ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡಲು ತಮಿಳು ಭಾಷೆ ಕಲಿತ 14 ಕೋಟಿ ರು ಬೆಲೆಯ ಪ್ರಶಾಂತ್‌ ವೀರ್‌!

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 14.20 ಕೋಟಿ ರು. ಗಳ ದಾಖಲೆಯ ಬೆಲೆಗೆ ಸೇರಿರುವ ಯುವ ಆಲ್‌ರೌಂಡರ್ ಪ್ರಶಾಂತ್ ವೀರ್‌, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭವಾಗುವುದಕ್ಕೂ ಮೊದಲೇ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಒಂದು ವಿಡಯೊದಲ್ಲಿ ಪ್ರಶಾಂತ್ ತಮ್ಮ ತಂಗಿಯ ಬಳಿ ತಮಿಳು ಭಾಷೆ ಕಲಿಯುತ್ತಿರುವುದು ಕಂಡಿದೆ.

‌IPL 2026: ಸಿಎಸ್‌ಕೆ ಪರ ಆಡಲು ತಮಿಳು ಭಾಷೆ ಕಲಿತ ಪ್ರಶಾಂತ್‌ ವೀರ್!

ಸಿಎಸ್‌ಕೆಗೆ ಬರುವುದಕ್ಕೂ ಮುನ್ನ ತಮಿಳು ಕಲಿತ ಪ್ರಶಾಂತ್‌ ವೀರ್‌. -

Profile
Ramesh Kote Mar 13, 2026 9:45 PM

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ 14.20 ಕೋಟಿ ರು ದಾಖಲೆಯ ಮೊತ್ತಕ್ಕೆ ಸೇರಿರುವ ಯುವ ಆಲ್‌ರೌಂಡರ್ ಪ್ರಶಾಂತ್ ವೀರ್‌ (Prashanth Veer) 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ(IPL 2026) ಆರಂಭವಾಗುವುದಕ್ಕೂ ಮೊದಲೇ ಸಿಎಸ್‌ಕೆ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಚೆನ್ನೈಗೂ ಬರುವುದಕ್ಕೂ ಮುನ್ನ ಯುವ ಆಲ್‌ರೌಂಡರ್‌ ತಮ್ಮ ತಂಗಿಯ ಬಳಿ ತಮಿಳು ಕಲಿಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಗಮನಿಸಿದ ಸಿಎಸ್‌ಕೆ ಅಭಿಮಾನಿಗಳಿ ಪ್ರಶಾಂತ್‌ ವೀರ್‌ ಅವರನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ.

ವೈರಲ್‌ ಆಗಿರುವ ವಿಡಿಯೊದಲ್ಲಿ ಪ್ರಶಾಂತ್‌, ತಮ್ಮ ತಂಗಿಯ ವಿಡಿಯೊ ಸಂದೇಶದ ಮೂಲಕ ಸೂಚನೆಗಳನ್ನು ಪಡೆದು ಕೆಲವು ತಮಿಳು ವಾಕ್ಯಗಳನ್ನು ಅಭ್ಯಾಸ ಮಾಡುತ್ತಿರುವುದು ಕಾಣುತ್ತದೆ. ಈ ಹೃದಯಸ್ಪರ್ಶಿ ಕ್ಷಣ ತಕ್ಷಣವೇ ಸಿಎಸ್‌ಕೆ ಅಭಿಮಾನಿಗಳ ಗಮನ ಸೆಳೆದಿದೆ. ಚೆನ್ನೈ ಫ್ರಾಂಚೈಸಿಗೆ ಸೇರ್ಪಡೆಯಾಗುವ ಮುನ್ನ ಯುವ ಆಟಗಾರ ಸ್ಥಳೀಯ ಭಾಷೆಯನ್ನು ಕಲಿಯುತ್ತಿರುವ ಆಸಕ್ತಿಯನ್ನು ನೋಡಿದ ಫ್ಯಾನ್ಸ್‌ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಈ ವಿಡಿಯೊ ಬಿಡುಗಡೆಯಾದ ಬಳಿಕ ಯುವ ಆಟಗಾರನ ಬಗ್ಗೆ ಅಭಿಮಾನಿಗಳಲ್ಲಿನ ಉತ್ಸಾಹ ಹೆಚ್ಚಾಗಿದೆ. ವಿಶೇಷವಾಗಿ 2026ರ ಐಪಿಎಲ್ ಹರಾಜಿನಲ್ಲಿ ಸಿಎಸ್‌ಕೆ ಭಾರಿ ಮೊತ್ತವನ್ನು ನೀಡುವ ಮೂಲಕ ಈ ಆಲ್‌ರೌಂಡರ್‌ ಅನ್ನು ಖರೀದಿಸಿತ್ತು. ಐದು ಬಾರಿ ಚಾಂಪಿಯನ್ಸ್‌ ಸಿಎಸ್‌ಕೆ, ಉತ್ತರ ಪ್ರದೇಶದ 20 ವರ್ಷದ ವಯಸ್ಸಿನ ಯುವ ಆಲ್‌ರೌಂಡರ್ ಪ್ರಶಾಂತ್‌ ವೀರ್‌ ಅವರ ಮೇಲೆ 14.20 ಕೋಟಿ ರು ಹೂಡಿಕೆ ಮಾಡಿದೆ.

IPL 2026: SRH ವಿರುದ್ಧದ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ಆಘಾತ! ಸ್ಟಾರ್‌ ವೇಗಿ ಡೌಟ್..

ಪ್ರಶಾಂತ್ ವೀರ್‌ ಯಾರು?

ಉತ್ತರ ಪ್ರದೇಶದ ಅಮೆಥಿ ಮೂಲದ ಯುವ ಆಲ್‌ರೌಂಡರ್ ಪ್ರಶಾಂತ್ ವೀರ, ಭಾರತದ ದೇಶಿ ಕ್ರಿಕೆಟ್‌ನ ಉದಯೋನ್ಮುಖ ಪ್ರತಿಭಾವಂತ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಪ್ರಶಾಂತ್‌ ಅವರು ಎಡಗೈ ಸ್ಪಿನ್‌ ಆಲ್‌ರೌಂಡರ್‌ ಆಗಿದ್ದಾರೆ. ಅವರು ಟಿ20 ಸ್ವರೂಪದಲ್ಲಿ ಅತ್ಯಂತ ಅಮೂಲ್ಯ ಆಟಗಾರರಾಗಿದ್ದಾರೆ.



ಅವರ ಆಟ ಶೈಲಿಯು ಈಗಾಗಲೇ ರವೀಂದ್ರ ಜಡೇಜಾ ಅವರೊಂದಿಗೆ ಹೋಲಿಕೆಯಾಗುತ್ತಿದೆ. ಜಡೇಜಾ ದೀರ್ಘಕಾಲ ಸಿಎಸ್‌ಕೆ ತಂಡದಲ್ಲಿ ಕೀ ಆಟಗಾರರಾಗಿದ್ದರು. ಇದೀಗ ಅವರು ರಾಜಸ್ಥಾನ್ ರಾಯಲ್ಸ್‌ಗೆ ಸೇರಿರುವ ನಂತರ ಮತ್ತು ಸಂಜು ಸ್ಯಾಮ್ಸನ್ ಸಿಎಸ್‌ಕೆಗೆ ಬಂದ ಹಿನ್ನೆಲೆಯಲ್ಲಿ ಜಡೇಜಾ ಅವರ ಸ್ಥಾನಕ್ಕೆ ಪ್ರಶಾಂತ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಬಹುದು.

IPL 2026: ವೆಂಕಟೇಶ್‌ ಅಯ್ಯರ್‌ ಔಟ್‌! ಆರ್‌ಸಿಬಿ ಪ್ಲೇಯಿಂಗ್‌ XI ಕಟ್ಟಿದ ಸಂಜಯ್‌ ಬಾಂಗರ್‌!

ಐಪಿಎಲ್ ಮಿನಿ ಹರಾಜಿನಲ್ಲಿ 30 ಲಕ್ಷ ರು ಮೂಲ ಬೆಲೆಗೆ ಅವರು ಕಾಣಿಸಿಕೊಂಡಿದ್ದರು. ಆದರೆ ಬಿಡಿಂಗ್ ತೀವ್ರವಾದ ಹಿನ್ನೆಲೆಯಲ್ಲಿ ಅವರ ಮೌಲ್ಯ ಜಾಸ್ತಿಯಾಯಿತು. ಲಖನೌ ಸೂಪರ್‌ ಜಯಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ಆರಂಭದಲ್ಲಿ ಆಸಕ್ತಿ ತೋರಿದ ನಂತರ, ಬೆಲೆ 4 ಕೋಟಿ ರು ದಾಟಿತು. ನಂತರ ಸಿಎಸ್‌ಕೆ ಮತ್ತು ರಾಜಸ್ಥಾನ್ ರಾಯಲ್ಸ್ ಪೈಪೋಟಿಗೆ ಇಳಿದಿದ್ದವು. ಬೆಲೆ 6 ಕೋಟಿ ಮೀರಿದ ಬಳಿಕ ಆರ್‌ಆರ್‌ ಆಸಕ್ತಿಯನ್ನು ಕಳೆದುಕೊಂಡಿತು. ಅಂತಿಮವಾಗಿ ಚೆನ್ನೈ ಫ್ರಾಂಚೈಸಿ 14.20 ಕೋಟಿ ರು. ಗಳಿಗೆ ಖರೀದಿಸುವಲ್ಲಿ ಯಶಸ್ವಿಯಾಯಿತು.