Roopa Gururaj Column: ವಿಕ್ರಮ ಬೇತಾಳ 17: ವಿದ್ಯೆಯ ಅಹಂಕಾರ ಮತ್ತು ವಿನಾಶದ ಹಾದಿ
ವಾರಣಾಸಿಯ ಖ್ಯಾತ ಮಾಂತ್ರಿಕ ಗುರು ವಿಶಾರದನೆಂಬ ವಿದ್ವಾಂಸನ ಬಳಿ ನಾಲ್ವರು ಯುವಕರು ಶಿಷ್ಯರಾಗಿ ಸೇರುತ್ತಾರೆ. ಗುರುವು ಆ ಶಿಷ್ಯರಿಗೆ ಪ್ರಕೃತಿಯ ಶಕ್ತಿಗಳನ್ನು ನಿಯಂತ್ರಿಸುವ, ಗಿಡಮೂಲಿಕೆ ಗಳ ರಹಸ್ಯಗಳನ್ನು ಅರಿಯುವ ಮತ್ತು ರೋಗ-ರುಜಿನಗಳನ್ನು ಗುಣಪಡಿಸುವ ಅಸಾಧಾರಣ ಮಾಂತ್ರಿಕ ವಿದ್ಯೆಗಳನ್ನು ಧರ್ಮದ ಕಟ್ಟುಪಾಡಿನೊಂದಿಗೆ ಬೋಧಿಸುತ್ತಾನೆ.
-
ಒಂದೊಳ್ಳೆ ಮಾತು
ವಿದ್ಯೆ ಎನ್ನುವುದು ಮನುಷ್ಯನ ಅಜ್ಞಾನದ ಕತ್ತಲೆಯನ್ನು ಕಳೆದು ಸನ್ಮಾರ್ಗವನ್ನು ತೋರುವ ದಿವ್ಯ ಜ್ಯೋತಿಯಾಗಬೇಕು. ಆದರೆ ಅದೇ ವಿದ್ಯೆಯು ಅಹಂಕಾರದ ಅಮಲೇರಿಸಿ, ವಿವೇಕವನ್ನು ಮರೆಸಿದಾಗ ಸರ್ವನಾಶಕ್ಕೆ ಕಾರಣ ವಾಗುತ್ತದೆ. ‘ಕಥಾಸರಿತ್ಸಾಗರ’ದ ಬೇತಾಳ ಪಂಚ ವಿಂಶತಿಯ ಈ ಕಥೆಯು ಕಲಿತ ವಿದ್ಯೆಯ ಅಂಧಾಭಿಮಾನ ಮತ್ತು ದುರುಪಯೋಗ ತರುವ ದುರಂತಕ್ಕೆ ಹಿಡಿದ ಕೈಗನ್ನಡಿ.
ವಾರಣಾಸಿಯ ಖ್ಯಾತ ಮಾಂತ್ರಿಕ ಗುರು ವಿಶಾರದನೆಂಬ ವಿದ್ವಾಂಸನ ಬಳಿ ನಾಲ್ವರು ಯುವಕರು ಶಿಷ್ಯರಾಗಿ ಸೇರುತ್ತಾರೆ. ಗುರುವು ಆ ಶಿಷ್ಯರಿಗೆ ಪ್ರಕೃತಿಯ ಶಕ್ತಿಗಳನ್ನು ನಿಯಂತ್ರಿಸುವ, ಗಿಡಮೂಲಿಕೆ ಗಳ ರಹಸ್ಯಗಳನ್ನು ಅರಿಯುವ ಮತ್ತು ರೋಗ-ರುಜಿನಗಳನ್ನು ಗುಣಪಡಿಸುವ ಅಸಾಧಾರಣ ಮಾಂತ್ರಿಕ ವಿದ್ಯೆಗಳನ್ನು ಧರ್ಮದ ಕಟ್ಟುಪಾಡಿನೊಂದಿಗೆ ಬೋಧಿಸುತ್ತಾನೆ.
ಮಕ್ಕಳೇ, ಈ ಜ್ಞಾನ ಸೃಷ್ಟಿಯ ಕಲ್ಯಾಣಕ್ಕಾಗಿ, ಆರ್ತರ ಕಣ್ಣೀರು ಒರೆಸುವುದಕ್ಕಾಗಿ ಮಾತ್ರ ಬಳಕೆಯಾಗಬೇಕು. ಅಹಂಕಾರಕ್ಕಾಗಲಿ, ಇನ್ನೊಬ್ಬರ ನಾಶಕ್ಕಾಗಲಿ ಇದನ್ನು ಬಳಸಿದರೆ ಇದೇ ವಿದ್ಯೆ ನಿಮ್ಮನ್ನೇ ಭಸ್ಮ ಮಾಡುತ್ತದೆ ಎಂದು ಗುರು ಎಚ್ಚರಿಸುತ್ತಾನೆ. ಆದರೆ ವಿದ್ಯಾಭ್ಯಾಸ ಮುಗಿಯು ತ್ತಿದ್ದಂತೆ, ಆ ನಾಲ್ವರು ಶಿಷ್ಯರಲ್ಲಿ ಕೃತಜ್ಞತೆಯ ಬದಲು ತಮ್ಮ ವಿದ್ಯೆಯ ಬಗ್ಗೆ ವಿಪರೀತ ಅಹಂಕಾರ ತಲೆದೋರುತ್ತದೆ.
ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ 16: ಇಂದ್ರಿಯಗಳ ಸೆಳೆತ ಮತ್ತು ಧರ್ಮದ ಗೆರೆ
ತಾವು ಯಾವುದೇ ಪ್ರಕೃತಿ ನಿಯಮವನ್ನು ಮುರಿಯಬಲ್ಲೆವು ಎಂಬ ಸೊಕ್ಕು ಅವರಲ್ಲಿ ಬೆಳೆಯು ತ್ತದೆ. ಒಂದು ದಿನ ಗುರುವು ಊರಲ್ಲಿಲ್ಲದ ವೇಳೆ, ಅವರು ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿ ಮೆರೆಯಬೇಕೆಂದು ನಿರ್ಧರಿಸುತ್ತಾರೆ. ತಮ್ಮ ಮಂತ್ರಶಕ್ತಿಯಿಂದ ಊರಿನ ಸಮೃದ್ಧ ನದಿಯ ಹರಿವನ್ನು ಬದಲಿಸಿ, ಪ್ರಕೃತಿಯ ನಿಯಮವನ್ನೇ ಬುಡಮೇಲು ಮಾಡಲು ಆರಂಭಿಸುತ್ತಾರೆ. ಆ ಅಹಂಕಾರದ ಆಟದಲ್ಲಿ, ಸ್ಮಶಾನದಲ್ಲಿದ್ದ ದುಷ್ಟ ಶಕ್ತಿಗಳನ್ನು ಆವಾಹಿಸಿ, ಜನರನ್ನು ಭಯಭೀತ ಗೊಳಿಸಿ ತಮ್ಮ ಕಾಲಬುಡಕ್ಕೆ ಬೀಳಿಸಿಕೊಳ್ಳುವ ಕ್ರೂರ ಸಂಚು ರೂಪಿಸುತ್ತಾರೆ.
ಮೊದಲನೆಯವನು ಅಗ್ನಿಮಂತ್ರದಿಂದ ಸುತ್ತಲಿನ ಕಾಡಿಗೆ ಬೆಂಕಿ ಹಚ್ಚಿದರೆ, ಎರಡನೆಯವನು ವಾಯುಮಂತ್ರದಿಂದ ಆ ಜ್ವಾಲೆಯನ್ನು ಊರಿನತ್ತ ತಿರುಗಿಸುತ್ತಾನೆ. ಮೂರನೆಯವನು ಕ್ಷುದ್ರಶಕ್ತಿ ಗಳನ್ನು ಜಾಗೃತಗೊಳಿಸಿ ಅಟ್ಟಹಾಸ ಮೆರೆಯುತ್ತಾನೆ. ನಾಲ್ಕನೆಯವನು ತನ್ನ ಜ್ಞಾನದಿಂದ ಎಲ್ಲವನ್ನೂ ನಿಯಂತ್ರಿಸಬನೆಂದು ಬೀಗು ತ್ತಾನೆ. ಆದರೆ ಪ್ರಕೃತಿಯ ಸಮತೋಲನವನ್ನು ಭಗ್ನಗೊಳಿಸಿದ ಕ್ಷಣವೇ, ಅವರು ಜಾಗೃತ ಗೊಳಿಸಿದ ಆ ಕ್ರೂರ ಶಕ್ತಿಗಳು ಅವರ ಹತೋಟಿ ಯನ್ನೇ ಮೀರಿಬಿಡುತ್ತವೆ!
ತಮ್ಮ ವಿದ್ಯೆಯನ್ನೇ ಪ್ರತಿಯಾಗಿ ಬಳಸಲಾಗದೆ, ಮಂತ್ರಗಳ ನಿಯಂತ್ರಣ ತಪ್ಪಿ, ಆ ನಾಲ್ವರೂ ತಾವು ಹೊತ್ತಿಸಿದ ಅದೇ ಅಗ್ನಿಜ್ವಾಲೆಯಲ್ಲಿ, ಆವಾಹಿಸಿದ ಅದೇ ಪಿಶಾಚಿಗಳ ಪಾಲಾಗಿ ನರಳಿ ಪ್ರಾಣ ಕಳೆದು ಕೊಳ್ಳುತ್ತಾರೆ. ಕಥೆಯನ್ನು ಮುಗಿಸಿದ ಬೇತಾಳನು ವಿಕ್ರಮಾ ದಿತ್ಯನಿಗೆ ಪ್ರಶ್ನೆಯೊಡ್ಡುತ್ತಾನೆ: ಹೇ ರಾಜಾ, ಆ ನಾಲ್ವರು ಶಿಷ್ಯರ ಸಾವಿಗೆ ಯಾರು ಹೊಣೆ? ಎಲ್ಲ ವಿದ್ಯೆಗಳನ್ನೂ ಧಾರೆ ಎರೆದ ಆ ಗುರುವೋ? ಅಥವಾ ಪ್ರಕೃತಿಯ ನಿಯಮಗಳನ್ನು ಉಲ್ಲಂಘಿಸಿ ವಿನಾಶಕ್ಕೆ ಕಾರಣರಾದ ಶಿಷ್ಯರೋ? ವಿಕ್ರಮಾದಿತ್ಯನು, ಆ ಸರ್ವನಾಶಕ್ಕೆ ಶಿಷ್ಯರ ದುರಹಂಕಾರವೇ ಸಂಪೂರ್ಣ ಕಾರಣ!
ಗುರುವು ಅವರಿಗೆ ವಿದ್ಯೆಯನ್ನು ನೀಡಿದ್ದಷ್ಟೇ ಅಲ್ಲ, ಅದರ ಜೊತೆಗೆ ಧರ್ಮದ ಮಿತಿಗಳು ಮತ್ತು ಎಚ್ಚರಿಕೆ ಯನ್ನೂ ಸ್ಪಷ್ಟವಾಗಿ ಬೋಧಿಸಿದ್ದನು. ವಿದ್ಯೆಯು ಆಯುಧದಂತೆ; ಅದನ್ನು ರಕ್ಷಣೆಗಾಗಿ ಬಳಸಬೇಕೋ ಅಥವಾ ಸ್ವಯಂ ಹತ್ಯೆಗಾಗಿ ಬಳಸ ಬೇಕೋ ಎಂಬುದು ಕಲಿಯುವವನ ವಿವೇಕಕ್ಕೆ ಸೇರಿದ್ದು.
ಎಲ್ಲಿ ವಿನಯ ಮತ್ತು ಲೋಕಹಿತದ ಪ್ರಜ್ಞೆ ಇರುವುದಿಲ್ಲವೋ, ಅಲ್ಲಿ ಎಷ್ಟೇ ಗಹನವಾದ ವಿದ್ಯೆ ಯಿದ್ದರೂ ಅದು ಅಹಂಕಾರವಾಗಿ ಬದಲಾಗಿ ವಿನಾಶವನ್ನು ಉಂಟುಮಾಡುತ್ತದೆ ಎಂದ. ಇಂದಿನ ಜಗತ್ತಿನಲ್ಲಿ ನಮಗೆ ತಂತ್ರಜ್ಞಾನ, ಕೌಶಲ, ಅಧಿಕಾರ ಮತ್ತು ಜ್ಞಾನದ ಅಗಾಧ ಸಂಪನ್ಮೂಲಗಳು ಕೈಗೆಟುಕುತ್ತಿವೆ. ಆದರೆ ಆ ಸಾಮರ್ಥ್ಯವನ್ನು ನಾವು ಸಮಾಜದ ಒಳಿತಿಗಾಗಿ, ಜನರ ಬದುಕನ್ನು ಹಸನು ಮಾಡಲು ಬಳಸುತ್ತಿದ್ದೇವೆಯೇ ಅಥವಾ ನಮ್ಮ ಅಹಂ, ಸ್ವಾರ್ಥ ಮತ್ತು ಪ್ರದರ್ಶನಕ್ಕಾಗಿ ಬಳಸುತ್ತಿದ್ದೇ ವೆಯೇ ಎಂಬ ಆತ್ಮಾವಲೋಕನ ಅಗತ್ಯ.
ವಿದ್ಯೆಯ ಜೊತೆಗೆ ಸಂಸ್ಕಾರ ಮತ್ತು ವಿನಯ ವಿಲ್ಲದಿದ್ದರೆ, ಎಂತಹ ಅದ್ಭುತ ಪ್ರತಿಭೆಯೂ ಕೇವಲ ದುರಂತದ ಅಂತ್ಯವಾಗುತ್ತದೆ. ನಮಗೆ ದೊರೆತ ಜ್ಞಾನ ಮತ್ತು ಶಕ್ತಿಯು ಲೋಕಕಲ್ಯಾಣಕ್ಕೆ ದಾರಿ ದೀಪವಾಗಬೇಕೇ ಹೊರತು, ಅಹಂಕಾರದ ಜ್ವಾಲೆಯಾಗಿ ನಮ್ಮನ್ನೇ ಸುಟ್ಟುಹಾಕಬಾರದು. ವಿನಯವೇ ವಿದ್ಯೆಗೆ ನಿಜವಾದ ಭೂಷಣ.