Yagati Raghu Nadig Column: ಖಳನಾಯಕನಾಗಲು ಕಥಾನಾಯಕನ ಕಸರತ್ತು.. !

ಎಲ್ಲರಿಗೂ ಗೊತ್ತಿರುವಂತೆ ಅಣ್ಣಾವ್ರು ‘ಬೇಡರ ಕಣ್ಣಪ್ಪ’ ಚಿತ್ರದಿಂದಲೇ ನಾಯಕನಾಗಿ ಕಾಣಿಸಿಕೊಂಡ ವರು. ತರುವಾಯದಲ್ಲಿ, ‘ಭೂಕೈಲಾಸ’ದಲ್ಲಿ ರಾವಣ ನಾಗಿ, ‘ಮಹಿಷಾಸುರ ಮರ್ದಿನಿ’ಯಲ್ಲಿ ಮಹಿಷಾ ಸುರನಾಗಿ, ‘ಮೋಹಿನಿ ಭಸ್ಮಾಸುರ’ದಲ್ಲಿ ಭಸ್ಮಾ ಸುರನಾಗಿ ಹೀಗೆ ಕೆಲ ಚಿತ್ರಗಳಲ್ಲಷ್ಟೇ ಖಳನ ಛಾಯೆಯ ಪಾತ್ರಗಳನ್ನೂ ಅಪ್ಪಿದವರು

Yagati Raghu Nadig Column_ 020225
Profile Ashok Nayak Feb 2, 2025 6:03 AM

ರಸದೌತಣ‌

ಯಗಟಿ ರಘು ನಾಡಿಗ್

naadigru@gmail.com

ಅಣ್ಣಾವ್ರು ಈಗ ‘ಸಂಪೂರ್ಣ ರಾಮಾಯಣ’ ಚಿತ್ರದಲ್ಲಿ ಅಭಿನಯಿಸಲು ಮನಸ್ಸು ಮಾಡಿದರು ಅಂತಿಟ್ಕೊಳ್ಳಿ. ಆ ಚಿತ್ರ ಅಪೇಕ್ಷಿತ ಆಶಯವನ್ನು ಈಡೇರಿಸೋದು ಕಷ್ಟ ಕಣ್ರೀ..

- ರೀ ಸ್ವಾಮೀ, ಏನ್‌ ಹೇಳ್ತಿದ್ದೀರಾ? ಅಣ್ಣಾವ್ರು ಮಾಡ್ಕೊಂಡು ಬಂದಿರೋ ಪಾತ್ರಗಳ ರೇಂಜ್ ಏನೂಂತ ನಿಮಗೆ ಗೊತ್ತಿದೆ ತಾನೇ? ಅವರ ರೂಪ, ಕಲಾವಂತಿಕೆ, ಅಭಿನಯ ಸಾಮರ್ಥ್ಯ ಎಲ್ಲವೂ ನಿಮಗೆ ಗೊತ್ತಿರುವಂಥದ್ದೇ. ಇನ್ನೂ ಹಲ್ಲು ಹುಟ್ಟದ ಮಕ್ಕಳಿಂದ ಹಿಡಿದು ಇರೋ ಹಲ್ಲೆಲ್ಲಾ ಉದುರಿ ಹೋಗಿರೋ ಮುದುಕರವರೆಗೂ ಅವರ ಚಿತ್ರಕ್ಕೆ ಅಭಿಮಾನಿಗಳಿದ್ದಾರೆ ಅನ್ನೋದನ್ನ ಮರೆತುಬಿಟ್ರಾ? ಹೀಗಿದ್ರೂ ‘ಸಂಪೂರ್ಣ ರಾಮಾಯಣ’ ಚಿತ್ರ ಅಪೇಕ್ಷಿತ ಆಶಯವನ್ನ ಈಡೇರಿ ಸೋದು ಕಷ್ಟ ಅಂತೀರಲ್ಲಾ...

ಇದನ್ನೂ ಓದಿ: Yagati Raghu Nadig Column: ಚಿಣ್ಣರ ಸುಜ್ಞಾನವೂ, ಅಣ್ಣರ ಅಜ್ಞಾನವೂ..!

ಅದ್ಹೆಂಗ್ರೀ ಹಾಗೆ ಹೇಳ್ತೀರಾ?

  • ಅಯ್ಯೋ, ಕೋಪ ಮಾಡ್ಕೋಬೇಡಿ ಬುದ್ಧೀ... ನಾ ಹೇಳಿದ್ದು ಹಾಗಲ್ಲ. ನೀವು ಹೇಳಿದ ವೈಶಿಷ್ಟ್ಯ ಗಳೆಲ್ಲ ಇರೋದ್ರಿಂದ್ಲೇ ಅವರು ನಟಸಾರ್ವಭೌಮ ಅನ್ನಿಸಿಕೊಂಡಿರೋದು, ಸೂಪರ್‌ಸ್ಟಾರ್ ಆಗಿರೋದು. ಅವರ ಚಿತ್ರಗಳ ಕಮರ್ಷಿಯಲ್ ಸಕ್ಸಸ್ ಬಗ್ಗೆ ಅಲ್ಲ ನಾನು ಹೇಳಿದ್ದು, ಯಾವ ಆಶಯ ಇಟ್ಕೊಂಡು ‘ಸಂಪೂರ್ಣ ರಾಮಾಯಣ’ವನ್ನು ತೆಗೀತಾರೋ, ಅದು ನೆರವೇರದಿರ ಬಹುದು ಅಂತ ನನ್ನ ಮಾತಿನರ್ಥ..

- ಅದ್ಹೆಂಗೆ, ಸ್ವಲ್ಪ ಬಿಡಿಸಿ ಹೇಳಿ?

  • ನೋಡಿ ಬುದ್ಧೀ, ರಾಮಾಯಣದಲ್ಲಿ ರಾಮನ ಪಾತ್ರಕ್ಕೆ ಇರುವಷ್ಟೇ ಮಹತ್ವ ರಾವಣನ ಪಾತ್ರಕ್ಕೂ ಇದೆ, ಒಪ್ತೀರಲ್ವಾ?
  • - ಹೌದು. ಅದರಲ್ಲಿ ಗುಟ್ಟೇನಿದೆ? ‘ರಾಮ’ನಿಂದಲೇ ರಾಮಾಯಣ ಬಂದಿದ್ದು ಎಷ್ಟು ನಿಜವೋ, ಹಾಗೆಯೇ ‘ರಾವಣ’ನಿಲ್ಲದ ರಾಮಾಯಣವನ್ನ ಕಲ್ಪಿಸಿಕೊಳ್ಳೋಕ್ಕೆ ಆಗೋಲ್ಲ ಅನ್ನೋದೂ ಅಷ್ಟೇ ನಿಜ. ಅದಕ್ಕೂ, ನಿಮ್ಮ ಹಕ್ಕಿಶಕುನಕ್ಕೂ ಏನ್ ಸಂಬಂಧ?
  • ಸ್ವಲ್ಪ ಇರ್ರೀ, ಹೇಳ್ತೀನೀ... ಎರಡೂ ಪಾತ್ರಕ್ಕೆ ಸಮಾನ ಮಹತ್ವ ಇರೋದ್ರಿಂದ, ರಾಮನ ಪಾತ್ರ ದ ಜತೆಜತೆಗೆ ಅಣ್ಣಾವ್ರು ರಾವಣನ ಪಾತ್ರವನ್ನೂ, ಅಂದರೆ ‘ಡಬಲ್ ಆಕ್ಟಿಂಗ್’ ಮಾಡ ಬೇಕಾಗು ತ್ತಲ್ವಾ?

- ಮಾಡ್ಲಿ ಬಿಡ್ರೀ, ‘ಡಬಲ್ ಧಮಾಕಾ’ ಆಯ್ತಲ್ವಾ? ಅದಕ್ಕೆ ನಿಮ್ಮದೇನು ಕೊಕ್ಕೆ?

  • ಅಯ್ಯೋ, ಅಲ್ಲೇ ಇರೋದು ದೇವ್ರೂ ಎಡವಟ್ಟೂ... ರಾಮಾಯಣದ ಕಥೆಯ ಪ್ರಕಾರ, ರಾಮನ ಹೆಂಡತಿ ಸೀತೆಯನ್ನ ರಾವಣ ಅಪಹರಿಸಿಕೊಂಡು ಹೋಗ್ಬೇಕು. ಈ ದೃಶ್ಯವನ್ನ ನೋಡ್ತಾ ಇದ್ದ ಹಾಗೆ ಅಭಿಮಾನಿ ಪ್ರೇಕ್ಷಕರಲ್ಲಿ ರಾವಣನ ಬಗ್ಗೆ ಆಕ್ರೋಶವೂ, ಸೀತಾಪಹರಣದ ವೇಳೆ ಆ ಜಾಗ ದಲ್ಲಿ ಇರಲಾಗದ ಅಸಹಾಯಕ ರಾಮನ ಕುರಿತು ಅನುಕಂಪವೂ ಮೂಡಬೇಕು. ಇಂಥ ಬಗೆಬಗೆ ಯ ಭಾವಗಳು ಬಿಲ್ಡಪ್ ಆಗ್ತಾ ಆಗ್ತಾ ಹೋದಂಗೆ ಆಯಾ ಪಾತ್ರಧಾರಿಗಳ ಅಭಿನಯವೂ ಕಳೆ ಗಟ್ಟಿ ಕಥೆಯ ಆಶಯಕ್ಕೆ ಒತ್ತು ಸಿಗಬೇಕು. ಆದ್ರೆ ಇಲ್ಲಿ ಹಾಗಾಗೋದಿಲ್ಲ.

ಸೀತೆಯನ್ನ ಅಪಹರಿಸಿದ ರಾವಣನ ಕುರಿತು ಅಭಿಮಾನಿ ಪ್ರೇಕ್ಷಕರು ಆಕ್ರೋಶಗೊಳ್ಳೋದೇ ಇಲ್ಲ. “ಅಯ್ಯೋ ಬಿಡು ಗುರೂ, ರಾಮನ ಪಾತ್ರದಲ್ಲಿರೋದೂ ಅಣ್ಣಾವ್ರೇ, ರಾವಣನಾಗಿ ಕಾಣಿಸಿಕೊಂಡಿ ರೋದೂ ಅಣ್ಣಾವ್ರೇ...ಒಟ್ನಲ್ಲಿ ಸೀತೆಯನ್ನ ಕಿಡ್ನ್ಯಾಪ್ ಮಾಡಿದ್ದು ಇನ್ನೊಬ್ಬ್ರು ಅಣ್ಣಾವ್ರು ಅಲ್ವಾ... ನೋ ಪ್ರಾಬ್ಲಮ್.." ಅಂತ ಹೇಳಿ ರಾವಣನ ಪಾತ್ರಕ್ಕೂ ಹೊಂದಿಕೊಂಡು ಬಿಡ್ತಾರೆಯೇ ಹೊರತು, ಆ ಪಾತ್ರದೆಡೆಗೆ ಆಕ್ರೋಶ ತೋರೋದಿಲ್ಲ.

‘ರಾವಣ ದುರುಳ’ ಎಂಬ ಭಾವ ಅವರಲ್ಲಿ ಕೆನೆಗಟ್ಟೋದೇ ಇಲ್ಲ. ಅಭಿಮಾನಿಗಳು ರಾವಣನಲ್ಲಿ ‘ರಾವಣಸದೃಶ’ ಕ್ರೌರ್ಯವನ್ನು ಕಾಣದೆ, ಅಲ್ಲೂ ‘ಅಣ್ಣಾವ್ರನ್ನೇ’ ಕಾಣೋದ್ರಿಂದ ಕಥೆಯ ಆಶಯ ಹ್ಯಾಗೆ ನೆರವೇರುತ್ತೆ ಹೇಳಿ? ಒಟ್ನಲ್ಲಿ, ರಾವಣನ ಪಾತ್ರದಲ್ಲೂ ಅಣ್ಣಾವ್ರು ಕಾಣಿಸಿಕೊಳ್ಳೋದ್ರಿಂದ, ಅಭಿಮಾನಿಗಳ ದೃಷ್ಟಿಯಲ್ಲಿ ರಾವಣ ಖಳನಾಯಕ ಅಲ್ಲ, ದುಷ್ಟನಲ್ಲ! ಹಿಂಗಾದ್ರೆ ಹೆಂಗೆ ಶಿವಾ?!

- ಅರೆ! ಈ ಆಂಗಲ್‌ನಲ್ಲಿ ನಾವು ಯೋಚನೆನೇ ಮಾಡಿರಲಿಲ್ಲವಲ್ರೀ?!!

***

ಮೇಲೆ ಉಲ್ಲೇಖಿಸಿರುವುದು ಕೆಲಸವಿಲ್ಲದೋರ ಕಥಾ ಕಾಲಕ್ಷೇಪವಲ್ಲ. ಇದು, ಡಾ.ರಾಜ್‌ಕುಮಾರ್ ಅಭಿನಯದ ‘ರಾಜ ನನ್ನ ರಾಜ’ ಸೇರಿದಂತೆ ‘ತಾಯಿಯ ಮಡಿಲಲ್ಲಿ’, ‘ತಾಯಿಯ ನುಡಿ’ ಹೀಗೆ ‘ತಾಯಿ’ ಸರಣಿಯ ಸಾಕಷ್ಟು ಚಿತ್ರಗಳನ್ನು ನಿರ್ಮಿಸಿ ಯಶಸ್ಸು ಕಂಡ ನಿರ್ಮಾಪಕ ಅಬ್ಬಾಯಿ ನಾಯ್ಡು ಅವರು ಹಿಂದೊಮ್ಮೆ ತಮ್ಮ ಆಪ್ತೇಷ್ಟರೊಂದಿಗೆ ನಡೆಸಿದ ‘ಲೋಕಾಭಿರಾಮದ ಹರಟೆ’ಯ ಶಿಷ್ಟರೂಪ!

ಚಿತ್ರರಂಗಕ್ಕೆ ಅಡಿಯಿಡುವ ಮಹತ್ವಾಕಾಂಕ್ಷಿಗಳಲ್ಲಿ ಸಾಮಾನ್ಯವಾಗಿ ಎರಡು ಬಗೆ. ನೇರವಾಗಿ ಕಥಾನಾಯಕನ ಪಾತ್ರಕ್ಕೇ ಆಯ್ಕೆಯಾಗುವ ಅದೃಷ್ಟಶಾಲಿಗಳದು ಮೊದಲ ವರ್ಗವಾದರೆ, ‘ಗುಂಪಿ ನಲ್ಲಿ ಗೋವಿಂದ’ನಂತೆ ಕಾಣಿಸಿಕೊಳ್ಳೋ ಸಣ್ಣಪುಟ್ಟ ಪಾತ್ರ, ನಾಯಕನ ಗೆಳೆಯನ ಪಾತ್ರ, ಖಳನ ಛಾಯೆಯ ಪಾತ್ರ ಇಂಥವನ್ನೆಲ್ಲ ನಿರ್ವಹಿಸಿ ಆಮೇಲೆ ಅದೃಷ್ಟ ಖುಲಾಯಿಸಿ, ಪರಿಶ್ರಮವೂ ಕೈ ಹಿಡಿದು ನಾಯಕ ಪಾತ್ರಗಳಿಗೆ ಜಿಗಿಯುವವರದು ಎರಡನೆಯ ವರ್ಗ (ಟೈಗರ್ ಪ್ರಭಾಕರ್, ಜಗ್ಗೇಶ್, ಚರಣ್‌ರಾಜ್, ಡೈನಮಿಕ್ ಸ್ಟಾರ್ ದೇವರಾಜ್, ಕೋಮಲ್ ಕುಮಾರ್ ಮುಂತಾದವರು ಈ ಎರಡ ನೆಯ ವರ್ಗಕ್ಕೆ ಉದಾಹರಣೆ). ಎಲ್ಲರಿಗೂ ಗೊತ್ತಿರುವಂತೆ ಅಣ್ಣಾವ್ರು ‘ಬೇಡರ ಕಣ್ಣಪ್ಪ’ ಚಿತ್ರ ದಿಂದಲೇ ನಾಯಕನಾಗಿ ಕಾಣಿಸಿಕೊಂಡವರು. ತರುವಾಯದಲ್ಲಿ, ‘ಭೂಕೈಲಾಸ’ದಲ್ಲಿ ರಾವಣ ನಾಗಿ, ‘ಮಹಿಷಾಸುರ ಮರ್ದಿನಿ’ಯಲ್ಲಿ ಮಹಿಷಾ ಸುರನಾಗಿ, ‘ಮೋಹಿನಿ ಭಸ್ಮಾಸುರ’ದಲ್ಲಿ ಭಸ್ಮಾಸುರ ನಾಗಿ ಹೀಗೆ ಕೆಲ ಚಿತ್ರಗಳಲ್ಲಷ್ಟೇ ಖಳನ ಛಾಯೆಯ ಪಾತ್ರಗಳನ್ನೂ ಅಪ್ಪಿದವರು. ಕ್ರಮೇಣ ಸಾಮಾ ಜಿಕ, ಪೌರಾಣಿಕ, ಹಾಸ್ಯಪ್ರಧಾನ, ಜೇಮ್ಸ್‌ಬಾಂಡ್ ಹೀಗೆ ವಿವಿಧ ರಸಗಳ ಪಾತ್ರಗಳನ್ನು ನಿರ್ವಹಿ ಸುತ್ತಾ ಹೋದಂತೆ ಅಭಿಮಾನಿಗಳು ಅವರನ್ನು ಅಪ್ಪಟ ‘ನಾಯಕ’ನಾಗಿ ಸ್ವೀಕರಿಸಿ ಬಿಟ್ಟಿದ್ದರು.

ಆದರೆ ‘ಖಳನ ಪಾತ್ರದಲ್ಲೂ ಮಿಂಚಬೇಕು’ ಎಂಬ ಬಯಕೆ ಅಣ್ಣಾವ್ರ ಮನದ ಮೂಲೆಯಲ್ಲೆಲ್ಲೋ ಅವಿತಿತ್ತು ಎನಿಸುತ್ತದೆ. ಇದಕ್ಕೆ ಒಂದಷ್ಟು ಕಾರಣಗಳಿವೆ. ಖಳನಾಯಕ ಪಾತ್ರದಿಂದ ಚಿತ್ರರಂಗಕ್ಕೆ ಎಂಟ್ರಿ ಪಡೆದವರು ‘ನಾಯಕ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು’ ಎಂದು ಹಪಹಪಿಸುವಂತೆಯೇ, ಶುರುವಿನಿಂದಲೂ ನಾಯಕ ಪಾತ್ರಗಳಲ್ಲೇ ನಟಿಸುತ್ತಾ ಬಂದವರಿಗೆ ‘ಖಳನಾಯಕ ಪಾತ್ರದಲ್ಲೂ ಕಾಣಿಸಿಕೊಳ್ಳಬೇಕು’ ಎಂಬ ಬಯಕೆ ಅಮರಿಕೊಳ್ಳುವುದಿದೆ. ನಾಯಕ ಪಾತ್ರದಂತೆ ಬಿಗುವಿನ ನಿಲುವು, ಅತಿರೇಕದ್ದಲ್ಲದ ಆಂಗಿಕ, ಶಿಷ್ಟ ಭಾಷೆ ಇದ್ಯಾವುದರ ಹಂಗಿಲ್ಲದೆ ಬಿಡುಬೀಸಾಗಿ ಓಡಾಡಿ ಕೊಂಡು ಅಭಿನಯಿಸುವುದಕ್ಕೆ, ವಿಚಿತ್ರ-ವಿಶೇಷ ಮ್ಯಾನರಿಸಂ ಗಳನ್ನು ಅಳವಡಿಕೊಳ್ಳಲಿಕ್ಕೆ ಖಳನಾಯಕ ಪಾತ್ರದಲ್ಲಿ ವಿಪುಲ ಅವಕಾಶಗಳಿರುತ್ತವೆ ಎಂಬ ಕಾರಣಕ್ಕೆ ಕಲೆಯ ಹಸಿವು ಇರುವ ‘ನಾಯಕ’ ಪಾತ್ರಧಾರಿಗಳು ಒಂದು ಘಟ್ಟದ ನಂತರ ‘ಖಳನಾ ಯಕ’ ಪಾತ್ರಕ್ಕೂ ಹಂಬಲಿಸುವು ದುಂಟು. ವೈವಿಧ್ಯಮಯ ಅಭಿನಯದ ರುಚಿಕರ ಭಕ್ಷ್ಯವನ್ನು ಪ್ರೇಕ್ಷಕರಿಗೆ ಉಣಬಡಿಸಬೇಕೆಂಬ ಹಂಬಲವೂ ಇಲ್ಲಿ ಢಾಳಾಗಿರುತ್ತದೆ ಎನ್ನಿ (‘ಗಂಧದಗುಡಿ’ ಚಿತ್ರದಲ್ಲಿನ ವಿಲನ್ ಪಾತ್ರವನ್ನು ಹೊರತು‌ಪಡಿಸಿದರೆ ಬಹುತೇಕವಾಗಿ ನಾಯಕ ಪಾತ್ರಗಳಲ್ಲೇ ಕಾಣಿಸಿಕೊಂಡ ಸಾಹಸಸಿಂಹ ವಿಷ್ಣು ವರ್ಧನ್ ಅವರು ಕೂಡ ಇಂಥದೊಂದು ಹಂಬಲಿಕೆಗೆ ಒಳಗಾಗಿದ್ದರು; ‘ಆಪ್ತರಕ್ಷಕ’ ಚಿತ್ರದಲ್ಲಿ ನಾಯಕನಿಗೆ ಸಮಾ ನಾಂತರವಾಗಿದ್ದ ಕಿರು-ಖಳನಾಯಕನ ಪಾತ್ರದಲ್ಲೂ ಕಾಣಿಸಿಕೊಂಡು ‘ಗರನೆ ಗರಗರನೆ ತಿರುಗಿದೆ ಧರಣಿ ನಿನ್ನ ನೋಡಿ ತರುಣಿ’ ಹಾಡಿನಲ್ಲಿ ಖಳನ ಪಾತ್ರಾಭಿವ್ಯಕ್ತಿಯಲ್ಲಿ ಮಿಂಚಿ ದ್ದು ಈ ಬಯಕೆಯ ಫಲಶ್ರುತಿಯೇ!).

ಆದರೆ, ಕಾಲ ಕಳೆದಂತೆ ಅಣ್ಣಾವ್ರು ಅಭಿಮಾನಿಗಳ ಪಾಲಿಗೆ ಕೇವಲ ನಾಯಕನಟ ಮಾತ್ರ ಆಗಿರದೆ ಆರಾಧ್ಯದೈವವೂ ಆಗಿ ಬಿಟ್ಟಾಗ ಇಂಥ ಹಂಬಲಕ್ಕೆ ಕೊಂಚ ತಡೆ ಒದಗಲಾರಂಭಿಸಿತು. ಚಿತ್ರದ ಮತ್ತೊಂದು ಪಾತ್ರವು ಅಣ್ಣಾವ್ರಿಗೆ ಹೊಡೆಯುವುದಿರಲಿ ಬೈಯುವುದನ್ನು ಕೂಡ ಸಹಿಸದಷ್ಟರ ಮಟ್ಟಿಗೆ ಅಭಿಮಾನಿಗಳ ಪ್ರೀತಿ ತಾರಕಕ್ಕೆ ಏರಿಬಿಟ್ಟಿತು.

ಹೀಗಾಗಿ ಅಣ್ಣಾವ್ರು ಖಳನ ಪಾತ್ರ ವಹಿಸುವುದು ದೂರದಬೆಟ್ಟವೇ ಆಗಿತ್ತು! ಇಷ್ಟಾಗಿಯೂ, ಅಣ್ಣಾ ವ್ರು ಒಮ್ಮೆ ಧೈರ್ಯ ಮಾಡಿ ‘ದಾರಿ ತಪ್ಪಿದ ಮಗ’ ಚಿತ್ರದಲ್ಲಿಇಂಥದೊಂದು ಸಾಹಸ ಮಾಡಿದರು. ಇದರಲ್ಲಿ ಅವರದ್ದು ದ್ವಿಪಾತ್ರ. ಒಂದು ಕಾಲೇಜು ಅಧ್ಯಾಪಕನ ಶಿಷ್ಟಪಾತ್ರ, ಇನ್ನೊಂದು ಖಳನ ಪಾತ್ರ. ಖಳನ ಪಾತ್ರದಲ್ಲಿನ ಅಣ್ಣಾವ್ರು ಒಂದು ಕಡೆ, “ಪ್ರೀತಿ, ಪ್ರೇಮ, ಕರುಣೆ ಇವೆಲ್ಲಾ ಮಾತಲ್ಲಿ ಇರಬೇಕು, ಆಚರಣೇಲಿ ಅಲ್ಲ. ಮದುವೆ ಮಾಡ್ಕೋತೀನಿ ಅಂತ ಹೆಣ್ಣಿಗೆ ಮಾತು ಕೊಡಬೇಕು, ಆದರೆ ಮಾಡ್ಕೋಬಾರ್ದು. ಹೆಣ್ಣನ್ನ ಬಯಸಬೇಕು, ಪ್ರೀತಿಸಬೇಕು, ಅದು ಎಲ್ಲಿಯವರೆಗೆ? ಈ ದೇಹದ ದಾಹ ತೀರೋವರೆಗೂ! ಅದು ತೀರಿದ ಮೇಲೆ ಬಟ್ಟೆ ಮೇಲಿನ ಧೂಳಿನ ಥರ ಹೆಣ್ಣನ್ನು ಝಾಡಿಸಿಬಿ ಡಬೇಕು" ಎಂಬ ಡೈಲಾಗ್ ಹೇಳುತ್ತಾರೆ. ಶುರುವಾಯ್ತು ನೋಡಿ, ಅದು ಚಿತ್ರದ ಖಳಪಾತ್ರ ಹೇಳುವ ಸಂಭಾಷಣೆ ಎಂಬುದನ್ನು ಅಭಿಮಾನಿಗಳು ಒಪ್ಪಲೇ ಇಲ್ಲ. “ಅಣ್ಣಾವ್ರ ಬಾಯಲ್ಲಿ ಇಂಥಾ ಡೈಲಾ ಗಾ?" ಎಂದು ಹೇಳುತ್ತಾ ಅಸಮಾಧಾನ ವ್ಯಕ್ತಪಡಿಸಲು ಶುರು ಮಾಡಿದರು. ಅಣ್ಣಾವ್ರು ಇನ್ನು ಮುಂದೆ ಇಂಥ ಪಾತ್ರಗಳಲ್ಲಿ ಅಭಿನಯಿಸಬಾರದು, ಇಂಥ ಡೈಲಾಗು ಹೇಳಬಾರದು ಎಂಬ ಅಲಿಖಿತ ನಿಯಮ ರೂಪುಗೊಳ್ಳುವಷ್ಟರ ಮಟ್ಟಿಗೆ ತೀವ್ರವಾಗಿತ್ತು ಆ ಆಗ್ರಹ. ಅದಾಗಿದ್ದೇ ಆಗಿದ್ದು, ನಂತರ ದಲ್ಲಿ ಬೆರಳೆಣಿಕೆಯ ಚಿತ್ರಗಳನ್ನು ಹೊರತುಪಡಿಸಿದರೆ ಅಣ್ಣಾವ್ರು ಸಂಪೂರ್ಣವಾಗಿ ‘ಧ್ಯೇಯನಿಷ್ಠ-ಕರ್ತವ್ಯನಿಷ್ಠ-ನ್ಯಾಯನಿಷ್ಠ- ಪತಿನಿಷ್ಠ’ ನಾಯಕನ ಪಾತ್ರಗಳಲ್ಲೇ ಕಾಣಿಸಿಕೊಳ್ಳುವಂತಾಯಿತು.

ಇಷ್ಟಾಗಿಯೂ ಬಡ್ಡೀಮಗಂದು ‘ಖಳಪಾತ್ರದ ಖ್ವಾಯಿಷ್’ ಅನ್ನೋದು ಅಣ್ಣಾವ್ರನ್ನ ಬಿಡಬೇಕಲ್ಲ! ಆದರೆ, ಅಭಿಮಾನಿಗಳು ‘ಅಲಿಖಿತ ನಿರ್ಬಂಧ’ವನ್ನೂ ಹಾಕಿಬಿಟ್ಟಿದ್ದಾರಲ್ಲ, ಏನುಮಾಡೋದು? ಎಂಬ ಪ್ರಶ್ನೆ ಮೂಡಿದಾಗ ಹೊಳೆದ ಉತ್ತರವೇ ‘ಭಕ್ತ ಪ್ರಹ್ಲಾದ’. ಈ ಚಿತ್ರದಲ್ಲಿ ಅಣ್ಣಾವ್ರು ಅಭಿನ ಯಿಸಿದ ಹಿರಣ್ಯಕಶಿಪು ಪಾತ್ರ ಅಪ್ಪಟ ಖಳನಾಯಕನದ್ದೇ, ಆದರೆ ಅಲ್ಲಿ ಪಾತ್ರ ಪ್ರಸ್ತುತಿಯನ್ನು ‘ಜಾಣ್ಮೆಯಿಂದ’ ಕಟ್ಟಿಕೊಟ್ಟಿದ್ದರು ಚಿತ್ರಕಥೆ ರಚನೆಕಾರರು, ನಿರ್ದೇಶಕರು ಮತ್ತು ಅಭಿನಯಿಸಿದ ಅಣ್ಣಾವ್ರು. ನಿಜದಲ್ಲಿ ಈ ಚಿತ್ರದ ನಾಯಕನೆಂದರೆ ಪ್ರಹ್ಲಾದನ ಪಾತ್ರದಲ್ಲಿ ಮಿಂಚಿದ ‘ಅಪ್ಪು’ ಪುನೀತ್ ರಾಜ್‌ಕುಮಾರರೇ! (ಆಗಿನ್ನೂ ಅವರು ‘ಮಾಸ್ಟರ್ ಲೋಹಿತ್’. ಚಿತ್ರದ ದೃಶ್ಯವೊಂದರಲ್ಲಿ ಅಪ್ಪನ ರೌದ್ರಾವತಾರವನ್ನು ಕಂಡು ‘ಅಪ್ಪು’ ಅಕ್ಷರಶಃ ಗಾಬರಿ ಕೊಂಡಿದ್ದರಂತೆ; ಸೆಟ್‌ನಲ್ಲಿದ್ದವರು ತಿಳಿಹೇಳಿದ ಮೇಲಷ್ಟೇ ಅಪ್ಪು ನಿರಾಳರಾಗಿದ್ದು!). ಅಣ್ಣಾವ್ರು ಖಳನಟನಾಗಿ ಅಬ್ಬರಿಸಿದ್ದರ ಹೊರ ತಾಗಿಯೂ ಈ ಚಿತ್ರ ಅಭಿಮಾನಿಗಳಿಂದ ಸ್ವೀಕೃತವಾಯಿತು, ಭರ್ಜರಿ ಯಶಸ್ಸನ್ನೂ ದಾಖಲಿಸಿತು. ಆದರೆ, ಈ ಚಿತ್ರದಲ್ಲಿ ಅಭಿಮಾನಿಗಳು ಹಿರಣ್ಯಕಶಿಪುವನ್ನು ಪಾತ್ರವಾಗಿ ಇಷ್ಟಪಟ್ಟರಾ? ಅಥವಾ ಅಣ್ಣಾವ್ರು ಅಭಿನಯಿಸಿದ್ದಾರೆಂಬಕಾರಣಕ್ಕೆಹಿರಣ್ಯಕಶಿಪುವಿನಲ್ಲಿಅವರನ್ನು ಸಮೀಕರಿಸಿಕೊಂಡು ಕಣ್ತುಂಬಿಕೊಂಡರಾ? ಎಂಬುದು ಪ್ರಶ್ನೆ. ಈ ಎರಡೂ ಗ್ರಹಿಕೆಗಳ ನಡುವೆ ಇರುವುದು ತೆಳ್ಳನೆಯ/ ಮಸುಕಾದ ಗೆರೆ. ಅಂಥದೊಂದು ‘ಭೇದಕಲ್ಪನೆ’ಯ ಕುರಿತು ಇನ್ನೂ ಗೊಂದಲವಿದ್ದರೆ, ಈ ಬರಹದ ಶುರುವಿನಲ್ಲಿ ನೀಡಲಾಗಿರುವ ಅಬ್ಬಾಯಿ ನಾಯ್ಡು ಅವರ ಲೋಕಾಭಿರಾಮದ ಹರಟೆಯನ್ನು ಇನ್ನೊಮ್ಮೆ ಅವಲೋಕಿಸಿ..!

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Rajath Kishan (2)
7:07 AM January 30, 2025

BBK11 Rajath Kishan: ನಂದೂ ಹಳೆ ಕತೆಗಳಿವೆ.. ಆದರೆ ಆ ಹುಡುಗಿಯ ಫೋಟೊ ಬಿಡಬಾರದಿತ್ತು: ರಜತ್