ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅತಿಥಿ ಉಪನ್ಯಾಸಕರ ಕಣ್ಣೀರು ನಿಮಗೇಕೆ ಕಾಣಿಸುವುದಿಲ್ಲ ?

ಫ್ರೀ ಬಸ್, ಫ್ರೀ ಕರೆಂಟ್, ಫ್ರೀ ರೇಷನ್, ಫ್ರೀ ಹಣ, ಫ್ರೀ ಮನೆ... ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ಬೆಳಗ್ಗೆ ಎದ್ದು, ಮಕ್ಕಳಿಗೆ ಪಾಠ ಮಾಡಿ, ಸಮಾಜವನ್ನು ಕಟ್ಟುವ ಕೆಲಸ ಮಾಡುವ ಜನಕ್ಕೆ ಸರಿಯಾದ ವೇತನವಿಲ್ಲ, ಗೌರವಧನವಿಲ್ಲ, ಭದ್ರತೆಯಿಲ್ಲ.ಇದು ನ್ಯಾಯವೇ, ಇದು ಧರ್ಮವೇ, ಇದು ನಾವು ಕನಸು ಕಂಡ ಭಾರತವೇ? ಆಶಾ ಕಾರ್ಯಕರ್ತರು, ಅತಿಥಿ ಉಪನ್ಯಾಸಕರು - ಪದವಿ ಪೂರ್ವ ಕಾಲೇಜು, ಅತಿಥಿ ಶಿಕ್ಷಕರು - ಪ್ರಾಥಮಿಕ ಮತ್ತು ಪ್ರೌಢಶಾಲೆ, ಎಲ್ಲಾ ಇಲಾಖೆಯಲ್ಲಿ ಕೆಲಸ ಮಾಡೋ ಗುತ್ತಿಗೆ ಕೆಲಸಗಾರರು, ಅಂಗನವಾಡಿ ಕಾರ್ಯಕರ್ತರು.

ಅತಿಥಿ ಉಪನ್ಯಾಸಕರ ಕಣ್ಣೀರು ನಿಮಗೇಕೆ ಕಾಣಿಸುವುದಿಲ್ಲ ?

-

Profile
Ashok Nayak Nov 29, 2026 10:21 AM

ಅಭಿಮತ

ಶಿವನಗೌಡ ಪೊಲೀಸ್‌ ಪಾಟೀಲ್, ಉಪನ್ಯಾಸಕರು

ಸದ್ಯದ ಪರಿಸ್ಥಿತಿ ಹೇಗಿದೆ ಅಂದ್ರೆ, ಕೆಲಸ ಮಾಡದವರಿಗೆ ಎಲ್ಲಾ ಫ್ರೀ, ಕೆಲಸ ಮಾಡುವವರಿಗೆ ವೇತನವೂ ಇಲ್ಲ, ಗೌರವವೂ ಇಲ್ಲ. ಅತಿಥಿ ಉಪನ್ಯಾಸಕರ ಗೋಳು ಕೇಳೋರೇ ಇಲ್ಲ. ಸದ್ಯದ ಪರಿಸ್ಥಿತಿ ಹೇಗಿದೆ ಅಂದ್ರೆ, ಇದು ನಮ್ಮ ಸಮಾಜದ ದೊಡ್ಡ ದುರಂತ. ಯಾವುದೇ ಕೆಲಸ ಮಾಡದೇ ಇರುವ ಜನಕ್ಕೆ ಎಲ್ಲಾ ಫ್ರೀ ಸಿಗುತ್ತಿದೆ.

ಫ್ರೀ ಬಸ್, ಫ್ರೀ ಕರೆಂಟ್, ಫ್ರೀ ರೇಷನ್, ಫ್ರೀ ಹಣ, ಫ್ರೀ ಮನೆ... ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ಬೆಳಗ್ಗೆ ಎದ್ದು, ಮಕ್ಕಳಿಗೆ ಪಾಠ ಮಾಡಿ, ಸಮಾಜವನ್ನು ಕಟ್ಟುವ ಕೆಲಸ ಮಾಡುವ ಜನಕ್ಕೆ ಸರಿಯಾದ ವೇತನವಿಲ್ಲ, ಗೌರವಧನವಿಲ್ಲ, ಭದ್ರತೆಯಿಲ್ಲ.ಇದು ನ್ಯಾಯವೇ, ಇದು ಧರ್ಮವೇ, ಇದು ನಾವು ಕನಸು ಕಂಡ ಭಾರತವೇ? ಆಶಾ ಕಾರ್ಯಕರ್ತರು, ಅತಿಥಿ ಉಪನ್ಯಾಸಕರು - ಪದವಿ ಪೂರ್ವ ಕಾಲೇಜು, ಅತಿಥಿ ಶಿಕ್ಷಕರು - ಪ್ರಾಥಮಿಕ ಮತ್ತು ಪ್ರೌಢಶಾಲೆ, ಎಲ್ಲಾ ಇಲಾಖೆಯಲ್ಲಿ ಕೆಲಸ ಮಾಡೋ ಗುತ್ತಿಗೆ ಕೆಲಸಗಾರರು, ಅಂಗನವಾಡಿ ಕಾರ್ಯಕರ್ತರು. ಇವರೆಲ್ಲಾ ನಮ್ಮ ಸಮಾಜದ ಬೆನ್ನೆಲುಬು. ಆದರೆ ಇವರ ಬೆನ್ನೆಲುಬು ಮುರಿಯುತ್ತಿದೆ. ಇವರಲ್ಲಿ ಅತಿಥಿ ಉಪನ್ಯಾಸಕರ ಗೋಳು ಕೇಳೋರೇ ಇಲ್ಲ.

ಇದನ್ನೂ ಓದಿ: Vishweshwar Bhat Column: ಅಂದು ʼಕಳ್ಳರ ದೇಶʼ, ಇಂದು ಹೃದಯಗಳನ್ನು ಕದಿಯುವ ಸುಂದರ ದೇಶ !

ಅತಿಥಿ ಉಪನ್ಯಾಸಕರು - ಹೆಸರಿನಲ್ಲಿ ಅತಿಥಿ, ಕೆಲಸದಲ್ಲಿ ಮಾಲೀಕ. ಅತಿಥಿ ಉಪನ್ಯಾಸಕ ಅಂದರೆ ಏನು, ಅತಿಥಿ ಅಂದರೆ ಕೆಲವು ದಿನ ಬಂದು ಹೋಗುವವನು. ಆದರೆ ಇವರು ವರ್ಷಗಟ್ಟಲೆ ಒಂದೇ ಕಾಲೇಜಿನಲ್ಲಿ ಕೆಲಸ ಮಾಡುತ್ತಾರೆ. ಒಂದೇ ತರಗತಿಯಲ್ಲಿ ಪಾಠ ಮಾಡುತ್ತಾರೆ. ಒಂದೇ ಮಕ್ಕಳ ಭವಿಷ್ಯವನ್ನು ಕಟ್ಟುತ್ತಾರೆ. ಖಾಯಂ ಉಪನ್ಯಾಸಕರು ಮಾಡುವ ಕೆಲಸವನ್ನೇ ಇವರು ಮಾಡುತ್ತಾರೆ.

ಕೆಲವೊಮ್ಮೆ ಅವರಿಗಿಂತ ಹೆಚ್ಚು ಕೆಲಸ ಮಾಡುತ್ತಾರೆ. ಪರೀಕ್ಷೆ, ಮೌಲ್ಯಮಾಪನ, ಪ್ರವೇಶ, ಸಾಂಸ್ಕೃತಿಕ ಕಾರ್ಯಕ್ರಮ, ಎನ್‌ಎಸ್‌ಎಸ್, ಕ್ರೀಡೆ - ಎಲ್ಲದರಲ್ಲೂ ಇವರೇ ಮುಂದು. ಆದರೆ ವೇತನ ಬಂದಾಗ. ಖಾಯಂ ಉಪನ್ಯಾಸಕರಿಗೆ 60000, 80000, 1 ಲಕ್ಷ ಸಂಬಳ. ಅತಿಥಿ ಉಪನ್ಯಾಸಕ ರಿಗೆ? ಗಂಟೆಗೆ 200, 250 ರೂಪಾಯಿ.

ತಿಂಗಳಿಗೆ 12000, 15000, ಹೆಚ್ಚೆಂದರೆ 20000 ರು. ಅದೂ 10 ತಿಂಗಳು ಮಾತ್ರ. ಬೇಸಿಗೆ ರಜೆಯಲ್ಲಿ ಸಂಬಳವಿಲ್ಲ. ಪರೀಕ್ಷೆ ಇಲ್ಲದ ತಿಂಗಳಲ್ಲಿ ಸಂಬಳವಿಲ್ಲ. ಅನಾರೋಗ್ಯವಾದರೆ ಸಂಬಳವಿಲ್ಲ. ಸಾಮಾನ್ಯ ಕೂಲಿ ಕೆಲಸ ಮಾಡುವ ಕಾರ್ಮಿಕನಿಗೆ ದಿನಕ್ಕೆ 700-800 ರುಪಾಯಿ ಸಿಗುತ್ತದೆ. ತಿಂಗಳಿಗೆ 20000ಕ್ಕಿಂತ ಹೆಚ್ಚು ಸಿಗುತ್ತದೆ. ಆದರೆ ಎಂಎ, ಎಂಕಾಂ, ಎಂಎಸ್‌ಸಿ, ಬಿಎಡ್, ನೆಟ್, ಪಿಎಚ್‌ಡಿ ಮಾಡಿದ ಅತಿಥಿ ಉಪನ್ಯಾಸಕನಿಗೆ ಕೂಲಿ ಕಾರ್ಮಿಕನಿಗಿಂತ ಕಡಿಮೆ ವೇತನ. ಇದು ಅವಮಾನ ವಲ್ಲವೇ? ಇದು ಶಿಕ್ಷಣ ವ್ಯವಸ್ಥೆಯ ಸೋಲಲ್ಲವೇ? ಅತಿಥಿ ಉಪನ್ಯಾಸಕ ಬೆಳಗ್ಗೆ 8 ಗಂಟೆಗೆ ಕಾಲೇಜಿಗೆ ಹೋಗುತ್ತಾನೆ.

ಬಸ್‌ಗೆ 100 ರುಪಾಯಿ ಖರ್ಚು. ಮಧ್ಯಾಹ್ನ ಊಟಕ್ಕೆ 80 ರುಪಾಯಿ. ಸಂಜೆ ಮನೆಗೆ ಬರುವಾಗ ಜೇಬಿನಲ್ಲಿ ಏನೂ ಉಳಿದಿರುವುದಿಲ್ಲ. ಮನೆಯಲ್ಲಿ ಹೆಂಡತಿ, ಮಕ್ಕಳು, ವಯಸ್ಸಾದ ತಂದೆ-ತಾಯಿ. ಮಗು ಕೇಳುತ್ತದೆ - ಅಪ್ಪಾ, ನನಗೆ ಹೊಸ ಬ್ಯಾಗ್ ಬೇಕು ಅಂತ. ಅಪ್ಪನ ಕಣ್ಣಲ್ಲಿ ನೀರು ಬರುತ್ತದೆ. ಏಕೆಂದರೆ ಮಕ್ಕಳಿಗೆ ಪಾಠ ಮಾಡುವ ಅಪ್ಪನಿಗೆ, ತನ್ನ ಮಗುವಿಗೆ ಬ್ಯಾಗ್ ಕೊಡಿಸಲೂ ಆಗುವುದಿಲ್ಲ. ಈ ನೋವು ಯಾರಿಗೆ ಗೊತ್ತು? ಯಾರು ಕೇಳುತ್ತಾರೆ.

ಅತಿಥಿ ಉಪನ್ಯಾಸಕರಿಗೆ ಯಾವುದೇ ಭದ್ರತೆ ಇಲ್ಲ. ಈ ವರ್ಷ ಕೆಲಸ ಇದೆ, ಮುಂದಿನ ವರ್ಷ ಇರುತ್ತದೋ ಇಲ್ಲವೋ ಗೊತ್ತಿಲ್ಲ. ಪ್ರಾಂಶುಪಾಲರು ಬದಲಾದರೆ ಕೆಲಸ ಹೋಗುತ್ತದೆ. ಸರ್ಕಾರದ ಆದೇಶ ಬದಲಾದರೆ ಕೆಲಸ ಹೋಗುತ್ತದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದರೆ ಕೆಲಸ ಹೋಗು ತ್ತದೆ. 10 ವರ್ಷ ಕೆಲಸ ಮಾಡಿದರೂ, 11ನೇ ವರ್ಷದಲ್ಲಿ ನಾಳೆಯಿಂದ ಬರಬೇಡಿ ಎಂದು ಹೇಳಬಹುದು.

ಯಾವುದೇ ಗ್ರಾಚ್ಯುಟಿ ಇಲ್ಲ, ಪಿಎಫ್ ಇಲ್ಲ, ಇಎಸ್‌ಐ ಇಲ್ಲ, ಪಿಂಚಣಿ ಇಲ್ಲ, ಹೆರಿಗೆ ರಜೆ ಇಲ್ಲ. ಒಬ್ಬ ಅತಿಥಿ ಉಪನ್ಯಾಸಕಿ ಗರ್ಭಿಣಿಯಾದರೆ, ಅವಳಿಗೆ ರಜೆ ಇಲ್ಲ. ರಜೆ ತೆಗೆದುಕೊಂಡರೆ ಸಂಬಳವಿಲ್ಲ. ಸಂಬಳವಿಲ್ಲದಿದ್ದರೆ ಮನೆ ನಡೆಯುವುದಿಲ್ಲ. ಹೀಗಾಗಿ ಹೊಟ್ಟೆಯಲ್ಲಿ ಮಗುವನ್ನು ಇಟ್ಟುಕೊಂಡು, ತರಗತಿಯಲ್ಲಿ ನಿಂತು ಪಾಠ ಮಾಡುತ್ತಾಳೆ. ಇದು ಮಾನವೀಯತೆಯೇ?