ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಕ್ಷಮೆಯ ಹಿರಿಮೆ ಸಾರುವ ಗೃಷ್ಣೇಶ್ವರ ಜ್ಯೋತಿರ್ಲಿಂಗದ ಕಥೆ

ಘುಷ್ಮಾ ಪರಮ ಶಿವಭಕ್ತೆ. ಅವಳು ಪ್ರತಿದಿನ ಅತ್ಯಂತ ಶ್ರದ್ಧೆಯಿಂದ ಪರಮಶಿವನನ್ನು ಆರಾಧಿಸು ತ್ತಿದಳು. ಅವಳು ಪ್ರತಿದಿನವೂ ಮುಂಜಾನೆ ಎದ್ದು ಸ್ನಾನ ಮಾಡಿ, 101 ಮಣ್ಣಿನ ಶಿವಲಿಂಗಗಳನ್ನು ಮಾಡಿ ನಂತರ ಆ ಲಿಂಗಗಳಿಗೆ ಷೋಡಶೋಪಚಾರ ಪೂಜೆಗಳನ್ನು ಸಲ್ಲಿಸಿ, ಮಧ್ಯಾಹ್ನದ ಸಮಯಕ್ಕೆ ಸಮೀಪ ದಲ್ಲಿದ್ದ ‘ಶಿವಾಲಯದ ಸರೋವರ’ದಲ್ಲಿ ಆ ಲಿಂಗಗಳನ್ನು ಅತ್ಯಂತ ಭಕ್ತಿಯಿಂದ ವಿಸರ್ಜಿಸುತ್ತಿದ್ದಳು. ಇದು ಅವಳ ಕಟ್ಟುನಿಟ್ಟಾದ ದಿನಚರಿಯಾಗಿತ್ತು.

ಕ್ಷಮೆಯ ಹಿರಿಮೆ ಸಾರುವ ಗೃಷ್ಣೇಶ್ವರ ಜ್ಯೋತಿರ್ಲಿಂಗದ ಕಥೆ

-

ಒಂದೊಳ್ಳೆ ಮಾತು

ದಕ್ಷಿಣ ಭಾರತದ ದೇವಗಿರಿ ಪರ್ವತದ (ಇಂದಿನ ಮಹಾರಾಷ್ಟ್ರದ ದೌಲತಾಬಾದ್ ಬಳಿ) ಸಮೀಪ ದಲ್ಲಿ ಸುಧರ್ಮ ಎಂಬ ಹೆಸರಿನ ಅತಿ ನಿಷ್ಠಾವಂತ ಬ್ರಾಹ್ಮಣನಿದ್ದನು. ಅವನ ಹೆಂಡತಿಯ ಹೆಸರು ಸುದೇಹ. ಇಬ್ಬರೂ ಅನ್ಯೋನ್ಯವಾಗಿದ್ದರೂ, ಅವರಿಗೆ ಸಂತಾನ ಭಾಗ್ಯವಿರಲಿಲ್ಲ. ಮಕ್ಕಳಿಲ್ಲದ ಕೊರಗು ಸುದೇಹಳನ್ನು ತೀವ್ರವಾಗಿ ಕಾಡುತ್ತಿತ್ತು. ಎಷ್ಟೇ ಪೂಜೆ, ಪುನಸ್ಕಾರಗಳನ್ನು ಮಾಡಿದರೂ ಅವರಿಗೆ ಮಕ್ಕಳಾಗಲಿಲ್ಲ. ಆಗ ಸುದೇಹಳು ತನ್ನ ತಂಗಿಯಾದ ‘ಘುಷ್ಮಾ’ಳನ್ನ ತನ್ನ ಗಂಡನಿಗೆ ಎರಡನೇ ಹೆಂಡತಿಯಾಗಿ ವಿವಾಹ ಮಾಡಿಸುತ್ತಾಳೆ.

ಘುಷ್ಮಾ ಪರಮ ಶಿವಭಕ್ತೆ. ಅವಳು ಪ್ರತಿದಿನ ಅತ್ಯಂತ ಶ್ರದ್ಧೆಯಿಂದ ಪರಮಶಿವನನ್ನು ಆರಾಧಿಸು ತ್ತಿದಳು. ಅವಳು ಪ್ರತಿದಿನವೂ ಮುಂಜಾನೆ ಎದ್ದು ಸ್ನಾನ ಮಾಡಿ, 101 ಮಣ್ಣಿನ ಶಿವಲಿಂಗಗಳನ್ನು ಮಾಡಿ ನಂತರ ಆ ಲಿಂಗಗಳಿಗೆ ಷೋಡಶೋಪಚಾರ ಪೂಜೆಗಳನ್ನು ಸಲ್ಲಿಸಿ, ಮಧ್ಯಾಹ್ನದ ಸಮಯ ಕ್ಕೆ ಸಮೀಪದಲ್ಲಿದ್ದ ‘ಶಿವಾಲಯದ ಸರೋವರ’ದಲ್ಲಿ ಆ ಲಿಂಗಗಳನ್ನು ಅತ್ಯಂತ ಭಕ್ತಿಯಿಂದ ವಿಸರ್ಜಿಸುತ್ತಿದ್ದಳು. ಇದು ಅವಳ ಕಟ್ಟುನಿಟ್ಟಾದ ದಿನಚರಿಯಾಗಿತ್ತು.

ಘುಷ್ಮಾಳ ನಿರಂತರ ಭಕ್ತಿ ಮತ್ತು ಶಿವನ ಕೃಪೆಯಿಂದ ಅವಳಿಗೆ ಒಬ್ಬ ಸುಂದರವಾದ ಗಂಡು ಮಗು ಜನಿಸುತ್ತದೆ. ಮಗುವಿನ ಆಗಮನದಿಂದ ಮನೆಯಲ್ಲಿ ಸಂತೋಷ ನೆಲೆಸುತ್ತದೆ. ಆದರೆ ದಿನ ಕಳೆದಂತೆ, ಸುದೇಹಳ ಮನಸ್ಸಿನಲ್ಲಿ ತನ್ನ ತಂಗಿಯ ಮೇಲಿನ ಅಸೂಯೆ ಮತ್ತು ದ್ವೇಷ ಬೆಳೆಯ ತೊಡಗುತ್ತದೆ. ನನಗೆ ಮಕ್ಕಳಿಲ್ಲ, ಆದರೆ ನನ್ನ ತಂಗಿಗೆ ಮಗನಿzನೆ. ಗಂಡನ ಪ್ರೀತಿ ಮತ್ತು ಸಮಾಜದ ಗೌರವವೆಲ್ಲವೂ ಅವಳಿಗೇ ಸಲ್ಲುತ್ತಿದೆ ನಮ್ಮ ವಿಳಾಸ ಎಂಬ ದುಷ್ಟ ಆಲೋಚನೆ ಅವಳನ್ನು ಕಾಡುತ್ತದೆ. ಘುಷ್ಮಾಳ ಮಗು ಬೆಳೆದು ದೊಡ್ಡವನಾಗಿ, ಅವನಿಗೆ ವಿವಾಹವೂ ಆಗುತ್ತದೆ. ಆದರೆ ಸುದೇಹಳ ಅಸೂಯೆ ಮಿತಿಯನ್ನು ಮೀರಿರುತ್ತದೆ.

ಇದನ್ನೂ ಓದಿ: Roopa Gururaj Column: ಚಿರಂಜೀವಿ, ಮಹಾತಪಸ್ವಿ ಶ್ರೀ ಪರಶುರಾಮರ ದಿವ್ಯ ಚರಿತ್ರೆ

ಒಂದು ದಿನ ರಾತ್ರಿ, ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ, ಅಸೂಯೆಯಿಂದ ಕ್ರೂರಳಾದ ಸುದೇಹಳು, ಮಲಗಿದ್ದ ಘುಷ್ಮಾಳ ಮಗನನ್ನು ನಿರ್ದಯವಾಗಿ ಕೊಲೆ ಮಾಡುತ್ತಾಳೆ. ಕೇವಲ ಕೊಲೆ ಮಾಡಿದ್ದಲ್ಲದೆ, ಆತನ ಮೃತದೇಹವನ್ನು ಘುಷ್ಮಾ ಪ್ರತಿದಿನ ಶಿವಲಿಂಗಗಳನ್ನು ವಿಸರ್ಜಿಸುತ್ತಿದ್ದ ಅದೇ ‘ಶಿವಾಲಯ ಸರೋವರ’ದಲ್ಲಿ ಎಸೆದು ಬರುತ್ತಾಳೆ. ಎಂದು ತಿಳಿದರೂ, ಅವಳು ತನ್ನ ನಿತ್ಯದ ಶಿವಪೂಜೆಯನ್ನು ನಿಲ್ಲಿಸುವುದಿಲ್ಲ. ಎಂದಿನಂತೆ 101 ಮಣ್ಣಿನ ಲಿಂಗಗಳನ್ನು ಮಾಡಿ, ಪೂಜೆ ಸಲ್ಲಿಸುತ್ತಾಳೆ.

ಪೂಜೆ ಮುಗಿದ ನಂತರ, ಶಿವಲಿಂಗಗಳನ್ನು ವಿಸರ್ಜಿಸಲು ಅವಳು ಸರೋವರದ ಬಳಿ ತೆರಳುತ್ತಾಳೆ. ಲಿಂಗಗಳನ್ನು ನೀರಿನಲ್ಲಿ ಬಿಡುತ್ತಿರುವಾಗ, ಅವಳ ಮಗನು ಸರೋವರದಿಂದ ಜೀವಂತವಾಗಿ ಎದ್ದು ಬರುತ್ತಾನೆ! ಘುಷ್ಮಾಳ ಅಪಾರ ಭಕ್ತಿಗೆ ಒಲಿದ ಪರಮಶಿವನು ಅಲ್ಲಿ ಪ್ರತ್ಯಕ್ಷನಾಗುತ್ತಾನೆ. ಶಿವನು ಘುಷ್ಮಾಳ ಕಠಿಣ ಭಕ್ತಿಗೆ ಮೆಚ್ಚಿ, ನಿನ್ನ ಅಕ್ಕ ಸುದೇಹಳೇ ನಿನ್ನ ಮಗನನ್ನು ಕೊಂದದ್ದು. ಅವಳ ಈ ನೀಚ ಕೃತ್ಯಕ್ಕಾಗಿ ಅವಳನ್ನು ನನ್ನ ತ್ರಿಶೂಲದಿಂದ ಈಗಲೇ ಸಂಹರಿಸುತ್ತೇನೆ ಎಂದು ಕೋಪದಿಂದ ಹೇಳುತ್ತಾನೆ.

ಮಾರನೇ ದಿನ ಬೆಳಿಗ್ಗೆ ಮಗನ ರಕ್ತಸಿಕ್ತ ಹಾಸಿಗೆಯನ್ನು ನೋಡಿ ಸೊಸೆ ಮತ್ತು ಮನೆಯವರೆಲ್ಲರೂ ಗೋಳಾಡುತ್ತಾರೆ. ಆದರೆ ಘುಷ್ಮಾ ಮಾತ್ರ ಸ್ವಲ್ಪವೂ ವಿಚಲಿತಳಾಗುವುದಿಲ್ಲ. ನನ್ನ ಮಗನನ್ನು ಕೊಟ್ಟವನು ಆ ಪರಮಶಿವ, ಅವನನ್ನು ಕಾಪಾಡುವವನೂ ಅವನೇ. ಶಿವನ ಇಚ್ಛೆಯಿಲ್ಲದೆ ಏನೂ ನಡೆಯುವುದಿಲ್ಲ ಎಂಬ ಅಚಲವಾದ ನಂಬಿಕೆ ಅವಳಿಗಿರುತ್ತದೆ. ತನ್ನ ಮಗ ಸತ್ತಿದ್ದಾನೆ ಆದರೆ, ಘುಷ್ಮಾ ಅತ್ಯಂತ ಕರುಣಾಮಯಿ. ಅವಳು ಶಿವನ ಪಾದಗಳಿಗೆ ಎರಗಿ, ಹೇ ಪ್ರಭು, ದಯವಿಟ್ಟು ನನ್ನ ಅಕ್ಕನನ್ನು ಕ್ಷಮಿಸು. ಅವಳನ್ನು ಕೊಲ್ಲಬೇಡ. ಅವಳ ಅಜ್ಞಾನದಿಂದ ಈ ತಪ್ಪು ಮಾಡಿದ್ದಾಳೆ.

ಅವಳಿಗೆ ಒಳ್ಳೆಯ ಬುದ್ಧಿಯನ್ನು ಕರುಣಿಸು ಎಂದು ಬೇಡಿಕೊಳ್ಳುತ್ತಾಳೆ. ಶಿವನು ಅವಳಿಗೆ ವರವನ್ನು ಕೇಳಲು ಹೇಳಿದಾಗ, ಅವಳು ಯಾವುದೇ ಐಹಿಕ ಸಂಪತ್ತು, ಅಧಿಕಾರ ಅಥವಾ ಕೀರ್ತಿಯನ್ನು ಕೇಳುವುದಿಲ್ಲ. ಬದಲಾಗಿ, ಸ್ವಾಮಿ, ನೀನು ಲೋಕ ಕಲ್ಯಾಣಕ್ಕಾಗಿ ಶಾಶ್ವತವಾಗಿ ಇದೇ ಸ್ಥಳದಲ್ಲಿ ನೆಲೆಸಬೇಕು. ನಿನ್ನನ್ನು ದರ್ಶನ ಮಾಡಲು ಬರುವ ಎಲ್ಲಾ ಭಕ್ತರ ಪಾಪಗಳನ್ನು ನಾಶ ಮಾಡಿ, ಅವರನ್ನು ಹರಸಬೇಕು ಎಂದು ಪ್ರಾರ್ಥಿಸುತ್ತಾಳೆ.

ಘುಷ್ಮಾಳ ಅನನ್ಯ ಭಕ್ತಿ ಮತ್ತು ಅವಳ ಅದ್ಭುತವಾದ ‘ಕ್ಷಮಾ ಗುಣ’ಕ್ಕೆ ಮನಸೋತ ಪರಮಶಿವನು, ಅವಳ ಪ್ರಾರ್ಥನೆಯಂತೆ ಆ ಸ್ಥಳದಲ್ಲಿ ಜ್ಯೋತಿರ್ಲಿಂಗ ಸ್ವರೂಪಿಯಾಗಿ ನೆಲೆಸುತ್ತಾನೆ. ಘುಷ್ಮಾಳ ಹೆಸರಿನಿಂದಲೇ ಆ ಲಿಂಗವು ‘ಘುಷ್ಮೇಶ್ವರ’ ಎಂದು ಪ್ರಸಿದ್ಧಿಯಾಯಿತು.

ಶಿವಪುರಾಣದಲ್ಲಿ ಈ ಗೃಷ್ಣೇಶ್ವರ (ಘುಷ್ಮೇಶ್ವರ) ಜ್ಯೋತಿರ್ಲಿಂಗದ ಕಥೆಯನ್ನು ಉಲ್ಲೇಖಿಸಲಾಗಿದೆ. ಇದು ಪವಿತ್ರವಾದ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಪ್ರಮುಖವಾದದ್ದಾಗಿದೆ. ಕೆಲವೊಮ್ಮೆ ನಮ್ಮವರೇ ನಮಗೆ ಪೆಟ್ಟುಕೊಟ್ಟು ನೋವುಂಟುಮಾಡುತ್ತಾರೆ. ಆಗ ಸಿಟ್ಟು, ಪ್ರತಿಕಾರದಿಂದ ನಮಗೆ ಯಾವ ಒಳಿತೂ ಆಗುವುದಿಲ್ಲ. ಸಾಧ್ಯವಾದರೆ ತಪ್ಪು ಮಾಡಿದವರನ್ನು ಕ್ಷಮಿಸಿ ನಮ್ಮ ಜೀವನದ ಮುಂದಿನ ದಾರಿ ನೋಡಿಕೊಳ್ಳೋಣ.