#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Suresh Balachandran Column: ಬಜೆಟ್ ಮಂಡನೆಯೆಂಬ ಬೃಹತ್ ಕಸರತ್ತು

ವಾಣಿಜ್ಯ ಮಂಡಳಿಗಳು, ಒಕ್ಕೂಟಗಳು ಮತ್ತು ವೃತ್ತಿಪರ ಸಂಘಟನೆಗಳು ತಂತಮ್ಮ ಕ್ಷೇತ್ರಗಳ ಅಭಿವೃದ್ಧಿ ಗೆ ಅಗತ್ಯವಿರುವ ಯೋಜನೆಗಳು, ಹಣಕಾಸು, ಬಂಡವಾಳ ಮತ್ತು ತೆರಿಗೆ ಮಾರ್ಪಾಟು, ನೀತಿ ನಿಯಮಾ ವಳಿಗಳ ಬದಲಾವಣೆಯ ನಿರೀಕ್ಷೆ ಮತ್ತು ಶಿಫಾರಸುಗಳನ್ನು ವಿತ್ತ ಸಚಿವಾಲಯಕ್ಕೆ ಸಲ್ಲಿಸಿರುತ್ತವೆ ಹಾಗೂ ಈ ಶಿ-ರಸುಗಳಿಂದ ಏನೆಲ್ಲಾ ಒಳಿತಾಗುತ್ತವೆ ಎಂಬುದನ್ನೂ ತಿಳಿಸಿರುತ್ತವೆ.

Suresh Balachandran Column: ಬಜೆಟ್ ಮಂಡನೆಯೆಂಬ ಬೃಹತ್ ಕಸರತ್ತು

ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು 2025-26ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ

Profile Ashok Nayak Jan 27, 2025 9:54 AM

ದುಡ್ಡು-ಕಾಸು

ಸುರೇಶ್‌ ಬಾಲಚಂದ್ರನ್

ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು 2025-26ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಎಂದ ಕೂಡಲೆ ತೆರಿಗೆದಾರರು, ಉದ್ಯಮಿಗಳು, ಹೂಡಿಕೆದಾರರು, ಸಂಘ-ಸಂಸ್ಥೆಗಳವರು ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ.

ವಾಣಿಜ್ಯ ಮಂಡಳಿಗಳು, ಒಕ್ಕೂಟಗಳು ಮತ್ತು ವೃತ್ತಿಪರ ಸಂಘಟನೆಗಳು ತಂತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳು, ಹಣಕಾಸು, ಬಂಡವಾಳ ಮತ್ತು ತೆರಿಗೆ ಮಾರ್ಪಾಟು, ನೀತಿ ನಿಯಮಾವಳಿಗಳ ಬದಲಾವಣೆಯ ನಿರೀಕ್ಷೆ ಮತ್ತು ಶಿಫಾರಸುಗಳನ್ನು ವಿತ್ತ ಸಚಿವಾಲಯಕ್ಕೆ ಸಲ್ಲಿಸಿರುತ್ತವೆ ಹಾಗೂ ಈ ಶಿ-ರಸುಗಳಿಂದ ಏನೆಲ್ಲಾ ಒಳಿತಾಗುತ್ತವೆ ಎಂಬುದನ್ನೂ ತಿಳಿಸಿರುತ್ತವೆ.

ಭಾರತದಂಥ ಬೃಹತ್ ದೇಶದ ಬಜೆಟ್ ಸಿದ್ಧವಾಗುವ ಪರಿಯ ಬಗ್ಗೆ ಎಲ್ಲರಿಗೂ ಕುತೂಹಲ ಇರು ವುದು ಸಹಜ. ವಿತ್ತ ಸಚಿವರು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಚುನಾಯಿತ ಪ್ರತಿನಿಧಿ ಗಳೊಂದಿಗೆ ಆಯ್ದ ಪ್ರಮುಖ ವಿಷಯಗಳನ್ನು ಚರ್ಚಿಸಿ, ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ, ತೆರಿಗೆ ಕಾನೂನಿಗೆ ಮತ್ತು ಅಭಿವೃದ್ಧಿಗೆ ಬೇಕಾದ ನಿಯಮಾವಳಿಗಳನ್ನು ರೂಪಿಸುತ್ತಾರೆ.

ಬಜೆಟ್ ಮಂಡನೆಯ ಕಸರತ್ತೆಂಬುದು ಪ್ರತಿಕ್ರಿಯೆಯನ್ನು ಆಧರಿಸಿರುವಂಥದ್ದು. ಪ್ರಧಾನ ಮಂತ್ರಿ ಗಳ ಕಾರ್ಯಾಲಯ, ಎಲ್ಲಾ ಸಚಿವಾಲಯಗಳ ಉನ್ನತಾಧಿಕಾರಿಗಳು, ಇಲಾಖೆಗಳು ಮತ್ತು ಕೇಂದ್ರ ತೆರಿಗೆ ಮಂಡಳಿ, ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯ ಅಧ್ಯಕ್ಷರುಗಳ ಜತೆಗಿನ ಸತತ ಸಮಾಲೋಚನೆಯ ನಂತರವಷ್ಟೇ ಮುಂಗಡ ಪತ್ರದ ಕರಡನ್ನು ಸಿದ್ಧಪಡಿಸಲಾಗುತ್ತದೆ. ಆ ವೇಳೆ ಹೊಮ್ಮಿದ ಎಲ್ಲಾ ಶಿಫಾರಸುಗಳನ್ನು ಪರಿಗಣಿಸಿ, ಅಳೆದು-ತೂಗಿ, ಪ್ರಸ್ತುತ ದೇಶದ ಅಭಿವೃದ್ಧಿ ಗೆ ಬೇಕಾದ ಮತ್ತು ಪೂರಕವಾದ ಪ್ರಸ್ತಾವನೆಗಳನ್ನು ಮುಂಗಡ ಪತ್ರದ ಮೂಲಕ ಸಂಸತ್ತಿನ ಸಮ್ಮುಖದಲ್ಲಿ ಮಂಡಿಸಲಾಗುತ್ತದೆ.

ತೆರಿಗೆ ಸ್ನೇಹಿ ನೀತಿ-ನಿಯಮಾವಳಿಗಳನ್ನು ರಚಿಸಲು ಪ್ರತಿವರ್ಷದ ಬಜೆಟ್‌ನಲ್ಲಿ ಸಾಕಷ್ಟು ಪ್ರಯತ್ನ ಗಳು ಆಗುತ್ತವೆ. ಪ್ರಸ್ತಾವಿತ ಬಜೆಟ್ ಬದಲಾವಣೆಗಳ ಪರಿಣಾಮ ಮತ್ತು ಆದಾಯದ ಕುರಿತು ಸಂಬಂ ಧಪಟ್ಟ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಲಾಗುತ್ತದೆ. ತೆರಿಗೆದಾರರ ಹಿತದೃಷ್ಟಿಗೆ ಮತ್ತು ಉದ್ಯಮಕ್ಕೆ ಅನುಗುಣವಾಗಿ ತೆರಿಗೆ ಕಾನೂನಿನ ತಿದ್ದುಪಡಿ ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷದ ಬಜೆಟ್ ಅನ್ನು ಅನುಮೋದಿಸುವ ಮೊದಲು ವಿತ್ತ ಸಚಿವಾಲಯವು ನಾಲ್ಕೈದು ತಿಂಗಳ ಮೊದಲಿನಿಂದಲೇ ಅದಕ್ಕೆ ತಕ್ಕ ಪೂರ್ವತಯಾರಿಯನ್ನು ಅತ್ಯಂತ ಗೌಪ್ಯವಾಗಿ ಮಾಡಿ ಕೊಳ್ಳುತ್ತದೆ ಹಾಗೂ ನಂತರವಷ್ಟೇ ಬಜೆಟ್ ಅನ್ನು ಮಂಡಿಸಲಾಗುತ್ತದೆ.

ಬಜೆಟ್‌ನ ಪ್ರಸ್ತಾವನೆಗಳನ್ನು ಅಂತರ-ಸಚಿವಾಲಯದ ಸಮಾಲೋಚನೆಗೂ ಒಳಪಡಿಸಲಾಗುತ್ತದೆ. ಉದಾಹರಣೆಗೆ, ರಫ್ತುಗಳನ್ನು ಹೆಚ್ಚಿಸುವ ಗುರಿಯನ್ನು ಯಾವುದಾದರೂ ಸಚಿವಾಲಯವು ಹೊಂದಿ ದ್ದರೆ, ಈ ವಿಷಯವನ್ನು ಮೊದಲು ವಾಣಿಜ್ಯ ಸಚಿವಾಲಯದೊಂದಿಗೆ ಚರ್ಚಿಸಿ, ತೆಗೆದುಕೊಳ್ಳ ಬೇಕಾದ ಕ್ರಮಗಳನ್ನು ಹಾಗೂ ತತ್ಸಂಬಂಧಿ ನಿರ್ದಿಷ್ಟ ಪ್ರಸ್ತಾವನೆಗಳನ್ನು ವಿತ್ತ ಸಚಿವಾಲಯಕ್ಕೆ ತಿಳಿಸಬಹುದು.

ವಿತ್ತ ಸಚಿವರು ಸಂಸತ್ತಿನಲ್ಲಿ ಮಂಡಿಸುವ ಬಜೆಟ್ ಭಾಷಣದಲ್ಲಿ ಪ್ರಮುಖವಾಗಿ, ವಲಯ ಮತ್ತು ಕ್ಷೇತ್ರವಾರು ಹಣ ಹಂಚಿಕೆ, ಕ್ಷೇತ್ರವಾರು ನಿಯಮಾವಳಿಗಳ ಘೋಷಣೆ, ತೆರಿಗೆ ಪ್ರಸ್ತಾವನೆ ಗಳೊಂದಿ ಗಿನ ವಿವರವಾದ ದಾಖಲೆಗಳು ಮತ್ತು ಸರಕಾರದ ವಿತ್ತ ಯೋಜನೆಗಳನ್ನು ವಿಸ್ತೃತವಾಗಿ ತಿಳಿಸ ಲಾಗುತ್ತದೆ. ಆ ವರ್ಷದ ವಿತ್ತ ವಿಧೇಯಕದಲ್ಲಿನ ಅನುಬಂಧಗಳನ್ನು ವಿವರವಾಗಿ ತಿಳಿಸಿ, ತೆರಿಗೆ ನೀತಿಯಲ್ಲಿನ ತಿದ್ದುಪಡಿಯ ಅವಶ್ಯಕತೆ, ಅಗತ್ಯ ಮತ್ತು ಸ್ಪಷ್ಟೀಕರಣದ ಸಮೇತ ವಿವರಿಸಲಾಗು ತ್ತದೆ. ನೀತಿ ನಿಯಮಾವಳಿಗಳು, ಕಾನೂನುಗಳು ಮತ್ತು ಕಾರ್ಯವಿಧಾನಗಳಲ್ಲಿನ ಕರಡು ತಿದ್ದುಪಡಿ ಗಳಿಗೆ ಅನುಮೋದನೆಯನ್ನು, ಹಣಕಾಸು ವಿಧೇಯಕದಲ್ಲಿ ಸೇರ್ಪಡೆಗೊಳ್ಳುವ ಮೊದಲು ಕಾನೂನು ಸಚಿವಾಲಯದ ಪರಿಶೀಲನೆಗೆ ಕಳುಹಿಸಿದ ನಂತರವಷ್ಟೇ ಸಂಸತ್ತಿನ ಅನುಮೋದನೆಗೆ ತೆಗೆದುಕೊಳ್ಳಲಾಗುವುದು.

ಸಂಸತ್ತಿನಲ್ಲಿ ಬಜೆಟ್ಟನ್ನು ವಿತ್ತ ಸಚಿವರು ಭಾಷಣದ ಮೂಲಕ ಅನುಮೋದಿಸುತ್ತಾರೆ. ಈ ಭಾಷಣ ವನ್ನು ಸಚಿವಾಲಯದ ಸಲಹೆಗಾರರು ಮತ್ತು ತಜ್ಞರ ತಂಡ ರಚಿಸುತ್ತದೆ. ಅರ್ಥಶಾಸ್ತ್ರ ಪಂಡಿತರು/ವಿಶ್ಲೇಷಕರು ಮತ್ತು ವೃತ್ತಿಪರರ ಸಲಹೆಯನ್ನು ಪಡೆದ ನಂತರ ಕೊನೆಯಲ್ಲಿ ವಿತ್ತ ಸಚಿವರು ತಮ್ಮ ಅಭಿಪ್ರಾಯವನ್ನು ಭಾಷಣದಲ್ಲಿ ಸೇರಿಸುವುದು ವಾಡಿಕೆ. ಬಜೆಟ್ ಭಾಷಣವನ್ನು ಮುಂಚಿತವಾಗಿ ಸಿದ್ಧಪಡಿಸಿ, ಸರಿಯಾದ ಅರ್ಥಕೊಡುವ ಸರಳ ಭಾಷೆಗೆ, ಸ್ಪಷ್ಟತೆಗೆ ಒತ್ತುಕೊಡಲಾಗುವುದು.

ಬಜೆಟ್ ಭಾಷಣದ ವೇಳೆ ವಿತ್ತ ಸಚಿವರು ಒಂದಷ್ಟು ಆಸಕ್ತಿಕರ ಉಲ್ಲೇಖಗಳನ್ನು ಸೇರಿಸುವುದುಂಟು. ಉದಾಹರಣೆಗೆ, ಉಪನಿಷತ್, ಅರ್ಥಶಾಸ್ತ್ರದಿಂದ ಆಯ್ದ ವಿಚಾರಗಳು, ಬಸವಣ್ಣ, ತಿರುವಳ್ಳುವರ್ ಮುಂತಾದ ಮಹಾಪುರುಷರ ಸೂಕ್ತಿಗಳನ್ನು ಉಲ್ಲೇಖಿಸಿ ಬಜೆಟ್ ಬಗೆಗೆ ಜನರ ಆಸಕ್ತಿ ಕೆರಳಿಸುವುದು ಕಾಣಸಿಗುತ್ತದೆ. ಬಜೆಟ್ ಭಾಷಣವು ಸಾಮಾನ್ಯವಾಗಿ ದೇಶದ ಆರ್ಥಿಕತೆ, ಆದಾಯ ಮತ್ತು ವೆಚ್ಚದ ಯೋಜನೆಗಳು, ತೆರಿಗೆ ಪ್ರಸ್ತಾವನೆಗಳು, ಸಾಲ ನಿರ್ವಹಣಾ ನೀತಿಗಳು, ವಲಯವಾರು ಹಣ ಹಂಚಿಕೆ, ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿನ ದೀರ್ಘಾವಽಯ ಪ್ರಸ್ತಾವನೆಗಳನ್ನು ಒಳಗೊಂಡಿರು ತ್ತದೆ.

ವಿತ್ತ ಸಚಿವರು ತಮ್ಮ ಭಾಷಣದಲ್ಲಿ, ತೆರಿಗೆ ದರಗಳು, ವಿನಾಯಿತಿಗಳು, ರಿಯಾಯಿತಿಗಳು, ಸೆಸ್ ಮತ್ತು ಇತರ ತೆರಿಗೆ ಸಂಬಂಽತ ಕ್ರಮಗಳಿಗಾಗಿನ ಬದಲಾವಣೆಗಳನ್ನು ಘೋಷಿಸುವ ಕಡೆ ಗಮನ ಹರಿಸುತ್ತಾರೆ. ಇಂಥ ಪ್ರಸ್ತಾವನೆಗಳು ವೈಯಕ್ತಿಕ ಹಣಕಾಸು, ಹೂಡಿಕೆ ನಿರ್ಧಾರಗಳು, ವ್ಯಾಪಾರ-ವ್ಯವಹಾರ ಕಾರ್ಯಾಚರಣೆಗಳು ಮತ್ತು ಒಟ್ಟಾರೆ ಆರ್ಥಿಕ ಚಟುವಟಿಕೆಗಳ ಮೇಲೆ ತಕ್ಷಣದ ಪರಿಣಾಮಗಳನ್ನು ಹೊಂದಿರುತ್ತವೆಯಾದ್ದರಿಂದ, ಅವು ಹೆಚ್ಚಿನ ಆಸಕ್ತಿಯನ್ನು ಉಂಟು ಮಾಡು ತ್ತವೆ.

ಬಜೆಟ್‌ನ ಅನುಮೋದನೆಯ ನಂತರ, ವಿವರಿಸಿದ ಆದ್ಯತೆಗಳ ಆಧಾರದ ಮೇಲೆ ಸರಕಾರವು ನಿರ್ದಿಷ್ಟ ಇಲಾಖೆ ಮತ್ತು ಕಾರ್ಯಕ್ರಮಗಳಿಗೆ ಹಣವನ್ನು ನಿಗದಿಪಡಿಸುತ್ತದೆ. ಇದು ಪ್ರತಿ ಇಲಾಖೆ ಯ ಅಗತ್ಯಗಳು ಮತ್ತು ಉದ್ದೇಶಗಳಿಗೆ ಅನುಗುಣವಾಗಿ ಮಾಡಲಾಗುವ ಯೋಜನೆ ಹಾಗೂ ಹಣದ ವಿತರಣೆಯ ವಿವರಗಳನ್ನು ಒಳಗೊಂಡಿರುತ್ತದೆ. ಬಜೆಟ್ ಭಾಷಣವು ಸರಕಾರದ ಹಣಕಾಸು ಯೋನೆಯ ವಿಶಾಲ ರೂಪರೇಷೆಯನ್ನು ಹಾಕಿಕೊಡುತ್ತದೆ. ಉದ್ದೇಶಗಳನ್ನು ಪೂರೈಸಲು ಸಂಪನ್ಮೂಲಗಳನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ನಿಯೋಜಿಸಲಾಗಿದೆ ಎಂಬು ದನ್ನು ಖಚಿತಪಡಿಸಿಕೊಳ್ಳಲು, ಇಲಾಖಾವಾರು ಹಂಚಿಕೆಗಳನ್ನು ನಂತರದ ಹಂತದಲ್ಲಿ ಅಂತಿಮ ಗೊಳಿಸಲಾಗುತ್ತದೆ.

ಒಟ್ಟಾರೆ ಹೇಳುವುದಾದರೆ, ಪ್ರತಿವರ್ಷದ ಬಜೆಟ್ ಮಂಡನೆಯು ಅತೀವ ನೈಪುಣ್ಯದಿಂದ ಕೂಡಿದ ಒಂದು ಕಸರತ್ತು ಎನ್ನಲಡ್ಡಿಯಿಲ್ಲ. ದೇಶದ ಅಭಿವೃದ್ಧಿಗೆ ಪೂರಕವಾದ ಪ್ರಸ್ತಾವನೆಗಳನ್ನು, ವಲಯ ವಾರು ಆದಾಯ ಮತ್ತು ಖರ್ಚು ಸಂಬಂಧಿತ ಹಾಗೂ ತೆರಿಗೆಯ ನೀತಿ ನಿಯಮಾವಳಿಗಳನ್ನು ರೂಪಿ ಸುವ ಬೃಹತ್ಕಾರ್ಯವಿದು. ಒಂದು ಸತ್ಯಸಂಗತಿಯೆಂದರೆ, ಬಜೆಟ್ ಪ್ರಸ್ತಾವನೆಗಳಿಂದ ಎಲ್ಲರನ್ನೂ ಸಂತುಷ್ಟಗೊಳಿಸಲಾಗದು, ಅದರಲ್ಲೂ ವಿಪಕ್ಷಗಳನ್ನು ತೃಪ್ತಿಪಡಿಸುವುದು ಅಸಾಧ್ಯ!

(ಲೇಖಕರು ಚಾರ್ಟರ್ಡ್ ಅಕೌಂಟೆಂಟ್)