Mohan Vishwa Column: ಆರ್‌ಎಸ್‌ಎಸ್ ಒಂದು ಆನೆಯಿದ್ದಂತೆ
ತಮ್ಮ ಪ್ರಚಾರಕ್ಕಾಗಿ ಮತ್ತು ಒಂದು ಸಮುದಾಯದ ಓಲೈಕೆಗಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ವಿನಾಕಾರಣ ಮುನ್ನೆಲೆಗೆ ತರುವುದು ಒಂದು ಫ್ಯಾಷನ್ ಆಗಿ ಹೋಗಿದೆ. ಭಾರತೀ ಯ ಜನತಾಪಕ್ಷವನ್ನು ವಿರೋಧಿಸುವ ಭರದಲ್ಲಿ ಕೆಲವರು ಸಂಘವನ್ನು ಎಳೆದು ತಂದು ತಮ್ಮ ಬೇಳೆ ಬೇಯಿಸಿಕೊಳ್ಳುವ ಪರಿಪಾಠವು ಹಲವು ದಶಕಗಳಿಂದ ನಡೆದು ಕೊಂಡು ಬಂದಿದೆ

ಅಂಕಣಕಾರ ಮೋಹನ್ ವಿಶ್ವ

ವೀಕೆಂಡ್ ವಿತ್ ಮೋಹನ್
camohanbn@gmail.com
ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಿದ ಪುಂಡರ ಪರವಾಗಿ ವಕಾಲತ್ತು ವಹಿಸಲು ಕಾಂಗ್ರೆಸ್ಸಿನ ಅನೇಕ ನಾಯಕರು ‘ನಾ ಮುಂದು, ತಾ ಮುಂದು’ ಎಂಬಂತೆ ಹೇಳಿಕೆಗಳನ್ನು ನೀಡಿದರು. 2023ರ ಚುನಾವಣೆಯಲ್ಲಿ ಮುಸಲ್ಮಾನರು ಕಾಂಗ್ರೆ ಸ್ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಮತಹಾಕಿ ಗೆಲ್ಲಿಸಿದ ವಿಷಯ ಇಡೀ ದೇಶಕ್ಕೆ ತಿಳಿದಿದೆ. ತಮಗೆ ಮತ ಹಾಕಿದವರ ಋಣ ಸಂದಾಯ ಮಾಡಲು ತಾನು ಯಾವ ಮಟ್ಟಕ್ಕೆ ಬೇಕಾ ದರೂ ಹೋಗಲು ಸಿದ್ಧವೆಂಬುದನ್ನು ಕಾಂಗ್ರೆಸ್ ನಿರೂಪಿಸುತ್ತಲೇ ಇದೆ. ಕಲ್ಲು ತೂರಿದವರ ಪರವಾಗಿ ನಿಂತ ಕೆ.ಎನ್.ರಾಜಣ್ಣ, ಪೊಲೀಸರದ್ದೇ ತಪ್ಪು ಎಂಬ ಮಾತನ್ನು ಹೇಳಿದರು.
ಮೈಸೂರಿನ ಮತ್ತೊಬ್ಬ ಕಾಂಗ್ರೆಸ್ ನಾಯಕ ಲಕ್ಷ್ಮಣ್, ವಿನಾಕಾರಣ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹೆಸರನ್ನು ಮುನ್ನೆಲೆಗೆ ತಂದು, “ಸಂಘದ ಕಾರ್ಯಕರ್ತರು ವೇಷ ಹಾಕಿ ಕೊಂಡು ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಲು ಬಂದಿದ್ದಾರೆ" ಎಂಬ ಬಂಡಲ್ ಬಿಟ್ಟರು.
ಇದನ್ನೂ ಓದಿ: Mohan Vishwa Column: ಉಕ್ರೇನ್‌ನೊಂದಿಗೆ ಟ್ರಂಪ್ ಹೊಸ ಡೀಲ್
ತಮ್ಮ ಪ್ರಚಾರಕ್ಕಾಗಿ ಮತ್ತು ಒಂದು ಸಮುದಾಯದ ಓಲೈಕೆಗಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ವಿನಾಕಾರಣ ಮುನ್ನೆಲೆಗೆ ತರುವುದು ಒಂದು ಫ್ಯಾಷನ್ ಆಗಿಹೋಗಿದೆ. ಭಾರತೀಯ ಜನತಾಪಕ್ಷವನ್ನು ವಿರೋಧಿಸುವ ಭರದಲ್ಲಿ ಕೆಲವರು ಸಂಘವನ್ನು ಎಳೆದು ತಂದು ತಮ್ಮ ಬೇಳೆ ಬೇಯಿಸಿಕೊಳ್ಳುವ ಪರಿಪಾಠವು ಹಲವು ದಶಕಗಳಿಂದ ನಡೆದು ಕೊಂಡು ಬಂದಿದೆ.
ನರೇಂದ್ರ ಮೋದಿಯವರು ಎರಡನೇ ಅವಧಿಗೆ ಪ್ರಧಾನಿಯಾದ ನಂತರ, ಸಂವಿಧಾನದ ಪರಿಚ್ಛೇದ 370ನ್ನು ರದ್ದುಮಾಡಿದಾಗ ಮೊದಲು ವಿರೋಧಿಸಿ ಟ್ವೀಟ್ ಮಾಡಿದ್ದು ಪಾಕಿ ಸ್ತಾನ; ನಂತರ ವಿರೋಧಿಸಿ ತಾನು ಅಧಿಕಾರಕ್ಕೆ ಬಂದರೆ ಆ ವಿಧಿಯನ್ನು ಮತ್ತೆ ತರುವುದಾಗಿ ಹೇಳಿದ್ದು ಕಾಂಗ್ರೆಸ್. ಪೌರತ್ವ ತಿದ್ದುಪಡಿ ಕಾಯ್ದೆಯ ವಿಚಾರದಲ್ಲಿ ಅಲ್ಪ ಸಂಖ್ಯಾತ ಹಿಂದೂಗಳಿಗೆ ಭಾರತದಲ್ಲಿ ಆಶ್ರಯ ಕಲ್ಪಿಸುವುದನ್ನು ಮೊದಲು ವಿರೋಧಿಸಿದ್ದು ಪಾಕಿಸ್ತಾನ, ನಂತರ ವಿರೋಧಿಸಿದ್ದು ಕಾಂಗ್ರೆಸ್.

ಹಿಜಾಬ್ ಗಲಾಟೆಯ ವಿಷಯದಲ್ಲಿ ಮೊದಲು ವಿರೋಧಿಸಿ, ಭಾರತದ ಅಲ್ಪಸಂಖ್ಯಾತರ ಮೇಲೆ ದಾಳಿಯಾಗುತ್ತಿದೆಯೆಂದು ಹೇಳಿದ್ದು ಪಾಕಿಸ್ತಾನ, ನಂತರ ವಿರೋಧಿಸಿದ್ದು ಕಾಂಗ್ರೆಸ್. ಬಾಲಾಕೋಟ್ ವೈಮಾನಿಕ ದಾಳಿ ಸಂದರ್ಭದಲ್ಲಿ ದಾಳಿಯ ಸಾಕ್ಷಿ ಕೇಳಿದ್ದು ಪಾಕಿಸ್ತಾನ, ನಂತರ ಸಾಕ್ಷಿ ಕೇಳಿ ಭಾರತೀಯ ಸೈನಿಕರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್.
ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಪಿಎಫ್ ಐ ಸಂಘಟನೆಯು ನಿಷೇಧ ಕ್ಕೊಳಗಾದ ನಂತರ ಮೊದಲು ಪ್ರತಿಕ್ರಿಯಿಸಿದ್ದು ಪಾಕಿಸ್ತಾನ, ನಂತರ ಅದೇ ಮಾದರಿಯಲ್ಲಿ ನಿಷೇಧವನ್ನು ವಿರೋಧಿಸುವ ಮಾತುಗಳನ್ನಾಡಿದ್ದು ಕಾಂಗ್ರೆಸ್. ಭಾರತದ ವಿಚಾರದಲ್ಲಿ ಪಾಕಿಸ್ತಾನಕ್ಕೆ ಬೇಕಿರುವುದು ಕಾಂಗ್ರೆಸ್ ಪಕ್ಷಕ್ಕೂ ಬೇಕಾಗಿರುತ್ತದೆ. ಮಗ್ಗುಲಮುಳ್ಳು ಪಾಕಿ ಸ್ತಾನವನ್ನು ಸೃಷ್ಟಿಮಾಡಿದ ಕಾಂಗ್ರೆಸ್, ಸ್ವಾತಂತ್ರ್ಯಾನಂತರದ ಭಾರತದಲ್ಲಿ ಅಲ್ಪಸಂಖ್ಯಾ ತರ ಹೆಸರಿನಲ್ಲಿ ದೊಡ್ಡ ಮಟ್ಟದ ಓಲೈಕೆ ರಾಜಕಾರಣವನ್ನು ಮಾಡಿ ಕೊಂಡು ಬಂದಿದೆ.
ಅಲ್ಪಸಂಖ್ಯಾತರ ಓಲೈಕೆಯ ಪರಮಾವಧಿಯಾಗಿ ಕಾಂಗ್ರೆಸ್ ಪಕ್ಷವು ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಯ ವಿಷಯದಲ್ಲಿ ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಬಂದಿದೆ. ಉದಯಗಿರಿ ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿ ಪ್ರಕರಣವನ್ನು ಭಾರತದ ಆಂತರಿಕ ಭದ್ರತೆಗೆ ಪೆಟ್ಟು ತರುವ ಗಂಭೀರ ವಿಷಯವನ್ನಾಗಿ ಪರಿಗಣಿಸಬೇಕು.
ಮೊದಲು ಕೆ.ಜಿ.ಹಳ್ಳಿ, ನಂತರ ಹುಬ್ಬಳ್ಳಿ, ಈಗ ಉದಯಗಿರಿ ಪೊಲೀಸ್ ಠಾಣೆಯ ಮೇಲಿನ ದಾಳಿ. 2004ರಿಂದ 2014ರ ನಡುವಿನ ಅವಧಿಯಲ್ಲಿ ದೇಶದ ಅನೇಕ ಭಾಗಗಳಲ್ಲಿ ಪ್ರತಿನಿತ್ಯ ಭಯೋತ್ಪಾದಕ ದಾಳಿಗಳು ನಡೆಯುತ್ತಿದ್ದವು. ಮುಂಬೈ ನಗರದ ರಸ್ತೆಗಳಲ್ಲಿ ಸಾರ್ವ ಜನಿಕರ ಮೇಲೆ ಸಿಕ್ಕಸಿಕ್ಕಲ್ಲಿ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನಿ ಪ್ರಚೋದಿತ ಉಗ್ರ ಸಂಘಟನೆಗಳ ಮೇಲೆ ದಿಟ್ಟಕ್ರಮ ಕೈಗೊಳ್ಳದ ‘ಸೈಲೆಂಟ್’ ಪ್ರಧಾನಿಯನ್ನು ಕಾಂಗ್ರೆಸ್ ನೀಡಿತ್ತು.
ತಮ್ಮ ತಂದೆಯನ್ನು ಕೊಂದ ಎಲ್‌ಟಿಟಿಇ ಉಗ್ರರನ್ನು ಕ್ಷಮಿಸುವ ಮೂಲಕ ರಾಹುಲ್ ಗಾಂಧಿಯವರು ಮತ್ತೊಂದು ಪರಮಾವಧಿ ಓಲೈಕೆಯ ನಿದರ್ಶನವನ್ನು ಅನಾವರಣ ಗೊಳಿಸಿದ್ದರು. ಪಿಎಫ್ ಐ ನಿಷೇಧದ ವಿಚಾರದಲ್ಲಿ ಮತ್ತೊಮ್ಮೆ ಓಲೈಕೆ ರಾಜಕಾರಣ ಮಾಡಿದ ಕಾಂಗ್ರೆಸ್, ಈ ಸಂಘಟನೆಯ ನಿಷೇಧವನ್ನು ಒಲ್ಲದ ಮನಸ್ಸಿನಿಂದ ಸ್ವಾಗತಿಸಿತ್ತು.
ಪಿಎಫ್ ಐ ಸಂಘಟನೆಯ ಗೂಂಡಾಗಳನ್ನು ಜೈಲಿನಿಂದ ಬಿಡಿಸಿ, ಅವರಿಗೆ ನೋಟಿನ ಕಂತೆಗಳನ್ನು ಹಂಚಿದ್ದು ಜಮೀರ್ ಅಹ್ಮದ್ ಖಾನ್. ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಪಿಎಫ್ ಐ ಸಂಘಟನೆಯನ್ನು, ಅಪ್ಪಟ ದೇಶಭಕ್ತ ಸಂಘಟನೆ ಆರೆಸ್ಸೆಸ್ ಜತೆ ಹೋಲಿಕೆ ಮಾಡಿದ್ದು ಕಾಂಗ್ರೆಸ್. ಹಿಂದೂ ಸಮಾಜದಲ್ಲಿದ್ದಂಥ ಜಾತಿಗಳ ಅಸಮಾನತೆಯನ್ನು ಹೋಗಲಾಡಿಸಿ ಸಮಸ್ತ ಹಿಂದೂಗಳನ್ನು ಒಂದೆಡೆ ಸೇರಿಸಿ ಬ್ರಿಟಿಷರ ವಿರುದ್ಧ ಹೋರಾಡಲು ಸ್ಥಾಪಿತವಾದ ಸಂಸ್ಥೆ ಆರೆಸ್ಸೆಸ್.
ಸಂಘ ವ್ಯವಸ್ಥೆಯಲ್ಲಿನ ಶಿಸ್ತನ್ನು ಕಂಡು ಸ್ವತಃ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಂಘದ ಶಾಖೆಗಳಲ್ಲಿ ಇಂದಿಗೂ ಜಾತಿವಿಷಯ ಚರ್ಚೆಗೆ ಬರುವುದಿಲ್ಲ. ಸಮಾಜಸೇವೆ ಮತ್ತು ಸದೃಢ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಾತ್ರ ತೊಡಗಿರುವ ಸಂಘಟನೆ ಆರೆಸ್ಸೆಸ್. ಚೆನ್ನೈ ನಗರದಲ್ಲಿ ಜಲಪ್ರವಾಹ ಉಂಟಾದಾಗ ಜನರ ಸೇವೆಗಿಳಿದಿದ್ದು ಆರೆಸ್ಸೆಸ್.
ಕೊಡಗಿನಲ್ಲಿ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರ ಕ್ಕಿಂತಲೂ ಮೊದಲು ಜನರ ಬಳಿ ತಲುಪಿದ್ದು ಆರೆಸ್ಸೆಸ್. ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಯು ಉಂಟಾದ ಸಂದರ್ಭದಲ್ಲಿ ಜನರ ಬಳಿಗೆ ಮೊದಲು ಹೋದದ್ದು ಆರೆಸ್ಸೆಸ್. ಕರೋನ ಸಂದರ್ಭದಲ್ಲಿ ಜನರ ಮನೆಗೆ ಊಟ, ಪಡಿತರ, ಔಷಽಗಳನ್ನು ತಲುಪಿಸುವ ಸಮಾಜಸೇವಾ ಚಟುವಟಿಕೆಗಳನ್ನು ಕೈಗೊಂಡಿದ್ದು ಆರೆಸ್ಸೆಸ್.
1975ರಲ್ಲಿ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ದಮನಿಸಿದ್ದ ಪ್ರಜಾಪ್ರಭುತ್ವಕ್ಕೆ ಮರುಚೇತನ ನೀಡಿ ಮತ್ತೊಮ್ಮೆ ಸ್ಥಾಪಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದು ಆರೆಸ್ಸೆಸ್. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿಯವರ ಸರ್ವಾಧಿಕಾರವನ್ನು ಪ್ರಶ್ನಿಸಿ, ದೇಶದಾದ್ಯಂತ ಪ್ರಜಾಪ್ರಭುತ್ವವನ್ನು ಉಳಿಸಲು ಹೋರಾಟ ನಡೆಸಿದ್ದಕ್ಕಾಗಿ ಆರೆಸ್ಸೆಸ್ ಸಂಘಟನೆಯನ್ನು ಅವರು ನಿಷೇಧಿಸಿ ದ್ದರು.
1992ರ ಬಾಬ್ರಿ ಮಸೀದಿ ಧ್ವಂಸ ಸಮಯದಲ್ಲಿ ಆರೆಸ್ಸೆಸ್ ನಿಷೇಧಿಸಲ್ಪಟ್ಟಿತ್ತು. ನಂತರ ನ್ಯಾಯಾಲಯ ನೀಡಿದ ತೀರ್ಪಿನನ್ವಯ ಅದೇ ಜಾಗದಲ್ಲಿ ಇಂದು ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಕಾಂಗ್ರೆಸ್ ತನ್ನ ಮತಬ್ಯಾಂಕಿನ ಋಣಸಂದಾಯ ಮಾಡುವ ಸಲುವಾಗಿ ದೇಶದ ಆಂತರಿಕ ಭದ್ರತೆಯೊಂದಿಗೆ ರಾಜಿಮಾಡಿ ಕೊಳ್ಳುತ್ತಿರುವುದು, ಪೊಲೀಸ್ ಠಾಣೆಯ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿರುವವರ ಪರವಾಗಿ ಮಾತನಾಡುತ್ತಿರುವುದು ಸ್ಪಷ್ಟವಾಗುತ್ತಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವು ಒಂದು ಆನೆಯಿದ್ದಂತೆ. ಅದು ಸಮಾಜಮುಖಿ ಕೆಲಸ ವನ್ನು ಮಾಡಿಕೊಂಡು ಮುನ್ನುಗ್ಗುತ್ತಿರುತ್ತದೆಯೇ ಹೊರತು, ರಸ್ತೆಯಲ್ಲಿ ಬೊಗಳುವ ನಾಯಿಗಳಿಗೆ ಎಂದೂ ಪ್ರತಿಕ್ರಿಯಿಸುವುದಿಲ್ಲ. ಕಾಂಗ್ರೆಸ್ ಪಕ್ಷವು ಎಂದಿನಂತೆ ಮುಸಲ್ಮಾನರ ಓಲೈಕೆಯ ರಾಜಕಾರಣದ ಪರಮಾವಧಿಯಾಗಿ ಸಂಘವನ್ನು ದೇಶವಿರೋಧಿ ಸಂಘಟನೆಗಳ ಜತೆ ತಾಳೆಹಾಕುವ ಕೆಲಸ ಮಾಡುತ್ತದೆ.
ತಾನು ಸಂಘವನ್ನು ಬೈದರೆ ಮುಸಲ್ಮಾನರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ಹಾಕುತ್ತಾರೆ ಎಂಬ ಗ್ರಹಿಕೆಯ ಚುನಾವಣಾ ತಂತ್ರಗಾರಿಕೆಯಿದು. ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಭಾರತೀಯ ಜನತಾಪಕ್ಷದ ನಡುವಿನ ಸೈದ್ಧಾಂತಿಕ ಸಂಬಂಧವು ಇಡೀ ದೇಶಕ್ಕೆ ತಿಳಿದಿದೆ.
ಸಂಘದ ಅನೇಕ ಕಾರ್ಯಕರ್ತರು ಸಂಸದರಾಗಿದ್ದಾರೆ, ಶಾಸಕರಾಗಿದ್ದಾರೆ, ಮಂತ್ರಿ ಗಳಾಗಿದ್ದಾರೆ. ಭಾರತದ ನಾಲ್ಕು ದಿಕ್ಕುಗಳನ್ನು ಸೇರಿಸುವ ‘ಸುವರ್ಣ ಚತುಷ್ಪಥ’ ರಸ್ತೆ ಯನ್ನು ನಿರ್ಮಿಸಿ ದೇಶದ ಆರ್ಥಿಕ ಚಟುವಟಿಕೆಗಳ ದಿಕ್ಕನ್ನೇ ಬದಲಾಯಿಸಿದ ಅಟಲ್ ಬಿಹಾರಿ ವಾಜಪೇಯಿ ಅವರು ಸಂಘದ ಕಾರ್ಯಕರ್ತರಾಗಿದ್ದವರು.
ಇಡೀ ಜಗತ್ತೇ ಮೆಚ್ಚಿದ ನಾಯಕ ಪ್ರಧಾನಿ ನರೇಂದ್ರ ಮೋದಿಯವರು ಸಂಘದ ಕಾರ್ಯ ಕರ್ತರಾಗಿದ್ದವರು. ಇವರೆಲ್ಲರೂ ಹಗಲು-ರಾತ್ರಿಯೆನ್ನದೆ ತಮ್ಮ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟಿರುವವರು. ದೇಶವನ್ನು ಕಟ್ಟುವ ಚಿಂತನೆಯೊಂದೇ ಸಂಘದ ಮೂಲ ಉದ್ದೇಶ. ದೇಶಸೇವೆಯ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬರುತ್ತಿ ರುವ ಆರೆಸ್ಸೆಸ್, 2025ರ ವಿಜಯದಶಮಿಯಂದು 100 ವರ್ಷಗಳನ್ನು ಪೂರೈಸಲಿದೆ.
ಸ್ವಯಂರಕ್ಷಣೆಯ ಉದ್ದೇಶದೊಂದಿಗೆ ದಂಡಗಳನ್ನು ಬಳಸುವುದಕ್ಕೆ ಸಂಬಂಧಿಸಿದ ತರಬೇತಿಯನ್ನು ಸಂಘದಲ್ಲಿ ಬ್ರಿಟಿಷರ ಕಾಲದಿಂದಲೂ ಹೇಳಿಕೊಡಲಾಗುತ್ತಿದೆ. ಈ ರಕ್ಷಣಾ ತರಬೇತಿಯನ್ನು ಟೀಕಿಸಿ, ಅಸಂಬದ್ಧ ಪ್ರಶ್ನೆಗಳನ್ನು ಕೇಳುವ ಮೂಲಕ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ ಮತ್ತು ತನ್ನ ಈ ನಡೆಯನ್ನು ಸಮರ್ಥಿಸಿಕೊಳ್ಳುವು ದರಲ್ಲಿ ನಿರತವಾಗಿದೆ.
ಆಯುಧಪೂಜೆಯಂದು ಮನೆಯಲ್ಲಿರುವ ಆಯುಧಗಳನ್ನು ಪೂಜಿಸುವ ಸಂಪ್ರದಾಯ ಇಂದು ನಿನ್ನೆಯದಲ್ಲ. ಮೈಸೂರಿನ ಮಹಾರಾಜರು ಆಯುಧಪೂಜೆಯ ದಿನದಂದು ತಮ್ಮ ಸಂಗ್ರಹದಲ್ಲಿರುವ ಆಯುಧಗಳನ್ನು ಪೂಜಿಸುತ್ತಾರೆ. ಆಯುಧಪೂಜೆಯ ಸಮಯದಲ್ಲಿ ಮಾಡಲಾಗುವ ಕತ್ತಿ, ಚೂರಿಯ ಪೂಜೆಯನ್ನು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಪಕ್ಷವು, ಸಾಮಾನ್ಯ ಜನರ ಆಚರಣೆಯನ್ನೂ ಭಯೋತ್ಪಾದನೆಗೆ ಹೋಲಿಸುತ್ತದೆ.
ಕಮ್ಯುನಿಸ್ಟ್ ಸಿದ್ಧಾಂತವು 100 ವರ್ಷಗಳ ಹಿಂದೆ ಭಾರತಕ್ಕೆ ಕಾಲಿಟ್ಟಿತು. ಆದರೆ 100 ವರ್ಷಗಳ ನಂತರ, ಕಮ್ಯುನಿಸ್ಟ್ ಸಿದ್ಧಾಂತವನ್ನು ನಂಬುವವರನ್ನು ಭೂತಗನ್ನಡಿ ಹಾಕಿ ಹುಡುಕುವಂತಾಗಿದೆ. ಜಗತ್ತಿನ ಅನೇಕ ದೇಶಗಳಲ್ಲಿ ನಾಮಾವಶೇಷವಾಗಿರುವ ಈ ಸಿದ್ಧಾಂತ ವು ಭಾರತದಲ್ಲೂ ಇಲ್ಲದಂತಾಗಿದೆ. ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಒಂದಷ್ಟು ಮತಬ್ಯಾಂಕನ್ನು ಹೊಂದಿರುವ ಕಮ್ಯುನಿಸ್ಟ್ ಪಕ್ಷಗಳನ್ನು ಜನರು ದೇಶದ ಇತರೆಡೆ ಮೂಸುವುದಿಲ್ಲ.
ಕಮ್ಯುನಿಸಂ ಇಲ್ಲಿ ಹುಟ್ಟಿದ ಸಿದ್ಧಾಂತವಲ್ಲ, ಭಾರತಕ್ಕೆ ಆಮದಾಗಿ ಬಂದಿದ್ದು. ಲೆನಿನ್, ಕಾರ್ಲ್‌ಮಾರ್ಕ್ಸ್, ಮಾವೋರಂಥವರ ಸಿದ್ಧಾಂತವನ್ನು ಭಾರತದಲ್ಲಿ ಹೇರುವ ಪ್ರಯತ್ನ ದಲ್ಲಿ ಕಮ್ಯುನಿಸ್ಟರು ದೇಶವಿರೋಧಿಗಳನ್ನು ಬೆಂಬಲಿಸುತ್ತಾ ಬಂದರು. ಸಮಾಜವಾದದ ಹೆಸರಿನಲ್ಲಿ ಸಮಾಜದಲ್ಲಿ ಬದಲಾವಣೆ ತರುವ ಕೆಲಸವನ್ನು ಕಮ್ಯುನಿಸಂ ಮಾಡಲಿಲ್ಲ.
ಹಾಗಾಗಿ ನೂರು ವರ್ಷದಲ್ಲಿ ಕಮ್ಯುನಿಸಂ ಭಾರತದಲ್ಲಿ ಹೇಳಹೆಸರಿಲ್ಲದಂತಾಗಿದೆ. 100 ವರ್ಷಗಳ ಹಿಂದೆ ರಾಷ್ಟ್ರೀಯವಾದದ ಸಿದ್ಧಾಂತದ ಅಡಿಯಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಇಂದಿಗೂ ಬಲಿಷ್ಠ ಸಂಘಟನೆಯಾಗಿದೆ. ರಾಷ್ಟ್ರೀ ಯತೆ ಮತ್ತು ಸಮಾಜ ಸುಧಾರಣೆ ಸಂಘದ ಮೂಲ ಉದ್ದೇಶ. ಸಮಾಜವಾದದ ನೈಜ ಅನುಷ್ಠಾನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಸತತವಾಗಿ ಮಾಡುತ್ತಾ ಬಂದಿದೆ.
100 ವರ್ಷಗಳ ನಂತರವೂ ಸಂಘವು ಭೂಕಂಪ, ಸುನಾಮಿಗೂ ಅಲುಗದ ಬಂಡೆಯಂತೆ ನಿಂತಿದೆ. ಸಮಾಜದಲ್ಲಿ ಸಾಮರಸ್ಯವನ್ನು ಸಾಧಿಸುವ ಪ್ರಮುಖ ಉದ್ದೇಶದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಹಿಂದೂ ಧರ್ಮದ ಎಲ್ಲಾ ಜಾತಿಗಳನ್ನು ಒಗ್ಗೂಡಿಸುವ ಕೆಲಸ ವನ್ನು ಮಾಡುತ್ತಾ ಬಂದಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ಎಂದಿಗೂ ಪ್ರಚಾರವನ್ನು ಬಯಸುವು ದಿಲ್ಲ. ಕರ್ನಾಟಕದಲ್ಲಿ ಸಂಘದ ಸಾಮರಸ್ಯ ವೇದಿಕೆಯ ಮೂಲಕ ದಲಿತರ ಪರವಾಗಿ ಹಲವು ಕೆಲಸಗಳನ್ನು ಮಾಡುತ್ತಿರುವ ನೂರಾರು ಕಾರ್ಯಕರ್ತರಿದ್ದಾರೆ. ತಮ್ಮ ಕುಟುಂಬ ವನ್ನು ತ್ಯಾಗಮಾಡಿ, ಇಡೀ ಜೀವನವನ್ನು ದೇಶಕ್ಕಾಗಿ ಸಮರ್ಪಿಸಿಕೊಂಡಿರುವ ಪೂರ್ಣ ಪ್ರಮಾಣದ ಪ್ರಚಾರಕರು ಸಾವಿರ ಸಾವಿರ ಸಂಖ್ಯೆಯಲ್ಲಿದ್ದಾರೆ.
ಸಂಘವು ಯಾವತ್ತಿಗೂ ಒಂದು ಆನೆಯಿದ್ದಂತೆ, ತಾನು ನಡೆದುಕೊಂಡು ಹೋಗುತ್ತಿರುವಾಗ ಬೊಗಳುವವರ ಬಗ್ಗೆ ಅದು ತಲೆಕೆಡಿಸಿಕೊಳ್ಳುವುದಿಲ್ಲ. ತನ್ನ ಪಾಡಿಗೆ ತಾನು ದೇಶ ಕಟ್ಟುವ ಕೆಲಸದಲ್ಲಿ ಸದಾ ನಿರತವಾಗಿರುತ್ತದೆ.