ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Keshava Prasad B Column: ಗೂಗಲ್‌ ಮ್ಯಾಪ್‌ʼಗೆ ಪರ್ಯಾಯ ಕಟ್ಟಿದ ರಾಕೇಶ್‌ ವರ್ಮಾ !

“ದೇಶಕ್ಕಾಗಿ ನೀವು ಏನಾದರೂ ಮಾಡಬೇಕು ಎಂಬ ಭಾವನೆ ಬಲವಾದಾಗ, ಬೇರೆ ಯಾವುದೂ ಮಹತ್ವ ಎನ್ನಿಸುವುದಿಲ್ಲ. ಆದ್ದರಿಂದ ಅಮೆರಿಕವನ್ನು ಬಿಟ್ಟು ಬಂದೆವು" ಎನ್ನುತ್ತಾರೆ ವರ್ಮಾ. ಭಾರತದ 7500ಕ್ಕೂ ಹೆಚ್ಚು ನಗರ ಮತ್ತು ಪಟ್ಟಣಗಳಲ್ಲಿ ಹಾಗೂ 7.5 ಲಕ್ಷ ಹಳ್ಳಿಗಳಲ್ಲಿ ಅವರ ‘ಮ್ಯಾಪ್ ಇಂಡಿಯಾ’ ಕಾರ್ಯನಿರ್ವಹಿಸುತ್ತಿದೆ! ಆಟೊಮೇಟಿವ್, ಲಾಜಿಸ್ಟಿಕ್ಸ್, ಇ-ಕಾಮರ್ಸ್ ಮತ್ತು ಸ್ಮಾರ್ಟ್ ಸಿಟಿಗಳ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.‌

ಗೂಗಲ್‌ ಮ್ಯಾಪ್‌ʼಗೆ ಪರ್ಯಾಯ ಕಟ್ಟಿದ ರಾಕೇಶ್‌ ವರ್ಮಾ !

-

ಮನಿ ಮೈಂಡೆಡ್

ನಿಮಗೆ ಅಚ್ಚರಿಯಾದೀತು. 1995ರಲ್ಲಿ ಇಂಟರ್ನೆಟ್, ಜಿಪಿಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್), ಗೂಗಲ್ ಮ್ಯಾಪ್, ಸ್ಮಾರ್ಟ್ ಫೋನ್ ಗಳು ಜಗತ್ತಿನಲ್ಲಿ ಅಸ್ತಿತ್ವಕ್ಕೆ ಬರುವುದಕ್ಕೆ ಮೊದಲೇ, ಭಾರತ ದಲ್ಲಿ ಡಿಜಿಟಲ್ ಮ್ಯಾಪಿಂಗ್, ನೇವಿಗೇಶನ್ ಕೆಲಸಗಳು ನಡೆದಿದ್ದವು! ಅದೊಂದು ತಂತ್ರಜ್ಞಾನಿ ಕುಟುಂಬವು ಡಿಜಿಟಲ್ ಮ್ಯಾಪಿಂಗ್ ಸಲುವಾಗಿ ಹಗಲಿರುಳೆನ್ನದೆ ಅಪಾರ ನಂಬಿಕೆಯಿಂದ ಸಂಶೋಧನೆ ನಡೆಸುತ್ತಿತ್ತು!

ರಾಕೇಶ್ ವರ್ಮಾ ಅವರು ಆಗ ಡಿಜಿಟಲ್ ಮ್ಯಾಪ್‌ಗಳ ಬಗ್ಗೆ ವಿವರಿಸಿದರೆ ಯಾರಿಗೂ ಅರ್ಥವಾಗುತ್ತಿರಲಿಲ್ಲ. ಆದರೆ ಇವರು ಯಾವುದೇ ಉಪಗ್ರಹಗಳ ನೆರವು ಇಲ್ಲದೆಯೇ ಬೀದಿಬೀದಿಗಳ ಡಿಜಿಟಲ್ ಮ್ಯಾಪ್ ತಯಾರಿಸಿದ್ದರು. ಗ್ರಾಹಕರು, ಬಿಸಿನೆಸ್, ಸರಕಾರಗಳಿಗೆ ಲೊಕೇಶನ್ ಬಹಳ ಮುಖ್ಯ, ಇದು ಭವಿಷ್ಯದಲ್ಲಿ ದೊಡ್ಡ ಪಾತ್ರ ವಹಿಸಲಿದೆ ಎಂಬುದು ತೊಂಬತ್ತರ ದಶಕದ ವರ್ಮಾ ದಂಪತಿಗೆ ಮನದಟ್ಟಾಗಿತ್ತು!

ಕೋಕಾಕೋಲ ಕಂಪನಿಯೇ ವರ್ಮಾ ಅವರ ಮೊದಲ ಗ್ರಾಹಕನಾಗಿತ್ತು. ಆ ಕಂಪನಿಗೆ ಲಾಜಿಸ್ಟಿಕ್ಸ್ ಸಲುವಾಗಿ ಮ್ಯಾಪಿಂಗ್ ಅಗತ್ಯವಿತ್ತು. ಬಳಿಕ ಭಾರತೀಯ ನೌಕಾಪಡೆಗೂ ನೇವಿಗೇಶನ್ ನೆರವು ನೀಡಿದರು. ಸಮುದ್ರದಲ್ಲಿ ಸಂಚಾರ ಸಂದರ್ಭ ನೌಕೆಗಳಿಗೆ ಮಾರ್ಗಗಳನ್ನು ಕಂಡುಕೊಳ್ಳಲು ನೇವಿಗೇಶನ್ ನೆರವು ಬೇಕಿತ್ತು. ‌

ಇದನ್ನೂ ಓದಿ: Keshava Prasad B Column: ಮೇಕ್‌ ಇನ್‌ ಕುಂದಾಪುರ, ಗ್ಲೋಬಲ್‌ ಕಾಂತಾರ !

“ದೇಶಕ್ಕಾಗಿ ನೀವು ಏನಾದರೂ ಮಾಡಬೇಕು ಎಂಬ ಭಾವನೆ ಬಲವಾದಾಗ, ಬೇರೆ ಯಾವುದೂ ಮಹತ್ವ ಎನ್ನಿಸುವುದಿಲ್ಲ. ಆದ್ದರಿಂದ ಅಮೆರಿಕವನ್ನು ಬಿಟ್ಟು ಬಂದೆವು" ಎನ್ನುತ್ತಾರೆ ವರ್ಮಾ. ಭಾರತದ 7500ಕ್ಕೂ ಹೆಚ್ಚು ನಗರ ಮತ್ತು ಪಟ್ಟಣಗಳಲ್ಲಿ ಹಾಗೂ 7.5 ಲಕ್ಷ ಹಳ್ಳಿಗಳಲ್ಲಿ ಅವರ ‘ಮ್ಯಾಪ್ ಇಂಡಿಯಾ’ ಕಾರ್ಯನಿರ್ವಹಿಸುತ್ತಿದೆ! ಆಟೊಮೇಟಿವ್, ಲಾಜಿಸ್ಟಿಕ್ಸ್, ಇ-ಕಾಮರ್ಸ್ ಮತ್ತು ಸ್ಮಾರ್ಟ್ ಸಿಟಿಗಳ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.‌

ನೀವು ಎದರೂ ಹೋಗಬೇಕಿದ್ದರೆ, ‘ದಾರಿ ಯಾವುದಯ್ಯಾ’ ಎಂದು ಯಾರನ್ನೂ ಕೇಳುವ ಅಗತ್ಯ ಬಹಳ ಕಡಿಮೆ. ಏಕೆಂದರೆ ಗೂಗಲ್ ಮ್ಯಾಪ್ ಬಳಸುತ್ತಿರಬಹುದು. ಹೀಗಿದ್ದರೂ, ಗೂಗಲ್ ಮ್ಯಾಪ್ ಭಾರತದ ಕಂಪನಿಯದ್ದಲ್ಲ. ಅಮೆರಿಕದ ತಂತ್ರಜ್ಞಾನ ದಿಗ್ಗಜ ಗೂಗಲ್‌ನ ಅಧೀನದಲ್ಲಿರುವಂಥದ್ದು. ಅಲ್ಲಿನ ತಿಕ್ಕಲನಂತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಳೆ ಏನಾದರೂ, ಗೂಗಲ್ ಮ್ಯಾಪ್ ಅನ್ನು ಭಾರತದಲ್ಲಿ ಬ್ಯಾನ್ ಮಾಡಿದರೆ? ರಾತ್ರೋರಾತ್ರಿ ಅದರ ಸೇವೆ ಬಂದ್ ಆಗಬಹುದು. ‌

ಆದರೆ ಅದಕ್ಕೀಗ ಚಿಂತೆ ಮಾಡುವುದೇ ಬೇಡ! ಏಕೆಂದರೆ ಗೂಗಲ್ ಮ್ಯಾಪ್‌ಗೇ ಸಡ್ಡು ಹೊಡೆಯು ವಂತೆ ಭಾರತದ್ದೇ ಆದ ‘ಮ್ಯಾಪಲ್ಸ್’ ಅನ್ನು ತಂತ್ರಜ್ಞಾನ ಕಂಪನಿಯಾದ ‘ಮ್ಯಾಪ್ ಮೈ ಇಂಡಿಯಾ’ ( MapmyIndia) ತಯಾರಿಸಿದೆ. ದಿನೇ ದಿನೆ ಇದು ಜನಪ್ರಿಯವಾಗುತ್ತಿದೆ! ಈ ಸಂಸ್ಥೆಯ ಸ್ಥಾಪಕರು ರಾಕೇಶ್ ವರ್ಮಾ!

K P 17

ದೇಶ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುವ ಇಂಥ ಉದ್ಯಮಿಗಳನ್ನು ಹೇಗೆ ಪ್ರೋತ್ಸಾಹಿಸ ಬೇಕು ಎಂಬುದನ್ನು ಇತರ ರಾಜಕಾರಣಿಗಳು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್, ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ನೋಡಿ ಕಲಿಯಬೇಕು. ಇತ್ತೀಚೆಗೆ ‘ಮ್ಯಾಪ್ ಮೈ ಇಂಡಿಯಾ’ದ ತಂಡವು ಕೇಂದ್ರ ಸಚಿವರನ್ನು ಭೇಟಿ ಮಾಡಿತು. ಅವರಿಂದ ಎಲ್ಲ ವಿವರಗಳನ್ನು ಪಡೆದ ಸಚಿವರು ಕುತೂಲದಿಂದ ಮ್ಯಾಪಲ್ಸ ಅನ್ನು ತಮ್ಮ ಕಾರಿನಲ್ಲಿ ಅಳವಡಿಸಿ ನೋಡಿದರು. ಗೂಗಲ್ ಮ್ಯಾಪ್‌ಗಿಂತಲೂ ವಿಶೇಷ ಮತ್ತು ಅನುಕೂಲಕರ ಫೀಚರ್‌ಗಳನ್ನು ಒಳಗೊಂಡಿರುವ ಮ್ಯಾಪಲ್ಸ್ ಸಚಿವರ ಮನಗೆದ್ದಿತು. ‌

ಅವರು ಅಷ್ಟಕ್ಕೇ ಸುಮ್ಮನಾಗಲಿಲ್ಲ. ಬದಲಿಗೆ ಸಣ್ಣ ವಿಡಿಯೊ ಮೂಲಕ ಸ್ಪಷ್ಟವಾಗಿ ಚಿತ್ರೀಕರಿಸಿ, ಸ್ವತಃ ಮ್ಯಾಪಲ್ಸ್‌ನ ಅನುಕೂಲಗಳನ್ನು ವಿವರಿಸಿ ತಮ್ಮ ‘ಎಕ್ಸ್’ ಜಾಲತಾಣ ಖಾತೆಯಲ್ಲಿ ಪಿನ್ ಮಾಡಿದರು. “ Swdeshi Mappls by MapIndia, Good features.. must try!" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರೈಲ್ವೆ ಇಲಾಖೆಯೂ ಇದನ್ನು ಬಳಸಿಕೊಳ್ಳಲಿದೆ ಎಂದು ತಿಳಿಸಿದರು. ಕೇಂದ್ರ ಐಟಿ ಸಚಿವರು ಈ ಪೋ ಹಾಕಿದ ಬಳಿಕ ಲಕ್ಷಾಂತರ ಮಂದಿ ಮ್ಯಾಪಲ್ಸ್ ಅಪ್ಲಿಕೇಷನ್ ಅನ್ನು ಡೌನ್‌ ಲೋಡ್ ಮಾಡಿಕೊಂಡಿದ್ದಾರೆ!

ನಿಜಕ್ಕೂ ರಾಕೇಶ್ ವರ್ಮಾ ಅವರ ಬದುಕು ಮತ್ತು ಸಾಧನೆ ಕೋಟ್ಯಂತರ ಭಾರತೀಯರಿಗೆ ಸ್ಪೂರ್ತಿ ದಾಯಕ. ಅವರೊಬ್ಬ - ಜನರೇಶನ್ ಉದ್ಯಮಿ, ಏಂಜೆಲ್ ಇನ್ವೆಸ್ಟರ್. ಅವರು ಮನಸ್ಸು ಮಾಡಿದ್ದರೆ ಅಮೆರಿಕದ ನೆಲೆ ನಿಂತು ಐಷಾರಾಮಿ ಬದುಕನ್ನು ನಡೆಸಬಹುದಿತ್ತು. 1990ರಲ್ಲಿಯೇ ಅಮೆರಿಕದಲ್ಲಿ ಜನರಲ್ ಮೋಟಾರ್ ಕಂಪನಿಯಲ್ಲಿ 12 ವರ್ಷಗಳ ಅದ್ಭುತ ಕರಿಯರ್ ಅನ್ನು ನಡೆಸಿದ್ದರು. ಆದರೆ ಕೈ ತುಂಬಾ ಸಂಬಳ ಸವಲತ್ತುಗಳನ್ನು ಕೊಟ್ಟಿದ್ದ ಹುದ್ದೆಗೆ ರಾಜೀನಾಮೆ ಕೊಟ್ಟರು.

ತಾಯ್ನಾಡಿನ ಉದ್ಯಮಿಯಾಗಿ ಸಮಾಜಸೇವೆ ಮಾಡಬೇಕು, ತಾನೂ ಬೆಳೆಯಬೇಕು, ದೇಶದ ಅಭಿವೃದ್ಧಿಗೂ ಕಾಣಿಕೆ ಸಲ್ಲಿಸಬೇಕು ಎಂಬುದು ಅವರ ಮಹತ್ತ್ವಾಕಾಂಕ್ಷೆಯಾಗಿತ್ತು. ತಮ್ಮ ಮಕ್ಕಳನ್ನೂ ಭಾರತೀಯ ಸಂಸ್ಕೃತಿಯ ವಾತಾವರಣದಲ್ಲಿ ಬೆಳೆಸಬೇಕು ಎಂಬ ಬಯಕೆಯೂ ಇತ್ತು. ಹೀಗಾಗಿ ಅಮೆರಿಕದಿಂದ ಭಾರತಕ್ಕೆ ಹಿಂತಿರುಗಿದರು!

ಅನೇಕ ಭಾರತೀಯರು ಅಮೆರಿಕದ ಡಾಲರ್ ಕನಸು ಕಾಣುತ್ತಾ ಅಲ್ಲಿಯೇ ಕಾಯಂ ಆಗಿ ನೆಲೆ ನಿಲ್ಲಲು ಹಾತೊರೆದರೆ, ರಾಕೇಶ್ ವರ್ಮಾ ತದ್ವಿರುದ್ಧವಾಗಿ, ಮಹೋನ್ನತ ಅಶಯವನ್ನು ಹೊತ್ತು ಮರಳಿದರು. ಅಷ್ಟೇ ಅಲ್ಲ, ಹಿಡಿದ ಕೆಲಸವನ್ನು ಸಾಧಿಸಿದರು. ಅದರ ಫಲಶ್ರುತಿ ಈಗ ನಮ್ಮ ಮುಂದಿದೆ. “ನನ್ನ ದೇಶದ ಆಚಾರ-ವಿಚಾರಗಳು, ಜನರ ಪ್ರೀತಿ-ವಿಶ್ವಾಸಗಳು ದೂರದ ಅಮೆರಿಕದಲ್ಲಿ ನಿತ್ಯ ನೆನಪಾಗುತ್ತಿತ್ತು.

ದೇಶಪ್ರೇಮವೇ ನನ್ನನ್ನು ಭಾರತಕ್ಕೆ ಮರಳಿಸಿತು" ಎನ್ನುತ್ತಾರೆ ವರ್ಮಾ. ಹಾಗೆ ವಾಪಸಾದವರು ‘ಸಿಇ ಇನೋಸಿಸ್ಟಮ್ಸ್’ ಎಂಬ ಸ್ಟಾರ್ಟಪ್ ಅನ್ನು ಸ್ಥಾಪಿಸಿದರು. ಅದುವೇ‌ ಮುಂದೆ ‘ಮ್ಯಾಪ್ ಮೈ ಇಂಡಿಯಾ’ ಆಗಿ ಹೊರಹೊಮ್ಮಿತು. ಇಂದು ಗೂಗಲ್ ಮ್ಯಾಪ್‌ಗೆ ಯಶಸ್ವಿ ಪರ್ಯಾಯ ಅಪ್ಲಿಕೇಶನ್ ಕಟ್ಟಿ ಮನೆಮಾತಾಗಿದೆ.

ರಾಜಸ್ಥಾನದ ಪ್ರಸಿದ್ಧ ಖಾಸಗಿ ಯುನಿವರ್ಸಿಟಿ ಬಿಟ್ಸ್ ಪಿಲಾನಿಯಲ್ಲಿ 1972ರಲ್ಲಿ ಎಂಜಿನಿಯರಿಂಗ್ ಓದಿದ ಬಳಿಕ, ಅಮೆರಿಕದ ಈಸ್ಟರ್ನ್ ವಾಷಿಂಗ್ಟನ್ ಯುನಿವರ್ಸಿಟಿಯಲ್ಲಿ ಎಂಬಿಎ ಗಳಿಸಿದರು ವರ್ಮಾ. ಅಮೆರಿಕದಲ್ಲಿ ಕೆಲಸದಲ್ಲಿದ್ದಾಗಲೇ ತಮ್ಮದೇ ಸ್ಟಾರ್ಟಪ್ ಮಾಡುವ ಕನಸು ಅವರಲ್ಲಿತ್ತು. ಪತ್ನಿ ರಶ್ಮಿ ವರ್ಮಾ ಕೂಡ ಐಐಟಿ ರೂರ್ಕಿಯಲ್ಲಿ ಎಂಜಿನಿಯರಿಂಗ್ ಹಾಗೂ ಈಸ್ಟರ್ನ್ ವಾಷಿಂಗ್ಟನ್ ಯುನಿವರ್ಸಿಟಿಯಲ್ಲಿ ಎಂಎಸ್ ಪದವಿ ಗಳಿಸಿದ ಪ್ರತಿಭಾವಂತೆ.

ಕಳೆದ 50 ವರ್ಷಗಳಿಂದ ಬಿಟ್ಸ್ ಪಿಲಾನಿಯ ಹಳೆ ವಿದ್ಯಾರ್ಥಿಗಳಲ್ಲಿ ಟಾಪ್ 50 ಸಾಧಕರ ಪಟ್ಟಿ ಯಲ್ಲಿ ರಾಕೇಶ್ ವರ್ಮಾ ಸ್ಥಾನ ಗಳಿಸಿದ್ದರೆ. ನಿರಂತರ ಕಲಿಕೆ ಮತ್ತು ಅಭಿವೃದ್ಧಿ ಸಾಧಿಸುವುದು ಅವರ ಯಶಸ್ಸಿನ ಮಂತ್ರವಾಗಿದೆ. ಅದೇ ಸಂಸ್ಕೃತಿಯನ್ನು ‘ಮ್ಯಾಪ್ ಮೈ ಇಂಡಿಯಾ’ದ ಎಲ್ಲ ಉದ್ಯೋಗಿಗಳಿಗೂ ಕಲಿಸುತ್ತಾರೆ.

ಮಷಿನ್ ಲರ್ನಿಂಗ್ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕೌಶಲವನ್ನು ಕಂಪನಿಯ ಬಹುತೇಕ ಉದ್ಯೋಗಿಗಳಿಗೆ ವರ್ಗಾಯಿಸಿದ್ದಾರೆ.‌ ಇನ್ನೂ ಅನೇಕ ಮಂದಿಗೆ, ಏನಿದು ಮ್ಯಾಪ್ ಮೈ ಇಂಡಿಯಾ? ಇದು ಹೇಗೆ ಕೆಲಸ ಮಾಡುತ್ತದೆ ಎಂಬ ಪ್ರಶ್ನೆ ಇರಬಹುದು. ಈ ಸಂಸ್ಥೆ ಡಿಜಿಟಲ್ ಮ್ಯಾಪ್‌ಗಳನ್ನು, ನೇವಿಗೇಶನ್ ಸೇವೆಗಳನ್ನು ನೀಡುತ್ತದೆ. ಸರಳವಾಗಿ ಹೇಳುವುದಿದ್ದರೆ ಗೂಗಲ್ ಮ್ಯಾಪ್‌ಗೆ ಪರ್ಯಾಯ ಎನ್ನಬಹುದು.

ಭಾರತದ ನೇವಿಗೇಶನ್ ವಲಯದಲ್ಲಿ ಮುಂಚೂಣಿಯಲ್ಲಿದೆ. ದೇಶದ ಮೊದಲ ಡಿಜಿಟಲ್ ಮ್ಯಾಪಿಂಗ್ ಪೋರ್ಟಲ್ ಅನ್ನು ಆರಂಭಿಸಿದೆ. ಲಾ ಮೈಲ್ ಚಾಲೆಂಜ್‌ಗಳನ್ನು ಬಗೆಹರಿಸಿದೆ. ರಾಷ್ಟ್ರ ವ್ಯಾಪಿ ಡಿಜಿಟಲ್ ಅಡ್ರೆಸ್ ಸಿಸ್ಟಮ್ ಅನ್ನು ವ್ಯವಸ್ಥೆಗೊಳಿಸಿದೆ. ರಿಯಲ್ ಟೈಮ್ ಟ್ರ್ಯಾಕಿಂಗ್, ಶಾಪ್ ಲೆವೆಲ್ ಮ್ಯಾಪಿಂಗ್ ಫೀಚರ್‌ಗಳ ಸೇವೆ ಒದಗಿಸುತ್ತಿದೆ. ಸ್ಮಾರ್ಟ್ ಕಾರುಗಳಲ್ಲಿ ಡಿಜಿಟಲ್ ಮ್ಯಾಪ್ ಮತ್ತು ತ್ರಿ-ಡಿ ನೇವಿಗೇಶನ್ ಸಹಿತ ಲೊಕೇಶನ್ ಟೆಕ್ನಾಲಜಿ ಬಳಕೆಗೆ ಉತ್ತೇಜಿಸಿದೆ.

ತ್ರೀಡಿ ಜಂಕ್ಷನ್ ವ್ಯೂಸ್, ಡೋರ್‌ಸ್ಟೆಪ್ ನೇವಿಗೇಶನ್, ವೇಗದ ಮಿತಿ, ಅಪಘಾತ ಪ್ರದೇಶ, ಸ್ಪೀಡ್ ಬ್ರೇಕರ‍್ಸ್‌ಗೆ ರಿಯಲ್-ಟೈಮ್ ಡ್ರೈವಿಂಗ್ ಅಲಟ್ಸ ನೀಡುತ್ತದೆ. ಇದರಲ್ಲಿರುವ ಟ್ರಿಪ್ ಕಾಸ್ಟ್‌ ಕ್ಯಾಲ್ಕ್ಯು ಲೇಟರ್ ಬಳಸಿ ಅಂದಾಜು ಟೋಲ್ ಶುಲ್ಕ ಎಷ್ಟಾಗುತ್ತದೆ ಎಂಬುದನ್ನು ತಿಳಿಯಬಹುದು.

ತ್ರಿ-ಡಿ ಜಂಕ್ಷನ್ ವ್ಯೂಸ್ ಫೀಚರ್ ಎಷ್ಟು ಚೆನ್ನಾಗಿದೆ ಎಂದರೆ, ಫ್ಲೈ ಓವರ್, ಅಂಡರ್ ಪಾಸ್‌ಗಗಳ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳನ್ನು ಅತ್ಯಂತ ಸ್ಪಷ್ಟವಾಗಿ, ರಿಯಲಿಸ್ಟಿಕ್ ಆಗಿ ತೋರಿಸುತ್ತದೆ. ಇದರಿಂದಾಗಿ ಕೊನೆಯ ಕ್ಷಣದಲ್ಲಿ ಲೇನ್ ಬದಲಾವಣೆಯಿಂದಾಗಿ ಎಕ್ಸಿಟ್ ಅಥವಾ ಎಂಟ್ರಿ ಪಾಯಿಂಟ್ ತಪ್ಪುವ ಸಾಧ್ಯತೆ ಇರುವುದಿಲ್ಲ.

ಹಿಂದಿ, ಕನ್ನಡ, ಮರಾಠಿ, ಪಂಜಾಬಿ, ಗುಜರಾತಿ ಸೇರಿದಂತೆ 9 ಭಾಷೆಗಳಲ್ಲಿ ಸೇವೆಗಳನ್ನು ನೀಡುತ್ತದೆ. ಮ್ಯಾಪಲ್ಸ ಡಾಟ್ ಕಾಮ್ ( mappls.com), ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ಮೂಲಕ ಉಚಿತವಾಗಿ ಡೌನ್‌ಲೋಡ್ ಮಾಡಬಹುದು.

ಮತ್ತೊಬ್ಬ ಪ್ರೇರಣಾದಾಯಿ ಟೆಕ್ ಉದ್ಯಮಿ, ಜೊಹೊ ಕಂಪನಿಯ ಸ್ಥಾಪಕ, ವಾಟ್ಸ್ಯಾಪ್‌ಗೆ ಪರ್ಯಾಯವಾದ ‘ಅರಟ್ಟೈ’ ಆಪ್‌ನ ಜನಕ ಶ್ರೀಧರ್ ವೆಂಬು ಅವರು ಮ್ಯಾಪ್ ಮೈ ಇಂಡಿಯಾದ ಬಗ್ಗೆ ಹೀಗೆನ್ನುತ್ತಾರೆ- “ವಾಸ್ತವವಾಗಿ ಗೂಗಲ್ ಮ್ಯಾಪ್‌ಗಿಂತಲೂ ಹೆಚ್ಚು ಕಾಲದಿಂದ, ದಶಕಗಟ್ಟಲೆ ಸಂಶೋಧನೆ ಮತ್ತು ಅಭಿವೃದ್ಧಿಯ ಬಳಿಕ ಮ್ಯಾಪ್ ಮೈ ಇಂಡಿಯಾದ ನೇವಿಗೇಶನ್ ಆಪ್ ‘ಮ್ಯಾಪಲ್ಸ’ ಸಿದ್ಧವಾಗಿದೆ.

ಬಹಳ ಚೆನ್ನಾಗಿಯೂ ಇದೆ. ಭಾರತದಲ್ಲಿ ಇಂಥ ಸ್ವದೇಶಿ ಉದ್ಯಮಿಗಳ ಸಂಖ್ಯೆ ಹೆಚ್ಚಬೇಕು". ಮ್ಯಾಪಲ್ಸ ನೇವಿಗೇಶನ್ ಮತ್ತು ಮ್ಯಾಪಿಂಗ್ ಅಪ್ಲಿಕೇಶನ್ ಅನ್ನು ಮ್ಯಾಪ್ ಮೈ ಇಂಡಿಯಾ ಸಂಸ್ಥೆಯು ಇಸ್ರೋ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಿದೆ. ಇದು ಗೂಗಲ್ ಮ್ಯಾಪ್‌ಗೆ ಹೋಲಿಸಿ ದರೆ, ಹೈಪರ್ ಲೋಕಲ್ ಪರ್ಯಾಯವಾಗಿದೆ. “ಭಾರತದಲ್ಲಿ ಉದ್ಯಮಶೀಲರ ಸಂಖ್ಯೆ ಹೆಚ್ಚಬೇಕು.

ಆಗ ಮಾತ್ರ ಭಾರತ ನಿಜವಾಗಿ ಯೂ ಸ್ವಾವಲಂಬಿಯಾಗಲಿದೆ. ಖಾಸಗಿ ವಲಯದ ಉದ್ಯಮಿಗಳ ಬೆಳವಣಿಗೆಗೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಪುಷ್ಟಿ ನೀಡಿದೆ. ಹೀಗಾಗಿ ಭಾರತ ಮತ್ತಷ್ಟು ಪ್ರಬಲವಾಗಲಿದೆ" ಎನ್ನುತ್ತಾರೆ ರಾಕೇಶ್ ವರ್ಮಾ. ಇಲ್ಲಿ ನಿಜಕ್ಕೂ ಕಾಡುವ ಪ್ರಶ್ನೆ ಏನೆಂದರೆ, ಗೂಗಲ್ ಮ್ಯಾಪ್ ಕಣ್ಣು ಬಿಡುವುದಕ್ಕೆ ಮೊದಲೇ, ಅಮೆರಿಕದಿಂದ ಭಾರತಕ್ಕೆ ಮರಳಿ, ಡಿಜಿಟಲ್ ಮ್ಯಾಪಿಂಗ್ ಕ್ಷೇತ್ರದಲ್ಲಿ ಹಗಲಿರುಳೆನ್ನದೆ ಶ್ರಮಿಸಿದ್ದ ರಾಕೇಶ್ ವರ್ಮಾ ದಂಪತಿಗೆ ಏಕೆ ನಿರೀಕ್ಷಿತ ಬೆಂಬಲ ಲಭಿಸುವಲ್ಲಿ ಇಷ್ಟೊಂದು ವಿಳಂಬವಾಯಿತು? ಖಾಸಗಿ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಮತ್ತು ಟೆಕ್ ಉದ್ಯಮಿಗಳಿಗೆ ಪ್ರೋತ್ಸಾಹ ಸಿಗದಿರುವುದು ಕೂಡ, ಗೂಗಲ್, ಅಮೆಜಾನ್, ಫೇಸ್‌ಬುಕ್ನಂ ಥ ದಿಗ್ಗಜ ತಂತ್ರeನ ಕಂಪನಿಗಳು ಭಾರತದಲ್ಲಿ ಅಸ್ತಿತ್ವಕ್ಕೆ ಬರದಿರುವುದಕ್ಕೆ ಕಾರಣವಿರಬಹುದೇ? ಯೋಚಿಸಲು ಇದು ಸಕಾಲವಾಗಿದೆ.

ಜಾಗತೀಕರಣದ ಪರಿಣಾಗ ಇಡೀ ವಿಶ್ವವೇ ಒಂದು ಹಳ್ಳಿಯಾಗಿರುವಾಗ, ನಮ್ಮ ದೇಶದಲ್ಲೂ ಗೂಗಲ್,‌ ಅಮೆಜಾನ್, ಫೇಸ್‌ಬುಕ್‌ಗೆ ಪರ್ಯಾಯವಾಗಿ ಪ್ರಬಲ ಟೆಕ್ ಕಂಪನಿಗಳು ಹೊರ‌ ಹೊಮ್ಮುವ ಉಜ್ವಲ ಅವಕಾಶಗಳು ಇದ್ದೇ ಇವೆ. ಆದರೆ ಅವುಗಳಿಗೆ ಸಮಗ್ರ ಬೆಂಬಲವೂ ಅಗತ್ಯ.