ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಪೈಲಟ್‌ ಮೆರೆದ ಮಾನವೀಯತೆ

ವಿಮಾನದ ಕ್ಯಾಪ್ಟನ್ ಅಥವಾ ಪೈಲಟ್ ಒಬ್ಬರು, ಪ್ರಯಾಣಿಕನೊಬ್ಬನ ಕಳೆದುಹೋದ ವಸ್ತುವನ್ನು ಹುಡುಕಲು ಹೋಗುವುದು ಅವರ ಕೆಲಸದ ಪಟ್ಟಿಯಲ್ಲಿ ಬರುವುದಿಲ್ಲ. ಆದರೂ, ಆ ಪೈಲಟ್ ಜಾನ್ ಅವರಿಂದ ಕಾಫಿ ಶಾಪ್ ಎಲ್ಲಿದೆ, ಫೋನ್ ಎಲ್ಲಿಟ್ಟಿರಬಹುದು ಎಂಬ ವಿವರಗಳನ್ನು ಪಡೆದುಕೊಂಡರು.

Vishweshwar Bhat Column: ಪೈಲಟ್‌ ಮೆರೆದ ಮಾನವೀಯತೆ

-

ಸಂಪಾದಕರ ಸದ್ಯಶೋಧನೆ

ಜಗತ್ತಿನಲ್ಲಿ ನಾವು ಎಷ್ಟೋ ಬಾರಿ ‘ಇದು ನನ್ನ ಕೆಲಸವಲ್ಲ’, ‘ನನಗೇಕೆ ಬೇಕು ಈ ಉಸಾಬರಿ?’ ಎಂಬ ಮಾತುಗಳನ್ನು ಕೇಳುತ್ತಿರುತ್ತೇವೆ. ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸ, ಸಮಯ ಮತ್ತು ಜವಾಬ್ದಾರಿಗಳ ಒತ್ತಡದಲ್ಲಿ ಮುಳುಗಿ ಹೋಗಿರುವ ಈ ಕಾಲದಲ್ಲಿ, ಅಪರಿಚಿತರೊಬ್ಬರ ಸಹಾಯಕ್ಕೆ ನಿಲ್ಲುವ ಮನಸ್ಸುಗಳು ತೀರಾ ವಿರಳ. ಆದರೆ, ಅಮೆರಿಕದ ಶಿಕಾಗೋ ವಿಮಾನ ನಿಲ್ದಾಣದಲ್ಲಿ ನಡೆದ ಒಂದು ಘಟನೆಯು, ‘ಮಾನವೀಯತೆ ಇನ್ನೂ ಜೀವಂತವಾಗಿದೆ’ ಎಂಬುದಕ್ಕೆ ಸಾಕ್ಷಿಯಾಯಿತು.

ಪ್ರೇರಣಾದಾಯಕ ಭಾಷಣಕಾರರಾದ ಜಾನ್ ಓ’ಲಿಯರಿ ಅವರು ಹಂಚಿಕೊಂಡ ಈ ಅನುಭವ, ಕರ್ತವ್ಯದ ಆಚೆಗಿನ ಪ್ರೀತಿ ಮತ್ತು ಕಾಳಜಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಅದು ಅಕ್ಟೋಬರ್ 2025ರ ಸಮಯ. ಶಿಕಾಗೋದ ಮಿಡ್‌ವೇ ವಿಮಾನ ನಿಲ್ದಾಣದಿಂದ ಹೊರಡಲು ಸಿದ್ಧವಾಗಿದ್ದ ಸೌತ್‌ ವೆಸ್ಟ್ ಏರ್‌ಲೈನ್ಸ್‌ನ ವಿಮಾನವೊಂದರಲ್ಲಿ ಜಾನ್ ಓ’ಲಿಯರಿ ಕುಳಿತಿದ್ದರು.

ಅಂದು ಅವರಿಗೆ ನ್ಯಾಶ್ವಿ ನಗರದಲ್ಲಿ ಸಾಲುಸಾಲು ಕಾರ್ಯಕ್ರಮಗಳಿದ್ದವು. ವಿಮಾನವೇರಿ, ತಮ್ಮ ಬ್ಯಾಗ್‌ಗಳನ್ನೆಲ್ಲ ಜೋಡಿಸಿ ಸೀಟಿನಲ್ಲಿ ಕುಳಿತ ಜಾನ್, ಅಭ್ಯಾಸಬಲದಂತೆ ತಮ್ಮ ಜೇಬಿಗೆ ಕೈ ಹಾಕಿದರು. ಆ ಕ್ಷಣ ಅವರಿಗೆ ಆಘಾತವಾಯಿತು. ಅವರ ಜೇಬಿನಲ್ಲಿದ್ದ ಫೋನ್ ನಾಪತ್ತೆಯಾಗಿತ್ತು!

ಇಂದಿನ ದಿನಗಳಲ್ಲಿ ಫೋನ್ ಎಂಬುದು ಕೇವಲ ಮಾತನಾಡುವ ಸಾಧನವಲ್ಲ; ಅದು ನಮ್ಮ ಜೀವನದ ಕೀಲಿಕೈ ಇದ್ದಂತೆ. ಜಾನ್ ಅವರಿಗೆ ಅದು ಅಂದು ಅತ್ಯಂತ ಅಗತ್ಯವಾಗಿತ್ತು. ನೆನಪು ಮಾಡಿಕೊಂಡಾಗ, ಅವರು ಬೇರೊಂದು ಟರ್ಮಿನಲ್‌ನಲ್ಲಿದ್ದ ಕಾಫಿ ಶಾಪ್‌ಗೆ ಹೋಗಿದ್ದಾಗ ಅಲ್ಲಿಯೇ ಫೋನ್ ಬಿಟ್ಟು ಬಂದಿರಬಹುದು ಎಂಬುದು ಹೊಳೆಯಿತು.

ಇದನ್ನೂ ಓದಿ: Vishweshwar Bhat Column: ಎಟಿಸಿ ಕಾರ್ಯನಿರ್ವಹಣೆ ಹೇಗೆ ?

ತಕ್ಷಣವೇ ಅವರು ವಿಮಾನದ ಸಿಬ್ಬಂದಿಯನ್ನು ಕರೆದು ವಿಷಯ ತಿಳಿಸಿದರು. “ಕಾಫಿ ಶಾಪ್‌ನಲ್ಲಿ ಫೋನ್ ಬಿಟ್ಟು ಬಂದಿದ್ದೇನೆ, ನಾನು ಓಡಿ ಹೋಗಿ ಅದನ್ನು ತರಬಹುದೇ?" ಎಂದು ಕೇಳಿದರು. ಆದರೆ ವಿಮಾನಯಾನದ ಕಠಿಣ ನಿಯಮಗಳು ಅದಕ್ಕೆ ಒಪ್ಪುವುದಿಲ್ಲ. ಗಗನಸಖಿ, “ಕ್ಷಮಿಸಿ ಸರ್, ನೀವು ಈಗ ವಿಮಾನದಿಂದ ಕೆಳಗಿಳಿದರೆ, ಮತ್ತೆ ಹತ್ತಲು ಸಾಧ್ಯವಿಲ್ಲ. ಭದ್ರತಾ ನಿಯಮಗಳ ಪ್ರಕಾರ ನೀವು ಈ ವಿಮಾನವನ್ನು ತಪ್ಪಿಸಿಕೊಳ್ಳಬೇಕಾಗುತ್ತದೆ" ಎಂದು ವಿವರಿಸಿದರು.

ಜಾನ್ ಅವರಿಗೆ ದಿಕ್ಕು ತೋಚದಂತಾಯಿತು. ಒಂದು ವೇಳೆ ಅವರು ವಿಮಾನದಿಂದ ಇಳಿದರೆ, ನ್ಯಾಶ್ವಿಯಲ್ಲಿ ನಡೆಯಬೇಕಿದ್ದ ತಮ್ಮ ಪ್ರಮುಖ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳಬೇಕಾಗುತ್ತಿತ್ತು. ಹೋಗದಿದ್ದರೆ, ಇಡೀ ದಿನ ಸಂಪರ್ಕವಿಲ್ಲದೆ ಪರದಾಡಬೇಕಿತ್ತು. ಆಗ ನಡೆದಿದ್ದು ಒಂದು ಅನಿರೀಕ್ಷಿತ ಪವಾಡ. ಕಾಕ್‌ಪಿಟ್‌ನಿಂದ ಹೊರಬಂದ ಪೈಲಟ್ ಒಬ್ಬರು ಈ ಮಾತುಕತೆಯನ್ನು ಕೇಳಿಸಿ ಕೊಂಡರು.

ಅವರು ನೇರವಾಗಿ ಜಾನ್ ಅವರ ಬಳಿ ಬಂದು, ‘ಪ್ರಯಾಣಿಕರು ಈಗ ವಿಮಾನದಿಂದ ಹೊರ ಹೋಗಲು ಸಾಧ್ಯವಿಲ್ಲ, ಅದು ನಿಯಮ. ಆದರೆ, ನಾನಿನ್ನೂ ಹೋಗಬಹುದು" ಎಂದರು. ಇದು ಊಹೆಗೂ ನಿಲುಕದ ಸಂಗತಿಯಾಗಿತ್ತು. ವಿಮಾನದ ಕ್ಯಾಪ್ಟನ್ ಅಥವಾ ಪೈಲಟ್ ಒಬ್ಬರು, ಪ್ರಯಾಣಿಕನೊಬ್ಬನ ಕಳೆದುಹೋದ ವಸ್ತುವನ್ನು ಹುಡುಕಲು ಹೋಗುವುದು ಅವರ ಕೆಲಸದ ಪಟ್ಟಿಯಲ್ಲಿ ಬರುವುದಿಲ್ಲ. ಆದರೂ, ಆ ಪೈಲಟ್ ಜಾನ್ ಅವರಿಂದ ಕಾಫಿ ಶಾಪ್ ಎಲ್ಲಿದೆ, ಫೋನ್ ಎಲ್ಲಿಟ್ಟಿರಬಹುದು ಎಂಬ ವಿವರಗಳನ್ನು ಪಡೆದುಕೊಂಡರು.

“ನಾನೊಂದು ಪ್ರಯತ್ನ ಮಾಡುತ್ತೇನೆ, ನೋಡೋಣ" ಎಂದು ಹೇಳಿ, ವಿಮಾನದಿಂದ ಇಳಿದು ಟರ್ಮಿನಲ್‌ನತ್ತ ಓಡಿದರು. ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಕುತೂಹಲದಿಂದ ಕಾಯು ತ್ತಿದ್ದರು. ಪೈಲಟ್ ವಾಪಸ್ ಬರುತ್ತಾರೆಯೇ? ಫೋನ್ ಸಿಗುತ್ತದೆಯೇ? ಅಥವಾ ಈ ಹುಡುಕಾಟದಿಂದ ವಿಮಾನ ತಡವಾಗುತ್ತದೆಯೇ? ಎಂಬ ಆತಂಕ ಎಲ್ಲರಲ್ಲೂ ಇತ್ತು. ಸುಮಾರು ಹತ್ತು ನಿಮಿಷಗಳು ಕಳೆದವು.

ಕೊನೆಗೆ ಆ ಪೈಲಟ್ ವಿಮಾನದೊಳಗೆ ಮರಳಿದರು. ಅವರು ಒಳಗೆ ಬರುವಾಗ ಉದ್ದೇಶಪೂರ್ವಕ ವಾಗಿ ತಲೆಯನ್ನು ಕೆಳಗೆ ಹಾಕಿಕೊಂಡು, ಬೇಸರದಿಂದ ನಡೆದು ಬರುತ್ತಿರುವಂತೆ ನಟಿಸಿದರು. ಇದನ್ನು ಕಂಡ ಜಾನ್, ‘ಬಹುಶಃ ಫೋನ್ ಸಿಗಲಿಲ್ಲ’ ಎಂದುಕೊಂಡು ನಿರಾಸೆ ಗೊಂಡರು. ಆದರೆ, ಜಾನ್ ಅವರ ಸೀಟಿನ ಹತ್ತಿರ ಬರುತ್ತಿದ್ದಂತೆ, ಪೈಲಟ್ ಮುಖದಲ್ಲಿ ದೊಡ್ಡದೊಂದು ನಗು ಅರಳಿತು. ಅವರು ತಮ್ಮ ಕೈಯಲ್ಲಿದ್ದ ಫೋನನ್ನು ಮೇಲೆತ್ತಿ ಹಿಡಿದರು!