ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gururaj Gantihole Column: ಆಧುನಿಕತೆಯಲ್ಲಿ ಕಾಣೆಯಾಗುತ್ತಿರುವ ಎಪಿಎಂಸಿ ವ್ಯವಸ್ಥೆ

ತನ್ನ ಬೆಳೆಗಳನ್ನು ಯಾವುದೇ ಹಳ್ಳಿಯ ಯಾವುದೇ ಸಂತೆಪೇಟೆಯಲ್ಲಿ ಮಾರಾಟ ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದ ರೈತ, ಕ್ರಮೇಣ ದಳಿಗಳ ನಿಯಂತ್ರಣಕ್ಕೊಳಪಟ್ಟು ಮಾರುಕಟ್ಟೆಗಳಲ್ಲಿ ತನ್ನ ಬೆಳೆಗಳನ್ನು ಏಜೆಂಟರುಗಳಿಗೆ ಮಾರುತ್ತಿದ್ದಾನೆ. ಕಾಲ ಬದಲಾ ಗಿದ್ದು ಬಿಟ್ಟರೆ, ಬ್ರಿಟಿಷರಿಂದ ಹಿಡಿದು, ಈಗಿನ ಸರಕಾರದವರೆಗೆ ಇರುವುದು ಅದೇ ಕಮಿಷನ್ ವ್ಯವಸ್ಥೆ!

ಆಧುನಿಕತೆಯಲ್ಲಿ ಕಾಣೆಯಾಗುತ್ತಿರುವ ಎಪಿಎಂಸಿ ವ್ಯವಸ್ಥೆ

ಅಂಕಣಕಾರ ಗುರುರಾಜ್‌ ಗಂಟಿಹೊಳೆ

Profile Ashok Nayak Mar 20, 2025 6:58 AM

ಒಂದು ಬೇಕರಿಯ ಮಾಲೀಕ ತಾನು ತಯಾರು ಮಾಡಿದ ತಿನಿಸುಗಳಿಗೆ ತಾನೇ ಬೆಲೆ ನಿಗದಿಪಡಿಸಿ, ಅದಕ್ಕೆ ಸಮನಾಗಿ ಯಾವ ಅಡೆತಡೆಯೂ ಇಲ್ಲದೆ, ಯಾವ ಚೌಕಾಸಿಗೂ ಅವಕಾಶವಿಲ್ಲದಂತೆ ದಿನ ವಿಡೀ - ವರ್ಷಪೂರ್ತಿ ವ್ಯಾಪಾರ ಮಾಡುತ್ತಾನೆ. ಆದರೆ, ಒಬ್ಬ ರೈತ ಮಾತ್ರ ಜನ್ಮತಃ ಕೃಷಿ ಮಾಡು ತ್ತಿರುವುದರಿಂದ ಹಿಡಿದು, ಎಪಿಎಂಸಿ ಬರುವ ಮೊದಲು ಮತ್ತು ನಂತರವೂ ಕೂಡ, ತಾನು ಬೆಳೆದ ಬೆಳೆಗಳಿಗೆ ಬೆಲೆ ನಿಗದಿ ಮಾಡಲಾಗದಂತಹ ಮತ್ತು ಖರೀದಿದಾರರು ಕೇಳಿದ ಬೆಲೆಗೆ ಮಾರಾಟ ಮಾಡಿ ಬರುವ ಪರಿಸ್ಥಿತಿಯಲ್ಲಿದ್ದಾನೆ. ಅನಾದಿ ಕಾಲದಿಂದಲೂ ಮಾನವನ ನಾಗರಿಕತೆಯಲ್ಲಿ ಕೃಷಿಯು ಒಂದು ಪ್ರಮುಖ ಭಾಗವಾಗಿದ್ದು, ಭಾರತದಲ್ಲಿ ಕೃಷಿಯನ್ನೇ ನಂಬಿ ಬದುಕುತ್ತಿದ್ದ ಕಾಲವೊಂದಿತ್ತು. ಪರಕೀಯ ದಾಳಿ ಮತ್ತು ದಾಳಿಯ ನಂತರ, ಮಿಶ್ರಿತಗೊಂಡ ಕೃಷಿ ಬೆಳೆಯುವ ಪದ್ಧತಿಯು, ಬ್ರಿಟಿಷ್‌ರಾಜ್ ಆಡಳಿತದಲ್ಲಿ ಅವರ ಮೂಗಿನ ನೇರಕ್ಕೆ, ಅವರಿಗೆ ಬೇಕಾದ ಉತ್ಪನ್ನ ಗಳನ್ನು ಬೆಳೆಯುವಂತೆ ಬಲವಂತಿಕೆ ಹೇರಲಾಯಿತು.

ಬ್ರಿಟಿಷರೂ ಸಹ ಮಾರುವ ಕಟ್ಟೆಗಳನ್ನು ಹುಟ್ಟುಹಾಕಿದ್ದರು. ಆಗ, ಕಚ್ಚಾಹತ್ತಿ ಅವರಿಗೆ ಅತಿ ಬೇಡಿಕೆಯ ವಸ್ತುವಾಗಿದ್ದು, ಮ್ಯಾಂಚೆಸ್ಟರ್(ಇಂಗ್ಲೆಂಡ್)ನ ಕಾಟನ್ ಮಿಲ್ಲುಗಳಿಗೆ ನಿರಂತರವಾಗಿ ಪರಿಶುದ್ಧ ಹತ್ತಿಯನ್ನು ನಾವು ನಿಮಗೆ ಕಳುಹಿಸುವಷ್ಟು ನಮ್ಮಲ್ಲಿ ಪೂರೈಕೆ ವ್ಯವಸ್ಥೆಯಿದೆ ಎಂದು ಇಲ್ಲಿನ ಬ್ರಿಟಿಷ್ ಅಧಿಕಾರಿಗಳು ತಿಳಿಸಿದ್ದರಂತೆ!

ಇದನ್ನೂ ಓದಿ: Gururaj Gantihole Column: ಅಮೆರಿಕದಲ್ಲಿ ಅರಳಿದ ಸನಾತನ ಪ್ರಭೆ ಕೃಷ್ಣ ತುಳಸಿ

ಹತ್ತಿ, ದವಸ ಧಾನ್ಯಗಳು, ಒಣಹಣ್ಣುಗಳ ಬೃಹತ್ ಮಾರುಕಟ್ಟೆಯನ್ನು 1886ರ ಸುಮಾರಿಗೆ ‘ಕಾರಂಜ’ ಎನ್ನುವ ಹೈದರಾಬಾದ್ ರೆಸಿಡೆನ್ಸಿ ವ್ಯಾಪ್ತಿಪ್ರದೇಶದಲ್ಲಿ ಸ್ಥಾಪಿಸಿದ್ದ ಇತಿಹಾಸವಿದೆ. ಮಾರುಕಟ್ಟೆ ವಿಚಾಕ್ಕೆ ಸಂಬಂಧಿಸಿದಂತೆ ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಅಧಿಕೃತ ಕಾನೂ ನು, ನೀತಿ-ನಿಯಮಗಳನ್ನು ತಂದಿದ್ದು ಬ್ರಿಟಿಷರು. ದಿ ಬೇರರ್ ಕಾಟನ್ ಮತ್ತು ಗ್ರೇನ್ ಮಾರ್ಕೆಟ್ ಆಫ್ - 1887 ಎಂಬ ಕಾನೂನಿನ ಮೂಲಕ, ನಿಗದಿತ ಮಾರಾಟ ಪ್ರದೇಶ, ವ್ಯಾಪ್ತಿ, ಕಮಿಟಿ ರಚನೆ ಮತ್ತು ಅಂತಾರಾಜ್ಯ, ಹೊರದೇಶಗಳಿಗೆ ಉತ್ಪನ್ನಗಳ ಸಾಗಾಟ-ಮಾರುವಿಕೆ ಸೇರಿದಂತೆ ಹಲವು ವಿಚಾರಗಳು ಈ ಕಾನೂನಿನ ಅಡಿಯಲ್ಲಿ ಬರುತ್ತಿದ್ದವಂತೆ! ‌

ಇದಾದ ಬಳಿಕ ದೇಶ ಸ್ವಾತಂತ್ರ್ಯಗೊಂಡರೂ, ರೈತನ ಮೇಲೆ ದಬ್ಬಾಳಿಕೆ ನಿಂತಿರಲಿಲ್ಲ. ಅನಿಶ್ಚಿತ ಬೆಳೆಗಳಿಗೆ ನಿಶ್ಚಿತ - ನಿಗದಿತ ಮಾರುಕಟ್ಟೆಗಳಿರಲಿಲ್ಲ. ಇದ್ದರೂ, ನೂರಾರು ಮೈಲುಗಳ ದೂರದ ವ್ಯಾಪಾರ ಕೇಂದ್ರಕ್ಕೆ ತಾನು ಬೆಳೆದ ಅಲ್ಪ ಬೆಳಗಳನ್ನು ಸಾಗಿಸುವಷ್ಟು ಶಕ್ತಿ ರೈತರ ಬಳಿ ಇರುತ್ತಿರ ಲಿಲ್ಲ. ಇಂತಹ ಸನ್ನಿವೇಶವೇ ದಳಿಗಳೆಂಬ ಮಧ್ಯವರ್ತಿಯನ್ನು ಸೃಷ್ಟಿಸಿದ್ದು, ಅಂದು ದಬ್ಬಾಳಿಕೆ ಯಿಂದ ನಡೆಯುತ್ತಿದ್ದರೆ, ಇಂದು ನಯ ನಾಜೂಕಿನಿಂದ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ.

ಶಿವಾಜಿ ಮಹಾರಾಜರ ಕಾಲದಲ್ಲಿ ಬಹುಬೇಡಿಕೆಯ ನಗರವಾಗಿದ್ದ ಕಾರಂಜ ಪಟ್ಟಣವು ನಾಲ್ಕು ಕಡೆಯಿಂದ ಬೃಹತ್ ಕಲ್ಲಿನಗೋಡೆಗಳಿಂದ ಕಟ್ಟಿದ ದೊಡ್ಡ ಕೋಟೆಗೋಡೆಯ ಜತೆಗೆ, ನಾಲ್ಕು ದಿಕ್ಕಿನಲ್ಲಿ ಬೃಹತ್ ಬಾಗಿಲುಗಳನ್ನು ಹೊಂದಿದ್ದು, ಅತಿದೊಡ್ಡಮಟ್ಟದಲ್ಲಿ ವ್ಯಾಪಾರ ನಡೆಯಲು ಅತ್ಯಂತ ಸೂಕ್ತವಾಗಿತ್ತು.

1887ರ ಬೇರ್ ಕಾಯಿದೆ ಜಾರಿಗೊಳಿಸಿದ ಬಳಿಕ, 1895ರಲ್ಲಿ ಮುನ್ಸಿಪಾಲ್ಟಿ ಹುಟ್ಟುಹಾಕಲಾಯಿತು. ಇದರಡಿಯಲ್ಲಿ ಕಮಿಷನ್, ವಂತಿಗೆ ಇತ್ಯಾದಿ ವಸೂಲಿ ಮಾಡಲು ಬೆರಾರ್ ಮುನ್ಸಿಪಲ್ ಆಫ್ 1895 ಕೂಡ ಜಾರಿಯಾಗುವ ಮೂಲಕ, ಅಧಿಕೃತವಾಗಿ ಮೊಟ್ಟಮೊದಲ ಭಾರತದ ಎಪಿಎಂಸಿಯಾಗಿ ಉದ್ಭವವಾಯಿತು ಎನ್ನಬಹುದು.

ಎಪಿಎಂಸಿ ವ್ಯವಸ್ಥೆ ಬರುವ ಮೊದಲು ಹಳ್ಳಿ, ಗ್ರಾಮೀಣ ಭಾಗದ ಸಂತೆಗಳಲ್ಲಿ ತಾವು ಬೆಳೆದ ಬೆಳೆ ಗಳನ್ನು ತಾವೇ ಮಾರುವ ಅಂದಿನ ವ್ಯವಸ್ಥೆ ಅದ್ಭುತವಾಗಿತ್ತು. 1932-33ರ ಆಸುಪಾಸಿನಲ್ಲಿ ಕರ್ನಾಟಕದ ಬೈಲಹೊಂಗಲದಲ್ಲಿ ಸಹ ಎಪಿಎಂಸಿ ಮಾದರಿಯಲ್ಲಿ ಅಸಂಘಟಿತ ಮಾರುಕಟ್ಟೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿತ್ತು.

ದೇಶದಲ್ಲಿ ಕೃಷಿ ಮಾರುಕಟ್ಟೆ ಕ್ಷೇತ್ರದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಎಂದರೆ ಮಾರುಕಟ್ಟೆ ಪದ್ಧತಿಗಳ ನಿಯಂತ್ರಣ ಮತ್ತು ನಿಯಂತ್ರಿತ ಮಾರುಕಟ್ಟೆಗಳ ಸ್ಥಾಪನೆಗಾಗಿ 1928ರ ರಾಯಲ್ ಕಮಿಷನ್ ಆನ್ ಅಗ್ರಿಕಲ್ಚರ್ ಮಾಡಿದ ಶಿಫಾರಸ್ಸು. ಇದರ ಅನುಸಾರವಾಗಿ, ಭಾರತ ಸರಕಾರ 1938ರಲ್ಲಿ ಮಾದರಿ ಮಸೂದೆಯನ್ನು ಸಿದ್ಧಪಡಿಸಿ ಎಲ್ಲಾ ರಾಜ್ಯಗಳಿಗೆ ವಿತರಿಸಿತು.

ಆದಾಗ್ಯೂ, ಭಾರತ ಸ್ವಾತಂತ್ರ್ಯ ಪಡೆಯುವವರೆಗೂ ಹೆಚ್ಚಿನ ಪ್ರಗತಿ ಸಾಧಿಸಲಿಲ್ಲ. 1960 ಮತ್ತು 1970ರ ದಶಕಗಳಲ್ಲಿ, ಹೆಚ್ಚಿನ ರಾಜ್ಯಗಳು ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣ ಕಾಯಿದೆ ಗಳನ್ನು ಜಾರಿಗೆ ತಂದವು. ಎಲ್ಲಾ ಪ್ರಾಥಮಿಕ ಸಗಟು ಜೋಡಣೆ ಮಾರುಕಟ್ಟೆಗಳನ್ನು ಈ ಕಾಯಿದೆ ಯ ವ್ಯಾಪ್ತಿಗೆ ತರಲಾಯಿತು. ಉತ್ತಮವಾಗಿ ಮಾರುಕಟ್ಟೆ ಪ್ರದೇಶ, ಉಪ-ಪ್ರದೇಶಗಳನ್ನು ನಿರ್ಮಿಸ ಲಾಯಿತು ಮತ್ತು ಪ್ರತಿ ಮಾರುಕಟ್ಟೆ ಪ್ರದೇಶಕ್ಕೆ, ನಿಯಮಗಳನ್ನು ರೂಪಿಸಲು ಮತ್ತು ಅವುಗಳನ್ನು ಜಾರಿಗೊಳಿಸಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ರಚಿಸಲಾಯಿತು.

ಹೀಗಾಗಿ, ನಿಯಂತ್ರಿತ ಮಾರುಕಟ್ಟೆಗಳ ಮೂಲಕ ಸಂಘಟಿತ ಕೃಷಿ ಮಾರುಕಟ್ಟೆ ಅಸ್ತಿತ್ವಕ್ಕೆ ಬಂದಿತು. ಇದಕ್ಕೂ ಮೊದಲು, ಭಾರತದಲ್ಲಿ ರೈತರು ಮಧ್ಯವರ್ತಿಗಳು ಮತ್ತು ಸಾಲಗಾರರಿಂದ ಶೋಷಣೆ ಯನ್ನು ಎದುರಿಸುತ್ತಿದ್ದರು. ತಮ್ಮ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲೇಬೇಕಾದ ಸ್ಥಿತಿಯಿತ್ತು. 1960ರ ದಶಕದಲ್ಲಿ ಪರಿಚಯಿಸಲಾದ ಎಪಿಎಂಸಿ ವ್ಯವಸ್ಥೆಯು ಕೃಷಿ ಮಾರುಕಟ್ಟೆ ಗಳನ್ನು ನಿಯಂತ್ರಿಸುವುದು, ನ್ಯಾಯಯುತ ಬೆಲೆಗಳನ್ನು ಖಚಿತಪಡಿಸುವುದು ಮತ್ತು ಶೋಷಣೆ ಯನ್ನು ತಡೆಗಟ್ಟುವ ಗುರಿಯನ್ನು ಹೊಂದಿದ್ದರಿಂದ ದೇಶಾದ್ಯಂತ ಈ ವ್ಯವಸ್ಥೆಯು ಬಲಿಷ್ಠವಾಗಿ ಬೆಳೆಯಲು ಸಹಾಯಕವಾಯಿತು.

ಕರ್ನಾಟಕ ಸರಕಾರವು ರೈತರು ತಮ್ಮ ಉತ್ಪನ್ನಗಳನ್ನು ಯೋಗ್ಯ ಬೆಲೆಯಲ್ಲಿ ಮಾರಾಟ ಮಾಡಲು ಅನೇಕ ಪಟ್ಟಣಗಳಲ್ಲಿ ಎಪಿಎಂಸಿಗಳನ್ನು ರಚಿಸಿದೆ. ಹೆಚ್ಚಿನ ಎಪಿಎಂಸಿಗಳು ಮಾರುಕಟ್ಟೆಯನ್ನು ಹೊಂದಿದ್ದು, ಅಲ್ಲಿ ವ್ಯಾಪಾರಿಗಳು ಮತ್ತು ಏಜೆಂಟ್‌ಗಳಿಗೆ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿ ಸಲು ಮಳಿಗೆಗಳು, ಗೋದಾಮುಗಳು ಅಥವಾ ಅಂಗಡಿಗಳನ್ನು ಒದಗಿಸಲಾಗುತ್ತದೆ.

ರೈತರು APMCಯ ಮೇಲ್ವಿಚಾರಣೆಯಲ್ಲಿ ಏಜೆಂಟರು ಅಥವಾ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನ ಗಳನ್ನು ಮಾರಾಟ ಮಾಡಬಹುದು. ಕರ್ನಾಟಕ ರಾಜ್ಯಾದ್ಯಂತ ಸುಮಾರು ನೂರ ಅರವತ್ತೆರಡು (162) ನಿಯಂತ್ರಿತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾರುಕಟ್ಟೆಗಳಿವೆ. ಈ ಮಾರುಕಟ್ಟೆಯ ಅಂಗಳದಲ್ಲಿ ಉಪಾಹಾರ ಕೊಠಡಿ/ ಮಳಿಗೆ, ಶೌಚಾಲಯ, ಕುಡಿಯುವ ನೀರು ಸರಬರಾಜಿನಂತಹ ಮೂಲಭೂತ ಸೌಕರ್ಯಗಳನ್ನು ಮತ್ತು ಕೆಲವು ದೊಡ್ಡ ಎಪಿಎಂಸಿ ಮಾರುಕಟ್ಟೆಗಳು ಬ್ಯಾಂಕ್ ಶಾಖೆ, ಅಂಚೆ ಕಚೇರಿ, ಶೀತಲ ಶೇಖರಣಾ ಸೌಲಭ್ಯಗಳನ್ನು ಹೊಂದಿವೆ.

ಬೆಂಗಳೂರಿನ ಯಶವಂತಪುರದಲ್ಲಿರುವ ಎಪಿಎಂಸಿ ನಿಯಂತ್ರಿತ ಮಾರುಕಟ್ಟೆಯು ದಕ್ಷಿಣ ಭಾರತದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. 2020ಕ್ಕಿಂತ ಮೊದಲು, ರೈತರು ಎಪಿಎಂಸಿ ಕಾರ್ಯ ವಿಧಾನದ ಹೊರಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಎಪಿಎಂಸಿ ವ್ಯವಸ್ಥೆಯು ರೈತರನ್ನು ವ್ಯಾಪಾರಿಗಳು ಮತ್ತು ಮಾರುಕಟ್ಟೆ ಏಜೆಂಟ್‌ಗಳ ಬೆಲೆ ನಿಯಂತ್ರಿಸುವ ಕುಶಲತೆಗೆ ಬಲಿಯಾಗುವಂತೆ ಮಾಡಿತು.

ಇದನ್ನು ಅರಿತ ನರೇಂದ್ರ ಮೋದಿ ಸರಕಾರವು ಹಲವು ಸುಧಾರಣೆಗಳನ್ನು ಒಳಗೊಂಡಿರುವ ಎಲ್ಲಾ ಪಕ್ಷಗಳಿಗೆ ಅನುಕೂಲವಾಗುವಂತೆ ಎಪಿಎಂಸಿ ಕಾಯ್ದೆಯನ್ನು ಪರಿಚಯಿಸಿತು ಮತ್ತು ಅವುಗಳ ಆಯ್ಕೆಯನ್ನು ಜನರಿಗೆ, ರೈತರಿಗೇ ಬಿಟ್ಟಿತು ಕೂಡ. ಇದಾದ ಬಳಿಕ, ಡಿಸೆಂಬರ್ 2020ರಲ್ಲಿ, ಕೇಂದ್ರ ಕೃಷಿ ಕಾನೂನುಗಳಿಗೆ ಅನುಗುಣವಾಗಿ, ಕರ್ನಾಟಕ ಸರಕಾರವು ಕರ್ನಾಟಕ ಕೃಷಿ ಉತ್ಪನ್ನ ಮಾರು ಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯಿದೆ, 1966ಕ್ಕೆ ತಿದ್ದುಪಡಿಯನ್ನು ಅಂಗೀಕರಿಸಿತು.

ಈ ತಿದ್ದುಪಡಿಯು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ವ್ಯಾಪ್ತಿಯನ್ನು ಕಡಿಮೆ ಮಾಡಿತು. ಈ ತಿದ್ದುಪಡಿಯನ್ನು ಪರಿಚಯಿಸುವ ಸಮಯದಲ್ಲಿ ಅಂದಿನ ರಾಜ್ಯ ಕಾನೂನು ಸಚಿವ ಜೆ.ಸಿ. ಮಾಧು ಸ್ವಾಮಿ, ಈ ಸುಧಾರಣೆಗಳೊಂದಿಗೆ ರೈತರು ಶೋಷಣಾ ಮಧ್ಯವರ್ತಿಗಳಿಂದ ಮುಕ್ತರಾಗುತ್ತಾರೆ. ಹಾರ ಸಂಸ್ಕರಣೆಯಲ್ಲಿ ತೊಡಗಿರುವ ಖಾಸಗಿ ಕಂಪನಿಗಳು ರೈತರ ಮನೆ ಬಾಗಿಲಿಗೆ ಹೋಗಿ ಅವರಿಂದ ನೇರವಾಗಿ ಉತ್ಪನ್ನವನ್ನು ಖರೀದಿಸಬಹುದು ಎನ್ನುತ್ತ, ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಯಾರ್ಡ್ ಗಳಲ್ಲಿ ಅಥವಾ ಖಾಸಗಿ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಸ್ವತಂತ್ರರು.

ಆಯ್ಕೆಯು ರೈತರಿಗೆ ಬಿಟ್ಟದ್ದು ಎಂದರು. ಭಾರತೀಯ ಕೃಷಿಯ ವೈವಿಧ್ಯತೆ ಮತ್ತು ತಿದ್ದುಪಡಿ ಗಳನ್ನು ಪರಿಚಯಿಸಿದ ನಂತರದ ಅಲ್ಪಾವಽಯನ್ನು ಗಮನದಲ್ಲಿಟ್ಟುಕೊಂಡು ವಿಶ್ಲೇಷಿಸಿದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಯಾವ ಬಗೆಯ ಮಾರಾಟ ಅಥವಾ ಕೊಡು-ಕೊಳ್ಳುವಿಕೆ ನಡೆಯುತ್ತಿತ್ತೋ, ಅದೇ ಮಾದರಿಯಲ್ಲಿ ಆಧುನಿಕ ಕ್ರಮದಲ್ಲಿ ನಡೆಯುತ್ತಿದೆ ಎಂದೆನಿಸದಿರುದು!

ಹೌದು, ಇಂದಿನ ಎಪಿಎಂಸಿ ಮಾರುಕಟ್ಟೆಗಳು ವಿವಿಧ ರೀತಿಯ ಬೆಲೆ ಆವಿಷ್ಕಾರಕ್ಕೆ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿರುವುವುದು ಕಂಡುಬಂದಿದೆ. ಎಪಿಎಂಸಿ ಮಾರುಕಟ್ಟೆಯೊಳಗಿನ ವಹಿವಾಟು ಗಳು, ವಿವಿಧ ಬೆಳೆಗಳ ಏಜೆಂಟರ ನಡುವಿನ ಪರಸ್ಪರ ಹೊಂದಾಣಿಕೆ(ಒಳಮಾರ್ಗವೂ ಸೇರಿ)ಯ ಪರಿಣಾಮವಾಗಿದೆ ಎನ್ನಬಹುದು.

ರೈತರು ಉತ್ಪನ್ನಗಳನ್ನು ಮಾರುಕಟ್ಟೆಗೆ ತರುತ್ತಾರೆ, ನಂತರ ಅದನ್ನು ಕಮಿಷನ್ ಏಜೆಂಟರು ಮಾರಾಟಕ್ಕೆ ವ್ಯವಸ್ಥೆ ಮಾಡುತ್ತಾರೆ, ಅವರು ರೈತರ ಪ್ರತಿನಿಧಿಯಾಗಿ ಉತ್ಪನ್ನವನ್ನು ಮಾರಾಟ ಮಾಡುತ್ತಾರೆ. ನಂತರ ನಿಯಂತ್ರಿತ (ಹರಾಜು ಸೇರಿದಂತೆ) ಕಾರ್ಯವಿಧಾನದ ಮೂಲಕ ಬೆಲೆಗಳನ್ನು ನಿರ್ಧರಿಸುವ ವ್ಯಾಪಾರಿಗಳಿಗೆ ಸರಕುಗಳನ್ನು ಪ್ರದರ್ಶಿಸಲಾಗುತ್ತದೆ. ಇಡೀ ವ್ಯವಸ್ಥೆಯನ್ನು ಚುನಾ ಯಿತ ಸಮಿತಿಗಳು ಮೇಲ್ವಿಚಾರಣೆ ಮಾಡುತ್ತವೆ.

ಇದಕ್ಕಾಗಿ, ಖರೀದಿದಾರರಿಂದ ಕಮಿಷನ್, ಇತರೆ ವೆಚ್ಚವನ್ನು ಪಡೆಯಲಾಗುತ್ತದೆ ಎಂದರೂ, ಬಹು ತೇಕವಾಗಿ ಎರಡೂ ಕಡೆಯಿಂದ ಹಣ ವಸೂಲಿ ಮಾಡುತ್ತಿರುವುದು ಮಾತ್ರ ಗುಟ್ಟಾಗೇನೂ ಇಳಿ ದಿಲ್ಲ. ಇಂತಹ ವಹಿವಾಟುಗಳಿಂದ ಗಳಿಸುವ ಆದಾಯವನ್ನು APMC ಗಳು ತಮ್ಮ ವೆಚ್ಚಗಳನ್ನು ಪೂರೈಸಲು ಮತ್ತು ಮಾರುಕಟ್ಟೆ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ಬಳಸಿಕೊಳ್ಳುತ್ತವೆ ಎಂದರೂ ಅಡ್ಡಮಾರ್ಗವಾಗಿಯೇ ತೋರುತ್ತದೆ.

ಕೇಂದ್ರ ಮಟ್ಟದಲ್ಲಿ ಪ್ರಸ್ತಾಪಿಸಲಾದ ತಿದ್ದುಪಡಿಗಳು, ಭಾರತೀಯ ಕೃಷಿ ಮಾರುಕಟ್ಟೆಯಲ್ಲಿ ನಿಯಂತ್ರಣ ಕಡಿತಗೊಳಿಸುವಿಕೆಯು ಸ್ಪರ್ಧೆಯನ್ನು ಹೆಚ್ಚಿಸಿ, ಏಜೆಂಟ-ವ್ಯಾಪಾರಿ ಕಾರ್ಟೆಲ್‌ನ ಏಕಸ್ವಾಮ್ಯದ ಹಿಡಿತವನ್ನು ನಾಶಪಡಿಸುತ್ತದೆ, ದಕ್ಷತೆಗೆ ಕಾರಣವಾಗುತ್ತದೆ ಮತ್ತು ಆರ್ಥಿಕ ಹೆಚ್ಚು ವರಿಯನ್ನು ಹೆಚ್ಚಿಸುತ್ತದೆ ಎಂದು ಬಹುತೇಕರು ಹೇಳಿದರು.

ಎಪಿಎಂಸಿ ಒಳಗಡೆ ವಹಿವಾಟು ನಡೆಸುವವರು ಉತ್ತಮ ಮಾಹಿತಿಯುಳ್ಳವರಾಗಿದ್ದು, ಸಮಾನ ಚೌಕಾಶಿ ಮಾಡುವ ಶಕ್ತಿಯನ್ನು ಹೊಂದಿರಬೇಕು. ಇದು ವಾಸ್ತವವಾಗಿ ನಡೆಯುತ್ತಿಲ್ಲ. ಖಾಸಗಿ ಸಂಸ್ಥೆಗಳು/ವ್ಯಾಪಾರಿಗಳು, ಕಮಿಷನ್ ಏಜೆಂಟ್ಗಳು ಮತ್ತು ರೈತರ ನಡುವೆ ಆದಾಯದ ಅಸಮ ತೋಲನ ಮತ್ತು ಮಾಹಿತಿ ಕೊರತೆ ಎದ್ದುಕಾಣುತ್ತದೆ.

ಹೀಗಾಗಿ, ಬಹುತೇಕ ರೈತರು, ಶೇಖರಣಾ ಸೌಲಭ್ಯಗಳು ಮತ್ತು ಸಾಕಷ್ಟು ಸಾಲ ಸೌಲಭ್ಯಗಳಿಲ್ಲದ ಕಾರಣ, ಕೊಯ್ಲು ಮಾಡಿದ ತಕ್ಷಣ ತಮ್ಮ ಉತ್ಪನ್ನಗಳನ್ನು ಸ್ಥಳೀಯವಾಗಿ ಮಾರಾಟ ಮಾಡುವು ದರಿಂದ ಎಪಿಎಂಸಿಯನ್ನು ಎಡತಾಕುವ ಪ್ರಶ್ನೆಯೇ ಬರುವುದಿಲ್ಲ! ಕೃಷಿ ಉತ್ಪಾದನೆಯ ದೊಡ್ಡ ಪ್ರಮಾಣ (ಶೇ55ರಿಂದ 93ರಷ್ಟು) ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾದರೆ, ಕೇವಲ 3% ರಿಂದ 22%ರಷ್ಟು ಮಾತ್ರ ಎಪಿಎಂಸಿ ಮಾರುಕಟ್ಟೆಗಳನ್ನು ತಲುಪುತ್ತದೆ ಎನ್ನುತ್ತದೆ ರಾಷ್ಟ್ರೀಯ ಮಾದರಿ ಸಮೀಕ್ಷೆ.

ರೈತರು, ಎಪಿಎಂಸಿಗಳು ಅಥವಾ ಇತರ ಸರ್ಕಾರಿ ಖರೀದಿ ಕೇಂದ್ರಗಳನ್ನು ಪ್ರವೇಶಿಸದಿರಲು, ಮಾರು ಕಟ್ಟೆಗಿಂತ ಕಡಿಮೆ ಬೆಲೆಗಳು, ಕಳಪೆ ತೂಕ ವ್ಯವಸ್ಥೆಗಳು, ವಿಳಂಬವಾದ ಪಾವತಿಗಳು ಮತ್ತು ಸಾಲ ಮರುಪಾವತಿ ಹಿಂಪಡೆಯುವಿಕೆ. ಎಪಿಎಂಸಿ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಣಾ ವೈಪಲ್ಯಗಳು ಪ್ರಮುಖವಾಗಿ ಕಂಡು ಬರುತ್ತಿವೆ.

ರೈತರು ತಮ್ಮ ಸರಕುಗಳನ್ನು ಎಪಿಎಂಸಿ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಕಟ್ಟಪ್ಪಣೆಗಳ ಸಂಕೋಲೆಗಳಿಂದ ಕಟ್ಟಿ ಹಾಕಲ್ಪಟ್ಟಿzರೆ ಎಂಬ ಭಾವನೆ ನಾಡಿನ ರೈತರಲ್ಲಿ ಮೂಡಿದೆ. ಆಧುನಿಕ ಕಾಲಘಟ್ಟದಲ್ಲಿ, ಆನ್ಲೈನ್ ಮಾರಾಟ - ಕೊಳ್ಳುವಿಕೆ ಪ್ರಾಮುಖ್ಯತೆ ಪಡೆದಿರುವ ಸಂದರ್ಭದಲ್ಲಿ ಅಪ್ರಸ್ತುತೆಯತ್ತ ಸಾಗುತ್ತಿರುವ ಎಪಿಎಂಸಿ ವ್ಯವಸ್ಥೆ ನಿಜಕ್ಕೂ ನಮ್ಮ ರೈತರಿಗೆ ಬೇಕಿದೆಯೇ? ಎಂಬು ದನ್ನು ಗಂಭೀರವಾಗಿ ಆಲೋಚಿಸಬೇಕಿದೆ.