Mohan Vishwa Column: ಪಾಕ್‌ನ ಆದಾಯ ಮೂಲ: ಉಗ್ರರ ಫೋಷಣೆ
ಅನೇಕ ಚರ್ಚುಗಳ ಮೇಲೆ ನಡೆದ ಭಯೋತ್ಪಾದಕ ದಾಳಿಗಳಲ್ಲೂ ಈ ಭಯೋತ್ಪಾದಕ ಸಂಘಟ ನೆಯ ಹೆಸರು ಕೇಳಿಬಂದಿತ್ತು. 1980ರ ಜನವರಿಯಲ್ಲಿ, ಇಸ್ಲಾಮಿಕ್ ಕಾನರೆನ್ಸ್‌ನ 34 ರಾಷ್ಟ್ರಗಳ ವಿದೇಶಾಂಗ ಸಚಿವರುಗಳು ಅಫ್ಘಾನಿಸ್ತಾನದಿಂದ ಸೋವಿಯತ್ ಪಡೆಗಳನ್ನು ಬೇಷರತ್ತಾಗಿ, ತುರ್ತಾಗಿ ಹಿಂತೆಗೆದು ಕೊಳ್ಳಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿದ್ದರು.


ವೀಕೆಂಡ್ ವಿತ್ ಮೋಹನ್
camohanbn@gmail.com
ಪಾಕಿಸ್ತಾನದಲ್ಲಿ ಮಿಲಿಟರಿ, ಐಎಸ್‌ಐ ಮತ್ತು ಮೂಲಭೂತವಾದಿಗಳ ‘ಅಪವಿತ್ರ ಮೈತ್ರಿ’ಯು ಉಗ್ರ ಗುಂಪುಗಳ ಸೃಷ್ಟಿಗೆ ಮೂಲ ಕಾರಣವಾಗಿದೆ. ಅಲ್ಲಿ ಹಲವು ರೀತಿಯ ಉಗ್ರಗಾಮಿ ಗುಂಪುಗಳು ಕಾರ್ಯನಿರ್ವಹಿಸುತ್ತಿವೆ. ‘ಹಿಜ್ಬುಲ್ ಮುಜಾಹಿದೀನ್’ ಎಂಬ ದೊಡ್ಡ ಭಯೋತ್ಪಾದಕ ಸಂಘಟನೆ ಯು ಮುಹಮ್ಮದ್ ಅಹ್ಸಾನ್ ದಾರ್ ಎಂಬ ಮಾಜಿ ಶಾಲಾ ಶಿಕ್ಷಕನಿಂದ 1989ರಲ್ಲಿ ಸ್ಥಾಪಿತ ವಾಯಿತು. ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವಿಕೆ ಮತ್ತು ಇಸ್ಲಾಮೀಕರಣದ ಅಭಿಯಾನ ಇವು ಈ ಸಂಘಟನೆಯ ಪ್ರಮುಖ ಉದ್ದೇಶವಾಗಿವೆ. ಒಂದು ಕಾಲದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶೇ.60ರಷ್ಟು ಉಗ್ರರನ್ನು ಹಿಜ್ಬುಲ್ ಮುಜಾಹಿದೀನ್ ನಿಯಂತ್ರಿಸು ತ್ತಿತ್ತು ಮತ್ತು 1997ರಿಂದ ಈಚೆಗೆ ‘ಲಷ್ಕರ್-ಎ-ತೈಬಾ’ದೊಂದಿಗೆ ಜತೆಗೂಡಿ ಈ ಸಂಘಟನೆ ಉಗ್ರಕೃತ್ಯ ಗಳನ್ನು ನಡೆಸುತ್ತಿದೆ.
ಲಷ್ಕರ್-ಎ-ತೈಬಾ ಸಂಘಟನೆಯು ಅಫ್ಗಾನಿಸ್ತಾನದ ಕುನಾರ್ ಪ್ರಾಂತ್ಯದಲ್ಲಿ 1980ರಲ್ಲಿ ಸ್ಥಾಪನೆ ಯಾಯಿತು. ಇದರ ಸದಸ್ಯರು ಭಾರತದಲ್ಲಿ ಹಲವು ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದಾರೆ. 2008ರ ನವೆಂಬರ್ 26ರಂದು ಮುಂಬೈ ನಗರದಲ್ಲಿ ಸಾರ್ವಜನಿಕರನ್ನು ಗುರಿಯಾಗಿಸಿ ತಾಜ್ ಹೋಟೆಲ್, ಲಿಯೋಪೋಲ್ಡ್ ಕೆಫೆ, ಟ್ರೈಡೆಂಟ್ ಹೋಟೆಲ್, ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣದಲ್ಲಿ ದಾಳಿಯನ್ನು ನಡೆಸಿ 168 ಜನರ ಸಾವಿಗೆ ಕಾರಣವಾಗಿದ್ದ ಭಯೋತ್ಪಾದಕ ಸಂಘಟ ನೆಯಿದು. ಅಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಉಗ್ರ ಅಜ್ಮಲ್ ಕಸಬ್, ಪಾಕಿಸ್ತಾನ ತನ್ನ ಮೂಲ ನೆಲೆಯೆಂದು ಬಾಯಿಬಿಟ್ಟಿದ್ದ.
ಮುಂಬೈ ಮೇಲಿನ ದಾಳಿಗೆ ಪಾಕಿಸ್ತಾನದ ‘ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್’ (ಐಎಸ್‌ಐ) ಗುಪ್ತಚರ ಸಂಸ್ಥೆಯು ಲಷ್ಕರ್-ಎ-ತೈಬಾಕ್ಕೆ ಗುಪ್ತಚರ ನೆರವು ಮತ್ತು ರಕ್ಷಣೆಯನ್ನು ಒದಗಿಸಿತ್ತು. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ರ ನೀತಿಗಳನ್ನು ವಿರೋಧಿಸಲು ಪಾಕಿಸ್ತಾನದಲ್ಲಿ, ವಿಶೇಷ ವಾಗಿ ಕರಾಚಿಯಲ್ಲಿ ದಾಳಿಗಳನ್ನು ನಡೆಸಲು ಮೌಲಾನಾ ಮಸೂದ್ ಅಜರ್ 2000ನೇ ಇಸವಿಯ ಜನವರಿಯಲ್ಲಿ ‘ಜೈಶ್-ಎ-ಮೊಹಮ್ಮದ್’ (ಜೆಇಎಂ) ಎಂಬ ಉಗ್ರಸಂಘಟನೆಯನ್ನು ಸ್ಥಾಪಿಸಿದ.
ಇದನ್ನೂ ಓದಿ: Mohan Vishwa Column: ಹಿಮಾಲಯನ್ ಬ್ಲಂಡರ್ ಮಾಡಿದ್ದ ನೆಹರು
ಈ ಹಿಂದೆ ‘ಹರ್ಕ್ ಅತ್-ಉಲ್-ಮುಜಾಹಿದೀನ್’ ಸಂಘಟನೆಯ ಪ್ರಭಾವಿ ನಾಯಕನಾಗಿದ್ದ ಈತ, ಜಿಹಾದ್ ಅನ್ನು ವಿಭಿನ್ನ ರೀತಿಯಲ್ಲಿ ಪ್ರತಿಪಾದಿಸುವ ಪ್ರಯತ್ನ ಮಾಡಿದ್ದ. ಜೆಇಎಂ ಉಗ್ರ ಸಂಘಟ ನೆಯು ಪಾಶ್ಚಿಮಾತ್ಯರ ಮತ್ತು ಯಹೂದಿಗಳ ವಿರೋಧಿ ಹಾಗೂ ಇದು ಇಸ್ಲಾಮಿಕ್ ಭಯೋತ್ಪಾದನೆ ಯನ್ನು ಪ್ರತಿಪಾದಿ ಸುತ್ತದೆ.
ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವುದು ಈ ಸಂಘಟನೆಯ ಪ್ರಾಥಮಿಕ ಉದ್ದೇಶವಾಗಿದೆ. 2001ರ ಅಕ್ಟೋಬರ್ 1ರಂದು ಕಾಶ್ಮೀರ ಶಾಸನಸಭೆಯ ಮೇಲೆ ದಾಳಿ ನಡೆಸಿ 31 ಜನರನ್ನು ಕೊಂದ ಅಪರಾಧಿಗಳು ಈ ಜೆಇಎಂನ ಸದಸ್ಯರು. 2001ರ ಡಿಸೆಂಬರ್ 13ರಂದು ಭಾರತದ ಸಂಸತ್ತಿನ ಮೇಲೆ ನಡೆದ ದಾಳಿಯ ಸಂಚುಕೋರ ಈ ಜೆಇಎಂ ಸಂಘಟನೆ. ಪಾಕಿಸ್ತಾನದ ಆತ್ಮಾಹುತಿ ಬಾಂಬರ್‌ಗಳ ಪೈಕಿ ಒಬ್ಬನ ಮೊಬೈಲ್ ಫೋನ್ ನಂಬರ್‌ಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ ನಂತರ ತಿಳಿದ ವಿಷಯವೇನೆಂದರೆ, 2003ರ ಕೊನೆಯಲ್ಲಿ ಪಾಕಿಸ್ತಾನದ ಅಧ್ಯಕ್ಷ ಮುಷರಫ್ ಹತ್ಯೆಯ ಪ್ರಯತ್ನ ಗಳಲ್ಲಿ ಭಾಗಿಯಾಗಿದ್ದ ಗುಂಪುಗಳಲ್ಲಿ ಜೆಇಎಂ ಕೂಡ ಸೇರಿತ್ತು.
ಅನೇಕ ಚರ್ಚುಗಳ ಮೇಲೆ ನಡೆದ ಭಯೋತ್ಪಾದಕ ದಾಳಿಗಳಲ್ಲೂ ಈ ಭಯೋತ್ಪಾದಕ ಸಂಘಟ ನೆಯ ಹೆಸರು ಕೇಳಿಬಂದಿತ್ತು. 1980ರ ಜನವರಿಯಲ್ಲಿ, ಇಸ್ಲಾಮಿಕ್ ಕಾನರೆನ್ಸ್‌ನ 34 ರಾಷ್ಟ್ರಗಳ ವಿದೇಶಾಂಗ ಸಚಿವರುಗಳು ಅಫ್ಘಾನಿಸ್ತಾನದಿಂದ ಸೋವಿಯತ್ ಪಡೆಗಳನ್ನು ಬೇಷರತ್ತಾಗಿ, ತುರ್ತಾ ಗಿ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿದ್ದರು.
ಆದರೆ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು 104 ಮತಗಳ ಮೂಲಕ ಸೋವಿಯತ್‌ನ ಹಸ್ತಕ್ಷೇಪ ವನ್ನು ಪ್ರತಿಭಟಿಸುವ ನಿರ್ಣಯವನ್ನು ಅಂಗೀಕರಿಸಿತು. ನಂತರ ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದ ಹಲವು ದಂಗೆಕೋರರು ನೆರೆಯ ಪಾಕಿಸ್ತಾನ ಮತ್ತು ಚೀನಾದಲ್ಲಿ ಬೃಹತ್ ಪ್ರಮಾಣದ ಮಿಲಿಟರಿ ತರಬೇತಿಯನ್ನು ಪಡೆಯಲಾರಂಭಿಸಿದರು. 1988ರಲ್ಲಿ ಅಫ್ಘಾನಿಸ್ತಾನ, ಸೋವಿಯತ್ ಒಕ್ಕೂಟ, ಅಮೆರಿಕ ಮತ್ತು ಪಾಕಿಸ್ತಾನ ದೇಶಗಳು ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿ, ಕೊನೆಯ ಸೋವಿಯತ್ ಸೈನಿಕ 1989ರ ಫೆಬ್ರವರಿಯಲ್ಲಿ ಅಫ್ಘಾನಿಸ್ತಾನವನ್ನು ಖಾಲಿಮಾಡಿದ್ದ.
ಒಂದು ಕಾಲದಲ್ಲಿ ಪಾಕಿಸ್ತಾನ ಸರಕಾರವು ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದ ಭಯೋತ್ಪಾದಕರಿಗೆ ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರಗಳನ್ನು ಪೂರೈಸುವ ಮಧ್ಯವರ್ತಿಯಾಗಿತ್ತು. ಭೌಗೋಳಿಕತೆಯ ಅನು ಕೂಲ ಮತ್ತು ಪಾಕಿಸ್ತಾನದ ಆರ್ಥಿಕ ಅಗತ್ಯಗಳು, ಅಲ್ಲಿನ ರಾಜಕೀಯ ನಾಯಕರುಗಳು ಯುದ್ಧದ ಸಮಯದಲ್ಲಿ ಮಧ್ಯವರ್ತಿಗಳಾಗುವುದನ್ನು ಪ್ರೇರೇಪಿಸಿತ್ತು. ಆಫ್ಘಾನ್ ಮತ್ತು ಸೋವಿಯತ್ ಪಡೆಗಳ ಸಂಘಟಿತ ಕಮ್ಯುನಿಸ್ಟ್ ದಾಳಿಯನ್ನು ಎದುರಿಸುವ ಸಾಧ್ಯತೆಯು ಪಾಕಿಸ್ತಾನದ ಮಿಲಿಟರಿಗೆ ಕಳವಳದ ವಿಷಯವಾಗಿತ್ತು.
ಇದರಿಂದಾಗಿ ಸೋವಿಯತ್ ಪಡೆಗಳನ್ನು ಅಫ್ಘಾನಿಸ್ತಾನದಿಂದ ತೆಗೆದುಹಾಕುವುದು ಅದಕ್ಕೆ ಅನಿವಾರ್ಯವಾಗಿತ್ತು. ಒಂದು ದೇಶವು ತನ್ನ ಆಂತರಿಕ ಆದಾಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿ ನಲ್ಲಿ ಅಭಿವೃದ್ಧಿಯೆಡೆಗೆ ಗಮನಹರಿಸಬೇಕು. ಆದರೆ ಪಾಕಿಸ್ತಾನವು, ಆಫ್ಘನ್ ಮತ್ತು ರಷ್ಯಾ ನಡು ವಿನ ಸಂಘರ್ಷದಲ್ಲಿ ಅಮೆರಿಕ ನೀಡುವ ಶಸ್ತ್ರಾಸ್ತ್ರ ಮತ್ತು ಹಣವನ್ನು ತನ್ನ ಆದಾಯದ ಮೂಲ ವನ್ನಾಗಿಸಿಕೊಂಡಿತ್ತು. ಆಫ್ಘನ್ ಮತ್ತು ರಷ್ಯಾ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಬರು ತ್ತಿದ್ದಂಥ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ‘ಐಎಸ್‌ಐ’ ನಿಯಂತ್ರಿಸುತ್ತಿತ್ತು.
ಶಸ್ತ್ರಾಸ್ತ್ರಗಳು ಹಡಗು ಮತ್ತು ವಿಮಾನಗಳ ಮೂಲಕ ಪಾಕಿಸ್ತಾನವನ್ನು ತಲುಪುತ್ತಿದ್ದವು. ನಂತರ ಗಡಿಪ್ರದೇಶಗಳಿಗೆ ಪಾಕಿಸ್ತಾನದ ಮೇಲ್ವಿಚಾರಣೆಯಲ್ಲಿ ಟ್ರಕ್ ಮೂಲಕ ಕಳುಹಿಸಿಕೊಡಲಾಗುತ್ತಿತ್ತು. ಪೇಶಾವರ ಮೂಲದ ಪ್ರತ್ಯೇಕ ಗುಂಪುಗಳ ನಿಯಂತ್ರಣದಲ್ಲಿರುವ ಸಣ್ಣ ಸಣ್ಣ ವಿತರಣಾ ಕೇಂದ್ರ ಗಳಲ್ಲಿ ಮುಜಾಹಿದೀನ್‌ಗಳು ಪಾಕಿಸ್ತಾನದೊಳಗೆ ಶಸ್ತ್ರಾಸ್ತ್ರಗಳನ್ನು ತಲುಪಿಸುತ್ತಿದ್ದರು.
ಒಂದು ಕಾಲದಲ್ಲಿ ಪಾಕಿಸ್ತಾನ ಸೇನೆಗೆ ಅಮೆರಿಕದಿಂದ ಒಂದು ದಶಕದ ಕೊಡುಗೆಯಾಗಿ ಸುಮಾರು ೨ ಬಿಲಿಯನ್ ಡಾಲರ್ ನಷ್ಟು ಹಣ ಸಂದಾಯವಾಗಿತ್ತೆಂದು ಹೇಳಲಾಗುತ್ತದೆ. ಇದರ ಜತೆಗೆ 1980ರ ಆರಂಭದಲ್ಲಿ ಸೌದಿ ಅರೇಬಿಯಾದಿಂದ ಸುಮಾರು 300 ಮಿಲಿಯನ್ ಅಮೆರಿಕನ್ ಡಾಲರ್ ಹಣ ವನ್ನು ಪಾಕಿಸ್ತಾನ ಪಡೆದಿತ್ತು.
ಸೋವಿಯತ್ ಪ್ರಾಯೋಜಿತ ಕಮ್ಯುನಿಸಂ ವಿರುದ್ಧ ಇಸ್ಲಾಮಿನ ರಕ್ಷಕನಾಗಿ ಬಿಂಬಿಸಿಕೊಳ್ಳಲು ಪಾಕಿಸ್ತಾನದ ಅಂದಿನ ಅಧ್ಯಕ್ಷ ಜಿಯಾ-ಉಲ್-ಹಕ್, ಇಸ್ಲಾಮಿಕ್ ಧಾರ್ಮಿಕ ತತ್ವಗಳು ಮತ್ತು ಸಂಪ್ರ ದಾಯಗಳಿಂದ ಮಾರ್ಗದರ್ಶಿಸಲ್ಪಟ್ಟ ರಾಜಕೀಯ ವ್ಯವಸ್ಥೆಯನ್ನು ಉತ್ತೇಜಿಸಿ ಹಾಗೂ ಇಸ್ಲಾಮಿಕ್ ಕಾನೂನಿಗೆ ಅನುಗುಣವಾಗಿ ಕ್ರಿಮಿನಲ್ ಶಿಕ್ಷೆಗೆ ಕರೆ ನೀಡಿದ್ದ.
ಪಾಕಿಸ್ತಾನದಲ್ಲಿ ಇಸ್ಲಾಮಿಕ್ ರಿಲಿಜನ್ ಅನುಸರಿಸುವ ಬ್ಯಾಂಕಿಂಗ್ ವ್ಯವಸ್ಥೆಗಳು ಮತ್ತು ಆರ್ಥಿಕ ಚಟುವಟಿಕೆಗಳ ಅನುಷ್ಠಾನಕ್ಕೆ ಆತ ಒತ್ತಾಯಿಸಿದ್ದ. ಪಾಕಿಸ್ತಾನ ಬೆಂಬಲಿತ ಆಪ್ಘನ್ ಮುಜಾ ಹಿದೀನ್‌ನೊಂದಿಗಿನ ಒಂದು ದಶಕದ ಸುದೀರ್ಘ ಯುದ್ದದ ನಂತರ ಕೊನೆಯ ಸೋವಿಯತ್ ಸೈನಿಕ ನನ್ನು ಅಫ್ಗಾನಿಸ್ತಾನದಿಂದ ಹಿಂತೆಗೆದುಕೊಳ್ಳುವುದರೊಂದಿಗೆ, ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ‘ಐಎಸ್‌ಐ’ ಮೂಲಭೂತವಾದಿಗಳ ಬೋಧನಾ ಕೇಂದ್ರಗಳನ್ನಾಗಿ ಪರಿವರ್ತಿಸಿತು.
ನಂತರ ಅವರನ್ನು ಕಾಶ್ಮೀರ ಕಣಿವೆಗೆ ಕಳುಹಿಸುವ ಕೆಲಸವನ್ನು ಪಾಕಿಸ್ತಾನ ಮಾಡಿತು. ಅಮೆರಿಕದ ಅವಳಿ ಕಟ್ಟಡಗಳ ಮೇಲೆ 2004ರ ಸೆಪ್ಟೆಂಬರ್ 11ರಂದು ನಡೆದ ಭಯೋತ್ಪಾದಕ ದಾಳಿಯ ನಂತರ, ವಿಶ್ವಾದ್ಯಂತ ‘ಭಯೋತ್ಪಾದನೆಯ ವಿರುದ್ಧ ಯುದ್ಧ’ ಎಂದು ಘೋಷಿಸುವ ಅಂತಾರಾಷ್ಟ್ರೀಯ ಮಿಲಿಟರಿ ಕಾರ್ಯಾಚರಣೆಯನ್ನು ಜಾರ್ಜ್ ಬುಷ್ ಪ್ರಾರಂಭಿಸಿದರು. ಮುಕ್ತ ಹಾಗೂ ರಹಸ್ಯ ಮಿಲಿಟರಿ ಕಾರ್ಯಾಚರಣೆ, ಹೊಸ ಭದ್ರತಾ ಕಾನೂನಿನ ಜಾರಿಯನ್ನು ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ತಡೆಯುವ ಪ್ರಯತ್ನಗಳನ್ನು ಈ ಸಮರವು ಒಳಗೊಂಡಿತ್ತು.
ತಾಲಿಬಾನ್ ಆಡಳಿತದ ಭೌಗೋಳಿಕತೆ ಮತ್ತು ರಾಜತಾಂತ್ರಿಕ ಸಂಬಂಧಗಳಿಗಾಗಿ, ಭಯೋತ್ಪಾದನೆ ವಿರುದ್ಧದ ತನ್ನ ಯುದ್ಧದಲ್ಲಿ ಪಾಕಿಸ್ತಾನವನ್ನು ಮುಂದಾಳತ್ವದ ದೇಶವೆಂದು ಅಮೆರಿಕ ಘೋಷಿ ಸಿತು. ಪಾಕಿಸ್ತಾನ ಮತ್ತು ತಾಲಿಬಾನ್ ಮೈತ್ರಿಯನ್ನು ಮುರಿದು, ಅಫ್ಘಾನಿಸ್ತಾನವನ್ನು ಪ್ರತ್ಯೇಕಿಸುವ ಗುರಿಯನ್ನು ಅಮೆರಿಕ ಹೊಂದಿತ್ತು, ಈ ಯುದ್ಧದಿಂದ ಪಾಕಿಸ್ತಾನಕ್ಕೆ ಗಣನೀಯವಾದ ಆರ್ಥಿಕ ಲಾಭ ಮತ್ತು ಮಿಲಿಟರಿ ಬೆಂಬಲ ಸಿಗುತ್ತದೆಯೆಂದು ತಿಳಿದಿತ್ತು.
ಅಮೆರಿಕಕ್ಕೆ ಬೆಂಬಲಿಸಿದ ಪಾಕಿಸ್ತಾನ ತನ್ನ ಭೂಪ್ರದೇಶದಲ್ಲಿ ‘ಅಲ್ ಖೈದಾ’ ಕಾರ್ಯಾಚರಣೆ ಗಳನ್ನು ನಿಲ್ಲಿಸಲು ಹಾಗೂ ತಾಲಿಬಾನಿಗೆ ಶಸ್ತ್ರಾಸ್ತ್ರ ಸಾಗಣೆ ಮತ್ತು ಲಾಜಿಸ್ಟಿಕ್ ಬೆಂಬಲವನ್ನು ಕಡಿತಗೊಳಿಸುವಂತೆ ‘ಐಎಸ್‌ಐ’ಗೆ ಸೂಚಿಸುವ ನಾಟಕವನ್ನಾಡಿತ್ತು. ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ವಿರುದ್ಧ ನಡೆಯುತ್ತಿರುವ ಭಯೋತ್ಪಾದಕತೆಯನ್ನು ನಿರ್ಮೂಲನೆ ಮಾಡಲು, ಅಮೆರಿಕದ ವಿಮಾನಗಳಿಗೆ ಪಾಕಿಸ್ತಾನದಲ್ಲಿನ ಬಂದರುಗಳು, ಮಿಲಿಟರಿ, ಗುಪ್ತಚರ ಕಾರ್ಯಾಚರಣೆ ಗಳಿಗೆ ಪ್ರಾದೇಶಿಕ ಪ್ರವೇಶವನ್ನು ನೀಡುವಂತೆ ಅಮೆರಿಕ ಕೇಳಿತ್ತು.
ಅಮೆರಿಕದ ವಿಮಾನಗಳಿಗೆ ಓವರ್-ಫ್ಲೈಟ್ ಮತ್ತು ಲ್ಯಾಂಡಿಂಗ್ ಹಕ್ಕುಗಳನ್ನು ಒದಗಿಸುವಂತೆ ಕೇಳಿತ್ತು. ಅಮೆರಿಕದಿಂದ ಬರುವ ಆರ್ಥಿಕ ಲಾಭಕ್ಕಾಗಿ, ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರ- ಅವರ ಬೇಡಿಕೆಗಳನ್ನು ಒಪ್ಪಿ, ಅವರೊಂದಿಗೆ ವಿಚಿತ್ರವಾದ ಸಂಬಂಧವನ್ನು ಅನ್ವೇಷಿಸಲು ನಿರ್ಧ ರಿಸಿದ್ದ. ಅಮೆರಿಕವು 2002-2003ರಲ್ಲಿ ಸುಮಾರು 102 ಶತಕೋಟಿ ಡಾಲರ್ ಹಣವನ್ನು ಪಾಕಿಸ್ತಾ ನಕ್ಕೆ ನೀಡಿತ್ತು.
ಇದರಲ್ಲಿ ‘ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್‌ಮೆಂಟ್’ (ಯುಎಸ್ ಎಐಡಿ) ನಿರ್ವಹಿಸುವ ಅಭಿವೃದ್ಧಿ ನೆರವು ಮತ್ತು 600 ಮಿಲಿಯನ್ ಡಾಲರ್‌ಗಿಂತಲೂ ಅಧಿಕ ನಗದು ವರ್ಗಾವಣೆಯನ್ನು ಸಾಲ ತೀರಿಸಲು ಪಾಕಿಸ್ತಾನ ಸರಕಾರಕ್ಕೆ ನೇರವಾಗಿ ನೀಡಲಾಗಿತ್ತು. ಪ್ಯಾರಿಸ್ ಕ್ಲಬ್ ಸದಸ್ಯರೊಂದಿಗೆ ಪಾಕಿಸ್ತಾನದ 12.5 ಶತಕೋಟಿ ಡಾಲರ್ ದ್ವಿಪಕ್ಷೀಯ ಸಾಲವನ್ನು ಮರುಹೊಂದಿಸುವುದನ್ನು ಬೆಂಬಲಿಸಲು ಅಮೆರಿಕ ಒಪ್ಪಿಕೊಂಡಿತು.
ಅದರಲ್ಲಿ 2.9 ಶತಕೋಟಿಯನ್ನು ಅಮೆರಿಕಕ್ಕೆ ಮತ್ತು 5.3 ಶತಕೋಟಿಯನ್ನು ಜಪಾನ್‌ಗೆ ನೀಡ ಬೇಕಿತ್ತು. ಪಾಕಿಸ್ತಾನದಲ್ಲಿ ಮುಷರ- ವಿರುದ್ಧ ಟೀಕೆಗಳು ಕೇಳಿಬಂದವು, ಆಫ್ಘನ್ನರ ಪರವಾಗಿ ಉಗ್ರಗಾಮಿಗಳಿಂದ ಪ್ರತಿಭಟನೆಗಳು ನಡೆದವು ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐಎಸ್‌ಐ’ ಅತನ ನಿರ್ಧಾರದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿತ್ತು. ತನ್ನ ಪರವಾಗಿ ‘ಐಎಸ್‌ಐ’ ಬೆಂಬಲ ಗಳಿಸಲು ಅಧ್ಯಕ್ಷ ಮುಷರಫ್, ಪಾಕಿಸ್ತಾನದ ಗುಪ್ತಚರ ಮುಖ್ಯಸ್ಥನಾಗಿದ್ದ ಜನರಲ್ ಮಹಮೂದ್ ಮತ್ತು ಅವನ ಲೆಫ್ಟಿನೆಂಟ್ ಗಳನ್ನು ವಜಾ ಮಾಡಿ ಹೊಸ ನಾಟಕ ಪ್ರಾರಂಭಿಸಿದ್ದ.
ಈತ ತೆಗೆದುಕೊಂಡ ನಿರ್ಧಾರದಿಂದ ಪಾಕಿಸ್ತಾನದ ಊಸರವಳ್ಳಿ ಬುದ್ಧಿ ಅಮೆರಿಕಕ್ಕೆ ತಿಳಿಯಿತು. ಒಂದೆಡೆ ಅಮೆರಿಕದಿಂದ ಆರ್ಥಿಕ ನೆರವು ಪಡೆದು, ಮತ್ತೊಂದೆಡೆ ದೇಶದೊಳಗೆ ಉಗ್ರರನ್ನು ಪೋಷಿ ಸುವ ಕೆಲಸವನ್ನು ಪಾಕಿಸ್ತಾನ ಮಾಡಿತ್ತು. ಆದರೂ ಅಮೆರಿಕವು ಒಸಾಮಾ ಬಿನ್ ಲಾಡೆನ್‌ನನ್ನು ಬೇಟೆಯಾಡುವ ಸಲುವಾಗಿ ಪಾಕಿಸ್ತಾನಕ್ಕೆ ಹಣಕಾಸಿನ ನೆರವು ನೀಡುವುದನ್ನು ನಿಲ್ಲಿಸಲಿಲ್ಲ.
ಪಾಕಿಸ್ತಾನವೆಂಬ ದಾರಿತಪ್ಪಿದ ದೇಶವು ತನ್ನ ಹುಟ್ಟಿನಿಂದಲೂ ದೇಶವನ್ನು ಕಟ್ಟುವ ಉತ್ತಮ ನೀತಿಗಳ ಬಗ್ಗೆ ಚಿಂತಿಸಲಿಲ್ಲ. ಅದು ಭಯೋತ್ಪಾದಕರ ತವರೂರಾಗಿ ಭಾರತದ ಮೇಲೆ ಎರಗಲು ಯತ್ನಿಸಿ ಸ್ವತಃ ದಿವಾಳಿಯಾಗಿದೆ.
ವಿಶ್ವದ ಇತರ ದೇಶಗಳು ನೀಡುವ ಹಣಕಾಸಿನ ಸಹಾಯವನ್ನೇ ನಂಬಿಕೊಂಡಿದೆ. ಒಂದು ಕಾಲದಲ್ಲಿ ರಷ್ಯಾವನ್ನು ಅಫ್ಘಾನಿಸ್ತಾನದಿಂದ ಓಡಿಸಲು ಅದು ಅಮೆರಿಕದ ಬಳಿ ಭಿಕ್ಷೆ ಬೇಡಿತ್ತು. ನಂತರ ಭಯೋತ್ಪಾದಕತೆಯ ವಿರುದ್ಧದ ಹೋರಾಟದಲ್ಲಿ ಅಮೆರಿಕದ ಪರವಾಗಿ ನಿಂತಿದ್ದೇವೆಂದು ಸುಳ್ಳು ಹೇಳಿ ಧನಸಹಾಯ ಪಡೆದು, ನಂತರ ಅದರ ಬೆನ್ನಿಗೆ ಚೂರಿ ಹಾಕಿ, ತನ್ನ ನೆಲದಲ್ಲಿ ಉಗ್ರ ಒಸಾಮಾ ಬಿನ್ ಲಾಡೆನ್‌ಗೆ ಆಶ್ರಯ ನೀಡಿತ್ತು. ಇದನ್ನರಿತ ಅಮೆರಿಕ ತಾನು ನೀಡುತ್ತಿದ್ದಂಥ ಧನಸಹಾಯ ವನ್ನು ಸಂಪೂರ್ಣವಾಗಿ ನಿಲ್ಲಿಸಿತು.
ಇದು ನಿಲ್ಲುತ್ತಿದ್ದಂತೆ ಪಾಕಿಸ್ತಾನವು ಚೀನಾದ ಬಾಗಿಲು ತಟ್ಟಿತು. ಚೀನಾದ ಭಿಕ್ಷೆ ಕೆಲ ವರ್ಷಗಳ ಕಾಲ ಮುಂದುವರಿಯಿತು. ಒಟ್ಟಿನಲ್ಲಿ, ಹುಟ್ಟಿನಿಂದಲೇ ದಾರಿತಪ್ಪಿದ ದೇಶವೆನಿಸಿರುವ ಪಾಕಿಸ್ತಾ ನವು ತನ್ನ ನೆಲದಲ್ಲಿ ಭಯೋತ್ಪಾದಕರನ್ನು ಪೋಷಿಸುವುದನ್ನೇ ಆದಾಯದ ಮೂಲವಾಗಿಸಿ ಕೊಂಡಿದೆ.