ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ಏರ್‌ʼಸ್ಪೀಡ್‌ ಮಾಹಿತಿ ಏಕೆ ನಿರ್ಣಾಯಕ ?

ಭೂಮಿಯ ಮೇಲೆ ಕಾರು ಚಲಿಸುವಾಗ ಚಕ್ರದ ತಿರುಗುವಿಕೆಯಿಂದ ವೇಗ ತಿಳಿಯುತ್ತದೆ, ಆದರೆ ಆಕಾಶದಲ್ಲಿ ಗಾಳಿಯ ಒತ್ತಡದ ಮೂಲಕ ವೇಗವನ್ನು ಅಳೆಯಲಾಗುತ್ತದೆ. ಇಲ್ಲಿ ಪಿಟೋ ಟ್ಯೂಬ್‌ಗಳ ಪಾತ್ರ ಶುರುವಾಗುತ್ತದೆ. ಪಿಟೋ ಟ್ಯೂಬ್ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ? ಪಿಟೋ ಟ್ಯೂಬ್ ಎನ್ನುವುದು ವಿಮಾನದ ಹೊರಭಾಗದಲ್ಲಿ (ಸಾಮಾನ್ಯವಾಗಿ ಮೂತಿಯ ಬಳಿ) ಅಳವಡಿಸಲಾಗಿರುವ ಒಂದು ಸಣ್ಣ ಕೊಳವೆ.

ಏರ್‌ʼಸ್ಪೀಡ್‌ ಮಾಹಿತಿ ಏಕೆ ನಿರ್ಣಾಯಕ ?

-

ಸಂಪಾದಕರ ಸದ್ಯಶೋಧನೆ

ವಿಮಾನದ ಹಾರಾಟದಲ್ಲಿ ಅತ್ಯಂತ ಚಿಕ್ಕದಾದ ಆದರೆ ಅತ್ಯಂತ ಪ್ರಭಾವಶಾಲಿ ಬಿಡಿಭಾಗ ವೆಂದರೆ ಅದು ‘ಪಿಟೋ ಟ್ಯೂಬ್’ ( Pitot Tube). ಇವು ಕೇವಲ ಸಣ್ಣ ಕೊಳವೆಗಳಂತೆ ಕಂಡರೂ, ಇಡೀ ವಿಮಾನದ ಸುರಕ್ಷತೆಯು ಇವು ನೀಡುವ ಮಾಹಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಈ ಸಂವೇದಕಗಳಲ್ಲಿ (ಸೆನ್ಸರ್ಸ್) ಉಂಟಾಗುವ ಒಂದು ಸಣ್ಣ ಅಡಚಣೆಯು ಇಡೀ ವಿಮಾನವನ್ನು ಗೊಂದಲಕ್ಕೀಡುಮಾಡಬಹುದು. ವಿಮಾನವು ಆಕಾಶದಲ್ಲಿ ಹಾರುತ್ತಿರು ವಾಗ ಅದರ ವೇಗ ಎಷ್ಟು ಎಂಬುದು ಪೈಲಟ್‌ಗೆ ತಿಳಿಯುವುದು ಅತ್ಯಗತ್ಯ.

ಭೂಮಿಯ ಮೇಲೆ ಕಾರು ಚಲಿಸುವಾಗ ಚಕ್ರದ ತಿರುಗುವಿಕೆಯಿಂದ ವೇಗ ತಿಳಿಯುತ್ತದೆ, ಆದರೆ ಆಕಾಶದಲ್ಲಿ ಗಾಳಿಯ ಒತ್ತಡದ ಮೂಲಕ ವೇಗವನ್ನು ಅಳೆಯಲಾಗುತ್ತದೆ. ಇಲ್ಲಿ ಪಿಟೋ ಟ್ಯೂಬ್‌ಗಳ ಪಾತ್ರ ಶುರುವಾಗುತ್ತದೆ. ಪಿಟೋ ಟ್ಯೂಬ್ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ? ಪಿಟೋ ಟ್ಯೂಬ್ ಎನ್ನುವುದು ವಿಮಾನದ ಹೊರಭಾಗದಲ್ಲಿ (ಸಾಮಾನ್ಯವಾಗಿ ಮೂತಿಯ ಬಳಿ) ಅಳವಡಿಸಲಾಗಿರುವ ಒಂದು ಸಣ್ಣ ಕೊಳವೆ.

ವಿಮಾನವು ಮುಂದಕ್ಕೆ ಚಲಿಸುವಾಗ ಗಾಳಿಯು ಈ ಕೊಳವೆಯ ಒಳಗೆ ನುಗ್ಗುತ್ತದೆ. ಈ ಗಾಳಿಯ ಒತ್ತಡವನ್ನು (Ram Air Pressure) ಅಳೆದು, ಅದನ್ನು ವಿಮಾನದ ವೇಗವಾಗಿ ( Airspeed) ಪರಿವರ್ತಿಸಲಾಗುತ್ತದೆ. ಈ ಪುಟ್ಟ ಕೊಳವೆಯೊಳಗೆ ಯಾವುದಾದರೂ ವಸ್ತು ಸೇರಿಕೊಂಡರೆ ಏನಾಗಬಹುದು? ಅತಿ ಎತ್ತರದಲ್ಲಿ ಹಾರುವಾಗ ತಾಪಮಾನವು ಶೂನ್ಯ ಕ್ಕಿಂತ ಕೆಳಗಿರುತ್ತದೆ.

ಇದನ್ನೂ ಓದಿ: Vishweshwar Bhat Column: ಎಂಜಿನ್‌ ವಿಫಲವಾದರೆ ಮುಂದೇನು ?

ಈ ಸಮಯದಲ್ಲಿ ಪಿಟೋ ಟ್ಯೂಬ್‌ನೊಳಗೆ ನೀರು ಹನಿಗಳು ಮಂಜುಗಡ್ಡೆಯಾಗಿ ಘನೀಕರಿಸಬಹುದು. ವಿಮಾನವು ನೆಲದ ಮೇಲಿರುವಾಗ ಸಣ್ಣ ಕೀಟಗಳು (ಉದಾಹರಣೆಗೆ ಕಣಜಗಳು) ಈ ಕೊಳವೆಯೊಳಗೆ ಗೂಡು ಕಟ್ಟಬಹುದು. ಮಳೆಯ ನೀರು ಅಥವಾ ರನ್‌ವೇ ಮೇಲಿನ ಸಣ್ಣ ಕಸದ ತುಣುಕುಗಳು ಈ ವ್ಯವಸ್ಥೆಯನ್ನು ಬಂದ್ ಮಾಡಬಹುದು.

ಇದು ಸಂಭವಿಸಿದಾಗ, ಪೈಲಟ್‌ಗೆ ಸಿಗುವ ‘ಏರ್‌ಸ್ಪೀಡ್’ ಮಾಹಿತಿ ತಪ್ಪು ಅಥವಾ ಶೂನ್ಯ ವಾಗಿ ತೋರಿಸುತ್ತದೆ. ಇದು ಇಡೀ ವಿಮಾನದ ಕಂಪ್ಯೂಟರ್ ವ್ಯವಸ್ಥೆಯನ್ನೇ ಗೊಂದಲ ಕ್ಕೀಡುಮಾಡುತ್ತದೆ. ಏರ್‌ಸ್ಪೀಡ್ ಮಾಹಿತಿ ಏಕೆ ಅಷ್ಟು ನಿರ್ಣಾಯಕ? ವಿಮಾನದ ವೇಗದ ಮಾಹಿತಿ ಕೇವಲ ಪೈಲಟ್‌ಗೆ ಮಾತ್ರವಲ್ಲ, ವಿಮಾನದ ಹಲವು ಸ್ವಯಂಚಾಲಿತ ವ್ಯವಸ್ಥೆ ಗಳಿಗೂ ಬೇಕು.

ಪೈಲಟ್ ನೋಡುವ ಪರದೆಯ ಮೇಲೆ ತಪ್ಪು ವೇಗ ತೋರಿಸಿದರೆ, ಅವರು ವಿಮಾನದ ವೇಗವನ್ನು ಜಾಸ್ತಿಗೊಳಿಸಬಹುದು ಅಥವಾ ನಿಧಾನಗೊಳಿಸಬಹುದು. ಇದು ಅಪಾಯ ಕಾರಿ. ಆಟೋ ಪೈಲಟ್ ವ್ಯವಸ್ಥೆಯು ವೇಗದ ಆಧಾರದ ಮೇಲೆ ಕೆಲಸ ಮಾಡುತ್ತದೆ. ವೇಗದ ಮಾಹಿತಿ ತಪ್ಪಾದಾಗ ಆಟೋ ಪೈಲಟ್ ಇದ್ದಕ್ಕಿದ್ದಂತೆ (Disengage) ಸ್ಥಗಿತಗೊಳ್ಳಬಹುದು, ಇದರಿಂದ ಪೈಲಟ್ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತದೆ.

ವಿಮಾನವು ತುಂಬಾ ನಿಧಾನವಾದರೆ ‘ಸ್ಟಾಲ್’ (Stall) ಎಚ್ಚರಿಕೆ ಬರುತ್ತದೆ. ಪಿಟೋ ಟ್ಯೂಬ್ ಬ್ಲಾಕ್ ಆದಾಗ ವಿಮಾನ ವೇಗವಾಗಿ ದ್ದರೂ ‘ಸ್ಟಾಲ್’ ಎಚ್ಚರಿಕೆ ಬರಬಹುದು ಅಥವಾ ವಿಮಾನ ನಿಧಾನವಾಗಿದ್ದರೂ ಎಚ್ಚರಿಕೆ ಬಾರದಿರಬಹುದು. ಇಂಥ ಸಮಸ್ಯೆಗಳನ್ನು ತಡೆಯಲು ಆಧುನಿಕ ವಿಮಾನಗಳಲ್ಲಿ ಹಲವಾರು ತಾಂತ್ರಿಕ ವ್ಯವಸ್ಥೆ‌ಗಳನ್ನು ಮಾಡಲಾ ಗಿರುತ್ತದೆ.

ಮಂಜುಗಡ್ಡೆ ಗಟ್ಟಿಯಾಗದಂತೆ ತಡೆಯಲು ಪಿಟೋ ಟ್ಯೂಬ್‌ಗಳನ್ನು ಒಳಗಿನಿಂದ ಕಾಯಿಸುವ ವ್ಯವಸ್ಥೆ ಇರುತ್ತದೆ. ವಿಮಾನದಲ್ಲಿ ಕೇವಲ ಒಂದು ಪಿಟೋ ಟ್ಯೂಬ್ ಇರುವು ದಿಲ್ಲ. ಸಾಮಾನ್ಯವಾಗಿ ಮೂರು ಸ್ವತಂತ್ರ ಪಿಟೋ ಟ್ಯೂಬ್‌ಗಳಿರುತ್ತವೆ. ಇವುಗಳು ಬೇರೆ ಬೇರೆ ಕಂಪ್ಯೂಟರ್ ಗಳಿಗೆ ಮಾಹಿತಿ ನೀಡುತ್ತವೆ.

ವಿಮಾನದ ಕಂಪ್ಯೂಟರ್‌ಗಳು ನಿರಂತರವಾಗಿ ಈ ಮೂರೂ ಸಂವೇದಕಗಳ ಮಾಹಿತಿ ಯನ್ನು ಹೋಲಿಕೆ ಮಾಡುತ್ತಿರುತ್ತವೆ. ಒಂದು ವೇಳೆ ಯಾವುದಾದರೂ ಒಂದು ಸಂವೇದಕ ವು ಭಿನ್ನವಾದ ಮಾಹಿತಿ ನೀಡಿದರೆ, ಕಂಪ್ಯೂಟರ್ ತಕ್ಷಣ ಪೈಲಟ್‌ಗೆ ‘Airspeed Disagree’ ಎಂಬ ಸಂದೇಶ ನೀಡುತ್ತದೆ.

ಒಂದು ವೇಳೆ ಎಲ್ಲ ಏರ್‌ಸ್ಪೀಡ್ ಇಂಡಿಕೇಟರ್ʼಗಳು ವಿಫಲವಾದರೆ ಪೈಲಟ್‌ಗಳು ಏನು ಮಾಡುತ್ತಾರೆ? ಇದಕ್ಕೆ ಅವರ ಬಳಿ ಒಂದು ವಿಶೇಷ ತಂತ್ರವಿದೆ. ಅದು ‘ಪಿಚ್ ಮತ್ತು ಪರ್ವ’. ವಿಮಾನದ ವೇಗವು ಎರಡು ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ. ವಿಮಾನದ ಮೂತಿ ಎಷ್ಟು ಡಿಗ್ರಿ ಮೇಲಕ್ಕೆ ಅಥವಾ ಕೆಳಕ್ಕೆ ಇದೆ (ಪಿಚ್) ಎಂಬುದು.

ಎಂಜಿನ್ ಎಷ್ಟು ಶಕ್ತಿಯನ್ನು (ಪರ್ವ) ಉತ್ಪಾದಿಸುತ್ತಿದೆ ಎಂಬುದು. ಪೈಲಟ್ʼಗಳ ಬಳಿ ಒಂದು ಪಟ್ಟಿ ಇರುತ್ತದೆ. ಉದಾಹರಣೆಗೆ, ಐದು ಡಿಗ್ರಿ ಪಿಚ್ ಮತ್ತು ಶೇ.80ರಷ್ಟು ಇಂಜಿನ್ ಪರ್ವ ಇದ್ದರೆ ವಿಮಾನವು ಇಷ್ಟೇ ವೇಗದಲ್ಲಿ ಚಲಿಸುತ್ತದೆ ಎಂಬುದು ಅವರಿಗೆ ತಿಳಿದಿರು ತ್ತದೆ. ವೇಗದ ಮಾಪಕ ಕೆಲಸ ಮಾಡದಿದ್ದರೂ, ಈ ಸೂತ್ರವನ್ನು ಬಳಸಿ ಅವರು ವಿಮಾನ ವನ್ನು ಸುರಕ್ಷಿತವಾಗಿ ಇಳಿಸಬಲ್ಲರು.