Prabhu Chawla Column: ಟ್ರಂಪ್‌ ಅಭಿಯಾನ, ಮೋದಿಯವರ ವಿಶ್ವಗುರು ಎರಡೂ ಒಂದೇ

78ರ ಹರೆಯದ ಡೊನಾಲ್ಡ್ ಟ್ರಂಪ್ 2ನೇ ಅವಧಿಗೆ ಶ್ವೇತಭವನವನ್ನು ಪ್ರವೇಶಿಸಿzರೆ. ಇದು, ಹಗರಣ, ದೋಷಾರೋಪಣೆ ಮತ್ತು ಕ್ರಿಮಿನಲ್ ಅಪರಾಧದಂಥ ಅಸಾಧ್ಯ-ಅಡಚಣೆಗಳನ್ನು ಅವರು ಜಯಿಸಿದ ನಂತರ ಹಾಗೂ ಭಾರತದ ನರೇಂದ್ರ ಮೋದಿಯವರು 3ನೇ ಬಾರಿಗೆ ಗದ್ದುಗೆ ಏರಿದ ಕೆಲ ತಿಂಗಳ ನಂತರ ಘಟಿಸಿರುವ ಮಹತ್ವದ ವಿದ್ಯಮಾನ

prabhu chawla Column 250125
Profile Ashok Nayak Jan 25, 2025 9:26 AM

ಪ್ರಭು ಪ್ರವರ

ಪ್ರಭು ಚಾವ್ಲಾ

ಜಾಗತಿಕ ರಾಜಕೀಯದ ಗೋಳಾರ್ಧಗಳು, ರಾಷ್ಟ್ರೀಯವಾದಿ ಹಿತಾಸಕ್ತಿಗಳ ಕಲಸುಮೇಲೋಗರ ವಾಗಿರುವ ಮೈತ್ರಿಕೂಟಗಳ ಸಂಘದಿಂದ ವಿಭಜಿಸಲ್ಪಟ್ಟಿವೆ. ‘ಅಮೆರಿಕ ಮೊದಲು’ ಮತ್ತು ‘ವಿಕಸಿತ ಭಾರತ’ ಎಂಬೆರಡು ಪರಿಕಲ್ಪನೆಗಳು ಇದಕ್ಕೆ ಉದಾಹರಣೆ.

ಈಗಾಗಲೇ ತಿಳಿದಿರುವಂತೆ, 78ರ ಹರೆಯದ ಡೊನಾಲ್ಡ್ ಟ್ರಂಪ್ 2ನೇ ಅವಧಿಗೆ ಶ್ವೇತಭವನವನ್ನು ಪ್ರವೇಶಿಸಿzರೆ. ಇದು, ಹಗರಣ, ದೋಷಾರೋಪಣೆ ಮತ್ತು ಕ್ರಿಮಿನಲ್ ಅಪರಾಧದಂಥ ಅಸಾಧ್ಯ-ಅಡಚಣೆಗಳನ್ನು ಅವರು ಜಯಿಸಿದ ನಂತರ ಹಾಗೂ ಭಾರತದ ನರೇಂದ್ರ ಮೋದಿಯವರು 3ನೇ ಬಾರಿಗೆ ಗದ್ದುಗೆ ಏರಿದ ಕೆಲ ತಿಂಗಳ ನಂತರ ಘಟಿಸಿರುವ ಮಹತ್ವದ ವಿದ್ಯಮಾನ.

ಹೀಗಾಗಿ, 4 ವರ್ಷಗಳ ಅವಧಿಯ ಅನಿರೀಕ್ಷಿತ ‘ಯು-ಟನ್’ಗಳು ಹಾಗೂ ಸೈದ್ಧಾಂತಿಕ ಸಂಘರ್ಷಗಳು ಮತ್ತೊಮ್ಮೆ ತಮ್ಮ ಕರಾಮತ್ತನ್ನು ತೋರಿಸುವ ದರ್ಬಾರು ಈಗ ಸಜ್ಜುಗೊಂಡಂತಾಗಿದೆ. ವಿಭಿನ್ನ ವಾಗಿ ಹೇಳುವುದಾದರೆ, ರಾಜತಾಂತ್ರಿಕತೆ ಎಂಬುದು ಒಂದು ಭೋಜನಕೂಟವಾಗಿದ್ದು, ವಿನಮ್ರತೆ ಯನ್ನು ಒಳಗೊಂಡ ಭಕ್ಷ್ಯವನ್ನು ಇಲ್ಲಿ ಆಗಾಗ ಬಡಿಸುವುದು ಅನಿವಾರ್ಯವಾಗುತ್ತದೆ.

ಒಂದು ಕಾಲಕ್ಕೆ ರಾಜತಾಂತ್ರಿಕರಾಗಿದ್ದು, ಈಗ ಅರೆ-ರಾಜಕಾರಣಿ ಎನಿಸಿರುವ ಭಾರತದ ವಿದೇಶಾಂಗ ಖಾತೆಯ ಸಚಿವ ಎಸ್.ಜೈಶಂಕರ್, ಟ್ರಂಪ್ ಅವರ ಈ ಉದ್ಘಾಟನಾ ಔತಣಕೂಟದಲ್ಲಿ ತಮ್ಮ ಪಾಲಿ ನ ಖಾದ್ಯವನ್ನು ಸವಿದಿದ್ದಾರೆ. ಆದರೆ, ಈ ಹೊಸ ಭೂರಾಜಕೀಯದ ಮೆನುವಿನಲ್ಲಿ ಉಲ್ಲೇ ಖಿಸಿರುವ ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕನ ಭಾಷಣದ ನಿಜಸಾರವನ್ನು ಜೈ ಶಂಕರ್ ಸವಿ ಯುವುದು ಬಾಕಿಯಿದೆ! ಏಕೆಂದರೆ, ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ( MAGA) ಎಂಬ ತಮ್ಮ ಪ್ರತಿಪಾದನೆ ಯನ್ನು ಕೊಂಚ ವಿಸ್ತರಿಸಿ ‘ಮೇಕ್ ಅಮೆರಿಕ ಗ್ರೇಟ್ ಅಗೇನ್ ಆಂಡ್ ಅಗೇನ್’ ಅಥವಾ MAGAA ಎಂದು ಒತ್ತಿ ಹೇಳಲು ತಮ್ಮ ಈ ವಿಜಯಪರ್ವವನ್ನು ಟ್ರಂಪ್ ಬಳಸಿಕೊಳ್ಳಲಿದ್ದಾರೆ.

ಇನ್ನೊಂದು ಗೋಳಾರ್ಧದಲ್ಲಿ, ಎಲ್ಲರಿಗೂ ಗೊತ್ತಿರುವಂತೆ ಮೋದಿಯವರು ಭಾರತವನ್ನು ಆರ್ಥಿಕ-ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲಿ ‘ವಿಶ್ವಗುರು’ ಆಗಿಸುವ ಧ್ಯೇಯವನ್ನು ಇಟ್ಟುಕೊಂಡಿದ್ದಾರೆ. ಬಹುತೇಕರಿಗೆ ಗೊತ್ತಿರುವಂತೆ, ಅಮೆರಿಕವು ಜಾಗತಿಕ ಮಟ್ಟದಲ್ಲಿ ಕಾರ್ಯತಂತ್ರಗಾರನೂ ಹೌದು, ಆರ್ಥಿಕ ಶಕ್ತಿಯೂ ಹೌದು. ಆದರೆ, ಮೋದಿಯವರು ಅಧಿಕಾರಕ್ಕೆ ಬಂದ ನಂತರ, ಭಾರತದ ಅಂತಾ ರಾಷ್ಟ್ರೀಯ ಸರಹದ್ದು ಪಲ್ಲಟಗೊಂಡಿದೆ ಅಥವಾ ವಿಸ್ತಾರಗೊಂಡಿದೆ.

ಜಾಗತಿಕ ಔನ್ನತ್ಯದ ಕೋಷ್ಟಕದಲ್ಲಿನ ತನ್ನ ನ್ಯಾಯಸಮ್ಮತ ಸ್ಥಾನವನ್ನು ಬಿಟ್ಟುಕೊಡಲು ಇಷ್ಟ ವಿಲ್ಲದ ಮತ್ತು ಈಗಾಗಲೇ ಸಾಕಷ್ಟು ಸದೃಢವಾಗಿರುವ ‘ಮೋದಿ ಭಾರತ’ವು ಗೂಢಾರ್ಥದ ರಾಜ ತಾಂತ್ರಿಕ ಮಾತು-ವರ್ತನೆಗಳಲ್ಲಿ ಆಕ್ರಮಣಕಾರಿಯಾಗಿ ತೊಡಗಿಸಿಕೊಂಡಿದೆ. ಪ್ರಸ್ತುತ ಚಾಲ್ತಿ ಯಲ್ಲಿರುವ ಜನಪ್ರಿಯ ಮಾದರಿಯೆಂದರೆ- ‘ಇಲ್ಲಿ ಕಾಯಂ ಶತ್ರುಗಳಾಗಲೀ ಅಥವಾ ಮಿತ್ರರಾಗಲೀ ಇಲ್ಲ; ಇಲ್ಲಿ ಶಾಶ್ವತವಾಗಿ ಕಾಣಬರುವುದು ಮಹತ್ವಾಕಾಂಕ್ಷೆಯೊಂದೇ’ ಎಂಬುದು.

ಟ್ರಂಪ್ ಅವರಂತೂ ವಿರೋಧಾಭಾಸಗಳ ಅರಾಜಕ ರಸವೈದ್ಯನೇ ಆಗಿಬಿಟ್ಟಿದ್ದಾರೆ; ‘ರೆಡ್ ನೆಕ್’ ಎಂದೇ ಕರೆಯಲ್ಪಡುವ, ಅಮೆರಿಕದ ದಕ್ಷಿಣ ಭಾಗದ ಕಾರ್ಮಿಕ ವರ್ಗಕ್ಕೆ ಸೇರಿದ ರಾಜಕೀಯ ಸಂಪ್ರ ದಾಯ ವಾದಿಗಳ ಬೆಂಬಲ ಮತ್ತು ಹೊರಗಿದ್ದುಕೊಂಡೇ ಆಡಳಿತವನ್ನು ನಿಯಂತ್ರಿಸುವ ಕೆಲವೇ ಪ್ರಭಾವಿ ಗಳು/ಶ್ರೀಮಂತರ ಗಾಢಮೈತ್ರಿಯ ಬಲದೊಂದಿಗೆ ತೇಲುವ ಒಬ್ಬ ‘ಗಣ್ಯ-ವಿರೋಧಿ’ ಗಣ್ಯರು ಈ ಡೊನಾಲ್ಡ ಟ್ರಂಪ್! ಅವರ ಚಿಂತನೆಗಳ ಗೋಜಲಿನ ಗಂಟು ಬಿಡಿಸಲು, ಅಮೆರಿಕದ ಆಳುಗ ವ್ಯವಸ್ಥೆಯೊಂದಿಗೆ ನಂಟು ಹೊಂದಿರುವ ಭಾರತೀಯ ರಾಜತಾಂತ್ರಿಕರು, ವಿದೇಶಾಂಗ ನೀತಿ ಪರಿಣತರು ಮತ್ತು ಕಾರ್ಪೊರೇಟ್ ನಾಯಕರು, ಭಾರತ ಮತ್ತು ಅಮೆರಿಕದಲ್ಲಿ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ.

ಟ್ರಂಪ್ ಮತ್ತು ಅವರ ಸಲಹೆಗಾರರು ವಾಷಿಂಗ್ಟನ್ನಿನ ಜಾಗತಿಕವಾದಿ, ಪ್ರಜಾಸತ್ತಾತ್ಮಕ ಸೌಧವನ್ನು ಕೆಡವಲು ಬಾಗಿದ್ದಾರೆ. ಇಂಥದೊಂದು ಪಾರಸ್ಪರಿಕ ಪ್ರಕ್ರಿಯೆಗೆ ಅಗತ್ಯವಿರುವ ಮಾರ್ಗಸೂಚಿ ಯನ್ನು ರೂಪಿಸಲು ಅಮೆರಿಕ ಮತ್ತು ಭಾರತದ ರಾಜತಾಂತ್ರಿಕರು ಪೆಸಿಫಿಕ್ ಸಾಗರವನ್ನು ಪರಸ್ಪರ ಅಡ್ಡಹಾಯುತ್ತಿದ್ದಾರೆ. ಯಾರೂ ಊಹಿಸಲಾಗದ ಟ್ರಂಪ್ ಅವರ ಮಾತು ಮತ್ತು ವರ್ತನೆಗಳು ಈ ಇಬ್ಬರ ಪಾಲಿಗೆ ಅಡ್ಡಗೋಡೆಗಳಾಗಿಬಿಟ್ಟಿವೆ.

ಟ್ರಂಪ್ ಅವರ ಅಸ್ಪಷ್ಟ ಭರವಸೆಗಳು ಮತ್ತು ಗ್ರಹಿಕೆಗಳನ್ನು ಅಂದಾಜಿಸಲು ಅವರಿಗೆ ಆಗುತ್ತಿಲ್ಲ. ಇದರಿಂದಾಗಿ, ದೇಶೀಯ ಮತ್ತು ಅಂತಾರಾಷ್ಟ್ರೀಯ ಸ್ಥಿರತೆಗೆ ಗಮನಾರ್ಹ ಅಪಾಯಗಳಾಗುತ್ತವೆ. ಮೋದಿ ಮತ್ತು ಟ್ರಂಪ್ ನಡುವೆ ಈ ಹಿಂದಿದ್ದ ಬಾಂಧವ್ಯಕ್ಕೆ ಮರುಜೀವ ನೀಡಲು ಭಾರತೀಯ ಆಳುಗ ವ್ಯವಸ್ಥೆಯು ಆಶಿಸುತ್ತಿದೆ. ಈ ಹಿಂದೆ ಇವರಿಬ್ಬರೂ ಮೂರು ಬಾರಿ ಭೇಟಿಯಾಗಿದ್ದಾರೆ. ಆ ವೇಳೆ ಇವರಿಬ್ಬರ ನಡುವೆ ರೂಪುಗೊಂಡಿದ್ದ ‘ಕೆಮಿಸ್ಟ್ರಿ’ಯನ್ನು ಕಂಡು ವಿಶ್ವದ ಇತರ ನಾಯಕರು ‘ಇವರಿಬ್ಬರೂ ಆಪ್ತಮಿತ್ರರು’ ಎಂದು ನಂಬುವಂತಾಗಿತ್ತು ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಒಂದು ಸಾಮಾನ್ಯ ದ್ವಿಪಕ್ಷೀಯ ಕಾರ್ಯಸೂಚಿಯನ್ನು ಜತೆಜತೆಯಾಗೇ ಇವರು ಪ್ರಸ್ತಾಪಿಸುತ್ತಾರೆ ಎಂದು ಪರಿಭಾವಿಸಲು ಅದು ಕಾರಣವಾಗಿತ್ತು.

ಟ್ರಂಪ್ ಅವರ ಮೊದಲ ಅಽಕಾರಾವಽಯಲ್ಲಿ, ಹೂಸ್ಟನ್‌ನಲ್ಲಿ ನಡೆದ ‘ಹೌಡಿ ಮೋದಿ’ ಮತ್ತು ಅಹ್ಮದಾಬಾದ್‌ನಲ್ಲಿ ನಡೆದ ‘ನಮಸ್ತೆ ಟ್ರಂಪ್’ನಂಥ ಕಾರ್ಯಕ್ರಮಗಳು ಜಾಗತಿಕ ಸಮ್ಮಿಲನವನ್ನು ಸೂಚಿಸಿದ್ದವು ಮತ್ತು ಭಾರತವು ಅಮೆರಿಕದ ಪ್ರಬಲ ಮಿತ್ರರಾಷ್ಟ್ರಗಳಲ್ಲಿ ಒಂದಾಗಿದೆ ಎಂಬ ಭಾವ ಮೂಡುವುದಕ್ಕೆ ಕಾರಣವಾಗಿದ್ದವು. 2020ರಲ್ಲಿ ಟ್ರಂಪ್ ಸೋಲುವುದರೊಂದಿಗೆ ನರೇಂದ್ರ ಮೋದಿ ಯವರು ಶ್ವೇತಭವನದಲ್ಲಿನ ಒಬ್ಬ ಮಿತ್ರನನ್ನು ಕಳೆದುಕೊಂಡಿದ್ದರು.

ಇಷ್ಟಾಗಿಯೂ, ಬಾಂಧವ್ಯದ ಮರುನಿರ್ಮಾಣಕ್ಕಿದ್ದ ಅವಕಾಶವನ್ನು ಮೋದಿಯವರು ಕೈಚೆಲ್ಲ ಲಿಲ್ಲ. ಟ್ರಂಪ್‌ರ ವಿಜಯದ ಅಧಿಕೃತ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ, ಅಭಿನಂದನಾ ಕರೆ ಮಾಡಿದ ಮೊದಲ ಅಂತಾರಾಷ್ಟ್ರೀಯ ನಾಯಕರುಗಳಲ್ಲಿ ಮೋದಿ ಒಬ್ಬರಾಗಿದ್ದರು. ‌

ಸಾಲ ದೆಂಬಂತೆ, ಎಕ್ಸ್ (ಟ್ವಿಟರ್) ಮಾಧ್ಯಮದಲ್ಲಿ ಮೋದಿಯವರು ಬರೆದುಕೊಂಡ ಪರಿ ಹೀಗಿತ್ತು: “ನಿಮ್ಮ ಹಿಂದಿನ ಆಧಿಕಾರಾವಧಿಯ ಯಶಸ್ಸನ್ನು ನೀವು ಮರುನಿರ್ಮಾಣ ಮಾಡಿರುವ ಈ ಘಟ್ಟ ದಲ್ಲಿ, ಭಾರತ ಮತ್ತು ಅಮೆರಿಕದ ನಡುವಿನ ಜಾಗತಿಕ ಮತ್ತು ವ್ಯೂಹಾತ್ಮಕ ಕಾರ್ಯತಂತ್ರದ ಸಹ ಭಾಗಿತ್ವವವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿನ ನಮ್ಮ ಸಹಯೋಗವನ್ನು ನವೀಕರಿ ಸಲು ನಾನು ಎದುರುನೋಡುತ್ತಿರುವೆ.

ನಾವಿಬ್ಬರೂ ನಮ್ಮ ಜನರ ಕಲ್ಯಾಣಕ್ಕಾಗಿ, ಸುಧಾರಣೆಗಾಗಿ ಮತ್ತು ಜಾಗತಿಕ ಶಾಂತಿ, ಸ್ಥಿರತೆ, ಸಮೃದ್ಧಿಯನ್ನು ಉತ್ತೇಜಿಸುವುದಕ್ಕಾಗಿ ಪರಸ್ಪರ ಕೈಜೋಡಿಸಿ ಕಾರ್ಯತತ್ಪರರಾಗೋಣ". ಬಾಯಲ್ಲಿ ಹೇಳುವುದೇನೋ ಸುಲಭ, ಆದರೆ ಅದನ್ನು ಕೈಗೂಡಿಸುವುದು ಕಷ್ಟ! ಅಮೆರಿಕನ್ನರ ಐಹಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ರಕ್ಷಿಸುವುದರ ಕುರಿತಾಗಿ ಟ್ರಂಪ್ 2016ರಿಂದಲೂ ಒಂದೇ ಸಮನೆ ಬೊಬ್ಬೆ ಹೊಡೆಯುತ್ತಿದ್ದಾರೆ.

ಮೋಟಾರ್ ಸೈಕಲ್ಲುಗಳಿಂದ ಮೊದಲ್ಗೊಂಡು ಡಾಲರ್‌ವರೆಗೆ, ಯಾವೆಲ್ಲ ಬಾಬತ್ತುಗಳು ಅಮೆರಿಕ ವನ್ನು ‘ಶ್ರೇಷ್ಠ’ವಾಗಿಸಬಲ್ಲವೋ ಅವುಗಳ ಕುರಿತಾಗಿ ಅವರು ಅಚಲ ನಿಷ್ಠೆಯನ್ನು ತೋರುತ್ತಿದ್ದಾರೆ. ಅಂತೆಯೇ, ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ( MAGA) ಎಂಬುದು ಟ್ರಂಪ್ ಅವರ ಪ್ರಧಾನ ಯೋಜನೆಯಾಗಿ ಬಿಟ್ಟಿದೆ; ಹೋಲಿಕೆಯ ದೃಷ್ಟಿಯಲ್ಲಿ ಹೇಳುವುದಾದರೆ, ಇದು ನಮ್ಮ ಮೋದಿ ಯವರ ‘ವಿಕಸಿತ ಭಾರತ’ ಪರಿಕಲ್ಪನೆಗೆ ಸರಿಸಮನಾದುದು. ಬರಾಕ್ ಒಬಾಮ ಆಗಾಗ ಹೊಮ್ಮಿಸು ತ್ತಿದ್ದ Yes, we can ಉದ್ಘೋಷದ ನೆರಳ Trump will fix it ಎಂಬ ಪ್ರತಿಜ್ಞೆ ಮಾಡಿದರು ಈ ದೊಡ್ಡಣ್ಣ!

ಡೊನಾಲ್ಡ್ ಟ್ರಂಪ್ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿತರಾಗಿದ್ದ ನಮ್ಮ ವಿದೇ ಶಾಂಗ ಸಚಿವ ಎಸ್.ಜೈಶಂಕರ್ ಅವರೇನೋ ಆಹ್ವಾನಿತರ ಪೈಕಿ ಮುಂದಿನ ಸಾಲಿನ ಕೂತಿದ್ದರು. ಆದರೆ ಅವರ ಮನಸ್ಸಿನಲ್ಲಿ, “ಟ್ರಂಪ್ ಅವರು ಭಾರತವನ್ನೂ ಮಟ್ಟ ಹಾಕುತ್ತಾರೆಯೇ? ಭಾರತೀಯ ವಿದ್ಯಾರ್ಥಿಗಳಿಗೆ ನೀಡಬೇಕಾಗುವ ವೀಸಾಗಳಿಗೆ ಅವರು ಮಿತಿಯನ್ನು ಹೇರುತ್ತಾ ರೆಯೇ?" ಎಂಬ ಚಿಂತೆಗಳು ಸುಳಿದಾಡುತ್ತಿದ್ದಿರಬಹುದು!

ಏಕೆಂದರೆ, “ಕೋಟಿಗಟ್ಟಲೆ ಹಣವನ್ನು ಕೊಟ್ಟರು ಕೂಡ, ಅಮೆರಿಕದ ವಿಶ್ವವಿದ್ಯಾಲಯಗಳಿಗೆ ತೆರಳಲು ಕೆಲವೇ ವಿದ್ಯಾರ್ಥಿಗಳಿಗೆ ವೀಸಾ ದಕ್ಕಲಿವೆ" ಎನ್ನುವ ಮೂಲಕ ಈ ವಿಷಯದ ಕುರಿತಂತೆ ಸುಳಿವು ನೀಡಿದ್ದರು ಟ್ರಂಪ್. ಇಷ್ಟು ಮಾತ್ರವಲ್ಲದೆ, “ಅಮೆರಿಕದ ಹಾರ್ಲೆ-ಡೇವಿಡ್‌ಸನ್ ಬೈಕುಗಳ ಮೇಲೆ ವಿಧಿಸಿರುವ ಸುಂಕವನ್ನು ತಗ್ಗಿಸಬೇಕೆಂಬ ತಮ್ಮ ಬೇಡಿಕೆಯನ್ನು ಟ್ರಂಪ್ ಪುನರುಚ್ಚರಿಸ ಲಿದ್ದಾರೆಯೇ? ಚೀನಾ ಮತ್ತು ರಷ್ಯಾ ಸಂಬಂಧಿತ ಚರ್ಚಾವಿಷಯಗಳಿಂದ ದೂರ ಸರಿಯುವಂತೆ ಟ್ರಂಪ್ ಭಾರತವನ್ನು ಆಗ್ರಹಿಸಲಿದ್ದಾರೆಯೇ?" ಎಂಬ ಆಲೋಚನೆಯ ಕಾರ್ಮೋಡಗಳೂ ಜೈಶಂಕರ್‌ ರನ್ನು ಅಂದು ಮುತ್ತಿಕೊಂಡಿದ್ದಿರಬೇಕು!

ಬಹುತೇಕರಿಗೆ ಗೊತ್ತಿರುವಂತೆ, ಟ್ರಂಪ್ ಅವರ ಮೊದಲ ಅಧಿಕಾರಾವಧಿಯು ‘ಅಮೆರಿಕ ಮೊದಲು’ ಕಾರ್ಯನೀತಿಯ ಸ್ಪಷ್ಟ ಉಖಕ್ಕೆ ಸಾಕ್ಷಿಯಾಗಿತ್ತು ಮತ್ತು ಇದು ‘ರಕ್ಷಣಾನೀತಿ’ಗೆ ಸಂಬಂಧಿಸಿದ ಮಾತಿನ ಮತ್ತೊಂದು ರೂಪವೇ ಆಗಿತ್ತು. ಆ ಘಟ್ಟದಲ್ಲಿ ಅವರು ಭಾರತವನ್ನು ‘ಸುಂಕದ ರಾಜ’ ಎಂದು ಕರೆದಿದ್ದುಂಟು.

ಭಾರತವು ನ್ಯಾಯಸಮ್ಮತವಲ್ಲದ ವ್ಯಾಪಾರಿ ಪರಿಪಾಠಗಳನ್ನು ಅನುಸರಿಸುತ್ತಿದೆ ಎಂದು ಆರೋಪಿ ಸುವ ಮೂಲಕ ಟ್ರಂಪ್ ಆಡಳಿತವು 2019ರಲ್ಲಿ ಸಾಮಾನ್ಯೀಕೃತ ಆದ್ಯತೆಗಳ ವ್ಯವಸ್ಥೆಯನ್ನು ಹಿಂತೆ ಗೆದುಕೊಂಡಿತ್ತು. ಸಾಲದೆಂಬಂತೆ, “ಭಾರತವು ಅತಿರೇಕದ ಸುಂಕಗಳನ್ನು ವಿಧಿಸುತ್ತದೆ. ಹೀಗಾಗಿ ನಾವೂ ಪಾರಸ್ಪರಿಕ ತೆರಿಗೆ ಪದ್ಧತಿಗೆ ಮುಂದಾಗುತ್ತೇವೆ. ಅಂದರೆ, ಭಾರತವು ನಮಗೆ ಏನನ್ನಾದರೂ ಹೆಚ್ಚುವರಿಯಾಗಿ ವಿಧಿಸಿದರೆ, ನಾವು ಕೂಡ ಭಾರತಕ್ಕೆ ಅದನ್ನೇ ತಿರುಮಂತ್ರವಾಗಿ ಹೇಳುತ್ತೇವೆ" ಎಂದು 2020ರಲ್ಲಿ ಟ್ರಂಪ್ ಸಿಡುಗುಟ್ಟಿದ್ದರು.

ಹೀಗಾಗಿ ತಮ್ಮ ಎರಡನೇ ಅಧಿಕಾರಾವಧಿಯಲ್ಲಿ ಟ್ರಂಪ್, ಹಿಂದೆ ತಾವು ಹೇಳಿದ್ದನ್ನೇ ಆಚರಣೆಗೆ ತಂದರೆ ಅಚ್ಚರಿಯಿಲ್ಲ!ಡಾಲರ್ ಕರೆನ್ಸಿಗೆ ಮತ್ತೊಂದು ಪರ್ಯಾಯವನ್ನು ಹುಡುಕುವ ಭಾರತದ ಕಸರತ್ತು ಡೊನಾಲ್ಡ ಟ್ರಂಪ್ ಅವರಿಗೆ ಅಚ್ಚರಿಯನ್ನೇನೂ ತಂದಿಲ್ಲ. ಆದರೆ ಅವರಿಗೆ ನಿರ್ದಿಷ್ಟ ವಾಗಿ ‘ಬ್ರಿಕ್’ ಶೃಂಗಸಭೆಯ ಆರ್ಥಿಕ ಕಾರ್ಯಸೂಚಿಯ ಬಗ್ಗೆ ಶಂಕೆ ಇರುವಂತಿದೆ.

ಡಾಲರ್ ಅನ್ನು ‘ಮೂಲೆಗುಂಪು ಮಾಡುವ’ ಸಂಚಿನಲ್ಲಿ ಭಾರತವು ಒಂದು ‘ಸುಪ್ತ ಪಾಲುದಾರ’ ಆಗಿದೆ ಎಂಬುದು ಟ್ರಂಪ್ ಅವರ ಶಂಕೆ! ‘ಟ್ರಂಪ್ ವಿಜೇತರು’ ಎಂದು ಘೋಷಣೆಯಾದ ೨ ವಾರಗಳ ನಂತರ, ತನ್ನ ಕರೆನ್ಸಿ ಲೆಕ್ಕಾಚಾರದ ಕುರಿತು ಜಾಗ್ರತೆಯಿಂದಿರುವಂತೆ ‘ಬ್ರಿಕ್ಸ್’ ಒಕ್ಕೂಟಕ್ಕೆ ಟ್ರಂಪ್ ಬಿಸಿ ಮುಟ್ಟಿಸಿದ್ದುಂಟು. ‌

ಈ ಕುರಿತು ಅವರು ‘ಎಕ್ಸ್’ ಮಾಧ್ಯಮದಲ್ಲಿ ಬರೆದುಕೊಂಡಿದ್ದು ಹೀಗೆ: “ಬ್ರಿಕ್ಸ್ ಹೊಸತೊಂದು ಕರೆನ್ಸಿಯನ್ನು ಹುಟ್ಟುಹಾಕುವುದಿಲ್ಲ ಅಥವಾ ಪ್ರಬಲವಾಗಿರುವ ಡಾಲರ್ ಅನ್ನು ಪಲ್ಲಟಗೊಳಿಸಿ ಬದಲಿ ಆಯ್ಕೆಯನ್ನು ಅಲ್ಲಿ ಪ್ರತಿಷ್ಠಾಪಿಸಲು ಒತ್ತಾಸೆ ನೀಡುವುದಿಲ್ಲ ಎಂಬುದರ ಕುರಿತು ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಬದ್ಧತೆಯನ್ನು ತೋರಬೇಕೆಂದು ನಾವು ಬಯಸುತ್ತೇವೆ. ‌

ಹಾಗೊಮ್ಮೆ ಮಾಡಿದಲ್ಲಿ, ಶೇ.100ರಷ್ಟು ಸುಂಕಗಳನ್ನು ಅವು ಎದುರಿಸಬೇಕಾಗುತ್ತದೆ". ತಮಾಷೆ ಯೆಂದರೆ, ಬ್ರೆಜಿಲ, ರಷ್ಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಈ ಬೆದರಿಕೆಯನ್ನು ಬಹುತೇಕ ವಾಗಿ ನಿರ್ಲಕ್ಷಿಸಿದರೆ, ಜೈಶಂಕರ್ ಅವರು ಅಂತಾರಾಷ್ಟ್ರೀಯ ಶೃಂಗಸಭೆಯೊಂದರಲ್ಲಿ ಹೀಗೆ ಸ್ಪಷ್ಟೀ ಕರಣವನ್ನು ನೀಡಿದರು: “ಇಂಥದೊಂದು ಮಾತಿಗೆ/ಧೋರಣೆಗೆ ಪ್ರಚೋದನೆ ನೀಡಿದ ಅಂಶವಾ ದರೂ ಯಾವುದು ಎಂಬುದು ನನಗೆ ನಿಖರವಾಗಿ ತಿಳಿದಿಲ್ಲ, ಆದರೆ ಡಾಲರ್ ಅನ್ನು ಪಲ್ಲಟಗೊಳಿ ಸುವ ಯತ್ನದಲ್ಲಿ ಭಾರತ ಎಂದಿಗೂ ತೊಡಗಿಲ್ಲ ಎಂದು ನಾವು ಹೇಳುತ್ತಲೇ ಬಂದಿ ದ್ದೇವೆ.

ಸದ್ಯಕ್ಕೆ, ‘ಬ್ರಿಕ್ಸ್’ ಕರೆನ್ಸಿಯನ್ನು ಹೊಂದುವ ಯಾವುದೇ ಪ್ರಸ್ತಾವವೂ ನಮ್ಮೆದುರು ಇಲ್ಲ". ಹಾಗೆ ನೋಡಿದರೆ, ಇತರ ದೇಶಗಳ ಹಂಗಿಲ್ಲದೆ ಸ್ವತಂತ್ರವಾಗಿ ಅಮೆರಿಕದೊಂದಿಗೆ ಭಾರತವು ವ್ಯವಹರಿಸ ಬೇಕೆಂದೂ, ಇಲ್ಲವಾದಲ್ಲಿ ಪರಿಣಾಮಗಳನ್ನು ಎದುರಿಸಲು ಸಿದ್ಧವಿರಬೇಕೆಂದೂ ಟ್ರಂಪ್ ಮೂಲ ಭೂತ‌ವಾಗಿ ಹೇಳುತ್ತಿದ್ದುದುಂಟು.

ಪೂರ್ವನಿಗದಿತ ಅಭಿಪ್ರಾಯಗಳ ಬಗ್ಗೆ ಟ್ರಂಪ್ ಅವರಿಗೆ ಯಾವುದೇ ಗೊಂದಲವಿಲ್ಲದ ಕಾರಣ, ಕಾರ್ಯನೀತಿಗೆ ಸಂಬಂಧಿಸಿದ ಅವರ ಚಂಚಲತೆಯನ್ನು ನಿರ್ವಹಿಸಿ ನಿಭಾಯಿಸಲು ಭಾರತಕ್ಕೆ ಒಂದು ವಿನೂತನ ‘ರಾಜತಾಂತ್ರಿಕ ಕಾರ್ಯತಂತ್ರ’ದ ಅಗತ್ಯವಿದೆ. ಏಕೆಂದರೆ, ಭ್ರಾಂತಿ ಮತ್ತು ಕಲ್ಪನೆಯ ನಡುವಿನ ವ್ಯತ್ಯಾಸದ ಗೆರೆ ತುಂಬಾ ತೆಳುವಾಗಿರುತ್ತದೆ.

‘ರಾಜಾತಾಂತ್ರಿಕ ದ್ವಂದ್ವವಾದಿ’ ಎಂದೇ ಯಾವತ್ತೂ ಕರೆಸಿಕೊಳ್ಳುವ ಟ್ರಂಪ್, ತಮ್ಮ ದೇಶದ ಆಯಕಟ್ಟಿನ ಸ್ಥಾನಗಳಿಗೆ ಭಾರತೀಯ ಮೂಲದ ‘ಹೈ-ಪ್ರೊಫೈಲ್’ ವ್ಯಕ್ತಿಗಳನ್ನು ಕೂರಿಸಲು ಕೂಡ ಪ್ರಸ್ತಾವಿಸಿದ್ದಾರೆ; ಇದು ಸುದೀರ್ಘ ಚರ್ಚೆಗಳಲ್ಲಿ ಭಾರತವು ತೊಡಗಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಡುವ ನಡೆಯೂ ಹೌದು.

ಇದರನ್ವಯ, ತುಳಸಿ ಗಬ್ಬಾರ್ಡ್ ಅವರು ರಾಷ್ಟ್ರೀಯ ಗುಪ್ತಚರ ವ್ಯವಸ್ಥೆಯ ನಿರ್ದೇಶಕರಾಗಿ, ವಿವೇಕ್ ರಾಮಸ್ವಾಮಿಯವರು ಹೊಸದಾಗಿ ರೂಪುಗೊಂಡ ’ Department of Government Efficiency ’ಯ ಸಹ-ನಾಯಕರಾಗಿ, ಕಶ್ ಪಟೇಲ್ ಅವರು ಎಫ್ಬಿಐ ಸಂಸ್ಥೆಯ ಮುಖ್ಯಸ್ಥರಾಗಿ, ಜಯ್ ಭಟ್ಟಾಚಾರ್ಯ ಅವರು ಆರೋಗ್ಯ ವ್ಯವಸ್ಥೆಯ ನಿರ್ವಾಹಕರಾಗಿ ಮತ್ತು ಕೃತಕ ಬುದ್ಧಿಮತ್ತೆ ವಿನಿಮಯ ಕೇಂದ್ರದ ಆಡಳಿತಗಾರರಾಗಿ ಶ್ರೀರಾಮ್ ಕೃಷ್ಣನ್ ಅವರು ನಿಯೋಜನೆಗೊಳ್ಳಲಿದ್ದಾರೆ.

ಇಂದು ಸಂಗತಿಯನ್ನು ಗಮನಿಸಬೇಕು- ಇವರೆಲ್ಲರೂ ಭಾರತೀಯ ಹೆಸರುಗಳನ್ನೂ, ವಂಶಾವಳಿ ಯನ್ನೂ ಹೊಂದಿರಬಹುದು, ಆದರೆ ಅವರು ಮೊದಲಿಗೆ ‘ರಾಜಿಮಾಡಿಕೊಳ್ಳದ ಅಮೆರಿಕನ್ನರು’ ಆಗಿರುತ್ತಾರೆ. ಇದನ್ನು ನಾವು ಮರೆಯಲಾಗದು!

ಹೊರಗಿದ್ದುಕೊಂಡೇ ಆಡಳಿತವನ್ನು ನಿಯಂತ್ರಿಸುವ ಕೆಲವೇ ಪ್ರಭಾವಿಗಳು/ಶ್ರೀಮಂತರು ಹಾಗೂ ಆಧಿಕಾರದ ಗದ್ದುಗೆ ಏರಿರುವ ರಾಜಕಾರಣಿಗಳ ನಡುವಿನ ಹೊಸ ಸಂಬಂಧವೇ ಭಾರತದ ಪ್ರಜಾ ಪ್ರಭುತ್ವಕ್ಕೆ ಒದಗಿರುವ ದೊಡ್ಡ ಬೆದರಿಕೆಯಾಗಿದೆ. ಸ್ವತಃ ಒಬ್ಬ ಶತಕೋಟ್ಯಧಿಪತಿ ಆಗಿರುವ ಟ್ರಂಪ್ ಅವರು ತಮ್ಮ ರಾಜಕೀಯ ಮತ್ತು ಆಡಳಿತಾತ್ಮಕ ಸಹವರ್ತಿಗಳನ್ನಾಗಿ ಇಂಥ ಬಾಹ್ಯ ಪ್ರಭಾವಿ ಗಳಿಗೆ/ಉದ್ಯಮಿಗಳಿಗೆ ಕುಣಿಕೆ ಹಗ್ಗ ಹಾಕಿ ಸೆಳೆದುಬಿಟ್ಟಿದ್ದಾರೆ.

ಟ್ರಂಪ್ ಅವರ ಮಾರ್ಗದರ್ಶಕರಾಗಿ ಮತ್ತು ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಎಲಾನ್ ಮಸ್ಕ್ ಅವರು, “ಮಸ್ಕ್ ಅವರೇ ಅಮೆರಿಕ ನಿಜವಾದ ಅಧ್ಯಕ್ಷರು" ಎಂದು ಬಿಂಬಿಸುವ ಮೀಮ್‌‌ ಗಳನ್ನು ಈಗಾಗಲೇ ಹುಟ್ಟುಹಾಕಿಬಿಟ್ಟಿದ್ದಾರೆ!

ಮಾರ್ಕ್ ಜುಕರ್‌ಬರ್ಗ್, ಜೆಫ್ ಬೆಜೋಸ್ ಮತ್ತು ಟಿಮ್ ಕುಕ್ ಮುಂತಾದ ಶ್ರೀಮಂತ ಕುಳಗಳ ಹಾಗೂ ವಿವಿಧ ಬಹುರಾಷ್ಟ್ರೀಯ ಕಂಪನಿಗಳ ಭಾರತೀಯ ಮೂಲದ ಮುಖ್ಯಸ್ಥರ ಇಂಥದೊಂದು ಕೂಟವು, ಭಾರತದ ತೆಕ್ಕೆಯಿಂದ ಅತ್ಯುತ್ತಮ ವ್ಯವಹಾರಗಳನ್ನು ದಕ್ಕಿಸಿಕೊಳ್ಳುವುದಕ್ಕೆ ಸೆಣಸಲು ರೂಪುಗೊಂಡಿರುವ ‘ಟ್ರಂಪ್ ತಂಡ’ದ ಅಧ್ವರ್ಯುವಾಗಿರಬಹುದು! ‌

ಇಂಥ ಭಾರಿ ‘ಲಕ್ಷ್ಮೀಪುತ್ರರು’ ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ವಿಶೇಷ ವರಪ್ರಸಾದಗಳನ್ನು ದಕ್ಕಿಸಿಕೊಂಡ ವ್ಯಕ್ತಿಗಳಾಗಿ ಮಹತ್ವದ ಸ್ಥಾನಮಾನಗಳನ್ನು ಅನುಭವಿಸುವುದಿದೆ ಹಾಗೂ ಎಲ್ಲ ಅಗ್ರಗಣ್ಯ ನಾಯಕರು ಮತ್ತು ವ್ಯಾಪಾರೋದ್ಯಮಿಗಳ ನೆಲೆಗಳಿಗೆ ಮುಕ್ತ ಹಾಗೂ ಕಾಯಮ್ಮಾದ ಪ್ರವೇಶ-ಭಾಗ್ಯವನ್ನು ದಕ್ಕಿಸಿಕೊಳ್ಳುವುದಿದೆ!

2020-2024ರ ಅವಧಿಯು ಭಾರತದ ಪಾಲಿಗೆ ಸೋಲಿಲ್ಲ-ಗೆಲುವಿಲ್ಲ ಎನ್ನುವಂಥ ಕಾಲಘಟ್ಟ ವಾಗಿತ್ತು. 2024-28ರ ಕಾಲಘಟ್ಟವು ಭಾರತ ಮತ್ತು ಅಮೆರಿಕದ ಪಾಲಿಗೆ ದ್ವಂದ್ವಯುದ್ಧದ ಸಮಯ ವಾಗಲಿದೆ. ನಾಲ್ಕು ವರ್ಷಗಳ ಹಿಂದೆ, ಮೋದಿಯವರು ಟ್ರಂಪ್ ಅವರ ಕೈಯನ್ನು ಎತ್ತಿಹಿಡಿದು, “ಅಗಲಿ ಬಾರ್, ಟ್ರಂಪ್ ಸರ್ಕಾರ್!" ಎಂದು ಘೋಷಿಸಿದ್ದರು. ಆ ಕೈ ಒಂದು ಮುಷ್ಟಿಯಾಗುವುದೊ ಅಥವಾ ಮೋದಿಯವರು ಟ್ರಂಪ್ ಕಾರ್ಡ್ ಅನ್ನು ಹಿಡಿಯುತ್ತಾರೋ ಎಂಬುದು, ‘ಅಮೆರಿಕ ಮೊದಲು’ ಎಂಬ ಕಾರ್ಯನೀತಿಯೊಂದಿಗೆ ದಕ್ಷಿಣ ಏಷ್ಯಾ ಹೇಗೆ ತೊಡಗಿಸಿಕೊಳ್ಳುತ್ತದೆ ಎಂಬು ದನ್ನು ನಿರ್ಧರಿಸುತ್ತದೆ.

(ಲೇಖಕರು ಹಿರಿಯ ಪತ್ರಕರ್ತರು)

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?