ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gold smuggling: ಒಳಉಡುಪಿನಲ್ಲಿ ಚಿನ್ನ ಅಡಗಿಸಿಟ್ಟಿದ್ದ ಮಹಿಳೆ; ಕೊನೆಗೆ ಸಿಕ್ಕಿ ಬಿದ್ದಿದ್ದು ಹೇಗೆ?

ಒಳಉಡುಪುಗಳಲ್ಲಿ ಸುಮಾರು ಒಂದು ಕೆ.ಜಿ. ಚಿನ್ನ ಬಚ್ಚಿಟ್ಟು ಸಾಗಿಸುತ್ತಿದ್ದ ಮಹಿಳೆಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಮಹಿಳೆ ತನ್ನ ಒಳ ಉಡುಪುಗಳಲ್ಲಿ 1 ಕೆಜಿ ಚಿನ್ನವನ್ನು ಅಡಗಿಸಿಟ್ಟು ಮ್ಯಾನ್ಮಾರ್‌ನಿಂದ ಭಾರತಕ್ಕೆ ಚಿನ್ನವನ್ನು ಸಾಗಿಸುತ್ತಿದ್ದಳು. ಇನ್ನೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಬಾಟಲ್ ಮುಚ್ಚಳದಲ್ಲಿ 170 ಗ್ರಾಂ ಚಿನ್ನವನ್ನು ದುಬೈನಿಂದ ಭಾರತಕ್ಕೆ ಸಾಗಿಸುತ್ತಿದ್ದು, ಆತನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಒಳಉಡುಪಿನಲ್ಲಿ ಚಿನ್ನ ಅಕ್ರಮ ಸಾಗಾಟ: ಮಹಿಳೆ ಬಂಧನ

-

ನವದೆಹಲಿ: ಮ್ಯಾನ್ಮಾರ್‌ನಿಂದ (Myanmar) ಭಾರತಕ್ಕೆ ಸುಮಾರು ಒಂದು ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮಹಿಳೆಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ (Delhi airport) ಬಂಧಿಸಲಾಗಿದೆ. ಒಳಉಡುಪುಗಳಲ್ಲಿ ಬಚ್ಚಿಟ್ಟು ಸುಮಾರು 1.17 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 996.5 ಗ್ರಾಂ ಚಿನ್ನವನ್ನು (Gold smuggling) ಅಕ್ರಮವಾಗಿ ಸಾಗಿಸುತ್ತಿದ್ದ ಮಹಿಳೆಯನ್ನು ಕಸ್ಟಮ್ಸ್ ಅಧಿಕಾರಿಗಳು (Customs officers) ಬಂಧಿಸಿದ್ದಾರೆ. ಆಕೆಯಿಂದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದಿರುವ ಎರಡನೇ ಪ್ರಕರಣ ಇದಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆ ತನ್ನ ಒಳ ಉಡುಪುಗಳಲ್ಲಿ ಏನೋ ಅಡಗಿಸುತ್ತಿರುವುದನ್ನು ಕಂಡು ಸಂದೇಹಗೊಂಡ ಕಸ್ಟಮ್ಸ್ ಅಧಿಕಾರಿಗಳು ಆಕೆಯ ತಪಾಸಣೆ ನಡೆಸಿದಾಗ ಸುಮಾರು 1 ಕೆಜಿ ಚಿನ್ನದೊಂದಿಗೆ ಸಿಕ್ಕಿಬಿದ್ದಿದ್ದಾಳೆ. ಅಕ್ಟೋಬರ್ 24ರಂದು 8ಎಂ-620 ವಿಮಾನದಲ್ಲಿ ಮ್ಯಾನ್ಮಾರ್‌ನಿಂದ ಟರ್ಮಿನಲ್- 3ಕ್ಕೆ ಮಹಿಳೆ ಆಗಮಿಸಿದ್ದಳು.

ಇದನ್ನೂ ಓದಿ: Harassment: ಬ್ರೆಜಿಲ್‌ ಮಾಡೆಲ್‌ಗೆ ಲೈಂಗಿಕ ಕಿರುಕುಳ, ಡೆಲಿವರಿ ಏಜೆಂಟ್‌ ಬಂಧನ

ಸಂದೇಹಾತ್ಮಕ ನಡವಳಿಕೆ ಹಿನ್ನೆಲೆಯಲ್ಲಿ ಮಹಿಳೆಯನ್ನು ಕಸ್ಟಮ್ಸ್ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಈ ವೇಳೆ ಆಕೆಯ ಕಪ್ಪು ಒಳ ಉಡುಪುಗಳಲ್ಲಿ ಆರು ಚಿನ್ನದ ಬಿಸ್ಕತ್ತುಗಳು ಸಿಕ್ಕಿವೆ.



996.5 ಗ್ರಾಂ ತೂಕದ 1.17 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು ಮಹಿಳೆಯನ್ನು ಬಂಧಿಸಿದ್ದು, ಆಕೆ ಮ್ಯಾನ್ಮಾರ್‌ನಿಂದ ಭಾರತಕ್ಕೆ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿರುವುದಾಗಿ ಹೇಳಿದ್ದಾಳೆ.

ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ; ಆರೋಪಿ ಭಾರತಕ್ಕೆ ಪರಾರಿಯಾಗಿರುವ ಶಂಕೆ

ಈ ನಡುವೆ ನಡೆದ ಇನ್ನೊಂದು ಘಟನೆಯಲ್ಲಿ ದುಬೈಯಿಂದ ಎಐ-996 ವಿಮಾನದಲ್ಲಿ ಭಾರತಕ್ಕೆ ಆಗಮಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆತನಿಂದ ಸುಮಾರು 20 ಲಕ್ಷ ರೂ. ಮೌಲ್ಯದ 170 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ಇನ್‌ಸ್ಟಾಗ್ರಾಂನಲ್ಲಿ ಪರಿಚಿತವಾದ 10ನೇ ತರಗತಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಹಾನಗಲ್‌ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಇನ್‌ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಇಬ್ಬರು ಹಾಗೂ ಅವರಿಗೆ ಸಹಾಯ ಮಾಡಿದ ಇಬ್ಬರನ್ನು ಬಂಧಿಸಲಾಗಿದೆ.

10ನೇ ತರಗತಿಯ ಓದುತ್ತಿದ್ದ ಬಾಲಕಿಗೆ ಆರೋಪಿ ಉದಯ್‌ ಎಂಬಾತ ಇನ್‌ಸ್ಟ್ರಾಗ್ರಾಂನಲ್ಲಿ ಪರಿಚಯವಾಗಿದ್ದ. ಬಾಲಕಿಯೊಂದಿಗೆ ಸ್ನೇಹ ಬೆಳೆಸಿಕೊಂಡು ಪ್ರೀತಿ ಮಾಡುವುದಾಗಿ ನಂಬಿಸಿ, ಮೂಡೂರ ಗ್ರಾಮದ ಮರಿಯಮ್ಮ ಜಾತ್ರೆಗೆ ಹೋದಾಗ, ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಮಾಡಿದ್ದಲ್ಲದೆ ತನ್ನ ದೊಡ್ಡಪ್ಪನ ಜಮೀನಲ್ಲಿಯೂ ಮತ್ತೊಮ್ಮೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಅನಂತರ ದಿನಗಳಲ್ಲಿ ಅವರಿಬ್ಬರೂ ದೂರವಾಗಿದ್ದರು.

2025ರ ಏಪ್ರಿಲ್‌ನಲ್ಲಿ ಇದೇ ಬಾಲಕಿಯನ್ನು ಇನ್ನೊಬ್ಬ ಆರೋಪಿ ಕಿಶನ್ ಎಂಬಾತ ಬಾಲಕಿಯನ್ನು ಇನ್‌ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡು, ಎರಡು ಬಾರಿ ದೈಹಿಕ ಸಂಪರ್ಕ ಮಾಡಿದ್ದ. ಅನಂತರ ಈತನ ಸ್ನೇಹಿತರಾದ ಆಕಾಶ ಪರಶುರಾಮ ಮಂತಗಿ ಮತ್ತು ಚಂದ್ರು ಬಾಲಕಿಯನ್ನು ಕಿಶನ್‌ನೊಂದಿಗೆ ಹೋಗಲು ಸಹಾಯ ಮಾಡಿದ್ದಲ್ಲದೆ, ಬಾಲಕಿಗೆ ಅವಾಚ್ಯವಾಗಿ ನಿಂದಿಸಿದ್ದರು.

ಇದಾದ ಬಳಿಕ ಬಾಲಕಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದಾಗ ಆಕೆ 8 ತಿಂಗಳ ಗರ್ಭಿಣಿಯಾಗಿರುವ ಬಗ್ಗೆ ವೈದ್ಯರಿಂದ ತಿಳಿದುಬಂದಿದೆ. ಈ ಕುರಿತು ಅ. 22ರಂದು ಬಾಲಕಿಯ ತಾಯಿ ನೀಡಿದ ದೂರಿನ ನೀಡಿದ ಮೇರೆಗೆ ಹಾನಗಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ.