ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar Election ground report by Raghav Sharma Nidle: ಎನ್‌ಡಿಎನಲ್ಲೂ ಇದ್ದಾರೆ ಜಂಗಲ್‌ ರಾಜ್‌ ರೂವಾರಿಗಳು

ವಿಚಿತ್ರ ಎಂದರೆ ಬಾಹುಬಲಿಗಳು ಕೊಲೆ, ಅತ್ಯಾಚಾರ, ಸುಲಿಗೆ ಆರೋಪ ಹೊತ್ತವರು ಎನ್‌ಡಿಎ ಮೈತ್ರಿ ಕೂಟದಿಂದಲೂ ಸ್ಪರ್ಧಿಸುತ್ತಿದ್ದಾರೆ. ‘ನಿಮ್ಮಲ್ಲೂ ಬಾಹುಬಲಿಗಳಿದ್ದಾರಲ್ಲ’ ಎಂದರೆ ಬಿಜೆಪಿ-ಜೆಡಿಯು-ಎಲ್‌ಜೆಪಿಯ ಒಬ್ಬರೂ ಉತ್ತರ ನೀಡುವುದಿಲ್ಲ. ಆರ್.ಜೆ.ಡಿ.ಯಿಂದ ಗ್ಯಾಂಗ್‌ಸ್ಟರ್ ಹಿನ್ನೆಲೆಯ ವ್ಯಕ್ತಿ ಸ್ಪರ್ಧಿಸುವುದು ದೊಡ್ಡ ವಿಷಯವಲ್ಲ, ಏಕೆಂದರೆ ಆ ಪಕ್ಷಕ್ಕೇ ಬಾಹುಬಲಿ ಹಿನ್ನೆಲೆ ಇದೆ.

ಎನ್‌ಡಿಎನಲ್ಲೂ ಇದ್ದಾರೆ ಜಂಗಲ್‌ ರಾಜ್‌ ರೂವಾರಿಗಳು

-

Ashok Nayak Ashok Nayak Nov 3, 2025 8:03 AM

2014ರ ಲೋಕಸಭೆ ಚುನಾವಣೆಯಿಂದ ಹಿಡಿದು ಈಗಿನ 2025ರ ವಿಧಾನಸಭೆ ಚುನಾವಣೆ ಯಲ್ಲೂ ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲಾಲೂ ಕಾಲದ ಜಂಗಲ್‌ರಾಜ್ ದಿನಗಳನ್ನು ಪ್ರಸ್ತಾಪಿಸುತ್ತಾ, ‘ಆರ್.ಜೆ.ಡಿ. ಬಾಹುಬಲಿಗಳ ಒಕ್ಕೂಟ’ ಎಂದು ಜರಿದಿದ್ದಾರೆ ಮತ್ತು ಅಭಿವೃದ್ಧಿಗೆ ಮತ ನೀಡಿ ಎಂದು ಕೇಳುತ್ತಾ ಬಂದಿದ್ದಾರೆ. ವಿಚಿತ್ರ ಎಂದರೆ ಬಾಹುಬಲಿಗಳು ಕೊಲೆ, ಅತ್ಯಾಚಾರ, ಸುಲಿಗೆ ಆರೋಪ ಹೊತ್ತವರು ಎನ್‌ಡಿಎ ಮೈತ್ರಿಕೂಟದಿಂದಲೂ ಸ್ಪರ್ಧಿಸುತ್ತಿದ್ದಾರೆ. ‘ನಿಮ್ಮಲ್ಲೂ ಬಾಹುಬಲಿಗಳಿದ್ದಾರಲ್ಲ’ ಎಂದರೆ ಬಿಜೆಪಿ-ಜೆಡಿಯು-ಎಲ್‌ಜೆಪಿಯ ಒಬ್ಬರೂ ಉತ್ತರ ನೀಡುವುದಿಲ್ಲ.

ಪಟನಾ: ಬಿಹಾರದಲ್ಲಿ ಬಾಹುಬಲಿಗಳಿಗೆ (ಗ್ಯಾಂಗ್‌ಸ್ಟರ್) ಮತ್ತು ರಾಜಕಾರಣಕ್ಕೆ ಅವಿನಾಭಾವ ನಂಟು. ಅಲ್ಲಿ ಅದಿಲ್ಲದೆ ರಾಜಕಾರಣವಿಲ್ಲ, ರಾಜಕಾರಣವಿಲ್ಲದೆ ಬಾಹುಬಲಿಗಳಿಲ್ಲ. ಅವರಿಗೆ ಇಂಥದ್ದೇ ಪಕ್ಷ ಎಂಬುದಿಲ್ಲ. ಒಂದೊಂದು ಚುನಾವಣೆಯನ್ನು ಒಂದೊಂದು ಪಕ್ಷದಡಿಯಲ್ಲಿ ಸ್ಪರ್ಧಿಸುತ್ತಿರುತ್ತಾರೆ, ಪಕ್ಷೇತರರಾಗಿಯೂ ಕಾಣಿಸಿಕೊಳ್ಳುತ್ತಾರೆ. ಈ ಸಲವೂ ಚುನಾವಣೆಯಲ್ಲಿ ಹಲವು ಬಾಹುಬಲಿಗಳು ತಮ್ಮ ಬಾಹುಬಲದ ವಿಸ್ತರಣೆಗೆ ಮುಂದಾಗಿದ್ದಾರೆ.

ಲಾಲೂ ಪ್ರಸಾದ್ ಯಾದವ್ 1990ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಇಲ್ಲಿನ ಬಾಹುಬಲಿಗಳಿಗೆ ಮತ್ತಷ್ಟು ಶಕ್ತಿ ಬಂತು. ಅಪಹರಣ, ಕೊಲೆ, ಅತ್ಯಾಚಾರ, ವಂಚನೆ, ಲೂಟಿಯಂತಹ ಕುಕೃತ್ಯಗಳು ಹಾಡಹಗಲೇ ನಡೆಯುತ್ತಿದ್ದವು. ಸಂಜೆ ೫ ಗಂಟೆಯ ನಂತರ ಗ್ರಾಮೀಣ ಭಾಗ ಬಿಡಿ, ರಾಜಧಾನಿ ಪಟನಾ ನಗರದಲ್ಲೂ ಜನ ಕಾಣಿಸಿಕೊಳ್ಳುತ್ತಿರಲಿಲ್ಲ, ಷಹರಕ್ಕೆ ಷಹರವೇ ಖಾಲಿಯಾಗುತ್ತಿತ್ತು.

2005ರಲ್ಲಿ ನಿತೀಶ್ ಕುಮಾರ್ ಅಧಿಕಾರಕ್ಕೆ ಬಂದ ನಂತರ ಬಾಹುಬಲಿಗಳ ಅಟ್ಟಹಾಸಕ್ಕೆ ಕಡಿವಾಣ ಬಿತ್ತು. ಹತ್ತಾರು ಕೇಸ್‌ಗಳನ್ನು ಹಾಕಿ ಅನೇಕರನ್ನು ಜೈಲಿಗಟ್ಟಲಾಯಿತು. 2014ರ ಲೋಕಸಭೆ ಚುನಾವಣೆಯಿಂದ ಹಿಡಿದು ಈಗಿನ 2025ರ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲಾಲೂ ಕಾಲದ ಜಂಗಲ್‌ರಾಜ್ ದಿನಗಳನ್ನು ಪ್ರಸ್ತಾಪಿ ಸುತ್ತಾ, ‘ಆರ್.ಜೆ.ಡಿ. ಬಾಹುಬಲಿಗಳ ಒಕ್ಕೂಟ’ ಎಂದು ಜರಿದಿದ್ದಾರೆ ಮತ್ತು ಅಭಿವೃದ್ಧಿಗೆ ಮತ ನೀಡಿ ಎಂದು ಕೇಳುತ್ತಾ ಬಂದಿದ್ದಾರೆ.

ಇದನ್ನೂ ಓದಿ: Bihar Election ground report by Raghav Sharma Nidle : ಬಿಹಾರದ ʼಕದನಕಣʼದಲ್ಲಿ ಯುವ ಕನ್ನಡಿಗರ ಸಾಹಸ

ವಿಚಿತ್ರ ಎಂದರೆ ಬಾಹುಬಲಿಗಳು ಕೊಲೆ, ಅತ್ಯಾಚಾರ, ಸುಲಿಗೆ ಆರೋಪ ಹೊತ್ತವರು ಎನ್‌ಡಿಎ ಮೈತ್ರಿಕೂಟದಿಂದಲೂ ಸ್ಪರ್ಧಿಸುತ್ತಿದ್ದಾರೆ. ‘ನಿಮ್ಮಲ್ಲೂ ಬಾಹುಬಲಿಗಳಿದ್ದಾರಲ್ಲ’ ಎಂದರೆ ಬಿಜೆಪಿ-ಜೆಡಿಯು-ಎಲ್‌ಜೆಪಿಯ ಒಬ್ಬರೂ ಉತ್ತರ ನೀಡುವುದಿಲ್ಲ. ಆರ್.ಜೆ.ಡಿ.ಯಿಂದ ಗ್ಯಾಂಗ್‌ಸ್ಟರ್ ಹಿನ್ನೆಲೆಯ ವ್ಯಕ್ತಿ ಸ್ಪರ್ಧಿಸುವುದು ದೊಡ್ಡ ವಿಷಯವಲ್ಲ, ಏಕೆಂದರೆ ಆ ಪಕ್ಷಕ್ಕೇ ಬಾಹುಬಲಿ ಹಿನ್ನೆಲೆ ಇದೆ. ಆದರೆ ಇದೇ ಬಾಹುಬಲಿಗಳನ್ನು ವಿರೋಧಿಸಿ ರಾಜಕಾರಣ ಮಾಡುವ ಮಂದಿ ಅಂಥವರಿಗೇ ಟಿಕೆಟ್ ನೀಡುತ್ತಾರೆ ಎಂದರೆ ಬಾಹುಬಲಿಗಳ ಅಟ್ಟಹಾಸವನ್ನು ಇವರೂ ನೇರವಾಗಿ ಬೆಂಬಲಿಸು ತ್ತಾರೆ ಎಂದೇ ಭಾವಿಸಬೇಕಲ್ಲವೇ? ವಿಚಿತ್ರ ಎಂದರೆ ಈ ಬಾಹುಬಲಿಗಳ ಅಟ್ಟಹಾಸ, ಅಬ್ಬರಗಳನ್ನು ಕಂಡರೂ ಜನ ಮಾತ್ರ ಮತ ಹಾಕಿ ಗೆಲ್ಲಿಸುವುದನ್ನು ಇಲ್ಲಿ ಕಾಣಬಹುದು.

ಕ್ರಿಮಿನಲ್‌ಗಳು ಆರ್ಥಿಕವಾಗಿ ಸದೃಢರಾಗಿರುವುದರಿಂದ ಜನರ (ಮುಖ್ಯವಾಗಿ ಬಡವರು) ಆರ್ಥಿಕ ಕಷ್ಟಗಳಿಗೆ ಸ್ಪಂದಿಸುತ್ತಾ ಅವರ ಮನಸ್ಸನ್ನು ಗೆಲ್ಲುತ್ತಾರೆ, ಒಂದರ್ಥದಲ್ಲಿ ಉಚಿತ ಗ್ಯಾರಂಟಿ ಸ್ಕೀಮ್ ಗಳಂತೆ. ಕಾಲಕಾಲಕ್ಕೆ ಉಚಿತವಾಗಿ ಹಣಕಾಸು ನೆರವು ಸಿಕ್ಕರೆ ಯಾರು ತಾನೇ ವಿರೋಧಿಸುತ್ತಾರೆ? ಮೊಕಾಮ ಕ್ಷೇತ್ರದಿಂದ ಜೆಡಿಯು ಟಿಕೆಟ್ ನಿಂದ ಸ್ಪರ್ಧಿಸುತ್ತಿರುವ ಗ್ಯಾಂಗ್‌ಸ್ಟರ್ ಅನಂತ್ ಕುಮಾರ್ ಸಿಂಗ್ ಕೆಲ ದಿನಗಳ ಹಿಂದೆ ಊಟ ಮಾಡುತ್ತಾ ಮಹಿಳಾ ಪತ್ರಕರ್ತೆ ಒಬ್ಬರಿಗೆ ಸಂದರ್ಶನ ನೀಡುತ್ತಿದ್ದರು. ಬಳಿಕ ತನ್ನ ಊಟದ ತಟ್ಟೆಯನ್ನು ಪಕ್ಕದಲ್ಲಿದ್ದ ಮತ್ತೊಬ್ಬನಿಗೆ ನೀಡಿದರು.

ಅದರಲ್ಲಿ ಬಾಕಿ ಉಳಿದ ಆಹಾರವನ್ನು ಆತ ತಿನ್ನತೊಡಗಿದ. ‘ಅದ್ಯಾಕೆ ಆತ ನೀವುಂಡು ಬಿಟ್ಟದ್ದನ್ನು ತಿನ್ನುತ್ತಾನೆ?’ ಎಂದು ಪತ್ರಕರ್ತೆ ಕೇಳಿದ್ದಕ್ಕೆ, ‘ನಾನು ಬಿಟ್ಟದ್ದು ದೇವರ ಪ್ರಸಾದದಂತೆ, ಅದಕ್ಕಾಗಿ ಅದನ್ನು ಆತ ತಿನ್ನುತ್ತಾನೆ’ ಎಂದರು ಅನಂತ್ ಕುಮಾರ್ ಸಿಂಗ್. ಇಷ್ಟರ ಮಟ್ಟಿಗೆ ಈ ಬಾಹುಬಲಿಗಳು ಜನರ ಮನಸ್ಸಿನೊಳಗೆ ಹುದುಗಿಬಿಟ್ಟಿದ್ದಾರೆ.

ಈ ಕುತ್ಸಿತ, ವಿಕಾರ ಮನಸ್ಸಿನ ಬಾಹುಬಲಿಗಳನ್ನು ಕೆಲವರು ದೇವರಂತೆ ಪೂಜೆ ಮಾಡುತ್ತಾರೆ, ಅವರಿಂದ ಲಾಭ ಪಡೆದಿರುವುದು ಅದಕ್ಕೆ ಕಾರಣ ಇರಲೂಬಹುದು. ಹಾಗಾಗಿ ಬಿಹಾರದಲ್ಲಿ ಬಾಹುಬಲಿಗಳದ್ದೊಂದು ವಿಚಿತ್ರ ಲೋಕ. ಬಿಹಾರದ ರಾಜಕೀಯ ಪಕ್ಷಗಳಿಗೆ, ನಾಯಕರಿಗೆ ಹಣ ಹರಿದು ಬರುವುದು ಈ ಬಾಹುಬಲಿಗಳ ಕಡೆಯಿಂದಲೇ, ಹೀಗಾಗಿಯೇ, ಅವರನ್ನು ಚುನಾವಣಾ ರಾಜಕೀಯದಿಂದ ದೂರ ಇಡಲು ಸಾಧ್ಯವಿಲ್ಲ.

ಕೆಲವೊಮ್ಮೆ ಸೋಲುತ್ತಾರೆ ಎಂದು ಗೊತ್ತಿದ್ದರೂ, ನಿಧಿ ಸಂಗ್ರಹಣೆ ಮತ್ತು ಕ್ರೋಢೀಕರಣಕ್ಕಾಗಿ ಅವರಿಗೆ ಟಿಕೆಟ್ ನೀಡುವುದು ಪಕ್ಷಗಳಿಗೆ ಅನಿವಾರ್ಯವಾಗುತ್ತದೆ, ಅದನ್ನು ಬಿಹಾರದ ಜನ ಕೂಡಾ ಮಾತಾಡಿಕೊಳ್ಳುತ್ತಾರೆ. ನಾನು ಮುಜ-ರಪುರದಿಂದ ಗೋಪಾಲ್‌ಗಂಜ್‌ಗೆ ತೆರಳುತ್ತಿದ್ದ ವೇಳೆ ಮುಜ-ರಪುರ ಜಿಲ್ಲೆಯ ಮೋತಿಪುರದಲ್ಲಿ ಪ್ರಧಾನಿ ಮೋದಿ ಅವರ ಬೃಹತ್ ಸಭೆ ನಡೆಯುತ್ತಿತ್ತು.

ಲಾಲೂ ಜಂಗಲ್ ರಾಜ್ ಬಗ್ಗೆ ಪ್ರಸ್ತಾಪಿಸಿದ ಅವರು, ‘2001ರಲ್ಲಿ ಸಣ್ಣ ಬಾಲಕನನ್ನು ಹತ್ಯೆ ಮಾಡಿದ್ದ ಆರ್.ಜೆ.ಡಿ. ಕಾಲದ ಗೋಲು ಕಾಂಡ್‌ನ್ನು ನೆನಪಿಸಿಕೊಳ್ಳಿ’ ಎನ್ನುತ್ತಿದ್ದರು. 24 ವರ್ಷಗಳ ಹಿಂದೆ ಮುಜಫರಪುರದಲ್ಲಿ ಗೋಲು ಎಂಬ ಐದು ವರ್ಷದ ಬಾಲಕನ ಅಪಹರಣ ಮತ್ತು ಕೊಲೆ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿದ್ದರಿಂದ ಮುಜಫರಪುರ ಜಿಲ್ಲೆಯ ಜನಸಭೆಯಲ್ಲಿ ಅದನ್ನು ಅವರು ಉಲ್ಲೇಖಿಸಿದ್ದರು. ಸಿವಾನ್ ಜಿಲ್ಲೆಯ ರಘುನಾಥಪುರದಿಂದ ಒಂದು ಕಾಲದ ಬಹುದೊಡ್ಡ ಗ್ಯಾಂಗ್‌ಸ್ಟರ್ ಆಗಿದ್ದ ಶಹಾಬುದ್ದಿನ್ ಮಗ 31 ವರ್ಷದ ಒಸಾಮ ಆರ್.ಜೆ.ಡಿ. ಅಭ್ಯರ್ಥಿಯಾಗಿ ರುವುದನ್ನು ಗೃಹ ಸಚಿವ ಅಮಿತ್ ಶಾ ಕೂಡ ಟೀಕಿಸುತ್ತಿದ್ದಾರೆ.

‘ಶಹಾಬುದ್ದೀನ್ ಮಗನ ಹೆಸರು ಆರ್.ಜೆ.ಡಿ ಪಟ್ಟಿಯಲ್ಲಿರುವುದರಿಂದ ಬಿಹಾರದ ಜನರು ಜಾಗರೂಕ ರಾಗಿರಬೇಕು. ಶಹಾಬುದ್ದೀನ್ ಮಗನಿಗೆ ಟಿಕೆಟ್ ನೀಡಿದರೆ, ಬಿಹಾರ ಸುರಕ್ಷಿತವಾಗಿರಲು ಸಾಧ್ಯವೇ?’ ಎಂದು ಪ್ರಶ್ನಿಸುತ್ತಾರೆ ಶಾ. ಆದರೆ ಇದೇ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಜೆಡಿಯು ಮತ್ತು ಎಲ್‌ಜೆಪಿ ಪಕ್ಷಗಳು ಬಾಹುಬಲಿಗಳಿಗೆ ಟಿಕೆಟ್ ನೀಡಿದ್ದನ್ನು ಪ್ರಶ್ನಿಸುವುದಿಲ್ಲ, ಆಕ್ಷೇಪಿಸುವು ದಿಲ್ಲ, ಇದು ಬಿಹಾರ ರಾಜಕಾರಣದ ವಾಸ್ತವ.

ನಾಲ್ಕು ಬಾರಿ ಸಂಸದರಾಗಿದ್ದ ಶಹಾಬುದ್ದೀನ್, 1996-2004ರವರೆಗೆ ಉತ್ತರ ಬಿಹಾರದ ಸಿವಾನ್‌ನಲ್ಲಿ ರಾಜಕೀಯ ಪ್ರಾಬಲ್ಯ ಸಾಧಿಸಿದ್ದರು. 2008ರಲ್ಲಿ ಶಹಾಬುದ್ದೀನ್ ಗೆ ಶಿಕ್ಷೆಯಾಗಿತ್ತು. ಶಹಾಬುದ್ದೀನ್ ಈಗ ಇಲ್ಲದಿದ್ದರೂ, ಆತನನ್ನು ಅಲ್ಲಿನ ಅನೇಕ ಜನ ಈಗಲೂ ನೆನಪಿಸಿಕೊಳ್ಳುತ್ತಾರೆ ಮತ್ತು ಬಡವರ ಬಂಧು ಎಂದೇ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಶಹಾಬುದ್ದೀನ್ ಸತ್ತ ನಂತರ ಕುಟುಂಬದವರಿಗೆ ಅಲ್ಲಿ ಚುನಾವಣೆ ಗೆಲ್ಲಲಾಗಿಲ್ಲ.

ಸಿಂಗ್ ವಿರುದ್ಧ 28 ಕೇಸ್‌ಗಳು

ಮೊಕಾಮದ ಅನಂದ್ ಸಿಂಗ್ ವಿರುದ್ಧ 28 ಕೇಸುಗಳಿವೆ. ಚುನಾವಣಾ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅನಂತ್ ಕುಮಾರ್ ಸಿಂಗ್ ತಮ್ಮ ಅಫಿಡವಿಟ್‌ನಲ್ಲಿ ಅಪಹರಣ, ಅಕ್ರಮ ಶಸ್ತ್ರಾಸ್ತ್ರ ಗಳನ್ನು ಹೊಂದಿರುವುದು, ಅಪರಾಧಿಗಳಿಗೆ ಆಶ್ರಯ ನೀಡುವುದು ಮತ್ತು ಕೊಲೆಗೆ ಯತ್ನಿಸಿದ ಆರೋಪಗಳೂ ಸೇರಿದಂತೆ 28 ಗಂಭೀರ ಪ್ರಕರಣಗಳನ್ನು ದಾಖಲಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಪಾಂಡೆಗೆ ಎಲ್‌ಜೆಪಿ ಮಣೆ

2012ರ ಜೂನ್ ೧ರ ಬೆಳಗಿನ ಜಾವ ೪ ಗಂಟೆಗೆ ಬಕ್ಸಾರ್ ಜಿಲ್ಲೆಯ ಖೋಪಿರಾ ಗ್ರಾಮದಲ್ಲಿ ವಾಕ್ ಮಾಡುತ್ತಿದ್ದಾಗ ರಣವೀರ್ ಸೇನಾ ಸಂಘಟನೆಯ ಸ್ಥಾಪಕ ಬ್ರಹ್ಮೇಶ್ವರ್ ಮುಖಿಯಾರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಮೋಟಾರ್ ಬೈಕ್ ಗಳಲ್ಲಿ ಬಂದ ೪-೫ ಮಂದಿ ಒಂಬತ್ತು ಸುತ್ತಿನ ಗುಂಡುಗಳನ್ನು ಹಾರಿಸಿ ಹತ್ಯೆ ಮಾಡಿದ್ದರು. ಕೇಸ್‌ನ್ನು ಬಿಹಾರ ಪೊಲೀಸರಿಂದ ಸಿಬಿಐಗೆ ಹಸ್ತಾಂತರಿಸಿದ ಬಳಿಕ, ಆಗ ಜೆಡಿಯು ಶಾಸಕರಾಗಿದ್ದ ಸುನಿಲ್ ಪಾಂಡೆ ಮತ್ತು ಎಂಎಲ್‌ಸಿ ಆಗಿದ್ದ ಅವರ ಸಹೋದರ ಹುಲಾಸ್ ಪಾಂಡೆ ಹೆಸರುಗಳನ್ನೂ ಚಾರ್ಜ್‌ಶೀಟ್‌ನಲ್ಲಿ ಸೇರಿಸಲಾಯಿತು.

13 ವರ್ಷಗಳ ನಂತರ ರಣವೀರ್ ಸೇನೆ ಇತಿಹಾಸದ ಪುಟಗಳಲ್ಲಿ ಸೇರಿದರೆ, ಹುಲಾಸ್ ಪಾಂಡೆ ಯನ್ನು ಆರೋಪ ಮುಕ್ತಗೊಳಿಸಲಾಗಿತ್ತು. ಈ ಬಾರಿ ಎಲ್‌ಜೆಪಿಯ ಚಿರಾಗ್ ಪಾಸ್ವಾನ್ ಜತೆ ಸೇರಿರುವ ಹುಲಾಸ್ ಪಾಂಡೆ, ಬಕ್ಸಾರ್‌ನ ಬ್ರಹ್ಮಪುರ ಕ್ಷೇತ್ರದಿಂದಲೇ ಎಲ್‌ಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಆರ್‌ಜೆಡಿಯಿಂದ ೨ ಬಾರಿ ಶಾಸಕರಾಗಿರುವ ಶಂಭುನಾಥ್ ಯಾದವ್ ಕಣದಲ್ಲಿ ದ್ದಾರೆ.

ಸದ್ಯ ಹುಲಾಸ್ ಪಾಂಡೆ ಮೇಲೆ ೨ ಕ್ರಿಮಿನಲ್ ಪ್ರಕರಣಗಳಿವೆ. ‘ನಾವು ಬಾಹುಬಲಿಗಳಲ್ಲ’ ಎಂದು ಹುಲಾಸ್ ಪಾಂಡೆ ಹೇಳಿಕೊಂಡರೂ, ಪಾಂಡೆ ಪರಿವಾರವೇ ಬಾಹುಬಲಿಗಳ ಒಕ್ಕೂಟ ಎಂಬ ಮಾತುಗಳು ಭೋಜ್‌ಪುರ್, ಬಕ್ಸಾರ್ ಜಿಲ್ಲೆಗಳಲ್ಲಿ ಕೇಳಿಬರುತ್ತವೆ. ಬ್ರಹ್ಮೇಶ್ವರ್ ಮುಖಿಯಾ ಹತ್ಯೆ ಕೇಸ್‌ನಲ್ಲಿ ಹೆಸರಿಸಲಾಗಿದ್ದ ಸುನಿಲ್ ಪಾಂಡೆಗೆ ವಿಶಾಲ್ ಪ್ರಶಾಂತ್ ಪಾಂಡೆ ಎಂಬ ಪುತ್ರನಿದ್ದು, ಅವರು ತರಾರಿ ವಿಧಾನಸಭೆಯಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ