ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hardeep Singh Puri Column: ಭಾರತೀಯ ರಾಜಕಾರಣದಲ್ಲಿ ಹೊಸ ವ್ಯಾಖ್ಯಾನದ ಉದಯ

ಹಲವು ವರ್ಷಗಳಿಂದ ಬಿಹಾರದ ಕುರಿತಾದ ಹೆಚ್ಚಿನ ವ್ಯಾಖ್ಯಾನವು ರಾಜ್ಯವನ್ನು ತಟಸ್ಥ ವಾಗಿ ನಿಂತಿರುವಂತೆ ಪರಿಗಣಿಸಿತು. ಚುನಾವಣೆಗಳನ್ನು ಜಾತಿ ಆಧಾರಿತ ಪ್ರಕ್ರಿಯೆಗಳನ್ನಾಗಿ ನೋಡ ಲಾಗುತ್ತಿತ್ತು, ಜನಸಂಖ್ಯೆಯ ಸಾಮಾಜಿಕ ಸ್ಥಿತಿಗತಿಯು ಯಾಂತ್ರಿಕವಾಗಿ ರಾಜಕೀಯ ಫಲಿತಾಂಶ ಗಳಾಗಿ ಪರಿವರ್ತನೆಯಾಗುತ್ತಿತ್ತು ಎಂದು ಭಾವಿಸಲಾಗಿತ್ತು.

ಭಾರತೀಯ ರಾಜಕಾರಣದಲ್ಲಿ ಹೊಸ ವ್ಯಾಖ್ಯಾನದ ಉದಯ

-

Ashok Nayak
Ashok Nayak Nov 18, 2025 10:44 AM

ಕೇಳು ಜನಮೇಜಯ

ಹರ್‌ದೀಪ್‌ ಸಿಂಗ್‌ ಪುರಿ

ಬಿಹಾರದ ಚುನಾವಣೆಗಳು ಒಂದು ಕಾಲದಲ್ಲಿ ಮತಗಟ್ಟೆ ವಶಪಡಿಸಿಕೊಳ್ಳುವು ದರೊಂದಿಗೆ ಮತ್ತು ಹಿಂಸಾಚಾರದೊಂದಿಗೆ ಸಂಬಂಧ ಹೊಂದಿದ್ದವು. ಇತ್ತೀಚಿನ ವರ್ಷಗಳಲ್ಲಿ, ಆ ಸನ್ನಿವೇಶಗಳು ಬಹಳ ಕಡಿಮೆಯಾಗಿವೆ. ದೃಢವಾದ ಭದ್ರತಾ ಕ್ರಮಗಳು, ಆರ್ಥಿಕ ಅಭಿವೃದ್ಧಿಯ ಜತೆಗೆ ಗಲಭೆಯಿಂದ ಬಾಧಿತ ಪ್ರದೇಶಗಳನ್ನು ಹಿಂದಿಕ್ಕಲಾಗಿದೆ. ವ್ಯಾಪಾರಿಗಳು ಈಗ ತಮ್ಮ ಅಂಗಡಿಗಳನ್ನು ಹೆಚ್ಚು ಸಮಯ ತೆರೆದಿರುತ್ತಾರೆ, ವಿದ್ಯಾರ್ಥಿಗಳು ಹೆಚ್ಚಿನ ಆತ್ಮವಿಶ್ವಾಸದಿಂದ ಪ್ರಯಾಣ ಮಾಡುತ್ತಾರೆ ಮತ್ತು ಕುಟುಂಬಗಳು ಕಡಿಮೆ ಆತಂಕ ದೊಂದಿಗೆ ಸಾರ್ವಜನಿಕ ಜೀವನವನ್ನು ಅನುಭವಿಸುತ್ತಾರೆ.

ಬಿಹಾರದ ಜನರು ಸ್ಥಾನಗಳ ಲೆಕ್ಕಾಚಾರವನ್ನೂ ಮೀರಿದಂಥ ಅಧಿಕ ತೂಕವನ್ನು ಹೊಂದಿ ರುವ ಜನಾದೇಶವನ್ನು ನೀಡಿದ್ದಾರೆ. ವಿಧಾನಸಭೆಯ 243 ಸ್ಥಾನಗಳ ಪೈಕಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್‌ಡಿಎ) 202 ಸ್ಥಾನಗಳಲ್ಲಿ ಗೆಲುವು ಲಭಿಸಿದ್ದು, ಅದರಲ್ಲಿ ಬಿಜೆಪಿಯೊಂದೇ ೮೯ ಸ್ಥಾನಗಳನ್ನು ಗಳಿಸಿದೆ, ಇದು ಆ ರಾಜ್ಯದಲ್ಲಿ ಪಕ್ಷದ ಇದುವರೆಗಿನ ಅತ್ಯುತ್ತಮ ಸಾಧನೆಯಾಗಿದೆ.

ವಿವಿಧ ಮೈತ್ರಿಕೂಟಗಳಲ್ಲಿ ದಶಕಗಳಿಂದ ಬಿಹಾರದ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿದ್ದ ಮಹಾಘಟಬಂಧನ್ ಇದೀಗ ಕೇವಲ ೩೪ ಸ್ಥಾನಗಳಿಗೆ ಕುಸಿದಿದೆ. ೭.೪ ಕೋಟಿಗೂ ಅಧಿಕ ನೋಂದಾಯಿತ ಮತದಾರರಿರುವ ಈ ರಾಜ್ಯದಲ್ಲಿ ಈ ಸಲ ಶೇ.67.13ರಷ್ಟು ಮತದಾನವಾಗಿದ್ದು, ಇದು ಬಿಹಾರದ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ತೀವ್ರ ಸ್ಪರ್ಧೆ ಇದ್ದಂಥ ಚುನಾವಣೆಗಳಲ್ಲಿ ಒಂದಾಗಿದೆ ಮತ್ತು ಫಲಿತಾಂಶವು ನಿಜವಾದ ಪ್ರಜಾಪ್ರಭುತ್ವದ ಆಳದ ಅರಿವನ್ನು ಮೂಡಿಸುತ್ತದೆ.

ಹಲವು ವರ್ಷಗಳಿಂದ ಬಿಹಾರದ ಕುರಿತಾದ ಹೆಚ್ಚಿನ ವ್ಯಾಖ್ಯಾನವು ರಾಜ್ಯವನ್ನು ತಟಸ್ಥ ವಾಗಿ ನಿಂತಿರುವಂತೆ ಪರಿಗಣಿಸಿತು. ಚುನಾವಣೆಗಳನ್ನು ಜಾತಿ ಆಧಾರಿತ ಪ್ರಕ್ರಿಯೆಗಳನ್ನಾಗಿ ನೋಡಲಾಗುತ್ತಿತ್ತು, ಜನಸಂಖ್ಯೆಯ ಸಾಮಾಜಿಕ ಸ್ಥಿತಿಗತಿಯು ಯಾಂತ್ರಿಕವಾಗಿ ರಾಜಕೀಯ ಫಲಿತಾಂಶಗಳಾಗಿ ಪರಿವರ್ತನೆಯಾಗುತ್ತಿತ್ತು ಎಂದು ಭಾವಿಸಲಾಗಿತ್ತು.

ಇದನ್ನೂ ಓದಿ: Vishweshwar Bhat Column: ಡಾ.ಸಿಂಗ್‌ ವಿತ್ತ ಸಚಿವರಾಗಿದ್ದು ಹೇಗೆ ?

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತೀಯ ರಾಜಕೀಯದ ವ್ಯಾಕರಣವು ಅಭಿವೃದ್ಧಿ, ಎಲ್ಲರನ್ನೂ ಒಳಗೊಳ್ಳುವುದು ಮತ್ತು ರಾಜ್ಯದ ಸಾಮರ್ಥ್ಯ ವನ್ನು ಗುರುತಿಸಿ ಅದನ್ನು ಬೆಳಸುವ ನಿರ್ಣಾಯಕ ವಿಧಾನವಾಗಿ ಬದಲಾಗಿದೆ ಮತ್ತು ಬಿಹಾರದ ಮತದಾರರು ಆ ಬದಲಾವಣೆಗೆ ಅತ್ಯಂತ ಸ್ಪಷ್ಟತೆಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.

2025ರ ಫಲಿತಾಂಶವು ಹೆಚ್ಚು ಬೇಡಿಕೆಯಿರುವ ಮತದಾರರ ಮನದಾಳವನ್ನು ಬಹಿರಂಗ ಪಡಿಸುತ್ತದೆ; ಅವರು ಅಭದ್ರತೆ ಮತ್ತು ಸಂವೇದನಾರಹಿತ ಬಿಹಾರ ಮತ್ತು ಸುಧಾರಿತ ಆಡಳಿತದ ಬಿಹಾರದ ನಡುವಿನ ವ್ಯತ್ಯಾಸವನ್ನು ನೋಡಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಜನಸಮೂಹದ ನಂತರ ಈ ಚುನಾವಣೆಯು ಜವಾಬ್ದಾರಿಯುತ ಪ್ರಜ್ಞೆಯನ್ನು ಹೊಂದಿದೆ ಎಂಬುದನ್ನು ಅನೇಕ ನಾಗರಿಕರು ಸಂಭಾ ಷಣೆಗಳು ಮತ್ತು ಮತದಾನದ ಮಾದರಿಗಳಲ್ಲಿ ವ್ಯಕ್ತಪಡಿಸಿದ್ದಾರೆ.

ದೇಶದ ವಿಶಾಲ ಪಯಣದಲ್ಲಿ ಬಿಹಾರ ಎಲ್ಲಿ ನಿಲ್ಲಬೇಕೆಂದು ಅವರು ಬಯಸುತ್ತಾರೆ ಎಂಬುದರ ಕುರಿತು ಅವರು ತಮ್ಮದೇ ಆದ ತೀರ್ಮಾನ ಕೈಗೊಂಡಿದ್ದಾರೆ. ಈ ಪರಿವರ್ತನೆಗೆ ಆಡಳಿತ ವಿತರಣೆಯು ಆಧಾರವಾಗಿದೆ. ಕಳೆದೊಂದು ದಶಕದಲ್ಲಿ ಬಿಹಾರವು 55000 ಕಿಲೋ ಮೀಟರ್‌ಗಳಿಗೂ ಅಧಿಕ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಿದೆ ಅಥವಾ ಮೇಲ್ದರ್ಜೆ ಗೇರಿಸಿದೆ.

ಇದು ಗ್ರಾಮಗಳನ್ನು ಮಾರುಕಟ್ಟೆಗಳು, ಶಾಲೆಗಳು ಮತ್ತು ಆರೋಗ್ಯ ಕೇಂದ್ರಗಳಿಗೆ ಸಂಪ ರ್ಕಿಸುತ್ತದೆ. ಕೇಂದ್ರ ಯೋಜನೆಗಳು ಮತ್ತು ರಾಜ್ಯ ಕಾರ್ಯಕ್ರಮಗಳ ಸಂಯೋ ಜನೆಯ ಮೂಲಕ ಲಕ್ಷಾಂತರ ಮನೆಗಳು ವಿದ್ಯುತ್, ಕುಡಿಯುವ ನೀರು ಮತ್ತು ಸಾಮಾಜಿಕ ಭದ್ರತೆ ಯನ್ನು ಪಡೆದಿವೆ. ಸೌಭಾಗ್ಯ ಮತ್ತು ಸಂಬಂಧಿತ ಉಪಕ್ರಮಗಳ ಅಡಿಯಲ್ಲಿ, ಬಿಹಾರದಲ್ಲಿ 35 ಲಕ್ಷಕ್ಕೂ ಅಧಿಕ ಮನೆಗಳನ್ನು ವಿದ್ಯುದೀಕರಣಗೊಳಿಸಲಾಗಿದ್ದು, ರಾಜ್ಯವನ್ನು ಸಾರ್ವ ತ್ರಿಕ ವಿದ್ಯುತ್ ಸಂಪರ್ಕದ ಸನಿಹಕ್ಕೆ ಅದು ಕೊಂಡೊಯ್ದಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಬಿಹಾರಕ್ಕೆ ೫೭ ಲಕ್ಷಕ್ಕೂ ಅಧಿಕ ಪಕ್ಕಾ ಮನೆಗಳನ್ನು ಮಂಜೂರು ಮಾಡಲಾಗಿದೆ. ಅವುಗಳಲ್ಲಿ ಹಲವು, ಮಹಿಳೆಯರ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿವೆ. ಸರ್ವಋತು ರಸ್ತೆ, ಸದಾ ಉರಿಯುವ ದೀಪಗಳು, ಅಡೆತಡೆ ಯಿಲ್ಲದೆ ನೀರು ನೀಡುವ ಕೊಳಾಯಿ, ಘನತೆಯನ್ನು ಒದಗಿಸುವ ಮನೆ- ಇಂಥ ಅಂಕಿ ಅಂಶಗಳು ಜನರು ಕಣ್ಣಾರೆ ನೋಡುವ ಮತ್ತು ಅಭಿವೃದ್ಧಿಯನ್ನು ಕೈಯಾರೆ ಸ್ಪರ್ಶಿಸ ಬಹುದಾದ ಸಮಗ್ರ ಬದಲಾವಣೆಯನ್ನು ಸೂಚಿಸುತ್ತವೆ.

ಈ ಸಾರ್ವಜನಿಕ ಅಂಶಗಳು ಜನರಲ್ಲಿ ಹರಡುತ್ತಿರುವಂತೆಯೇ ಹಳೆಯ ಹಣೆಪಟ್ಟಿಗಳು ಸಹಜವಾಗಿ ಕಳೆದುಕೊಳ್ಳುತ್ತವೆ. ಬಿಹಾರದ ಸಮಾಜವು ವೈವಿಧ್ಯಮಯ ಮತ್ತು ಹಲವು ಪದರಗಳಾಗಿ ಉಳಿದುಕೊಂಡಿದೆ. ಆದರೆ ಆ ಪದರಗಳು ಚುನಾವಣಾ ಪರಿಭಾಷೆಯಲ್ಲಿ ಇನ್ನು ಮುಂದೆ ಜಲನಿರೋಧಕ ಪಾತ್ರೆಗಳಂತೆ ವರ್ತಿಸುವುದಿಲ್ಲ.

ವಿವಿಧ ಸಮುದಾಯಗಳ ಮಹಿಳೆಯರು ಈಗ ಸುರಕ್ಷತೆ, ಸಂಚಾರ ಮತ್ತು ಅವಕಾಶದ ಬಗ್ಗೆ ನಿರೀಕ್ಷೆಗಳನ್ನು ಹಂಚಿಕೊಳ್ಳುತ್ತಾರೆ. ಒಂದು ಕಾಲದಲ್ಲಿ ಸಾಮಾಜಿಕ ಶ್ರೇಣಿಯ ವಿರುದ್ಧ ತುದಿಗಳಲ್ಲಿದ್ದ ಕುಟುಂಬಗಳ ಯುವಕರು ಈಗ ಒಂದೇ ರೀತಿಯ ತರಬೇತಿ ತರಗತಿಗಳು ಮತ್ತು ಕಾರ್ಮಿಕ ಮಾರುಕಟ್ಟೆಗಳಲ್ಲಿ ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ. ಅವರ ದೈನಂದಿನ ಅನುಭವಗಳು ಅವರನ್ನು ಹಂಚಿಕೆಯ ಆಕಾಂಕ್ಷೆಯ ಸ್ಥಳಕ್ಕೆ ಸೆಳೆಯುತ್ತವೆ.

ಆ ಜಾಗದಲ್ಲಿ, ಅವರು ರಾಜಕೀಯದ ಬಗ್ಗೆ ಕೇಳುವ ಪ್ರಶ್ನೆಗಳು, ಉದ್ಯೋಗಗಳು, ಮೂಲ ಸೌಕರ್ಯ ಸ್ಥಿರತೆ ಮತ್ತು ನ್ಯಾಯಸಮ್ಮತತೆಗೆ ಸಂಬಂಧಿಸಿವೆ. ಈ ಜನಾದೇಶವು ‘ಕುಟುಂಬ ರಾಜಕೀಯ’ದ ಬಗ್ಗೆಯೂ ಸ್ಪಷ್ಟ ಸಂದೇಶವನ್ನು ನೀಡಿದೆ. ಕುಟುಂಬದ ವರ್ಚಸ್ಸು ಮತ್ತು ಆನುವಂಶಿಕ ಜಾಲಗಳನ್ನು ಅವಲಂಬಿಸಿದ್ದ ಪಕ್ಷಗಳು ಶಾಸಕಾಂಗದಲ್ಲಿ ತಮಗಿರುವ ಸ್ಥಳ ವನ್ನು ಅರಿತುಕೊಳ್ಳುವಂತಾಗಿದೆ.

ಬಿಹಾರವು ಹಲವಾರು ದಶಕಗಳಿಂದ ಆಯಕಟ್ಟಿನ ಸ್ಥಳಗಳಲ್ಲಿ ಇಂಥ ಮೈತ್ರಿಗಳನ್ನು ಗಮನಿಸಿದೆ ಮತ್ತು ಅವುಗಳ ಮಿತಿಗಳನ್ನು ಅರ್ಥಮಾಡಿಕೊಂಡಿದೆ. 2025ರ ಫಲಿತಾಂಶವು, ನಾಯಕರು ಸರಕಾರದಲ್ಲಿ ಹೇಗೆ ವರ್ತಿಸುತ್ತಾರೆ, ಬಿಕ್ಕಟ್ಟುಗಳಲ್ಲಿ ಅವರು ಹೇಗೆ ಪ್ರತಿಕ್ರಿ ಯಿಸುತ್ತಾರೆ, ಸಂಸ್ಥೆಗಳೊಂದಿಗೆ ಹೇಗೆ ತೊಡಗಿಸಿಕೊಳ್ಳುತ್ತಾರೆ ಮತ್ತು ಸಾರ್ವಜನಿಕ ಸಂಪನ್ಮೂಲಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಮತದಾರರು ಹೇಗೆ ನೋಡುತ್ತಿದ್ದಾ ರೆಂಬುದನ್ನು ಸೂಚಿಸುತ್ತದೆ.

ಹೆಚ್ಚು ವಿಸ್ತೃತವಾಗಿ ಬೇರು ಬಿಟ್ಟಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದೊಳಗೆ ಕುಟುಂಬದ ಹಿನ್ನೆಲೆಗಳು ಪ್ರಮುಖವಾಗುತ್ತವೆ; ಅವರು ಕಠಿಣ ಪರಿಶ್ರಮ, ಸಂಘಟನಾ ಸಾಮರ್ಥ್ಯ ಮತ್ತು ಸೇವೆಯ ದಾಖಲೆಯ ಬೇಡಿಕೆಗಳ ಮೂಲಕ ಹೆಚ್ಚಾಗಿ ಸ್ಪಂದಿಸುತ್ತಾ ಹೋಗುತ್ತಾರೆ. ಯುವ ಮತದಾರರ ನಡವಳಿಕೆಯು ಈ ಬದಲಾವಣೆಯ ಕೇಂದ್ರ ಬಿಂದು ವಾಗಿದೆ.

ಬಿಹಾರವು ಭಾರತದ ಅತ್ಯಂತ ಹೆಚ್ಚಿನ ಯುವಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಒಂದಾ ಗಿದೆ ಮತ್ತು 2000ನೇ ಇಸವಿಯ ನಂತರ ಜನಿಸಿದ ಲಕ್ಷಾಂತರ ನಾಗರಿಕರು ಈ ಚುನಾವಣೆ ಯಲ್ಲಿ ಮತ ಚಲಾಯಿಸಿದ್ದಾರೆ. ಅವರು ಎಕ್ಸ್‌ಪ್ರೆಸ್ ವೇಗಳು, ಡಿಜಿಟಲ್ ಪಾವತಿಗಳು, ಸ್ಪರ್ಧಾತ್ಮಕ ಒಕ್ಕೂಟ ಮತ್ತು ಮಹತ್ವಾಕಾಂಕ್ಷೆಯ ಕಲ್ಯಾಣ ಯೋಜನೆಗಳು ನಿರೀಕ್ಷೆಗಳನ್ನು ರೂಪಿಸುವ ಭಾರತವನ್ನು ನೋಡಿಕೊಂಡು ಬೆಳೆದಿದ್ದಾರೆ. ಅವರು ರಾಜ್ಯಗಳ ನಡುವೆ ಹೋಲಿಕೆ ಮಾಡುತ್ತಾರೆ, ಘೋಷಣೆಗಳು ಎಷ್ಟರ ಮಟ್ಟಿಗೆ ಕಾರ್ಯ ರೂಪಕ್ಕೆ ಬಂದಿವೆ ಎಂಬುದನ್ನು ಗಮನಿಸುತ್ತಾರೆ ಮತ್ತು ಭರವಸೆಗಳು ಸಾಕಾರವಾಗಿಯೇ ಎಂಬುದನ್ನು ನೋಡಿ ತಮ್ಮ ನಾಯಕರನ್ನು ನಿರ್ಧರಿಸುತ್ತಾರೆ.

ಅವರು ಸಮಯಕ್ಕೆ ಸರಿಯಾಗಿ ನಿರ್ಮಿಸಿದ ರಸ್ತೆಯನ್ನು ಮತ್ತು ಎಂದಿಗೂ ಸರಿಯಾಗದ ರಸ್ತೆಯ ನಡುವಿನ ವ್ಯತ್ಯಾಸವನ್ನು ಗಮನಿಸುತ್ತಾರೆ. ಅವರು ಪ್ರತಿದಿನ ಕಾಲೇಜುಗಳು, ತರಬೇತಿ ಕೇಂದ್ರಗಳು ಅಥವಾ ದುಡಿಯುವ ಸ್ಥಳಗಳಿಗೆ ಪ್ರಯಾಣಿಸುವಾಗ, ತಮ್ಮ ಕುಟುಂಬಗಳು ಸಂಪರ್ಕ ಮತ್ತು ಕಲ್ಯಾಣದಿಂದ ಪ್ರಯೋಜನ ಪಡೆಯುವುದನ್ನು ಕಂಡು ಆಗಿರುವ ವ್ಯತ್ಯಾಸವನ್ನು ಖುದ್ದು ನೋಡುತ್ತಿದ್ದಾರೆ.

ಈ ಯುವ ಪೀಳಿಗೆಯು ರಾಷ್ಟ್ರೀಯ ಸಮಾನತೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತದೆ. ಯುವ ಮತದಾರರು ಸಂಸ್ಥೆಗಳನ್ನು ದುರ್ಬಲಗೊಳಿಸುವ, ಪ್ರತ್ಯೇಕತಾವಾದದ ಭಾವನೆಯೊಂದಿಗೆ ಚೆಟವಾಡುವ ಅಥವಾ ರಾಷ್ಟ್ರೀಯ ಭದ್ರತೆಯನ್ನು ಅಸ್ಥಿರಗೊಳಿಸುವ ಹೇಳಿಕೆಗಳ ಬಗ್ಗೆ ಬಹಳ ಜಾಗರೂಕರಾಗಿರುತ್ತಾರೆ. ಅವರು ನಿರುದ್ಯೋಗ ಮತ್ತು ಅಸಮಾನತೆ ಸೇರಿದಂತೆ ನೀತಿ ಚರ್ಚೆಗಳನ್ನು ವಿಮರ್ಶಾತ್ಮಕವಾಗಿ ನೋಡುತ್ತಾರೆ; ಆದರೆ ಅವರು ಗಣರಾಜ್ಯವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಟೀಕೆ ಮತ್ತು ಅದರ ಒಗ್ಗಟ್ಟಿನ ಬಗ್ಗೆ ಅಸಡ್ಡೆ ತೋರುವ ನಿರೂಪಣೆಗಳ ನಡುವೆ ಸ್ಪಷ್ಟವಾದ ಗೆರೆಯನ್ನು ಎಳೆಯುತ್ತಾರೆ.

ಬಿಹಾರದ ತೀರ್ಪು ಈ ವ್ಯತ್ಯಾಸವನ್ನು ಪ್ರತಿಬಿಂಬಿಸುತ್ತದೆ. ಅಭಿವೃದ್ಧಿ ಮತ್ತು ರಾಷ್ಟ್ರೀಯ ಉದ್ದೇಶ ಎರಡರ ಬಗ್ಗೆ ಮಾತನಾಡುವ ರಾಜಕೀಯ ನಾಯಕರಿಗೆ ಮತದಾರರು ಅಸಾಮಾನ್ಯ ಸ್ಪಷ್ಟತೆಯಿಂದ ಪ್ರತಿಕ್ರಿಯಿಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆಯು ವಿವರಣೆಯ ಮತ್ತೊಂದು ಹಂತದ ಸ್ಪಷ್ಟತೆಯನ್ನು ಒದಗಿಸುತ್ತದೆ. ಬಿಹಾರದ ಚುನಾವಣೆಗಳು ಒಂದು ಕಾಲದಲ್ಲಿ ಮತಗಟ್ಟೆ ವಶಪಡಿಸಿ ಕೊಳ್ಳುವುದರೊಂದಿಗೆ ಮತ್ತು ಹಿಂಸಾಚಾರದೊಂದಿಗೆ ಸಂಬಂಧ ಹೊಂದಿದ್ದವು. ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ ಈ ಚುನಾವಣೆಯಲ್ಲಿ ಆ ಸನ್ನಿವೇಶಗಳು ಬಹಳ ಕಡಿಮೆ ಯಾಗಿವೆ.

ದೃಢವಾದ ಭದ್ರತಾ ಕ್ರಮಗಳು ಮತ್ತು ಆರ್ಥಿಕ ಅಭಿವೃದ್ಧಿಯ ಜತೆಗೆ ಗಲಭೆಯಿಂದ ಬಾಧಿತ ಪ್ರದೇಶಗಳನ್ನು ಹಿಂದಿಕ್ಕಲಾಗಿದೆ. ವ್ಯಾಪಾರಿಗಳು ಈಗ ತಮ್ಮ ಅಂಗಡಿಗಳನ್ನು ಹೆಚ್ಚು ಸಮಯ ತೆರೆದಿರುತ್ತಾರೆ, ವಿದ್ಯಾರ್ಥಿಗಳು ಹೆಚ್ಚಿನ ಆತ್ಮವಿಶ್ವಾಸದಿಂದ ಪ್ರಯಾಣ ಮಾಡುತ್ತಾರೆ ಮತ್ತು ಕುಟುಂಬಗಳು ಕಡಿಮೆ ಆತಂಕದೊಂದಿಗೆ ಸಾರ್ವಜನಿಕ ಜೀವನವನ್ನು ಅನುಭವಿಸುತ್ತಾರೆ.

ಈ ಸುಧಾರಣೆಯನ್ನು ಕಂಡ ಮತದಾರರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಆ ಎಲ್ಲಾ ಅಂಶಗಳನ್ನು ನಿರ್ಲಕ್ಷಿಸುವುದಿಲ್ಲ. ಈ ಬೆಳವಣಿಗೆಗಳಿಗೆ ವಿರೋಧ ಪಕ್ಷದ ಕೆಲವು ಪ್ರತಿಕ್ರಿಯೆಯು ಬಹಿರಂಗವಾಗಿದೆ. ತಾವು ಬೆಂಬಲ ಕಳೆದುಕೊಳ್ಳುತ್ತಿರುವುದಕ್ಕೆ ಕಾರಣ ಗಳೇನು ಎಂದು ಚಿಂತಿಸುವ ಬದಲು, ಕೆಲವು ನಾಯಕರು ಚುನಾವಣಾ ಆಯೋಗದ ಮೇಲೆಯೇ, ಮತದಾರರ ಪಟ್ಟಿಗಳ ಮೇಲೆ ಅಥವಾ ಪ್ರಕ್ರಿಯೆಯ ನ್ಯಾಯಸಮ್ಮತತೆಯ ಮೇಲೆ ಅನುಮಾನ ವ್ಯಕ್ತಪಡಿಸಲು ಆದ್ಯತೆ ನೀಡಿದ್ದಾರೆ.

ಅದೇ ಸಾಂಸ್ಥಿಕ ಚೌಕಟ್ಟು ಇತರ ರಾಜ್ಯಗಳಲ್ಲಿ ವಿರೋಧ ಪಕ್ಷಗಳಿಗೆ ಅನುಕೂಲಕರ ಫಲಿತಾಂಶಗಳನ್ನು ತಂದುಕೊಟ್ಟಿದೆ ಎಂಬ ಅಂಶವನ್ನೂ ಅವರು ಗಮನಿಸಲಿಲ್ಲ. ಮತದಾರರು ತಾವು ಉತ್ಸಾಹದಿಂದ ಬಳಸಿದ ವ್ಯವಸ್ಥೆಯನ್ನು ಸಂಪೂರ್ಣವಾಗಿ ಖಂಡಿಸು ವುದರ ಬಗ್ಗೆ ಬೇಸತ್ತು, ಅದರ ಬಗ್ಗೆ ಇನ್ನೂ ಹೆಚ್ಚಿನ ಕಾಳಜಿ ತೋರಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ವಿಸ್ತೃತವಾದ ರಾಷ್ಟ್ರೀಯ ಮತ್ತು ಜಾಗತಿಕ ಸನ್ನಿವೇಶವನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ, ಬಿಹಾರದ ತೀರ್ಪು ಉದಯಿಸುತ್ತಿರುವ ಮಾದರಿಯನ್ನು ಬಲಪಡಿಸುತ್ತದೆ. ಹಲವು ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವಗಳು ಧ್ರುವೀಕರಣ, ಆರ್ಥಿಕ ದಿಕ್ಚ್ಯುತಿ ಮತ್ತು ಸಾಂಸ್ಥಿಕ ಬಳಲಿಕೆಯ ಸಮಸ್ಯೆಗಳಿಗೆ ಸಿಕ್ಕು ಒದ್ದಾಡುತ್ತಿರುವ ಸಮಯದಲ್ಲಿ ಭಾರತವು ಹೆಚ್ಚಿನ ಪಾಲ್ಗೊಳ್ಳುವಿಕೆ, ಸ್ಥಿರ ನಾಯಕತ್ವ ಮತ್ತು ಪ್ರಗತಿ, ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ರಾಷ್ಟ್ರೀಯ ಸಾಮರ್ಥ್ಯವನ್ನು ಕೇಂದ್ರೀಕರಿಸಿದ ನೀತಿ ಯಶೋಗಾಥೆಯ ಪಥವನ್ನು ಮುಂದುವರಿಸುತ್ತಿರುವುದನ್ನು ಕಾಣಬಹುದು.

ಬಿಹಾರ ಫಲಿತಾಂಶವು, ಆ ಯಶೋಗಾಥೆಯ ಪ್ರಜಾಪ್ರಭುತ್ವದ ಅನುಮೋದನೆಯ ಮತ್ತೊಂದು ಅಂಶವನ್ನು ಸೇರಿಸುತ್ತದೆ. ಭಾರತದ ಅತ್ಯಂತ ಹೆಚ್ಚಿನ ರಾಜಕೀಯ ಪ್ರಜ್ಞೆ ಯುಳ್ಳ ರಾಜ್ಯಗಳಲ್ಲಿ ಒಂದಾದ ಮತದಾರರು, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಮತ್ತು ಆತ್ಮವಿಶ್ವಾಸದ ಭಾರತದತ್ತ ದೇಶದ ದೊಡ್ಡ ಪ್ರಯಾಣದೊಂದಿಗೆ ತಮ್ಮ ಪ್ರಗತಿ ಯೂ ಬೆಸೆದುಕೊಂಡಿರುವುದನ್ನು ನೋಡುತ್ತಾರೆಂಬುದನ್ನು ಇದು ಸೂಚಿಸುತ್ತದೆ.

ಈ ಜನಾದೇಶವು ಎನ್‌ಡಿಎಗೆ ಪ್ರೋತ್ಸಾಹ ಮತ್ತು ಸೂಚನೆ ಎರಡೂ ಆಗಿದೆ. ಇದು ಮೂಲ ಸೌಕರ್ಯ, ಕಲ್ಯಾಣ ವಿತರಣೆ ಮತ್ತು ಭದ್ರತೆಯ ಮೇಲಿನ ಒತ್ತು ನೀಡುವುದನ್ನು ಪ್ರಮಾಣೀ ಕರಿಸುತ್ತದೆ; ಆದರೆ ಇದು ವೇಗವಾಗಿ ಉದ್ಯೋಗ ಸೃಷ್ಟಿ, ಆಳವಾದ ಸುಧಾರಣೆಗಳು ಮತ್ತು ನಿರಂತರ ಸಾಂಸ್ಥಿಕ ಸುಧಾರಣೆಗಾಗಿ ನಿರೀಕ್ಷೆಗಳನ್ನು ಹುಟ್ಟುಹಾಕುತ್ತದೆ.

ವಿರೋಧ ಪಕ್ಷಗಳಿಗೆ ಈ ಜನಾದೇಶವು ಅವರ ಕಾರ್ಯತಂತ್ರ, ನಾಯಕತ್ವ ಮತ್ತು ಕಾರ್ಯ ಕ್ರಮದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಬಿಹಾರದ ಮತದಾರರು ಆಡಳಿತ, ಗಂಭೀರತೆ ಮತ್ತು ರಾಷ್ಟ್ರೀಯ ಒಗ್ಗಟ್ಟಿನ ಗೌರವವನ್ನು ಆಧರಿಸಿದ ರಾಜಕೀಯ ವನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ಸೂಚಿಸಿದ್ದಾರೆ.

ಆ ನಿರೀಕ್ಷೆಗಳು ಮುಂಬರುವ ವರ್ಷಗಳಲ್ಲಿ ಭಾರತೀಯ ರಾಜಕೀಯದ ವ್ಯಾಕರಣವನ್ನು ಹೊಸದಾಗಿ ರೂಪಿಸುವ ಸಾಧ್ಯತೆಯಿದೆ.

(ಲೇಖಕರು ಭಾರತ ಸರಕಾರದ ಪೆಟ್ರೋಲಿಯಂ ಮತ್ತು

ನೈಸರ್ಗಿಕ ಅನಿಲ ಖಾತೆ ಸಚಿವರು)