ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ‘ಪ್ರೆಸ್ ಎಂಬಾರ್ಗೋ’ ಎಂದರೇನು ?

ಪತ್ರಿಕೆಗಳ ಸುದ್ದಿಮನೆಯಲ್ಲಿ ಆಗಾಗ ಕೇಳಿ ಬರುವ ಒಂದು ಪದವೆಂದರೆ, ‘ಪ್ರೆಸ್ ಎಂಬಾರ್ಗೋ’. ‘ಎಂಬಾರ್ಗೋ’ ಮೂಲತಃ ಸ್ಪ್ಯಾನಿಷ್ ಪದ. ಮಾಧ್ಯಮ ಸಂಸ್ಥೆಗಳಿಗೆ ಅಥವಾ ಪತ್ರಕರ್ತರಿಗೆ ಯಾವುದೇ ಒಂದು ಮಹತ್ವದ ಸುದ್ದಿ, ವರದಿ, ದಾಖಲೆ ಅಥವಾ ಹೊಸ ಆವಿಷ್ಕಾರದ ವಿವರಗಳನ್ನು ಮುಂಚಿತ ವಾಗಿಯೇ ಒದಗಿಸಿ, ‘ನಿರ್ದಿಷ್ಟ ದಿನಾಂಕ ಮತ್ತು ನಿಖರ ಸಮಯದವರೆಗೆ ಇದನ್ನು ಸಾರ್ವಜನಿಕವಾಗಿ ಪ್ರಕಟಿಸಬಾರದು ಅಥವಾ ಪ್ರಸಾರ ಮಾಡಬಾರದು’ ಎಂದು ವಿಧಿಸುವ ಕಟ್ಟುನಿಟ್ಟಾದ ಷರತ್ತನ್ನು ‘ಪ್ರೆಸ್ ಎಂಬಾರ್ಗೋ’ ಎನ್ನಲಾಗುತ್ತದೆ.

Vishweshwar Bhat Column: ‘ಪ್ರೆಸ್ ಎಂಬಾರ್ಗೋ’ ಎಂದರೇನು ?

-

ಸಂಪಾದಕರ ಸದ್ಯಶೋಧನೆ

ಪತ್ರಿಕೆಗಳ ಸುದ್ದಿಮನೆಯಲ್ಲಿ ಆಗಾಗ ಕೇಳಿ ಬರುವ ಒಂದು ಪದವೆಂದರೆ, ‘ಪ್ರೆಸ್ ಎಂಬಾರ್ಗೋ’. ‘ಎಂಬಾರ್ಗೋ’ ಮೂಲತಃ ಸ್ಪ್ಯಾನಿಷ್ ಪದ. ಮಾಧ್ಯಮ ಸಂಸ್ಥೆಗಳಿಗೆ ಅಥವಾ ಪತ್ರಕರ್ತರಿಗೆ ಯಾವುದೇ ಒಂದು ಮಹತ್ವದ ಸುದ್ದಿ, ವರದಿ, ದಾಖಲೆ ಅಥವಾ ಹೊಸ ಆವಿಷ್ಕಾರದ ವಿವರಗಳನ್ನು ಮುಂಚಿತ ವಾಗಿಯೇ ಒದಗಿಸಿ, ‘ನಿರ್ದಿಷ್ಟ ದಿನಾಂಕ ಮತ್ತು ನಿಖರ ಸಮಯದವರೆಗೆ ಇದನ್ನು ಸಾರ್ವಜನಿಕವಾಗಿ ಪ್ರಕಟಿಸಬಾರದು ಅಥವಾ ಪ್ರಸಾರ ಮಾಡಬಾರದು’ ಎಂದು ವಿಧಿಸುವ ಕಟ್ಟುನಿಟ್ಟಾದ ಷರತ್ತನ್ನು ‘ಪ್ರೆಸ್ ಎಂಬಾರ್ಗೋ’ ಎನ್ನಲಾಗುತ್ತದೆ.

ಈ ಷರತ್ತಿಗೆ ಪತ್ರಕರ್ತರು ಒಪ್ಪಿಕೊಂಡ ನಂತರವೇ ಅವರಿಗೆ ಮಾಹಿತಿ ಹಸ್ತಾಂತರವಾಗುತ್ತದೆ. ಸುದ್ದಿ ಜಗತ್ತಿನಲ್ಲಿ ನಿಖರತೆ, ಆಳವಾದ ವಿಶ್ಲೇಷಣೆ ಮತ್ತು ಸತ್ಯಾಸತ್ಯತೆಯ ಪರಿಶೀಲನೆಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಯಾವುದೇ ಒಂದು ಮಹತ್ವದ ಘಟನೆ ಅಥವಾ ಘೋಷಣೆಯಾದ ತಕ್ಷಣವೇ ವರದಿಗಾರರು ಯಾವುದೇ ಹಿನ್ನೆಲೆ, ಅಧ್ಯಯನವಿಲ್ಲದೇ ತರಾತುರಿಯಲ್ಲಿ ಸುದ್ದಿ ಬರೆಯುವುದನ್ನು ತಪ್ಪಿಸುವುದು ಎಂಬಾರ್ಗೋದ ಪ್ರಮುಖ ಉದ್ದೇಶ.

ಪತ್ರಕರ್ತರಿಗೆ ಮುಂಚಿತವಾಗಿಯೇ ಮಾಹಿತಿ ಸಿಕ್ಕಾಗ, ಅವರು ಸಂಬಂಧಪಟ್ಟ ತಜ್ಞರ ಸಂದರ್ಶನ ಪಡೆಯಲು, ಅಂಕಿ-ಅಂಶಗಳನ್ನು ಪರಿಶೀಲಿಸಲು, ಗ್ರಾಫಿಕ್ಸ್ ಮತ್ತು ದೃಶ್ಯಾವಳಿಗಳನ್ನು ಸಿದ್ಧಪಡಿ ಸಲು ಹಾಗೂ ಓದುಗರಿಗೆ ಸಮಗ್ರ ವಿಶ್ಲೇಷಣೆಯನ್ನು ಕಟ್ಟಿಕೊಡಲು ಸಾಕಷ್ಟು ಕಾಲಾವಕಾಶ ಸಿಗುತ್ತದೆ. ಇದರಿಂದಾಗಿ ಸುದ್ದಿ ಹೊರಬಿದ್ದ ಕ್ಷಣದ ಆಳವಾದ ಮತ್ತು ತಪ್ಪುಗಳಿಲ್ಲದ ವರದಿ ಸಾರ್ವಜನಿಕರಿಗೆ ತಲುಪಲು ಸಾಧ್ಯವಾಗುತ್ತದೆ. ‌

ಇದನ್ನೂ ಓದಿ: Vishweshwar Bhat Column: ಹೀಗೊಬ್ಬ ಶ್ವಾನ ಅಂಕಣಕಾರ

ಎಂಬಾರ್ಗೋ ಪದ್ಧತಿಯು ವೈಜ್ಞಾನಿಕ ಮತ್ತು ವೈದ್ಯಕೀಯ ಸಂಶೋಧನಾ ಜಗತ್ತಿನಲ್ಲಿ ಅತ್ಯಂತ ವ್ಯಾಪಕ ವಾಗಿ ಬಳಕೆಯಲ್ಲಿದೆ. ಉದಾಹರಣೆಗೆ, ‘ನೇಚರ್’ (Nature) ಅಥವಾ ‘ದಿ ಲ್ಯಾನ್ಸೆಟ್’ (‌The lancet) ನಂಥ ಜಾಗತಿಕ ಪ್ರಸಿದ್ಧ ಜರ್ನಲ್‌ಗಳು ಯಾವುದೇ ಹೊಸ ಲಸಿಕೆ, ಕ್ಯಾನ್ಸರ್ ಚಿಕಿತ್ಸೆ ಅಥವಾ ಬಾಹ್ಯಾಕಾಶ ಸಂಶೋಧನೆಯ ಮಹತ್ವದ ಪ್ರಬಂಧಗಳನ್ನು ಪ್ರಕಟಿಸುವ ಮುನ್ನವೇ ವಿeನ ವರದಿಗಾರರಿಗೆ ರಹಸ್ಯವಾಗಿ ಕಳುಹಿಸುತ್ತವೆ.

ವೈಜ್ಞಾನಿಕ ವಿಷಯಗಳು ಕ್ಲಿಷ್ಟಕರವಾಗಿರುವುದರಿಂದ, ವರದಿಗಾರರು ಇತರ ಸ್ವತಂತ್ರ ವಿಜ್ಞಾನಿಗಳನ್ನು ಸಂಪರ್ಕಿಸಿ ಈ ಸಂಶೋಧನೆಯ ಸರಿ-ತಪ್ಪುಗಳನ್ನು ಪರಾಮರ್ಶಿಸಲು ಈ ಎಂಬಾರ್ಗೋ ಅವಧಿ ನೆರವಾಗುತ್ತದೆ. ನಿಗದಿತ ಸಮಯ ಮುಗಿದ ತಕ್ಷಣ ಎಲ್ಲ ಪತ್ರಿಕೆಗಳು ಸಮಗ್ರ ವಿeನ ವರದಿಯನ್ನು ಜಗತ್ತಿಗೆ ಮುಟ್ಟಿಸುತ್ತವೆ. ತಂತ್ರಜ್ಞಾನ ಮತ್ತು ಮೊಬೈಲ್ ಮಾರುಕಟ್ಟೆಯಲ್ಲಿ ಎಂಬಾರ್ಗೋಗೆ ಬೃಹತ್ ಮೌಲ್ಯವಿದೆ. ಆಪಲ್, ಗೂಗಲ್, ಸ್ಯಾಮ್ಸಂಗ್ ನಂಥ ದೈತ್ಯ ಕಂಪನಿಗಳು ತಮ್ಮ ಹೊಸ ಸ್ಮಾರ್ಟ್‌ʼಫೋನ್, ಲ್ಯಾಪ್‌ಟಾಪ್ ಅಥವಾ ಪ್ರಮುಖ ಸಾಫ್ಟ್‌ʼವೇರ್‌ರ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ವಾರಗಳ ಮುಂಚೆಯೇ ಆಯ್ದ ಟೆಕ್ ಪತ್ರಕರ್ತರು ಮತ್ತು ವಿಮರ್ಶಕರಿಗೆ ಪರೀಕ್ಷಿಸಲು ನೀಡುತ್ತವೆ. ಇದರೊಂದಿಗೆ ಕಟ್ಟುನಿಟ್ಟಾದ ಎಂಬಾರ್ಗೋ ದಿನಾಂಕ ಮತ್ತು ಸಮಯವನ್ನು ಲಗತ್ತಿಸಲಾಗಿರುತ್ತದೆ.

ವಿಮರ್ಶಕರು ಆ ಸಾಧನವನ್ನು ಸಂಪೂರ್ಣವಾಗಿ ಬಳಸಿ, ಕೆಮರಾ ಮತ್ತು ಬ್ಯಾಟರಿಯನ್ನು ಪರಿಶೀಲಿಸಿ, ವೀಡಿಯೊ ಹಾಗೂ ಬ್ಲಾಗ್‌ಗಳನ್ನು ಸಿದ್ಧಪಡಿಸಿಟ್ಟುಕೊಳ್ಳುತ್ತಾರೆ. ಜಾಗತಿಕ ಬಿಡುಗಡೆಯ ನಿಖರ ಕ್ಷಣದ ಸಾವಿರಾರು ವಿಮರ್ಶೆಗಳು ಏಕಕಾಲದಲ್ಲಿ ಅಂತರ್ಜಾಲದಲ್ಲಿ ಪ್ರಕಟವಾಗುತ್ತವೆ. ಸರಕಾರಗಳು ಆಯವ್ಯಯ (ಬಜೆಟ), ಮಹತ್ವದ ಆಯೋಗಗಳ ತನಿಖಾ ವರದಿಗಳು ಅಥವಾ ಹೊಸ ಆರ್ಥಿಕ ನೀತಿಗಳನ್ನು ಪ್ರಕಟಿಸುವಾಗ ಈ ವ್ಯವಸ್ಥೆಯನ್ನು ಅತ್ಯಂತ ಸುರಕ್ಷಿತವಾಗಿ ಬಳಸಿಕೊಳ್ಳುತ್ತವೆ.

ಹಲವು ದೇಶಗಳಲ್ಲಿ ಬಜೆಟ್ ಮಂಡನೆಗೆ ಕೆಲವು ಗಂಟೆಗಳ ಮುಂಚೆ ಪತ್ರಕರ್ತರನ್ನು ವಿಶೇಷ ಕೊಠಡಿ ಯಲ್ಲಿ (Lock- in Room) ಕೂರಿಸಿ, ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕಗಳನ್ನು ಕಡಿತಗೊಳಿಸಿ ಬಜೆಟ್ ಪ್ರತಿಯನ್ನು ನೀಡಲಾಗುತ್ತದೆ. ಹಣಕಾಸು ಸಚಿವರು ಸಂಸತ್ತಿನಲ್ಲಿ ಭಾಷಣ ಮುಗಿಸುವ ನಿಗದಿತ ಕ್ಷಣದವರೆಗೂ ಆ ಮಾಹಿತಿಯ ಮೇಲೆ ಎಂಬಾರ್ಗೋ ಇರುತ್ತದೆ. ಇದರಿಂದ ಬಜೆಟ್ ಸೋರಿಕೆಯಾಗುವುದು ತಪ್ಪುತ್ತದೆ ಹಾಗೂ ಸಚಿವರ ಭಾಷಣ ಮುಗಿದ ತಕ್ಷಣ ಮಾಧ್ಯಮಗಳು ಪೂರ್ಣ ಬಜೆಟ್ ವಿಶ್ಲೇಷಣೆಯನ್ನು ಜನರ ಮುಂದಿಡಲು ಸಾಧ್ಯವಾಗುತ್ತದೆ.

ಮಾಧ್ಯಮ ರಂಗದಲ್ಲಿ ‘ಸ್ಕೂಪ್’ ಅಥವಾ ಬ್ರೇಕಿಂಗ್ ನ್ಯೂಸ್ ಸ್ಪರ್ಧೆ ನಿರಂತರವಾಗಿರುತ್ತದೆ. ಆದರೆ ಎಂಬಾರ್ಗೋ ವ್ಯವಸ್ಥೆಯು ಎಲ್ಲ ಮಾಧ್ಯಮ ಸಂಸ್ಥೆಗಳಿಗೂ ಸಮಾನ ಸ್ಪರ್ಧಾತ್ಮಕ ಅವಕಾಶವನ್ನು ಕಲ್ಪಿಸುತ್ತದೆ. ಒಂದು ದೊಡ್ಡ ಕಂಪನಿ ಅಥವಾ ಸರಕಾರ ಸುದ್ದಿಯನ್ನು ಸಾರ್ವಜನಿಕವಾಗಿ ಹೊರಹಾಕುವ ಮೊದಲೇ ಎಲ್ಲ ಅಧಿಕೃತ ಪತ್ರಕರ್ತರಿಗೂ ಒಟ್ಟಿಗೆ ರಹಸ್ಯ ಮಾಹಿತಿ ನೀಡುವು ದರಿಂದ, ‘ಯಾರು ಮೊದಲು ಪಡೆದರು’ ಎಂಬ ಅನಾವಶ್ಯಕ ಗೊಂದಲ ನಿವಾರಣೆಯಾಗುತ್ತದೆ