ನಡೆಸಿದಂತೆ ನಡೆದುಹೋದ ಬೊಂಬೆಯಾಟದ ಪಾತ್ರಧಾರಿ
ಉಮೇಶ್ ನನ್ನ ಚೈಲ್ಡ್ ಹುಡ್ ಹೀರೋ. ಹೇಗೆ ಅಂತ ಕೇಳ್ತೀರಾ? ನಮ್ಮ ಶಾಲೆಯಲ್ಲಿ ತೋರಿಸಿದ ಮೊದಲ ಸಿನಿಮಾ ‘ಮಕ್ಕಳ ರಾಜ್ಯ’. ಶಾಲೆಯ ದೊಡ್ಡ ಹಾಲ್‌ನಲ್ಲಿ ಕಪ್ಪುಹಲಗೆ ಮೇಲೆ ಬೆಳ್ಳಿ ಪರದೆ ಹಾಕಿ, ಉಚಿತವಾಗಿ ಸಿನಿಮಾ ತೋರಿಸಿದ ಕಪ್ಪುಬಿಳುಪಿನ ಸಿನಿಮಾ. ಟಾಕೀಸ್‌ನಲ್ಲಲ್ಲದೇ ಬೇರೆ ಕಡೆಯೂ ಸಿನಿಮಾ ಮೂಡಬಲ್ಲದು ಅನ್ನೋದೇ ಅವತ್ತಿನ ಅಚ್ಚರಿ.