ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gururaj Gantihole Column: ಅಮೆರಿಕದಲ್ಲಿ ಅರಳಿದ ಸನಾತನ ಪ್ರಭೆ ಕೃಷ್ಣ ತುಳಸಿ

ತಮ್ಮ ವ್ಯಕ್ತಿತ್ವದಲ್ಲಿ ಅಪರೂಪದ ಗುಣಗಳನ್ನು, ಮೌಲ್ಯಗಳನ್ನು ಅಳವಡಿಸಿಕೊಂಡು ಬೆಳೆದ ತುಳಸಿಯವರು ಎಂದೂ ರಾಜಿಯಾಗದ, ಜನವಿರೋಧಿ ವಿಚಾರ, ನಿಯಮಗಳನ್ನು, ಆಡಳಿತ ವನ್ನು ಕಟ್ಟುವಾಗಿ ವಿರೋಧಿಸುವುದರಲ್ಲಿ ಎಂದೂ ಹಿಂಜರಿಯದ ಜನಪ್ರತಿನಿಧಿಯಾಗಿ ಬೆಳೆ ಯುತ್ತ ಬಂದವರು. ಅಮೆರಿಕದ ಸಮೋವಾ ದ್ವೀಪದಲ್ಲಿ ಗಬ್ಬಾರ್ಡ್ ದಂಪತಿಗೆ ನಾಲ್ಕನೇ ಮಗಳಾಗಿ 1981ರ ಏಪ್ರಿಲ್ 12ರಂದು ಜನಿಸಿದ ತುಳಸಿ, ಎರಡು ವರ್ಷದ ಮಗು ವಾಗಿದ್ದಾಗ, ಇವರ ಕುಟುಂಬ ಹವಾಯಿ ದ್ವೀಪಕ್ಕೆ ವಲಸೆ ಬಂದಿತು

ಅಮೆರಿಕದಲ್ಲಿ ಅರಳಿದ ಸನಾತನ ಪ್ರಭೆ ಕೃಷ್ಣ ತುಳಸಿ

ಅಂಕಣಕಾರ ಗುರುರಾಜ್‌ ಗಂಟಿಹೊಳೆ

Profile Ashok Nayak Mar 13, 2025 9:31 AM

ಸೇನಾ ಹಿನ್ನೆಲೆ, ಹಿಂದೂ ಧರ್ಮದ ಅನುಯಾಯಿ, ಭಗವದ್ಗೀತೆಯಿಂದ ಸದಾ ಪ್ರೇರಣೆ ಹೊಂದುತ್ತ, ಚಿಕ್ಕ ವಯಸ್ಸಿನಲ್ಲಿ ಹಲವು ಪ್ರಥಮಗಳನ್ನು ಸಾಧಿಸಿದ ಅಪ್ರತಿಮ ಸಾಧಕಿ, ಪ್ರಸ್ತುತ ವಿಶ್ವದಲ್ಲಿಯೇ ಬಹುಸೂಕ್ಷ್ಮ ಪದವಿಯೊಂದರ ಮುಖ್ಯಸ್ಥೆಯಾಗಿ ಚುಕ್ಕಾಣಿ ಹಿಡಿ ದಿದ್ದಾರೆ! ಹೌದು, ನಾನು ಅಮೆರಿಕದ ಸೇನೆ ಸೇರುವಾಗ ಯಾರೂ ನೀನು ಯಾವ ಧರ್ಮ ದವಳು ಎಂದು ಕೇಳಲಿಲ್ಲ. ಈಗ, ನನ್ನ ಹೆಮ್ಮೆಯ ಜನರನ್ನು ಪ್ರತಿನಿಧಿಸುತ್ತಿದ್ದೇನೆ. ಈಗ ಅದೇಕೆ ಅಳತೆಗೋಲಾಗಬೇಕು? ಎಂದು ದಿಟ್ಟವಾಗಿ ಪ್ರಶ್ನಿಸಿದ್ದಳು ತುಳಸಿ. ಯಾಕೆಂದರೆ, ಈಕೆ ಹಿಂದೂ - ಸನಾತನ ಧರ್ಮ ಅನುಸರಿಸುತ್ತಿದ್ದಳು.

ಹೌದು, ತಂದೆ ತಾಯಿಗಳಿಬ್ಬರೂ ಅನ್ಯ ಧರ್ಮಕ್ಕೆ ಸೇರಿದವರು. ಮೂಲತಃ ಭಾರತೀಯರೂ ಅಲ್ಲ. ಭಾರತಕ್ಕೂ ಇವರಿಗೂ ಸಂಬಂಧವೇ ಇಲ್ಲದಿದ್ದರೂ, ಇವರ ಮುದ್ದಿನ ಮಗಳು ಹಿಂದೂ ಆಗಿ, ಹಿಂದೂ ಧರ್ಮದ ಪವಿತ್ರ ತುಳಸಿ ಗಿಡದ ದ್ಯೋತಕವಾಗಿ ‘ತುಳಸಿ’ ಎಂದು ನಾಮಕರಣಗೊಂಡು ಬೆಳದವರು!

ಇದನ್ನೂ ಓದಿ: Gururaj Gantihole Column: ಗ್ಯಾರಂಟಿ ಭರಾಟೆಯಲ್ಲಿ ಗ್ರಾಮಾಡಳಿತ ಮರೆತ ಸರಕಾರ

ತಮ್ಮ ವ್ಯಕ್ತಿತ್ವದಲ್ಲಿ ಅಪರೂಪದ ಗುಣಗಳನ್ನು, ಮೌಲ್ಯಗಳನ್ನು ಅಳವಡಿಸಿಕೊಂಡು ಬೆಳೆದ ತುಳಸಿಯವರು ಎಂದೂ ರಾಜಿಯಾಗದ, ಜನವಿರೋಧಿ ವಿಚಾರ, ನಿಯಮಗಳನ್ನು, ಆಡಳಿತವನ್ನು ಕಟ್ಟುವಾಗಿ ವಿರೋಧಿಸುವುದರಲ್ಲಿ ಎಂದೂ ಹಿಂಜರಿಯದ ಜನಪ್ರತಿನಿಧಿ ಯಾಗಿ ಬೆಳೆಯುತ್ತ ಬಂದವರು. ಅಮೆರಿಕದ ಸಮೋವಾ ದ್ವೀಪದಲ್ಲಿ ಗಬ್ಬಾರ್ಡ್ ದಂಪತಿಗೆ ನಾಲ್ಕನೇ ಮಗಳಾಗಿ 1981ರ ಏಪ್ರಿಲ್ 12ರಂದು ಜನಿಸಿದ ತುಳಸಿ, ಎರಡು ವರ್ಷದ ಮಗು ವಾಗಿದ್ದಾಗ, ಇವರ ಕುಟುಂಬ ಹವಾಯಿ ದ್ವೀಪಕ್ಕೆ ವಲಸೆ ಬಂದಿತು. ತಂದೆ ಮೈಕ್ ಗಬ್ಬಾ ರ್ಡ್, ಮೂಲತಃ ಕ್ರೈಸ್ತನಾಗಿದ್ದು, ಕ್ರೈಸ್ತ ಧರ್ಮದ ಪಾಠ, ಪ್ರಾರ್ಥನೆಗಳಲ್ಲಿ ಅತೀವ ಆಸಕ್ತಿ.

ಮುಂದೆ ಇವರು ತಮ್ಮ ಐದೂ ಮಕ್ಕಳಿಗೆ, ಭಕ್ತಿ, ಜೈ, ಆರ್ಯನ್, ತುಳಸಿ ಮತ್ತು ವೃಂದಾ ವನ್ ಎಂದು ಹಿಂದೂ ಧರ್ಮದ ಹೆಸರುಗಳನ್ನಿಟ್ಟು ಬೆಳೆಸಿದರು. ತಾಯಿ ಕರೋಲ್‌ಗೆ ಭಗವದ್ಗೀತೆಯ ಮೇಲೆ ಎಲ್ಲಿಲ್ಲದ ಪ್ರೀತಿ. ಮಾನವಕುಲಕ್ಕೆ ಬೇಕಾದ ಸಮಸ್ತವೂ ಇದರಲ್ಲಿ ಉಲ್ಲೇಖವಾಗಿದೆ.

Screenshot_3 ok

ಇದು ಅತ್ಯಂತ ಪವಿತ್ರ ಮತ್ತು ಪರಿಹಾರ ಹೊಂದಿರುವ ಲೋಕಕಲ್ಯಾಣ ಗ್ರಂಥ ಎಂದು ಅಪ್ಪಿಕೊಂಡಿದ್ದರಲ್ಲದೇ, ಬಾಲ್ಯದಲ್ಲಿಯೇ ತುಳಸಿಯವರಿಗೆ ಅದರ ಮಹತ್ವವನ್ನು ಹೇಳಿ ಕೊಡುವುದರಲ್ಲಿ ಮಗ್ನರಾದರು. ಐದೂ ಮಕ್ಕಳೂ ನಿತ್ಯ ಭಗವದ್ಗೀತೆ ಪಠಣ ಮಾಡು ತ್ತಿದ್ದರು. ಶ್ಲೋಕಗಳನ್ನು ಹೇಳುತ್ತಿದ್ದರು.

ಶ್ರೀಕೃಷ್ಣ ಮತ್ತು ವಿಷ್ಣು ಭಗವಾನ್, ಕರೋಲ್ ಮತ್ತು ತುಳಸಿಗೆ ಅತ್ಯಾಪ್ತ ದೇವರಾಗಿ ಕಂಡು ಬಂದರು. ಇದು, ತುಳಸಿಯ ವ್ಯಕ್ತಿತ್ವದಲ್ಲಿ ವಿನೂತನ ಬಗೆಯ ಮೌಲ್ಯಗಳನ್ನು, ಇತರರ ಬಗೆಗಿನ ಮಮತೆಯನ್ನು ಬೆಳೆಸಿತು. ತಂದೆಯ ಜೊತೆಗೆ, ಕ್ರೈಸ್ತ ಮತ್ತು ಹಿಂದೂ ಧರ್ಮದ ಆಚಾರ-ವಿಚಾರಗಳನ್ನು ಸಮಾನ ಮನಸ್ಕ ರೀತಿಯಲ್ಲಿ ಚರ್ಚಿಸುತ್ತಿದ್ದಳು.

ವಿವಿಧ ಧರ್ಮಗಳ ಸಹಿಷ್ಣುತೆಯಲ್ಲಿ ಇಡೀ ಕುಟುಂಬವು ತನ್ನ ಮೌಲ್ಯತನ ಮೆರೆಯಿತು. ಇದು ತುಳಸಿಯವರ ವಿಭಿನ್ನ - ವಿಶಿಷ್ಟ ಬದುಕಿಗೆ ನಾಂದಿಯಾಯಿತು ಎನ್ನಬಹುದು. ಇತರರ ಕಷ್ಟಕ್ಕೆ ಸಹಾಯವಾಗುವುದರ ಜತೆಗೆ, ದೇಶ ರಕ್ಷಣೆ, ದೇಶಾಭಿಮಾನ, ಸಮರ ಕಲೆ ಗಳಲ್ಲಿ ಆಸಕ್ತಿ, ದೇಹದಾರ್ಡ್ಯಗಳಂತಹ ಚಟುವಟಿಕೆಗಳಲ್ಲಿಯೂ ಸಮಾನ ಆಸಕ್ತಿ ಹೊಂದಿ ದ್ದ ತುಳಸಿ ವಿಶಿಷ್ಠ ವ್ಯಕ್ತಿತ್ವ ರೂಪಿಸಿಕೊಳ್ಳುತ್ತ ಬೆಳೆಯತೊಡಗಿದರು.

ಬಾಲ್ಯದಿಂದಲೇ ಸಮಾಜ ಸೇವೆಯತ್ತ ಒಲವು ಬೆಳೆಸಿಕೊಂಡ ತುಳಸಿ, ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಪದವಿಗಳಿಸಿಕೊಂಡ ಕೂಡಲೇ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡರು. 2002ರಲ್ಲಿ 21ನೇ ವಯಸ್ಸಿನಲ್ಲಿ ಹವಾಯಿ ಸ್ಟೇಟ್ ಕೌನ್ಸಿಲ್‌ಗೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಪ್ರಥಮ ಬಾರಿಗೆ ಕಿರಿಯ ವಯಸ್ಸಿನ ಪ್ರತಿನಿಧಿ ಎಂಬ ಹಿರಿಮೆಗೆ ಪಾತ್ರವಾದರು.

ಹವಾಯಿ ಆರ್ಮಿ ನ್ಯಾಷನಲ್ ಗಾರ್ಡ್ (ಏಐಅಘೆಎ) ಯು.ಎಸ್. ಸೈನ್ಯ ಮತ್ತು ನ್ಯಾಷನಲ್ ಗಾರ್ಡ್‌ನ ಒಂದು ಘಟಕವಾಗಿದ್ದು, ತರಬೇತಿ ಪಡೆದ, ಸುಸಜ್ಜಿತ ಸೈನ್ಯ ಪಡೆಗಳೊಂದಿಗೆ ಹವಾಯಿ ರಾಜ್ಯವನ್ನು ಬೆಂಬಲಿಸುವುದು. ಫೆಡರಲ್ ಮತ್ತು ರಾಜ್ಯ ಕಾರ್ಯಾಚರಣೆಗಳಿಗೆ ಸಿದ್ಧರನ್ನಾಗಿಸುವುದು ಇದರ ಕರ್ತವ್ಯ.

ಉತ್ಕಟ ದೇಶಪ್ರೇಮ ಹೊಂದಿದ್ದ ತುಳಸಿ, 2004ರಲ್ಲಿ 12 ತಿಂಗಳುಗಳ ಕಾಲ ಇರಾಕ್ನಲ್ಲಿ ಮೆಡಿಕಲ್ ಸ್ಪೆಷಾಲಿಸ್ಟ್ ಆಫೀಸರ್ ಆಗಿ ಹವಾಯಿ ಆರ್ಮಿ ನ್ಯಾಷನಲ್ ಗಾರ್ಡ್ ಜತೆಗೆ ಯಶಸ್ವಿ ಕಾರ್ಯನಿರ್ವಹಿಸಿದರು. ಇದಕ್ಕಾಗಿ, 2005ರಲ್ಲಿ ‘ಕಾಂಬ್ಯಾಟ್ ಮೆಡಿಕಲ್ ಬ್ಯಾಡ್ಜ್’ ಪಡೆದರು. ಜತೆಗೆ, ಅಮೆರಿಕದ ಪ್ರತಿಷ್ಠಿತ ‘ಮೆರಿಟರಿಯಸ್ ಸರ್ವಿಸ್ ಮೆಡಲ್’ ಪಡೆದರು. ಇಷ್ಟೇ ಅಲ್ಲದೇ ‘ಜರ್ಮನ್ ಆರ್ಮಡ್ ಫೋರ್ಸಸ್ ಬ್ಯಾಡ್ಜ್ ಫಾರ್ ಮಿಲಿಟರಿ ಪ್ರೊಫಿಸಿ ಯೆನ್ಸಿ’ ಕೂಡ ಪಡೆದಿದ್ದಾರೆ.

ಅಮೆರಿಕವು ಇರಾಕ್ ಜತೆ ಯುದ್ಧದಲ್ಲಿ ತೊಡಗಿಕೊಂಡಿದ್ದ ಸಂದರ್ಭದಲ್ಲೂ ಇರಾಕ್ ಯುದ್ಧ ಪ್ರದೇಶಕ್ಕೆ ತೆರಳಿದ ತುಳಸಿ, ಯುದ್ಧ ಕ್ಷೇತ್ರದಲ್ಲಿನ ಸಾಹಸ, ಶೌರ್ಯ ಪ್ರದರ್ಶಿಸಿದ ಮಹಿಳೆಯಾಗಿ ಇಡೀ ಸೇನೆಯ ಗಮನಸೆಳೆದರು. 2007ರಲ್ಲಿ ಅಲಬಾಮಾ ಮಿಲಿಟರಿ ಅಕಾ ಡೆಮಿಯಲ್ಲಿ ‘ಆಫೀಸರ್ ಕ್ಯಾಂಡಿಡೇಟ್ ಗ್ರ್ಯಾಜ್ಯುಯೇಟ್’ ಆಗಿ ಉನ್ನತ ಶ್ರೇಣಿಯಲ್ಲಿ ಪಾಸಾದ ಪ್ರಥಮ ಮಹಿಳೆಯಾಗಿಯೂ ಗಮನಸೆಳೆದರು.

ಈ ತರಬೇತಿಯ ನಂತರ, 29ನೇ ಇನ್ರಂಟ್ ಬ್ರಿಗೇಡ್ ಸ್ಪೇಷಲ್ ಟ್ರೂ ಬಟಾಲಿಯನ್‌ಗೆ ‘ಸೆಕೆಂಡ್ ಲೆಫ್ಟಿನೆಂಟ್’ ಆಗಿ ನೇಮಕಗೊಂಡರು. ಸೇನೆಯ ಹೆಚ್ಚಿನ ತರಬೇತಿ ಪಡೆದಿದ್ದ ಕಾರಣದಿಂದ ‘ಆರ್ಮಿ ಪೋಲೀಸ್ ಆಫೀಸರ್’ ಆಗಿ 2008ರ ಕುವೈತ್ ಯುದ್ಧಭೂಮಿಗೆ ತೆರಳಿದರು. ಅಲ್ಲಿ ತೋರಿದ ಶೌರ್ಯ, ಸಾಹಸ, ಸಮಯಪ್ರಜ್ಞೆಗೆ ಪ್ರಶಸ್ತಿ, ಸನ್ಮಾನಗಳು ತುಳಸಿಯವರನ್ನು ಹುಡುಕಿಕೊಂಡು ಬಂದವು.

ಮಹಿಳೆಯೊಬ್ಬರ ಸಾಹಸಕ್ಕೆ ಕುವೈತ್ ನ್ಯಾಷನಲ್ ಗಾರ್ಡ್ ನಿಂದ ‘ಕುವೈತ್ ಮಿಲಿಟರಿ ಫೆಸಿಲಿಟಿ ಪ್ರಶಸ್ತಿ’ ಕೊಡಮಾಡಿದ್ದು ಕುವೈತ್ ಇತಿಹಾಸದಲ್ಲಿಯೇ ಪ್ರಥಮ ಎಂದು ದಾಖಲೆ ಯಾಯಿತು. ಇಲ್ಲಿಂದ ಹಿಂದಿರುಗಿದ ಬಳಿಕ, ರಾಜಕೀಯದಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತ 2010ರಲ್ಲಿ ಹೊನಲುಲು ನಗರಸಭೆಗೆ ಆಯ್ಕೆಯಾದರು.

2012ರಲ್ಲಿ ಅಮೆರಿಕದ ಕೆಳಮನೆ ‘ಹೌಸ್ ಆಫ್‌ ರಿಪ್ರೆಸೆಂಟೀ’ಗೆ ನಡೆದ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದಿಂದ ಗೆದ್ದರು. ಈ ಒಂದು ಗೆಲವು ಹಲವು ದಾಖಲೆಗಳನ್ನು ತುಳಸಿ ಯವರ ಹೆಸರಿಗೆ ಬರೆಯಿತೆನ್ನಬಹುದು. 31ನೇ ವಯಸ್ಸಿನಲ್ಲಿ ಕಾಂಗ್ರೆಸ್ ಸೇರಿದ ಮೊತ್ತ ಮೊದಲ ‘ಹಿಂದೂ ಮಹಿಳೆ’ ಎಂದು ಖ್ಯಾತರಾದರು. ಅಮೆರಿಕದ ಇತಿಹಾಸದ ಪ್ರಥಮ ಬಾರಿಗೆ ಸೇನಾ ಹಿನ್ನೆಲೆಯ ವ್ಯಕ್ತಿ ಸಂಸತ್ತಿಗೆ ಆಯ್ಕೆಯಾದ ದಾಖಲೆ. ಭಗವದ್ಗೀತೆಯನ್ನು

ಸಾಕ್ಷಿಯಾಗಿಟ್ಟುಕೊಂಡು ಪ್ರಮಾಣವಚನ ಸ್ವೀಕರಿಸಿದ ಮೊದಲ ಮಹಿಳೆ ಎಂಬ ಶ್ರೇಯಸ್ಸಿ ಗೂ ಪಾತ್ರರಾದರು ತುಳಸಿ ಗಬ್ಬಾರ್ಡ್. ಇದರ ಜತೆಜತೆನಲ್ಲಿಯೇ 2015ರಲ್ಲಿ ಕ್ಯಾಪ್ಟನ್ ನಿಂದ ಮೇಜರ್ ಹುದ್ದೆಗೆ ಭಡ್ತಿಯಾಗಿ ನ್ಯಾಷನಲ್ ಮೆಮೋರಿಯಲ್ ಸೆಮಿಟರಿ ಆಫ್ ದಿ ಫೆಸಿಪಿಕ್ ಮತ್ತು ಹವಾಯಿ ಆರ್ಮಿ ನ್ಯಾಷನಲ್ ಗಾರ್ಡ್‌ನಲ್ಲಿ ಕಾರ್ಯನಿರ್ವಹಿಸಿ, 2020 ರಲ್ಲಿ ಯು.ಎಸ್ ಆರ್ಮಿ ರಿಸರ್ವ್ 351ನೇ ಸಿವಿಲ್ ಅಫರ್ಸ್ ಕಮಾಂಡ್‌ಗೆ ಭಡ್ತಿ ಪಡೆದರು.

2021ರಲ್ಲಿ ಲೆಪ್ಟಿನಂಟ್ ಕರ್ನಲ್ ಆಗಿ ಆಫ್ರಿಕಾದಲ್ಲಿ ನಡೆದ ವಿಶೇಷ ಕಾರ್ಯಾಚರಣೆ ಯಲ್ಲಿಯೂ ಭಾಗಿಯಾಗಿದ್ದಾರೆ. ನಂತರ, ಟಾಪ್ ಸೀಕ್ರೆಟ್ ಸೆಕ್ಯೂರಿಟಿ ಕ್ಲಿಯರೆ ಆಫೀಸರ್ ಆಗಿಯೂ 354ನೇ ರೆಜಿಮೆಂಟ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ದಿಟ್ಟ ಸ್ವಭಾವದ ಮಹಿಳೆ ಯಾಗಿ, ನೇರ ನಡೆ ನುಡಿಯ ವ್ಯಕ್ತಿತ್ವದ ಜನಪ್ರತಿನಿಧಿಯಾಗಿ ದೇಶದ ಪ್ರೀತಿ ವಿಶ್ವಾಸಗಳಿಸಿದ ತುಳಸಿ, ಕಾಲಾನಂತರದಲ್ಲಿ, ಕಂಡ ಕಂಡ ದೇಶಗಳಿಗೆ ಯುದ್ಧದ ನೆಪದಲ್ಲಿ ಅಮೇರಿಕಾದ ಯುವ ಯೋಧರನ್ನು ಕಳಿಸುವುದನ್ನು ವಿರೋಧಿಸುತ್ತ ಬಂದರು.

ಇದು ಸ್ವಪಕ್ಷದವರಿಗೂ ಇರುಸುಮುರುಸು ಉಂಟುಮಾಡಿತು. ಆದರೂ ದೇಶದ, ಯುವ ಜನತೆಯ ಹಿತದೃಷ್ಟಿಯಿಂದ ತಮ್ಮ ನಿಲುವಿಗೆ ಅಂಟಿಕೊಂಡು ಆಡಳಿತದ ತಪ್ಪು ನಡೆ ಗಳನ್ನು ಟೀಕಿಸುತ್ತ ಬಂದರು. ಗರ್ಭಪಾತ ನಿಯಮಗಳು, ವಿದೇಶಾಂಗ ನೀತಿ, ಟ್ರಾನ್ಸ್‌ಡೆಂರ್ ಹಕ್ಕು ಎಂಬ ಬೇಡದ ಹಕ್ಕು ಸ್ಥಾಪನೆಗೆ ಕಟುವಿರೋಧ, ಗಡಿ ವಿಚಾರದಲ್ಲಿ ನಿರ್ಲಕ್ಷ್ಯತನ ಸೇರಿದಂತೆ ಇನ್ನು ಹಲವು ವಿಚಾರಗಳಲ್ಲಿ ಆಡಳಿತ ಸರಕಾರವನ್ನು ಬಹಿರಂಗವಾಗೇ ವಿರೋಧಿಸಿದರು.

ದೇಶದ ನಾಗರಿಕರ ಅಭಿಪ್ರಾಯಗಳನ್ನು, ನಾಡಿಮಿಡಿತವನ್ನು ನಿಖರವಾಗಿ ಬಲ್ಲ ತುಳಸಿಯ ವ್ಯಕ್ತಿತ್ವದಿಂದಾಗಿಯೇ ಟ್ರಂಪ್ ತಮ್ಮ ಜತೆಗೆ ಚುನಾವಣೆಯಲ್ಲಿ ತುಳಸಿಯವರನ್ನೂ ಭಾಗಿ ದಾರರನ್ನಾಗಿಸಿದರು. 2024ರಲ್ಲಿ ಟ್ರಂಪ್ ನೇತೃತ್ವದ ಸರಕಾರ ಅಧಿಕಾರ ಬಂದ ಕೂಡಲೇ ತುಳಸಿಯವರನ್ನು ರಾಷ್ಟ್ರೀಯ ಗುಪ್ತಚರ ಇಲಾಖೆಯ ಮುಖ್ಯಸ್ಥೆಯಾನ್ನಾಗಿ ನಾಮಕರಣ ಗೊಳಸಿದರು.

ಅಮೆರಿಕದ ಸೆನೆಟ್ ತುಳಸಿಯವರನ್ನು ಎಂಟನೇ ಮುಖ್ಯಸ್ಥರನ್ನಾಗಿ (Director of National Intelligence ) ಚುನಾಯಿಸಿತು. ಇದಕ್ಕೂ ಮೊದಲು 2013 ರಿಂದ 2021ರ ವರೆಗಿನ ಹೌಸ್ ಕಮಿಟಿಯ ನೂರಾರು ಯೋಜನೆಗಳ ಜಾರಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. Focusing on military, foreign affairs, financial issues, Armed services committee ಯ ದೀರ್ಘಾವಧಿಯ ಸದಸ್ಯ ರಾಗಿಯೂ ಸೇವೆ ಸಲ್ಲಿದ ಅನುಭವ ತುಳಸಿಯವರಿಗಿದೆ.

ಮತ್ತೊಮ್ಮೆ ಕಾಂಗ್ರೆಸ್‌ಗೆ ಆಯ್ಕೆಯಾಗಿ ಬಂದ ನಂತರ, ಮತ್ತಷ್ಟು ಜವಾಬ್ಧಾರಿಯುತ ಕಾರ್ಯಗಳಾದ Armed service subcommittee on intelligence, counterterrorism efforts ಸೇರಿದಂತೆ 2018-19ರ ಸೈಬರ್ ಸೆಕ್ಯೂರಿಟಿ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆ ಒಳಗೊಂಡ ಮಿಲಿಟರಿ ಆಪರೇಷ ಇತ್ಯಾದಿಗಳನ್ನು ಸಮ ರ್ಪಕವಾಗಿ ನಿರ್ವಹಿಸಿದ ಖ್ಯಾತಿ ತುಳಸಿಯವರಿಗಿದೆ.

ಜನೆವರಿ 22ರ 2013ರಂದು Democratic National Committee (DNC)Wæ Vice Chair &person ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಪ್ರತೀತಿ ಇವರದು. ಕಾರಾಣಾಂತರ ಗಳಿಂದ 2016ಕ್ಕೆ ಪಕ್ಷದಲ್ಲಿನ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬರುತ್ತಾರೆ.

2019ರಲ್ಲಿಅಮೆರಿಕದ 2020ರ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಪ್ರಚಾರ ಆರಂಭಿಸುವ ಮೂ ಲಕ, ಯುದ್ಧದಲ್ಲಿ ಪಾಲ್ಗೊಂಡು ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸಲು ಸಿದ್ಧರಾದ ಪ್ರಥಮ ಮಹಿಳೆ ಎಂದೂ ದಾಖಲೆ ಬರೆಯುತ್ತಾರೆ. ಇದೆಲ್ಲವೂ ಒಬ್ಬ ಮಹಿಳೆಯಾಗಿ, ತನ್ನ ಸ್ವಸಾ ಮರ್ಥ್ಯದಿಂದಲೇ ತನ್ನ ರಾಷ್ಟ್ರದ ಅತ್ಯಂತ ಉನ್ನತ ಹುದ್ದೆಗೆ ತಲುಪಿದ, ನಿಷ್ಠಾವಂತ ಸೇನಾಧಿಕಾರಿ, ಹೆಮ್ಮೆಯ ಹಿಂದೂ ಮಹಿಳೆ ಎಂದೇ ವಿಶ್ವದಾದ್ಯಂತ ಗುರುತಿಸಿಕೊಂಡಿರುವ ತುಳಸಿ ಗಬ್ಬಾರ್ಡ್ ಅವರದು ಬಹುದೊಡ್ಡ ಹೋರಾಟದ ಬದುಕು!

ವಿರೋಧಿಗಳನ್ನು ಬದುಕಿನ ಹಾದಿಯ ಬೆನ್ನಿಗೆ ಕಟ್ಟಿಕೊಂಡು ಸಾಧನೆಯ ಶಿಖರದತ್ತ ಸಾಗಿದ ಧಿರೋದಾತ್ತ ಮಹಿಳೆ. ಇದೆಲ್ಲ ಹೇಗೆ ಸಾಧ್ಯವಾಯಿತೆಂದು ಕೇಳಿದರೆ, ಭಗವದ್ಗೀತೆ, ತಮ್ಮ ತಾಯಿ ಮತ್ತು ಶ್ರೀಕೃಷ್ಣನ ಕಡೆಗೆ ಬೆರಳು ತೋರುತ್ತಾರೆ, ಇವರೇ ನನ್ನನ್ನು ಮುನ್ನಡೆಸಿದ್ದು ಎಂದು!

2014ರ ಸಂದರ್ಭದಲ್ಲಿ ದಿಲ್ಲಿಯ ಅಕ್ಷರಧಾಮಕ್ಕೆ ಭೇಟಿ ಕೊಟ್ಟಾಗ, ಚಿಕ್ಕಮಕ್ಕಳಂತೆ ಕುಣಿದು ಸಂಭ್ರಮಿಸಿದ ತುಳಸಿ, ‘ಹುಟ್ಟೂರು ಯಾವುದಾದರೇನಂತೆ, ಭೂಲೋಕದ ಅತ್ಯಂತ ಶ್ರೇಷ್ಠ ಧರ್ಮದ ದೇಶಕ್ಕೆ ಬಂದಿದ್ದೇನೆ. ಇದರ ಭಾಗವಾಗಿದ್ದಕ್ಕೆ ನನಗೆ ಹೆಮ್ಮೆಯಿದೆ’ ಎಂದು 2014ರ ಡಿ.16ರಂದು ಅಂದಿನ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಅವರ ಎದುರು ಹೆಮ್ಮೆ ಯಿಂದ ಹೇಳಿಕೊಂಡಿದ್ದರು.

ಕರ್ಮಯೋಗ, ಜ್ಞಾನಯೋಗ ಮತ್ತು ಮಾತು-ಕೃತಿಯ ನಡುವೆ ಇರಬೇಕಾದ ಆಚರಣೆ ಕುರಿತು ಶ್ರೀಕೃಷ್ಣ ಹೇಳಿದ ಮಾತುಗಳನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಇಂದಿಗೂ ಅವುಗಳನ್ನು ಅನುಸರಿಸುತ್ತ ಬರುತ್ತಿzರೆ. ಶ್ರೀಕೃಷ್ಣನ ಕೆಲ ಸಾಕ್ಷಾ ತ್ಕಾರದ ಮಾತುಗಳಾದ;

ಮಹಾಪುರುಷರು ಯಾವುದೇ ಕ್ರಿಯೆ ಮಾಡಿದರೂ, ಸಾಮಾನ್ಯ ಜನರು ಅದನ್ನು ಅನುಸರಿ ಸುತ್ತಾರೆ. ಕಾರ್ಯಗಳ ಮೂಲಕ ಅವನು ಯಾವ ಮಾನದಂಡಗಳನ್ನು ನಿಗದಿಪಡಿಸು ತ್ತಾನೋ, ಇಡೀ ಪ್ರಪಂಚ ಅದನ್ನು ಅನುಸರಿಸುತ್ತದೆ.

ನಿಸ್ವಾರ್ಥ ಸೇವೆಯ ಮೂಲಕ, ನಿಶ್ಚಿತ ಗೆಲವು ಮತ್ತು ನಿಮ್ಮ ಗುರಿಗಳನ್ನು ತಲುಪುತ್ತೀರಿ ಮನಸ್ಸು, ಇಂದ್ರಿಯಗಳು, ಉಸಿರಾಟ ಮತ್ತು ಭಾವನೆಗಳ ಚಟುವಟಿಕೆಗಳ ಮೂಲಕ ದೇವರ ಶಕ್ತಿಯು ಎಲ್ಲಾ ಸಮಯದಲ್ಲೂ ನಿಮ್ಮೊಂದಿಗಿರುತ್ತದೆ ಮತ್ತು ನಿಮ್ಮನ್ನು ಕೇವಲ ಸಾಧನ ವಾಗಿ ಬಳಸಿಕೊಂಡು ನಿರಂತರವಾಗಿ ಎಲ್ಲಾ ಕೆಲಸಗಳನ್ನು ಮಾಡುತ್ತಿದೆ. ಎಂಬ ಗೀತೆಯ ಪ್ರೇರಣಾದಾಯಕ ಶ್ಲೋಕಗಳನ್ನು ಸಲೀಸಾಗಿ ಹೇಳಬಲ್ಲವರಾಗಿದ್ದಾರೆ.

ಎಲ್ಲೋ ದೂರದ ತುಳಸಿಯವರು ನಮ್ಮ ನೆಲದ ಸೊಗಡು ಸಂಸ್ಕೃತಿ ಇತ್ಯಾದಿ ಅರಿತು, ಕಲಿತು, ಅನುಸರಿಸುತ್ತ ದೊಡ್ಡಮಟ್ಟಕ್ಕೆ ಬೆಳೆಯಬಹುದಾದರೆ, ನಾವು ನಮ್ಮ ಯುವ ಜನತೆ ಯನ್ನು ಸಹ ಇಂತಹ ಸ್ಪೂರ್ತಿದಾಯಕ ವ್ಯಕ್ತಿತ್ವದವರನ್ನಾಗಿ ಬೆಳೆಸಿ, ದೇಶದ ರಕ್ಷಣಾತ್ಮಕ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಸಹಕರಿಸಬಾರದೇಕೆ ಎಂಬ ಹಂಬಲ ನಮ್ಮೆಲ್ಲರಲ್ಲಿ ಬರಬೇಕು. ಎಲ್ಲರ ಮನೆ-ಮನದಲ್ಲೂ ತುಳಸಿ ಬೆಳೆಯಲಿ; ತುಳಸಿಯಂತಹ ದಿಟ್ಟ ಹೆಣ್ಣು ಮಕ್ಕಳೂ ಬೆಳೆಯಲಿ!