ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮೆಜಾನ್ ಎಐ ಕ್ರಾಂತಿಯ ಹಿಂದೆ ಸ್ತ್ರೀ ಶಕ್ತಿ: ತಾಂತ್ರಿಕ ಆವಿಷ್ಕಾರದ ಮುಂಚೂಣಿಯಲ್ಲಿ ಭಾರತೀಯ ನಾಯಕಿಯರು

ಅಮೆಜಾನ್ ಇಂಡಿಯಾದ ಮೂವರು ನಾಯಕಿಯರು ಈ ಎಐ ಕ್ರಾಂತಿಯ ಹಿಂದೆ ಇದ್ದಾರೆ ಅನ್ನು ವುದು ವಿಶೇಷ. ಗೀತಾಂಜಲಿ ಭೂತಾನಿ, ಪಾಯಲ್ ಗುಪ್ತಾ ಮತ್ತು ಶ್ವೇತಾ ಶಂಕರ್ ಅವರು ಗ್ರಾಹಕರ ಪ್ರಯಾಣ ದ ಪ್ರತಿ ಹಂತಕ್ಕೂ ಅಂದರೆ ಗ್ರಾಹಕರು ಉತ್ಪನ್ನಗಳನ್ನು ಹುಡುಕುವ ಕ್ಷಣದಿಂದ ಹಿಡಿದು ಸುಗಮವಾಗಿ ಹಣ ಪಾವತಿಸಿ ಹೊರಬರುವವರೆಗೆ ಅವರಿಗೆ ಸುಗಮ ಅನುಭವ ಒದಗಿಸುವ ತಂತ್ರಜ್ಞಾನ ವೇದಿಕೆ ಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

ಅಮೆಜಾನ್ ಎಐ ಕ್ರಾಂತಿಯ ಹಿಂದೆ ಸ್ತ್ರೀ ಶಕ್ತಿ

-

Profile
Ashok Nayak May 6, 2026 3:02 PM

ಜಾಗತಿಕ ಇ-ಕಾಮರ್ಸ್ ದೈತ್ಯ ಅಮೆಜಾನ್ ಸಂಸ್ಥೆಯು ಪ್ರತಿದಿನ ಲಕ್ಷಾಂತರ ಗ್ರಾಹಕರಿಗೆ ಒದಗಿಸುವ ವೈಯಕ್ತೀಕರಿಸಿದ ಶಿಫಾರಸುಗಳು, ಪೂರೈಕೆ ಸರಪಳಿಯ ಮುನ್ಸೂಚನೆ ಹಾಗೂ ವಾಯ್ಸ್ ಅಸಿಸ್ಟೆಂಟ್ ಸೇವೆಗಳ ಹಿಂದೆ ಪ್ರಬಲ ಮಹಿಳಾ ನಾಯಕತ್ವದ ಶ್ರಮವಿದೆ.

ಈ ಮಹಿಳಾ ನಾಯಕಿಯರು ಹೊಸ ಹೊಸ ಪ್ಲಾಟ್‌ ಫಾರ್ಮ್‌ಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ, ತಾಂತ್ರಿಕ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದಾರೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಸುಗಮ ಗ್ರಾಹಕ ಅನುಭವಗಳನ್ನಾಗಿ ಪರಿವರ್ತಿಸುತ್ತಿದ್ದಾರೆ. ಶಾಪಿಂಗ್ ಅನುಭವಗಳಿಂದ ಹಿಡಿದು ಅಮೆಜಾನ್ ವೆಬ್ ಸರ್ವಿಸಸ್ (ಎಡಬ್ಲ್ಯೂಎಸ್) ಮೂಲಕ ಜನರೇಟಿವ್ ಎಐ ಟೂಲ್ ಗಳವರೆಗೆ ಅಮೆಜಾನ್ ತನ್ನ ತಾಂತ್ರಿಕ ಪರಿಸರ ವ್ಯವಸ್ಥೆಯಾದ್ಯಂತ ಎಐ ಅನ್ನು ಅಳವಡಿಸುತ್ತಿದೆ. ಈ ನಿಟ್ಟಿನಲ್ಲಿ ಭಾರತವು ಒಂದು ನಿರ್ಣಾಯಕ ಆವಿಷ್ಕಾರ ಕೇಂದ್ರವಾಗಿ ಹೊರಹೊಮ್ಮಿದ್ದು, ಇಲ್ಲಿನ ತಂತ್ರಜ್ಞಾನ ತಂಡಗಳು ಜಾಗತಿಕವಾಗಿ ಲಕ್ಷಾಂತರ ಗ್ರಾಹಕರಿಗೆ ಬೆಂಬಲ ನೀಡುವ ವ್ಯವಸ್ಥೆಗಳನ್ನು ನಿರ್ಮಿಸುತ್ತಿವೆ.

ಅಮೆಜಾನ್ ಇಂಡಿಯಾದ ಮೂವರು ನಾಯಕಿಯರು ಈ ಎಐ ಕ್ರಾಂತಿಯ ಹಿಂದೆ ಇದ್ದಾರೆ ಅನ್ನು ವುದು ವಿಶೇಷ. ಗೀತಾಂಜಲಿ ಭೂತಾನಿ, ಪಾಯಲ್ ಗುಪ್ತಾ ಮತ್ತು ಶ್ವೇತಾ ಶಂಕರ್ ಅವರು ಗ್ರಾಹಕರ ಪ್ರಯಾಣದ ಪ್ರತಿ ಹಂತಕ್ಕೂ ಅಂದರೆ ಗ್ರಾಹಕರು ಉತ್ಪನ್ನಗಳನ್ನು ಹುಡುಕುವ ಕ್ಷಣದಿಂದ ಹಿಡಿದು ಸುಗಮವಾಗಿ ಹಣ ಪಾವತಿಸಿ ಹೊರಬರುವವರೆಗೆ ಅವರಿಗೆ ಸುಗಮ ಅನುಭವ ಒದಗಿಸುವ ತಂತ್ರಜ್ಞಾನ ವೇದಿಕೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಗ್ರಾಹಕರ ಶಾಪಿಂಗ್ ಅನುಭವಗಳಿಂದ ಹಿಡಿದು ಆಂತರಿಕ ಸಹಯೋಗದ ಟೂಲ್ ಗಳವರೆಗೆ ಇವರ ಕಾರ್ಯನಿರ್ವಹಣೆ ನಡೆಯುತ್ತಿದ್ದು, ಎಐ ಆವಿಷ್ಕಾರವು ವ್ಯವಹಾರದ ಪ್ರತಿಯೊಂದು ಭಾಗವನ್ನೂ ಹೇಗೆ ತಲುಪಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: EPL: Amazon.in ನಲ್ಲಿ ಮಾ.6ರಿಂದ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಆರಂಭ

ದೊಡ್ಡ ಪ್ರಮಾಣದ ಆವಿಷ್ಕಾರ ಕಾರ್ಯಗಳಿಗೆ ನಾಯಕತ್ವ

ಸಾಫ್ಟ್‌ ವೇರ್ ಡೆವಲಪ್‌ಮೆಂಟ್ ನಿರ್ದೇಶಕಿ ಆಗಿರುವ ಗೀತಾಂಜಲಿ ಭೂತಾನಿ ಅವರು, ಅಮೆಜಾನ್‌ ನಲ್ಲಿ ಗ್ರಾಹಕರು ಕಾಣುವ ಉತ್ತಮ ಬೆಲೆಗಳಿಗೆ ಕಾರಣವಾಗುವ ಬೃಹತ್ ಪ್ರಮಾಣದ ಸಿಸ್ಟಮ್‌ ಗಳನ್ನು ಅಭಿವೃದ್ಧಿಪಡಿಸುವ ತಂಡಗಳ ನೇತೃತ್ವ ವಹಿಸಿದ್ದಾರೆ. ಇತ್ತೀಚೆಗೆ ಅವರು ಜನರೇಟಿವ್ ಎಐ ಅನ್ನು ಬಳಸಿಕೊಂಡು ಈ ವ್ಯವಸ್ಥೆಗಳ ಮೂಲಕ ನಡೆಯುವ ವಹಿವಾಟುಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಿದ್ದಾರೆ. ತಾಂತ್ರಿಕ ಆಳ ಮತ್ತು ಕಾರ್ಯತಂತ್ರದ ಚಿಂತನೆ ಎರಡನ್ನೂ ಬಯಸುವ ಸಂಕೀರ್ಣ ಎಂಜಿನಿಯರಿಂಗ್ ಯೋಜನೆಗಳನ್ನು ಅವರು ಮುನ್ನಡೆಸುತ್ತಾರೆ.

ಈ ಕುರಿತು ಗೀತಾಂಜಲಿ ಅವರು, "ಒಂದು ಉತ್ಸಾಹಿ ಮತ್ತು ಹುಮ್ಮಸ್ಸಿನ ತಂಡವನ್ನು ಕಟ್ಟಿದರೆ, ಆಗ ನೀವು ಸ್ವಾಭಾವಿಕವಾಗಿಯೇ ಅತ್ಯುತ್ತಮ ತಾಂತ್ರಿಕ ವ್ಯವಸ್ಥೆಗಳನ್ನು ಹೊಂದುತ್ತೀರಿ ಮತ್ತು ಅಲ್ಲಿ ಹೊಸ ಆವಿಷ್ಕಾರಗಳಿಗೆ ಯಾವತ್ತೂ ಕೊರತೆಯಿರುವುದಿಲ್ಲ," ಎಂದು ಅಭಿಪ್ರಾಯಪಡುತ್ತಾರೆ. "ಒಳಗೊಳ್ಳುವಿಕೆಯ ವಾತಾವರಣವನ್ನು ನಿರ್ಮಿಸುವುದು, ಜನರು ತಮ್ಮಿಂದ ಸಾಧ್ಯವಿಲ್ಲ ಎಂದು ಅಂದುಕೊಂಡದ್ದನ್ನು ಮಾಡಲು ಅವರಿಗೆ ಅವಕಾಶ ನೀಡುವುದು ಮತ್ತು ಅವರ ಮೇಲೆ ನಂಬಿಕೆಯಿಡುವುದರಿಂದ ಎಂಜಿನಿಯರ್‌ ಗಳಲ್ಲಿನ ಸಾಮರ್ಥ್ಯವನ್ನು ಹೇಗೆ ಹೊರತರಬಹುದು ಎಂಬುದನ್ನು ನಾನು ನೇರವಾಗಿ ಕಂಡಿದ್ದೇನೆ" ಎಂದು ಅವರು ಹೇಳುತ್ತಾರೆ. ಅಮೇಜ್ ವಿಟ್ ಮತ್ತು ವುಮೆನ್ ಇನ್ ಲೀಡರ್‌ ಶಿಪ್ ನಂತಹ ಯೋಜನೆಗಳ ಮೂಲಕ, ಗೀತಾಂಜಲಿ ಅಮೆಜಾನ್ ಇಂಡಿಯಾದಾದ್ಯಂತ ಮಹಿಳಾ ಎಂಜಿನಿಯರ್‌ ಗಳಿಗೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರು ಮಹಿಳೆಯರು ತಮ್ಮ ಕನಸುಗಳನ್ನು ಸಾಧಿಸಲು ಪ್ರೇರೇಪಿಸುವುದಲ್ಲದೆ, ವೃತ್ತಿಜೀವನದ ಬೆಳವಣಿಗೆ ಮತ್ತು ಹಿರಿಯ ತಾಂತ್ರಿಕ ಪಾತ್ರಗಳಿಗೆ ಅಗತ್ಯವಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ.

achiever

ಸೆಂಟ್ರಲ್ ಶಾಪಿಂಗ್ ಎಕ್ಸ್‌ ಪೀರಿಯನ್ಸ್' ವಿಭಾಗದ ಸಾಫ್ಟ್‌ ವೇರ್ ಡೆವಲಪ್‌ ಮೆಂಟ್ ನಿರ್ದೇಶಕಿ ಯಾದ ಪಾಯಲ್ ಗುಪ್ತಾ ಅವರು , ಜಗತ್ತಿನಾದ್ಯಂತ ಶಾಪಿಂಗ್ ಅನುಭವಗಳಿಗೆ ಶಕ್ತಿ ತುಂಬುವ ಬೃಹತ್ ಪ್ರಮಾಣದ, ಬಹು ಪ್ರದೇಶಗಳಿಗೆ ಒದಗುವ ತಾಂತ್ರಿಕ ವ್ಯವಸ್ಥೆಗಳನ್ನು ನಿರ್ಮಿಸುವ ಎಂಜಿನಿಯರಿಂಗ್ ತಂಡಗಳನ್ನು ಮುನ್ನಡೆಸುತ್ತಿದ್ದಾರೆ. ಲಕ್ಷಾಂತರ ವಹಿವಾಟುಗಳನ್ನು ನಿರ್ವಹಿ ಸುವ ಗ್ರಾಹಕ ಅನುಭವ ವ್ಯವಸ್ಥೆಗಳನ್ನು ಇವರ ತಂಡಗಳು ವಿನ್ಯಾಸಗೊಳಿಸುತ್ತವೆ. ಇದರಿಂದಾಗಿ ಗ್ರಾಹಕರು ಅಮೆಜಾನ್‌ ನ ಜಾಗತಿಕ ಮಾರುಕಟ್ಟೆಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಉತ್ಪನ್ನ ಗಳನ್ನು ಹುಡುಕಲು, ಮೌಲ್ಯಮಾಪನ ಮಾಡಲು ಮತ್ತು ಖರೀದಿಸಲು ಸಾಧ್ಯವಾಗುತ್ತದೆ.

ಜನರೇಟಿವ್ ಎಐ ಬಳಸಿಕೊಂಡು ಶಾಪಿಂಗ್ ಪಯಣವನ್ನು ಅತ್ಯಂತ ವೈಯಕ್ತೀಕರಿಸಿದ ಮತ್ತು ಆನಂದದಾಯಕ ಅನುಭವವನ್ನಾಗಿ ಪರಿವರ್ತಿಸುವುದು ಇವರ ಸದ್ಯದ ಗುರಿಯಾಗಿದೆ. ಅವರು ಸಂಕೀರ್ಣ ತಾಂತ್ರಿಕ ಸವಾಲುಗಳನ್ನು ಬೃಹತ್ ಪ್ರಮಾಣದ ಮೂಲಸೌಕರ್ಯ ವ್ಯವಸ್ಥೆಗಳಾಗಿ ಪರಿವರ್ತಿಸುತ್ತಾರೆ. ಇದು ಕಾರ್ಯಾಚರಣೆಯಲ್ಲಿ ದೃಢತೆ ಕಾಯ್ದುಕೊಳ್ಳುವುದರ ಜೊತೆಗೆ ನಿರಂತರವಾಗಿ ಹೊಸ ಆವಿಷ್ಕಾರವನ್ನು ಕೈಗೊಳ್ಳಲು ನೆರವಾಗುತ್ತದೆ. ಇವರು ವೈವಿಧ್ಯತೆಯನ್ನು ನೆಚ್ಚುವವರಾಗಿದ್ದು, ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆಯನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಈ ನಿಟ್ಟಿನಲ್ಲಿ ಸಂವಾದಗಳನ್ನು ನಡೆಸುತ್ತಾ ವಿವಿಧ ತಂಡಗಳಲ್ಲಿನ ಮಹಿಳೆಯರಿಗೆ ಸಕ್ರಿಯವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.

achiever 3

ಸಾಫ್ಟ್‌ ವೇರ್ ಡೆವಲಪ್‌ ಮೆಂಟ್ ನಿರ್ದೇಶಕಿ ಆಗಿರುವ ಶ್ವೇತಾ ಶಂಕರ್ ಅವರು ಅಮೆಜಾನ್ ಇಂಡಿಯಾ ರಿಟೇಲ್ ತಂತ್ರಜ್ಞಾನ ತಂಡಗಳ ನೇತೃತ್ವ ವಹಿಸಿದ್ದಾರೆ. ಇವರು ಜಾಗತಿಕ ಮಟ್ಟದಲ್ಲಿ ಗ್ರಾಹಕ ಮತ್ತು ಉದ್ಯಮದ ಅನುಭವಗಳನ್ನು ಉತ್ತಮಗೊಳಿಸುವ ಉನ್ನತ ಮಟ್ಟದ ತಾಂತ್ರಿಕ ಸೌಕರ್ಯಗಳನ್ನು ನಿರ್ಮಿಸುತ್ತಿದ್ದಾರೆ. ಅಮೆಜಾನ್ ಇಂಡಿಯಾದಾದ್ಯಂತ ಅವರು ಜೆನ್ ಎಐ ಯೋಜನೆಗಳನ್ನು ಮುನ್ನಡೆಸುತ್ತಿದ್ದಾರೆ ಮತ್ತು ಸಂಕೀರ್ಣ, ಗ್ರಾಹಕ-ಕೇಂದ್ರಿತ ಕಾರ್ಯಕ್ರಮ ಗಳಿಗಾಗಿ ಎಐ-ಚಾಲಿತ ಆವಿಷ್ಕಾರವನ್ನು ಕೈಗೊಳ್ಳುವ ತಂಡದ ಮುಂದಾಳತ್ವ ವಹಿಸಿದ್ದಾರೆ.

ಇವರ ನಾಯಕತ್ವದಲ್ಲಿ ನೈಜ ಸಮಯದ ದತ್ತಾಂಶ ಸಂಸ್ಕರಣೆ ಮತ್ತು ವಿಶ್ಲೇಷಣೆಗಾಗಿ ತಾಂತ್ರಿಕ ಮೂಲಸೌಕರ್ಯ ವ್ಯವಸ್ಥೆಯನ್ನು ರೂಪಿಸಲಾಗಿದ್ದು, ಇದು ಗ್ರಾಹಕ ಅನುಭವವನ್ನು ಹೆಚ್ಚಿಸುವ ಜೊತೆಗೆ ವೇಗವಾಗಿ ಮತ್ತು ಮಾಹಿತಿ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತಿದೆ. ಅವರು ತಾಂತ್ರಿಕ ಪರಿಣತಿಯನ್ನು ಮತ್ತು ವಿಶ್ವಾಸಾರ್ಹತೆಯ ಆವಿಷ್ಕಾರಗಳನ್ನು ನೀಡುವ ಉನ್ನತ ಕಾರ್ಯಕ್ಷಮತೆಯ ಎಂಜಿನಿಯರಿಂಗ್ ತಂಡಗಳನ್ನು ಕಟ್ಟುವತ್ತ ಗಮನ ಹರಿಸಿದ್ದಾರೆ.

ಈ ಕುರಿತು ಶ್ವೇತಾ, "ಅಮೆಜಾನ್‌ ನಂತಹ ಸಂಸ್ಥೆಗಳಲ್ಲಿ ಬೃಹತ್ ಮಟ್ಟದಲ್ಲಿ ದೃಢವಾದ ವ್ಯವಸ್ಥೆ ಗಳನ್ನು ನಿರ್ಮಿಸಲು ತಂತ್ರಜ್ಞಾನಕ್ಕಿಂತ ಮಿಗಿಲಾಗಿ ಯೋಚಿಸಬೇಕಾಗುತ್ತದೆ. ಗ್ರಾಹಕರ ಅಗತ್ಯತೆ ಗಳು, ನವೀನ ತಂತ್ರಜ್ಞಾನ ಮತ್ತು ಉನ್ನತ-ಕಾರ್ಯಕ್ಷಮತೆಯ ತಂಡಗಳು ಹೇಗೆ ಒಂದಕ್ಕೊಂದು ಪೂರಕವಾಗಿವೆ ಎಂಬುದರ ಆಳವಾದ ತಿಳುವಳಿಕೆ ಇಲ್ಲಿ ಅಗತ್ಯ" ಎನ್ನುತ್ತಾರೆ.

ಮಹಿಳೆಯರ ಯಶಸ್ಸಿಗಾಗಿ ಪೂರಕವಾದ ಪರಿಸರ ವ್ಯವಸ್ಥೆ ನಿರ್ಮಾಣ

ಗೀತಾಂಜಲಿ, ಪಾಯಲ್ ಮತ್ತು ಶ್ವೇತಾ ಅವರಂತಹ ನಾಯಕಿಯರು ತಾಂತ್ರಿಕ ವಿಭಾಗಕ್ಕೆ ಕೊಡುಗೆ ನೀಡುವುದರ ಜೊತೆಗೆ ವೃತ್ತಿಜೀವನದ ಎಲ್ಲಾ ಹಂತಗಳಲ್ಲಿ ಪ್ರತಿಭೆಗಳನ್ನು ಬೆಳೆಸುವ ಯೋಜನೆ ಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ವೃತ್ತಿಜೀವನದ ಹಾದಿಗಳನ್ನು ಅನ್ವೇಷಿಸುವ ವಿದ್ಯಾರ್ಥಿ ಗಳಿಂದ ಹಿಡಿದು, ತಮ್ಮ ಬೆಳವಣಿಗೆಯನ್ನು ವೇಗಗೊಳಿಸಲು ಬಯಸುವ ವೃತ್ತಿಪರರು ಮತ್ತು ತಮ್ಮ ಪ್ರಭಾವವನ್ನು ಹೆಚ್ಚಿಸುವ ನಾಯಕಿಯರವರೆಗೆ ಅಮೆಜಾನ್‌ ಸಂಸ್ಥೆಯು ಮಹಿಳಾ ಸಬಲೀಕರಣದ ಕುರಿತು ದೃಢ ಚಿಂತನೆಯನ್ನು ಹೊಂದಿದೆ.

ವಿದ್ಯಾರ್ಥಿಗಳು ಮತ್ತು ಆರಂಭಿಕ ಹಂತದ ವೃತ್ತಿಪರರಿಗಾಗಿ, ಅಮೆಜಾನ್ ಫ್ಯೂಚರ್ ಇಂಜಿನಿಯರ್ ವಿದ್ಯಾರ್ಥಿವೇತನ ಯೋಜನೆ ಒದಗಿಸಲಾಗುತ್ತಿದ್ದು, ಈ ಮೂಲಕ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಹೆಣ್ಣುಮಕ್ಕಳಿಗೆ ಕಂಪ್ಯೂಟರ್ ಸೈನ್ಸ್ ಶಿಕ್ಷಣ ಒದಗಿಸಲಾಗುತ್ತದೆ. ಹಾಗೆಯೇ ಅಮೆಜಾನ್ ವೋವ್ ಯೋಜನೆಯ ಮೂಲಕ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮದ ಪರಿಚಯದ ಮೂಲಕ ವೃತ್ತಿಜೀವನಕ್ಕೆ ಸಿದ್ಧರಾಗಲು ನೆರವಾಗುತ್ತದೆ. ಅಮೇಜ್ ವಿಟ್ ಯೋಜನೆಯು ಕಲಿಕೆ, ನೆಟ್‌ವರ್ಕಿಂಗ್ ಮತ್ತು ರೋಲ್ ಮಾಡೆಲ್‌ ಗಳನ್ನು ಸಂಪರ್ಕಿಸುವುದರ ಮೂಲಕ ತಂತ್ರಜ್ಞಾನ ಕ್ಷೇತ್ರಕ್ಕೆ ಪ್ರವೇಶಿಸುವ ಮಹಿಳೆಯರಿಗೆ ದಾರಿ ತೋರುತ್ತದೆ.

ವೃತ್ತಿಜೀವನದಲ್ಲಿ ಮುಂದುವರಿಯುತ್ತಿರುವವರಿಗೆ, ವುಮೆನ್ ಇನ್ ಲೀಡರ್‌ ಶಿಪ್ (ಡಬ್ಲ್ಯೂಐಎಲ್) ಯೋಜನೆಯು ನೆರವಾಗುತ್ತಿದ್ದು, ಅವರ ಸ್ಥಾನವನ್ನು ಮತ್ತಷ್ಟು ಉತ್ತಮಗೊಳಿಸಲು ಮತ್ತು ವೃತ್ತಿಜೀವನ ಮುನ್ನಡೆಸಲು ಸಹಾಯ ಮಾಡುತ್ತದೆ. ಹಾರ್ವರ್ಡ್ ಬಿಸಿನೆಸ್ ಪಬ್ಲಿಷಿಂಗ್ ಕಾರ್ಪೊರೇಟ್ ಲರ್ನಿಂಗ್ ಜೊತೆಗೆ ಅಭಿವೃದ್ಧಿಪಡಿಸಲಾದ ಕ್ಯಾಟಪಲ್ಟ್ ಯೋಜನೆಯು, ದೊಡ್ಡ ಉದ್ಯಮ ಹುದ್ದೆಗಳಿಗೆ ಅಗತ್ಯವಾದ ಕಾರ್ಯತಂತ್ರದ ಸಾಮರ್ಥ್ಯಗಳನ್ನು ಮಹಿಳಾ ನಾಯಕಿಯರಿಗೆ ಒದಗಿಸುತ್ತದೆ. ಕೆಲಸದ ಸ್ಥಳದ ಆಚೆಗೆ, ಅಮೆಜಾನ್ ಸಹೇಲಿ ಯೋಜನೆ ಆಯೋಜಿಸಲಾಗಿದ್ದು, ಇದು ಮಹಿಳಾ ಉದ್ಯಮಿಗಳಿಗೆ ಮಾರುಕಟ್ಟೆ ಪ್ರವೇಶ, ಲಾಜಿಸ್ಟಿಕ್ಸ್ ನೆರವು ಮತ್ತು ಅವರ ಸಾಮರ್ಥ್ಯ ವೃದ್ಧಿಗೊಳಿಸುವ ಮೂಲಕ ಅವರಿಗೆ ತಮ್ಮ ಉದ್ಯಮಗಳನ್ನು ರೂಪಿಸಲು ಮತ್ತು ಬೆಳೆಸಲು ಅನುವು ಮಾಡಿಕೊಡುತ್ತದೆ.

ಒಟ್ಟಾರೆಯಾಗಿ, ಈ ಯೋಜನೆಗಳು ಮಹಿಳೆಯರು ಬೆಳೆಯಲು, ಮುನ್ನಡೆ ಸಾಧಿಸಲು ಮತ್ತು ಅವರು ತಂತ್ರಜ್ಞಾನದ ಭವಿಷ್ಯವನ್ನು ರೂಪಿಸಲು ನೆರವಾಗುವ, ಪೂರಕವಾದ ವ್ಯವಸ್ಥೆಯನ್ನು ನಿರ್ಮಿಸುವ ಅಮೆಜಾನ್‌ ನ ಬದ್ಧತೆಯನ್ನು ಸಾರುತ್ತವೆ.