ರಕ್ಷಾಕವಚದಂತೆ ಕೆಲಸ ಮಾಡುತ್ತದೆ. ವಿಮಾನದ ಮೈಮೇಲೆ ಧೂಳು ಅಥವಾ ಕಣಗಳು ಕುಳಿತರೆ ಅದು ಹಾರಾಟದ ವೇಗಕ್ಕೆ ಅಡ್ಡಿಯಾಗಬಹುದು.
-
ಸಂಪಾದಕರ ಸದ್ಯಶೋಧನೆ
ವಿಮಾನಗಳಿಗೆ ಬಣ್ಣ ಬಳಿಯುವುದು ಎಂದರೆ ನಾವು ನಮ್ಮ ಮನೆಯ ಗೋಡೆಗಳಿಗೆ ಅಥವಾ ಕಾರುಗಳಿಗೆ ಬಣ್ಣ ಬಳಿಯುವ ಹಾಗೆ ಸರಳವಾದ ಕೆಲಸವಲ್ಲ. ಇದು ಅತ್ಯಂತ ಸಂಕೀರ್ಣವಾದ, ದುಬಾರಿಯಾದ ಮತ್ತು ವೈಜ್ಞಾನಿಕವಾದ ಪ್ರಕ್ರಿಯೆ. ಒಂದು ಬೃಹತ್ ವಿಮಾನಕ್ಕೆ ‘ಮೇಕ್ ಓವರ್’ ಮಾಡುವುದು ಎಂಜಿನಿಯರಿಂಗ್ ಕೌಶಲದ ಒಂದು ಅದ್ಭುತ ನಿದರ್ಶನ.
ನಾವು ಅಂದುಕೊಂಡಂತೆ ಬಣ್ಣ ಕೇವಲ ವಿಮಾನಯಾನ ಸಂಸ್ಥೆಯ ಲೋಗೋ ತೋರಿಸಲು ಅಥವಾ ವಿಮಾನ ಸುಂದರವಾಗಿ ಕಾಣಲು ಮಾತ್ರವಲ್ಲ. ಅದಕ್ಕೆ ಮಿಗಿಲಾದ ಎರಡು ತಾಂತ್ರಿಕ ಕಾರಣಗಳಿವೆ. ವಿಮಾನಗಳು ಅತಿ ಎತ್ತರದಲ್ಲಿ ಹಾರುವಾಗ ವಿಪರೀತ ಚಳಿ ( ಮೈನಸ್ 50 ಡಿಗ್ರಿ ಸೆಲ್ಸಿಯಸ್), ಮಳೆ ಮತ್ತು ಬಿಸಿಲನ್ನು ಎದುರಿಸುತ್ತವೆ. ವಿಮಾನದ ಹೊರಭಾಗವನ್ನು ಅಲ್ಯೂಮಿನಿ ಯಂ ಮತ್ತು ಕಾಂಪೋಸಿಟ್ ವಸ್ತುಗಳಿಂದ ಮಾಡಲಾಗಿರುತ್ತದೆ. ಸರಿಯಾದ ಬಣ್ಣದ ಲೇಪನ ಇಲ್ಲದಿದ್ದರೆ, ಈ ಲೋಹಗಳು ಬೇಗನೆ ತುಕ್ಕು ಹಿಡಿಯುತ್ತವೆ. ಬಣ್ಣವು ಒಂದು ರಕ್ಷಾಕವಚದಂತೆ ಕೆಲಸ ಮಾಡುತ್ತದೆ. ವಿಮಾನದ ಮೈಮೇಲೆ ಧೂಳು ಅಥವಾ ಕಣಗಳು ಕುಳಿತರೆ ಅದು ಹಾರಾಟದ ವೇಗಕ್ಕೆ ಅಡ್ಡಿಯಾಗಬಹುದು.
ವಿಶೇಷವಾದ ನಯವಾದ ಬಣ್ಣವು ಗಾಳಿಯ ಘರ್ಷಣೆಯನ್ನು ಕಡಿಮೆ ಮಾಡಿ, ಇಂಧನ ಉಳಿತಾಯ ಕ್ಕೆ ಸಹಾಯ ಮಾಡುತ್ತದೆ. ಒಂದು ವಿಮಾನಕ್ಕೆ ಬಣ್ಣ ಬಳಿಯಲು ಕನಿಷ್ಠ ಹದಿನೈದು ದಿನ ಬೇಕು. ಇದನ್ನು ವಿಶೇಷವಾಗಿ ನಿರ್ಮಿಸಲಾದ ಹ್ಯಾಂಗರ್‌ಗಳಲ್ಲಿ ಮಾಡಬೇಕು. ಹೊಸ ಬಣ್ಣ ಹಾಕುವ ಮೊದಲು ಹಳೆಯ ಬಣ್ಣವನ್ನು ಸಂಪೂರ್ಣವಾಗಿ ತೆಗೆಯಬೇಕು.
ಇದನ್ನೂ ಓದಿ: Vishweshwar Bhat Column: ಪೈಲಟ್ ಅಮಾನತು ಚರ್ಚೆ
ಇಲ್ಲದಿದ್ದರೆ ವಿಮಾನದ ತೂಕ ಹೆಚ್ಚಾಗುತ್ತದೆ. ಇದಕ್ಕಾಗಿ ಕೆಲಸಗಾರರು ಪ್ರಬಲವಾದ ರಾಸಾಯನಿಕ ದ್ರಾವಣಗಳನ್ನು ವಿಮಾನದ ಮೇಲೆ ಸಿಂಪಡಿಸುತ್ತಾರೆ. ಇದು ಹಳೆಯ ಬಣ್ಣವನ್ನು ಕರಗಿಸುತ್ತದೆ. ನಂತರ ಅದನ್ನು ತೊಳೆದು, ಉಳಿದ ಭಾಗಗಳನ್ನು ಸ್ಯಾಂಡ್ ಪೇಪರ್ ಮೂಲಕ ಉಜ್ಜಿ ತೆಗೆಯ ಲಾಗುತ್ತದೆ. ಈಗ ವಿಮಾನವು ತನ್ನ ಮೂಲ ಲೋಹದ ಬಣ್ಣದಲ್ಲಿ ಕಾಣುತ್ತದೆ.
ನಂತರ ಮಾಸ್ಕ್ ಮಾಡುವುದು ನಿರ್ಣಾಯಕ ಹಂತ. ವಿಮಾನದ ಕಿಟಕಿಗಳು, ಟಯರ್‌ಗಳು, ಎಂಜಿನ್‌ನ ಒಳಭಾಗ ಮತ್ತು ಪಿಟಾಟ್ ಟ್ಯೂಬ್‌ಗಳಂಥ (ವೇಗ ಅಳೆಯುವ ಸೆನ್ಸಾರ್‌ಗಳು) ಸೂಕ್ಷ್ಮ ಭಾಗಗಳಿಗೆ ಬಣ್ಣ ತಾಗದಂತೆ ಟೇಪ್ ಮತ್ತು ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಲಾಗುತ್ತದೆ. ಒಂದು ಸಣ್ಣ ತಪ್ಪು ಆದರೂ ಸೆನ್ಸಾರ್‌ಗಳು ಕೆಟ್ಟುಹೋಗಿ ವಿಮಾನದ ಸುರಕ್ಷತೆಗೆ ಕುತ್ತು ಬರಬಹುದು.
ಲೋಹದ ಮೇಲೆ ನೇರವಾಗಿ ಬಣ್ಣ ನಿಲ್ಲುವುದಿಲ್ಲ. ಆದ್ದರಿಂದ ಮೊದಲು ‘ಪ್ರೈಮರ್’ ಎಂಬ ವಿಶೇಷ ಲೇಪನವನ್ನು ಹಾಕಲಾಗುತ್ತದೆ. ಇದು ಸಾಮಾನ್ಯವಾಗಿ ಹಸಿರು ಅಥವಾ ಹಳದಿ ಬಣ್ಣದಲ್ಲಿರುತ್ತದೆ. ಇದು ಲೋಹಕ್ಕೆ ಬಣ್ಣ ಗಟ್ಟಿಯಾಗಿ ಅಂಟಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ತುಕ್ಕು ಹಿಡಿಯ ದಂತೆ ತಡೆಯುತ್ತದೆ.
ಬಣ್ಣ ಸಿಂಪಡಿಸುವಾಗ ‘ಎಲೆಕ್ಟ್ರೋಸ್ಟಾಟಿಕ್ ಸ್ಪ್ರೇ ಗನ್’ ಎಂಬ ತಂತ್ರಜ್ಞಾನವನ್ನು ಬಳಸುತ್ತಾರೆ. ಬಣ್ಣದ ಕಣಗಳಿಗೆ ವಿದ್ಯುತ್ ಆವೇಶವನ್ನು (ಚಾರ್ಜ್) ನೀಡಲಾಗುತ್ತದೆ ಮತ್ತು ವಿಮಾನದ ದೇಹಕ್ಕೆ ವಿರುದ್ಧ ಆವೇಶವಿರುತ್ತದೆ. ಇದರಿಂದ ಬಣ್ಣವು ಅಯಸ್ಕಾಂತದಂತೆ ವಿಮಾನದ ಮೈಗೆ ಅಂಟಿ ಕೊಳ್ಳುತ್ತದೆ. ಇದು ಬಣ್ಣ ಸಮನಾಗಿ ಹರಡಲು ಮತ್ತು ಪೋಲಾಗದಂತೆ ತಡೆಯಲು ಸಹಾಯ ಮಾಡುತ್ತದೆ.
ಸಾಮಾನ್ಯವಾಗಿ ಮೂರು ಪದರಗಳನ್ನು ಹಾಕಲಾಗುತ್ತದೆ - ಪ್ರೈಮರ್, ಬೇಸ್ ಕೋಟ್ (ಬಣ್ಣ) ಮತ್ತು ಕ್ಲಿಯರ್ ಕೋಟ್ (ಹೊಳಪು ನೀಡಲು). ವಿಮಾನದ ಗಾತ್ರಕ್ಕೆ ಅನುಗುಣವಾಗಿ ಬಣ್ಣದ ಪ್ರಮಾಣ ಬದಲಾಗುತ್ತದೆ. ಇದು ಊಹಿಸುವುದಕ್ಕಿಂತ ಹೆಚ್ಚು ಇರುತ್ತದೆ. ಏರ್‌ಬಸ್ ಅ320 ಅಥವಾ ಬೋಯಿಂಗ್ 737 ವಿಮಾನದ ಪೂರ್ಣ ದೇಹಕ್ಕೆ ಬಣ್ಣ ಬಳಿಯಲು ಸುಮಾರು 300 ಲೀಟರ್‌ಗಳಷ್ಟು ಬಣ್ಣ ಬೇಕಾಗುತ್ತದೆ.
ಇದು ಬಣ್ಣ, ಹಾರ್ಡ್‌ನರ್ ಮತ್ತು ಸಾಲ್ವೆಂಟ್ ಎಲ್ಲವನ್ನೂ ಒಳಗೊಂಡಿರುತ್ತದೆ. ಮಧ್ಯಮ ಗಾತ್ರದ ವಿಮಾನಕ್ಕೆ (ಉದಾ: ಬೋಯಿಂಗ್ 787 ಡ್ರೀಮ್ ಲೈನರ್) ಸುಮಾರು 500 ಲೀಟರ್ ಬಣ್ಣ ಬೇಕಾಗ ಬಹುದು. ಜಗತ್ತಿನ ಅತಿದೊಡ್ಡ ಪ್ರಯಾಣಿಕ ವಿಮಾನವಾದ ಏರ್‌ಬಸ್ ಅ380 ಕ್ಕೆ ಬಣ್ಣ ಬಳಿಯು ವುದು ಒಂದು ದೊಡ್ಡ ಸವಾಲು. ಈ ವಿಮಾನದ ಮೇಲ್ಮೈ ವಿಸ್ತೀರ್ಣ ಸುಮಾರು 3100 ಚದರ ಮೀಟರ್‌ಗಳಷ್ಟಿರುತ್ತದೆ. ಇದಕ್ಕೆ ಪ್ರೈಮರ್, ಬೇಸ್ ಕೋಟ್ ಮತ್ತು ಟಾಪ್ ಕೋಟ್ ಎಲ್ಲವನ್ನೂ ಸೇರಿಸಿ ಒಟ್ಟು 3600 ಲೀಟರ್ ಗಳಷ್ಟು (ಸುಮಾರು 600 ರಿಂದ 1000 ಕಿಲೋ ತೂಕದ) ಬಣ್ಣ ಬೇಕಾಗುತ್ತದೆ!