Naveen Sagar Column: ಧುರಂದರನೆದುರು ಮೋದಿ ವಿರೋಧಿಗಳ ಶ್ವಾನರೋದನೆ
ಕಾಂಗ್ರೆಸ್ಸಿಗರು ಛೂ ಬಿಡುತ್ತಿದ್ದಂತೆ ಸಕ್ರಿಯರಾದ ಗುಲಾಮಿ ಪಡೆ, ಧುರಂಧರ್ ಚಿತ್ರವನ್ನು ಬಾಯ್ಕಾಟ್ ಮಾಡಲು ಇನ್ನಿಲ್ಲದ ಸಾಹಸ ಮಾಡಿತು. ಈ ಹಿಂದೆ ಉರಿ, ಕಾಶ್ಮೀರ್ ಫೈಲ್ಸ್, ತಾಷ್ಕೆಂಟ್ ಫೈಲ್ಸ್, ಕೇರಳ ಸ್ಟೋರಿ, ವ್ಯಾಕ್ಸಿನ್ ವಾರ್, ಬೆಂಗಾಲ್ ಫೈಲ್ಸ್, ಹೀಗೆ ಪ್ರತಿ ಚಿತ್ರವನ್ನೂ ಅಬಾರ್ಷನ್ ಮಾಡಲು ಇನ್ನಿಲ್ಲದ ಸಾಹಸ ಮಾಡಿತ್ತು ಈ ಪಟಾಲಮ್. ಆದರೆ ಈ ಕಂಸನಾಟ ನಡೆದಿರಲಿಲ್ಲ. ಈ ಬಾರಿ ಧುರಂಧರ್ ರೂಪದಲ್ಲಿ ಹುಟ್ಟಿ ಬಂದಿರೋದು ಕೃಷ್ಣ.
-
ಪದಸಾಗರ
ಭಾರತದಲ್ಲಿರುವ ಸೋಗಲಾಡಿ ಸೆಕ್ಯುಲರ್‌ಗಳ, ಸ್ವಯಂಘೋಷಿತ ಬುದ್ಧಿಜೀವಿಗಳ, ಪ್ರಗತಿ ಬಯಸದ ಪ್ರಗತಿಪರರ, ನಗರ ನಕ್ಸಲರ ಬಣ್ಣ ಅಮೋಘ ಸಾವಿರದ ಒಂದನೇ ಬಾರಿಗೆ ಮತ್ತೊಮ್ಮೆ ಬಯಲಾ ಗಿದೆ. ಇವರೆಲ್ಲರನ್ನು ಒಂದೇ ಪದದಲ್ಲಿ ಕಾಂಗ್ರೆಸ್ ಗುಲಾಮರು ಅಂತಲೂ ಹೇಳಬಹುದು. ಏಕೆಂದರೆ ಕಾಂಗ್ರೆಸ್ ಮನಸ್ಥಿತಿಗೂ ಇವರ ಮನಸ್ಥಿತಿಗೂ ಯಾವ ವ್ಯತ್ಯಾಸವೂ ಇಲ್ಲ.
ಆಸ್ಟೇಲಿಯಾದಲ್ಲಿ ಯಹೂದಿಗಳ ಮೇಲೆ ಮುಸಲ್ಮಾನ ಉಗ್ರರ ಭೀಕರ ದಾಳಿಯಾಗಿದೆ. ಹತ್ಯೆ ಗಳಾಗಿವೆ. ಆದರೆ ಒಬ್ಬೇ ಒಬ್ಬ ‘ಆಲ್ ಐಸ್ ಆನ್ ಸಿಡ್ನಿ’ ಅಂತ ಹಾಕಿಕೊಂಡಿದ್ದು ನೋಡಿದಿರಾ? ನೋಡೋಕೆ ಸಾಧ್ಯವೇ ಇಲ್ಲ. ಮುಸಲ್ಮಾನ ಉಗ್ರವಾದದ ವಿರುದ್ಧ ಯಾರಾದರೂ ಒಂದೇ ಒಂದು ಹೇಳಿಕೆ ಕೊಟ್ಟು ಖಂಡಿಸಿದ್ದು ಕಂಡಿರಾ? ನೋ ವೇ... ಚಾನ್ಸೇ ಇಲ್ಲ.
ಪ್ಯಾಲೆಸ್ತೀನ್ ಪರ, ಹಮಾಸ್ ಪರ ಘೋಷಣೆ ಕೂಗುವ, ‘ಆಲ್ ಐಸ್ ಆನ್ ರಫಾ’ ಅಂತ ಸ್ಟೇಟಸ್ ಹಾಕುವ ಇವರಿಗೆ ಆಸ್ಟ್ರೇಲಿಯಾದಲ್ಲಿ ನಡೆದ ಉಗ್ರ ಕೃತ್ಯಕ್ಕೆ ಖಂಡಿಸೋದಕ್ಕೆ ಬಾಯಿ ಬಿದ್ದು ಹೋಗಿರುತ್ತದೆ. ಅಮಿತ್ ಶಾ ಮೊನ್ನೆ ಅಧಿವೇಶನದಲ್ಲಿ, ನುಸುಳುಕೋರರನ್ನು ದೇಶ ಬಿಟ್ಟು ಓಡಿಸುವ ಬಗ್ಗೆ ಮಾತನಾಡುತ್ತಿದ್ದರೆ, ಕಾಂಗ್ರೆಸ್ಸಿಗರು ಸಭಾತ್ಯಾಗ ಮಾಡಿ ಓಡಿಹೋಗುತ್ತಿದ್ದರು. ಇದು ಇವರ ಅಸಲಿ ಮನಸ್ಥಿತಿ.
ನುಸುಳುಕೋರರು ಬೇರೆ ಅಲ್ಲ, ಕಾಂಗ್ರೆಸ್ಸಿಗರು ಬೇರೆ ಅಲ್ಲ ಎಂಬಂತಿತ್ತು ಆ ದೃಶ್ಯ. ಇಂಥ ಕಾಂಗ್ರೆಸ್ಸಿ ನ ಹಿಂದೆ ಕುರಿಮಂದೆ ಥರ ಇರುವ ಸೋಗಲಾಡಿ ಪಡೆ, ಇತ್ತೀಚೆಗೆ ಡೀಟೇಲಾಗಿ ಬೆತ್ತಲಾಗಿದ್ದು ‘ಧುರಂಧರ್’ ಚಿತ್ರವನ್ನು ಬಾಯ್ಕಾಟ್ ಮಾಡಲು ಹೊರಟು ನಿಂತಾಗ!
ಇದನ್ನೂ ಓದಿ: Naveen Sagar Column: ಗುಲಾಬಿ ತೋಟದಲ್ಲಿ ಬೆಟ್ಟದ ಹೂವಿನ ಘಮಘಮ
ಕಾಂಗ್ರೆಸ್ಸಿಗರು ಛೂ ಬಿಡುತ್ತಿದ್ದಂತೆ ಸಕ್ರಿಯರಾದ ಗುಲಾಮಿ ಪಡೆ, ಧುರಂಧರ್ ಚಿತ್ರವನ್ನು ಬಾಯ್ಕಾಟ್ ಮಾಡಲು ಇನ್ನಿಲ್ಲದ ಸಾಹಸ ಮಾಡಿತು. ಈ ಹಿಂದೆ ಉರಿ, ಕಾಶ್ಮೀರ್ ಫೈಲ್ಸ್, ತಾಷ್ಕೆಂಟ್ ಫೈಲ್ಸ್, ಕೇರಳ ಸ್ಟೋರಿ, ವ್ಯಾಕ್ಸಿನ್ ವಾರ್, ಬೆಂಗಾಲ್ ಫೈಲ್ಸ್, ಹೀಗೆ ಪ್ರತಿ ಚಿತ್ರವನ್ನೂ ಅಬಾರ್ಷನ್ ಮಾಡಲು ಇನ್ನಿಲ್ಲದ ಸಾಹಸ ಮಾಡಿತ್ತು ಈ ಪಟಾಲಮ್. ಆದರೆ ಈ ಕಂಸನಾಟ ನಡೆದಿರಲಿಲ್ಲ. ಈ ಬಾರಿ ಧುರಂಧರ್ ರೂಪದಲ್ಲಿ ಹುಟ್ಟಿ ಬಂದಿರೋದು ಕೃಷ್ಣ. ಹೀಗಾಗಿ ಅಕ್ಷರಶಃ ಕಂಸವಧೆಯೇ ಆಗಿಹೋಗಿದೆ. ಧುರಂಧರ್ ಬಾಲಿವುಡ್‌ನ ರೂಪುರೇಷೆಯನ್ನೇ ಬದಲಿಸಿ ಹಾಕಿ ಬಿಟ್ಟಿದ್ದಾನೆ. ‘ಛಾವಾ’ ಬಂದಾಗ ಬೆಚ್ಚಿದ್ದ ಪಾಕಿಸ್ತಾನಿ ಕೃಪಾಪೋಷಿತ ಬಾಲಿವುಡ್, ಈಗ ಧುರಂಧರನ ಅಬ್ಬರಕ್ಕೆ ಕಂಪ್ಲೀಟಾಗಿ ನಲುಗಿ ಹೋಗಿದೆ. ಆದರೆ ಗಮನಿಸಿ, ನಲುಗಿ ಹೋಗಿರೋದು ಪಾಕ್ ಕೃಪಾಪೋಷಿತ ಬಾಲಿವುಡ್.
ಈಗ ಸೃಷ್ಟಿಯಾಗಿರೋದು ಅಪ್ಪಟ ಭಾರತೀಯ ಬಾಲಿವುಡ್. ಖಾನ್‌ಗಳು, ಪಾಕ್ ಬೆಂಬಲಿತ ಹಾಗೂ ಪಾಕ್ ಸಿಂಪಥೈಸಿಂಗ್ ನಿರ್ಮಾಪಕ ನಿರ್ದೇಶಕರು ಬದುಕಬೇಕು ಅಂದ್ರೆ ಈಗ ಹಳೆಯ ಆಟಗಳನ್ನು ನಿಲ್ಲಿಸಲೇಬೇಕಾಗಿದೆ.
ಆದರೆ ಅವರ ಪರವಾಗಿ ಬಾಯ್ಕಾಟ್ ಅಭಿಯಾನ ಮಾಡುತ್ತಿರುವ ದೇಶದೊಳಗಿನ ಶತ್ರುಗಳನ್ನು ಏನು ಮಾಡೋಣ? ಅಜಿತ್ ದೋವಲ್‌ನ ಪಾತ್ರ ಮಾಡಿರೋ ಮಾಧವನ್ ಧುರಂಧರ್ ಚಿತ್ರದಲ್ಲಿ ಸರಿಯಾಗಿಯೇ ಹೇಳಿದ್ದಾನೆ.
ಭಾರತದ ಶತ್ರುಗಳ ಪಟ್ಟಿ ಮಾಡ್ತಾ ಹೋದ್ರೆ ಎರಡನೆಯ ಸ್ಥಾನದಲ್ಲಿ ಪಾಕಿಸ್ತಾನ ಇರುತ್ತದೆ. ಯಾಕಂದ್ರೆ ಮೊದಲ ಸ್ಥಾನದಲ್ಲಿ ಭಾರತದವರೇ ಇರ್ತಾರೆ ಅಂತ. ಇದನ್ನು ಯಾರನ್ನುದ್ದೇಶಿಸಿ ಹೇಳಿದ್ದಾನೆ ಅಂತ ವಿವರಿಸೋ ಅಗತ್ಯ ಇಲ್ಲವಲ್ಲ. ಧುರಂಧರ್ ಚಿತ್ರವನ್ನು ಪಾಕಿಸ್ತಾನವೂ ಸೇರಿದಂತೆ, ಪಾಕಿಸ್ತಾನದ ಜತೆ ಸ್ನೇಹ ಹೊಂದಿರುವ ಎಲ್ಲ ಮುಸಲ್ಮಾನ ರಾಷ್ಟ್ರಗಳು ಬಹಿಷ್ಕರಿಸಿವೆ ಅಂದರೆ ಆ ಸಿನಿಮಾ ಇನ್ನೆಷ್ಟರ ಮಟ್ಟಿಗೆ ಕಟುಸತ್ಯಗಳನ್ನು ಹೇಳಿರಬಹುದು!
ಅವರೆಲ್ಲರೂ ಹಿಷ್ಕರಿಸುತ್ತಿರುವ ಚಿತ್ರವನ್ನೇ ಭಾರತದ ಎಡಬಿಡಂಗಿಗಳೂ ಬಹಿಷ್ಕರಿಸುತ್ತಿವೆ ಅಂದರೆ ಇವರ ನಿಲುವು ಏನಿದ್ದಿರಬಹುದು? ಇವರು ಯಾರ ಪರವಿದ್ದಿರಬಹುದು? ಉತ್ತರ ಕಷ್ಟದ್ದೇನಲ್ಲ ಅಲ್ವೇ? ಇಷ್ಟಕ್ಕೂ ಪಾಕಿ ಉಗ್ರರ ಕುರಿತು, ಪಾಕಿಸ್ತಾನದ ರಾಜಕೀಯ, ಭಯೋತ್ಪಾದನೆ, ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಸತ್ಯಘಟನೆ ಆಧರಿಸಿ ಚಿತ್ರ ಮಾಡಿದರೆ ಭಾರತದ ಹುಟ್ಟಿದ ಈ ಮಕ್ಕಳಿಗೇಕೆ ಉರಿ? ಇಡೀ ಚಿತ್ರದಲ್ಲಿ ಕಾಂಗ್ರೆಸ್ಸಿಗೆ ಬಯ್ದಿಲ್ಲ.
ನೆಹರು ಕುಟುಂಬಕ್ಕೆ ಅವಮಾನ ನೋವು ಆಗುವಂಥ ಯಾವ ಡೈಲಾಗೂ ಇಲ್ಲ. ಕಾಂಗ್ರೆಸ್ಸಿನ ಯಾವ ವ್ಯಕ್ತಿಯನ್ನೂ ನಕಲು ಮಾಡಿಲ್ಲ. ಆದರೂ ಯಾಕಿಷ್ಟು ಅಸಹನೆ? ಬಚ್ಚಿಟ್ಟ ಸತ್ಯಗಳು ಹೊರ ಬರುತ್ತಿವೆ ಅಂತಾನಾ? ಡೀಮಾನಿಟೈಸೇಷನ್ ಹಿಂದಿನ ಅಸಲಿ ಕಾರಣ ಜನರಿಗೆ ತಿಳಿದುಬಿಡುತ್ತದೆ,
ಮೋದಿಯ ಆ ನಡೆ ಟೀಕಿಸುತ್ತಿದ್ದವರಿಗೆ ನಿಜ ಗೊತ್ತಾಗಿ ಅವರೂ ಮೋದಿಯ ಭಕ್ತರಾಗಿ ಬಿಡುತ್ತಾರೆ ಅಂತಾನಾ? ವೋಟ್ ಚೋರಿ ಆಗಿ ಬಿಡುವ ಭಯಾನಾ? ಮುಂಬೈ ದಾಳಿ, ಪಾರ್ಲಿಮೆಂಟ್ ದಾಳಿ, ಕಂದಹಾರ ಪ್ರಕರಣದ ಹಿಂದೆ ಪಾಕಿಸ್ತಾನದ ಕೈವಾಡ ಇಲ್ಲ ಎಂದು ತಿಪ್ಪೆ ಸಾರಿಸಲು ಪ್ರಯತ್ನಿ ಸಿದ್ದು, ಉಗ್ರರನ್ನು ಸಾಚಾ ಎಂದು ಬಿಂಬಿಸಿ ಬಚಾವ್ ಮಾಡಿಸಲು ಹೊರಟಿದ್ದು, ಇವೆಲ್ಲವೂ ಬಯಲಾಗಿ ಬಿಡುತ್ತಿದೆ ಎಂಬ ಬೇಸರವಾ? ಅಂಗೈ ಹುಣ್ಣಿಗೂ ಕನ್ನಡಿ ಬೇಕು ಎಂದು ಕೇಳುವವರಿ ಗೆಂದೇ ಧುರಂಧರ್ ಥರದ ಚಿತ್ರಗಳು ಬರುತ್ತಿವೆ.
ಯಾವ ಭಯವೂ ಇಲ್ಲದೇ ನೇರಾನೇರವಾಗಿ ಪಾಕ್ ಎಂಥ ನೀಚ ದೇಶ ಎಂಬುದನ್ನು ಜಗತ್ತಿಗೆ ತಿಳಿಸುತ್ತಿವೆ. ಮೇಲ್ನೋಟಕ್ಕೆ ‘ಧುರಂಧರ್’ ಉಗ್ರ ಕೃತ್ಯಗಳನ್ನು ಎಕ್ಸ್ʼಪೋಸ್ ಮಾಡುವ ಚಿತ್ರ ವಾಗಿದ್ದರೂ. ಅಂಡರ್ ಕರೆಂಟ್ ಥರ ಇದ್ದೇ ಹೈಲೈಟ್ ಆಗುವ ವಿಷಯ ಅಂದರೆ ಅದು ನಕಲಿ ನೋಟುಗಳ ಮಾಫಿಯಾ. ಇನ್ ಫ್ಯಾಕ್ಟ್ ಉಗ್ರವಾದಕ್ಕೆ ಬಲ ಕೊಡುತ್ತಿದ್ದದ್ದೇ ನಕಲಿ ನೋಟಿನ ಜಾಲ.
ಒಂದು ವಿಷಯ ನನಗೆ ಬಹಳ ಸ್ಪಷ್ಟವಿದೆ. ಮೋದಿ ವಿರುದ್ಧ ಆಜನ್ಮ ದ್ವೇಷ ಸಾಧಿಸುತ್ತಿರುವವರು, ಮೋದಿ ಅಂದರೆ ಉರಿಉರಿದು ಬೀಳುತ್ತಿರುವವರು, ಮೋದಿಯ ಸಾವನ್ನು ಬಯಸುತ್ತಿರುವವರು, ಹಗಲು ರಾತ್ರಿ ಎನ್ನದೇ ಮೋದಿಯನ್ನು ಬಯ್ಯೋದನ್ನೇ ಕಾಯಕ ಮಾಡಿಕೊಂಡಿರೋವ್ರು ಇವರೆಲ್ಲ ರನ್ನು ಬಹಳ ಆಳವಾಗಿ ಗಮನಿಸಿದ್ದೇನೆ. ಇವರ ಈ ದ್ವೇಷಕ್ಕೆ ಕಾರಣ,
ಸಿದ್ಧಾಂತವಲ್ಲ, ಬಲಪಂಥವಲ್ಲ, ಹಿಂದುತ್ವ ಅಲ್ಲ. ಆರ್ಟಿಕಲ್ 370, ಟ್ರಿಪಲ್ ತಲಾಖ್ ಇಂಥ ಯಾವ ವಿಚಾರಕ್ಕೂ ಅವರು ಮೋದಿಯನ್ನು ದ್ವೇಷಿಸುತ್ತಿಲ್ಲ. ಅವರು ದ್ವೇಷಿಸೋದಕ್ಕೆ ಏಕೈಕ ಕಾರಣ ಮೋದಿ ಮಾಡಿದ ಡೀಮಾನಿಟೈಸೇಷನ್. ಕಪ್ಪುಹಣ ಹೊಂದಿದ್ದವರಿಗೆ ಅಂದು ಕೊಟ್ಟ ಆ ಏಟಿಗೆ ಇಂದಿಗೂ ಮೋದಿಯನ್ನು ಕನಸಲ್ಲೂ ದ್ವೇಷಿಸುತ್ತಿದ್ದಾರೆ, ಚೀರುತ್ತಿದ್ದಾರೆ. ಆದರೆ ಮೋದಿಯ ಮೂಲ ಟಾರ್ಗೆಟ್ ಇವರಾಗಿರಲಿಲ್ಲ.
ಮೋದಿಯ ಟಾರ್ಗೆಟ್ ಇದ್ದದ್ದೇ ನಕಲಿ ನೋಟಿನ ಮಾಫಿಯಾಗೆ ಬೆಂಕಿ ಇಡುವುದು. ನಕಲಿ ನೋಟಿನ ಸ್ಮಾಲ್ ಬ್ರಾಂಚ್ ಆಫೀಸ್ ಇದ್ದದ್ದು ಭಾರತದಲ್ಲಿ. ಅದರೆ ಹೆಡ್ ಆಫೀಸ್ ಇದ್ದದ್ದು ಪಾಕಿಸ್ತಾನದಲ್ಲಿ. ಅದನ್ನು ಬೇರು ಸಮೇತ ಕಿತ್ತೊಗೆಯುವ ಸಲುವಾಗಿ ಮಾಡಿದ ಡೀಮಾನಿಟೈ ಸೇಷನ್ ಇಲ್ಲಿನ ಆರ್ಥಿಕ ಉಗ್ರರಿಗೂ-ಅಂದ್ರೆ ಕಪ್ಪುಹಣ ಉಳ್ಳವರಿಗೂ ಕೊಳ್ಳಿ ಇಟ್ಟಿತು. ಅದೇ ಕಾರಣಕ್ಕೆ ಇವರಿಗೆ ಮೋದಿ ಅಂದರೆ ಆಕ್ರೋಶ.
ಪಾಕಿಸ್ತಾನ ಯಾವ ಕಾರಣಕ್ಕೆ ಮೋದಿಯನ್ನು ದ್ವೇಷಿಸುತ್ತಿದೆಯೋ, ಈ ಮಂದಿಯೂ ಮೋದಿ ಯನ್ನು ಅದೇ ಕಾರಣಕ್ಕೆ ದ್ವೇಷಿಸುತ್ತಿದ್ದಾರೆ. ಧುರಂಧರ್ ಚಿತ್ರವನ್ನು ಪ್ರತಿಯೊಬ್ಬ ಭಾರತೀಯನೂ ನೋಡಬೇಕಿರೋದೇ ಮುಖ್ಯವಾಗಿ ಈ ಸತ್ಯವನ್ನು ಅರಿಯೋದಕ್ಕೆ. ಖನಾನಿ ಆಂಡ್ ಕಾಲಿಯಾ ಇಂಟರ್‌ನ್ಯಾಷನಲ್ ಎಂಬ ಪಾಕಿ ಭೂಗತ ಕಂಪನಿ ಭಾರತದ ಆರ್ಥಿಕತೆಯನ್ನು ಹೊಡೆದು ಹಾಕುವ ಸಲುವಾಗಿಯೇ ಹುಟ್ಟಿಕೊಂಡದ್ದು.
ಈ ಕಂಪನಿಯ ವ್ಯವಹಾರವೇ ನಕಲಿ ನೋಟು ಮುದ್ರಿಸಿ ಭಾರತದಲ್ಲಿ ಹರಿಬಿಡೋದು. ಈ ಕೃತ್ಯಕ್ಕೆ ಬೆಂಬಲವಾಗಿ ನಿಂತಿದ್ದು ಪಾಕಿಸ್ತಾನದ ಸರಕಾರ. ಪಾಕಿಸ್ತಾನದ ಆರ್ಥಿಕತೆಯನ್ನು ಎತ್ತೋದಕ್ಕೆ, ಭಾರತದ ಆರ್ಥಿಕತೆಯನ್ನು ತಳ ಹಿಡಿಸೋದಕ್ಕೆ ಖನಾನಿಗೆ ಎಲ್ಲ ಸಹಕಾರವಿತ್ತು. ಬಾಲಿವುಡ್ʼಗೆ ಇಲ್ಲಿಂದ ಹಣ ಹರಿದು ಬರುತ್ತಿತ್ತು.
ಉಗ್ರರನ್ನು ಸಾಕಿ ಬೆಳೆಸಿ ಭಾರತದ ವಿರುದ್ಧ ಛೂ ಬಿಡಲು ಖನಾನಿ ಹಣ ಬಳಕೆಯಾಗುತ್ತಿತ್ತು. ದಾವೂದ್ ಗ್ಯಾಂಗ್ ಹೊಟ್ಟೆ ತುಂಬ ಉಣ್ಣುತ್ತಿದ್ದದ್ದೂ ಇವರಿಂದಲೇ. ಬಾಲಿವುಡ್ ಖಾನ್‌ಗಳ ಸಿನಿಮಾಗೆ, ಪಾಕ್ ಸಮರ್ಥಕ ನಿರ್ಮಾಪಕರಿಗೆ ಮಾತ್ರ ಪಾಕಿಸ್ತಾನದಲ್ಲಿ ಮಾರ್ಕೆಟ್ ಇರುತ್ತಿತ್ತು. ಪಾಕಿಸ್ತಾನಿಗಳಿಗೆ ಇಷ್ಟವಾಗುವಂತೆ ‘ರಿ ಎಡಿಟ್’ ಮಾಡಿ, ಡಬ್ ಮಾಡಿ, ಆಕ್ಷೇಪಾರ್ಹ ಡೈಲಾಗ್ ಇದ್ರೆ ಬದಲಿಸಿ ಕೊಡುವಷ್ಟು ಗುಲಾಮಗಿರಿಗೆ ಬಿದ್ದಿತ್ತು ಬಾಲಿವುಡ್.
ಇನ್ನು ಪೈರಸಿಯ ಅತಿದೊಡ್ಡ ಜಾಲ ಇದ್ದದ್ದೂ ಪಾಕಿಸ್ತಾನದ. ಭಾರತದ ರಾಜಕೀಯ ನಾಯಕ ರಾಗಲೀ ಬಾಲಿವುಡ್ಡಿಗರಾಗಲೀ ಖನಾನಿ ಕಂಪನಿಯ ಹೆಸರೂ ಎತ್ತುತ್ತಿರಲಿಲ್ಲ. ಅಷ್ಟು ಭಯವಿತ್ತು ಹಾಗೂ ಗುಲಾಮಗಿರಿ ಇತ್ತು. ವರ್ಷಕ್ಕೆ 25 ಸಾವಿರ ಕೋಟಿಯಷ್ಟು ನಕಲಿ ಕರೆನ್ಸಿಯನ್ನು ಭಾರತಕ್ಕೆ ತಳ್ಳಿ, ಭಾರತದ ಕರೆನ್ಸಿ ಮೇಲಿನ ನಂಬಿಕೆ, ಭಾರತದ ಆರ್ಥಿಕತೆ, ಡಾಲರ್ ವಿರುದ್ಧದ ಮೌಲ್ಯ ಎಲ್ಲವನ್ನೂ ಹೊಡೆದು ಹಾಕುವತ್ತ ಪಾಕ್ ಮುನ್ನಡೆದಿತ್ತು.
ಇದೆಲ್ಲವೂ ನಡೆದದ್ದು 90ರ ದಶಕದಿಂದ 2013ರ ತನಕ. ನಮ್ಮ ದೇಶಕ್ಕೆ ಕರೆನ್ಸಿ ಕಾಗದ ಸಪ್ಲೈ ಮಾಡ್ತಾ ಇದ್ದ ಬ್ರಿಟಿಷ್ ಕಂಪನಿ ಪಾಕಿಸ್ತಾನಕ್ಕೂ ಅದೇ ಕಾಗದ ಸಪ್ಲೈ ಮಾಡಿ ಖೋಟಾನೋಟಿನ ಮಾಫಿಯಾಗೆ ಇನ್ನಷ್ಟು ಇಂಬು ಕೊಟ್ಟಿತ್ತು. ಕೇಂದ್ರ ಸಚಿವ ಮತ್ತು ಆತನ ಮಗನೇ ಪಾಕಿಗಳ ಕೈಗೆ ನೋಟಿನ ಅಚ್ಚು ತಲುಪಿಸಿದ್ದರು ಅನ್ನೋದು ಸಿನಿಮಾದಲ್ಲಿ ಹೇಳಿದ ಕಟ್ಟುಕಥೆ ಅಲ್ಲ.
ಅರಗಿಸಿಕೊಳ್ಳಲಾಗದ ಸತ್ಯ. ಮಷಿನ್ ಕೂಡ ಪತ್ತೆ ಹಚ್ಚಲಾಗದಂತೆ ಅಸಲಿ ನೋಟಿನ ತಲೆ ಮೇಲೆ ಹೊಡೆದಂತೆ ನಕಲಿ ನೋಟ್ ಪ್ರಿಂಟ್ ಮಾಡುತ್ತಿತ್ತು ಪಾಕಿಸ್ತಾನ. ಮುಸಲ್ಮಾನ ಭಯೋತ್ಪಾದನೆಗೆ ಹಣ ಹುಟ್ಟಲು ಶುರುವಾದದ್ದೇ ಈ ನಕಲಿ ನೋಟಿನಿಂದ. ಪಾಕಿಸ್ತಾನ ಶ್ರೀಮಂತವಾಗುವಲ್ಲಿ ಕೂಡ ನಕಲಿ ನೋಟಿನ ಪಾತ್ರವಿತ್ತು.
ಇದನ್ನು ಮಟ್ಟ ಹಾಕೋದಕ್ಕೆ ಮೋದಿ ದಿಟ್ಟವಾಗಿ ಪ್ರಯೋಗಿಸಿದ ಬ್ರಹ್ಮಾಸವೇ ಡೀಮಾನಿ ಟೈಸೇಷನ್. ರಾತ್ರೋರಾತ್ರಿ ಸಾವಿರಾರು ಕೋಟಿ ಬೆಲೆ ಬಾಳುತ್ತಿದ್ದ ನಕಲಿ ನೋಟುಗಳು ಅಕ್ಷರಶಃ ರದ್ದಿ ಕಾಗದವಾಯಿತು. ಪಾಕಿಸ್ತಾನ ಕನಸುಮನಸಿನಲ್ಲೂ ಇಂಥ ಒಂದು ನಡೆಯನ್ನು ಊಹಿಸಿರ ಲಿಲ್ಲ. ಲಕ್ಷಾಧಿಪತಿಯಂತಿದ್ದ ಪಾಕಿಸ್ತಾನ ಸಡನ್ನಾಗಿ ಭಿಕ್ಷಾಪಾತ್ರೆ ಹಿಡಿಯುವ ಲೆವೆಲ್ಲಿಗೆ ಇಳಿದು ಹೋಯ್ತು.
ಉತ್ಪ್ರೇಕ್ಷೆಯಾಗಲೀ ಕಲ್ಪನೆಯಾಗಲೀ ಅಲ್ಲ. ಇದು ವಾಸ್ತವ. ಡೀಮಾನಿಟೈಸೇಷನ್‌ನಿಂದ ಸ್ವಿಸ್ ಬ್ಯಾಂಕ್ ಹಣ ಬರಲಿಲ್ಲ, ಖಾತೆಗೆ ಹದಿನೈದು ಲಕ್ಷ ಬರಲಿಲ್ಲ, ಡಾಲರ್ ಬೆಲೆ 20 ರುಪಾಯಿಗೆ ಇಳೀಲಿಲ್ಲ ಅಂತ ವ್ಯಂಗ್ಯ ಮಾಡುವವರು ಆತ್ಮಸಾಕ್ಷಿ ಅನ್ನೋದಿದ್ದರೆ ಒಮ್ಮೆ ಈ ನಿಟ್ಟಿನಲ್ಲಿ ಹಿಂದಿರುಗಿ ನೋಡಲಿ.
ಮೋದಿ ಅವಧಿಗೆ ಮುನ್ನ, ಎನ್‌ಡಿಎ ಮತ್ತು ಯುಪಿಎ ಸರಕಾರಗಳಿದ್ದಾಗಲೇ ಉಗ್ರದಾಳಿಗಳು ಮತ್ತು ನಕಲಿ ನೋಟುಗಳ ಮಾಫಿಯಾ ತಾರಕಕ್ಕೇರಿದ್ದು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಜಪೇಯಿ ಆದಿಯಾಗಿ ಮನಮೋಹನಸಿಂಗ್ ತನಕ ಯಾರೊಬ್ಬರೂ ಧೈರ್ಯ ತೋರಿರಲಿಲ್ಲ. ಉಗ್ರಕೃತ್ಯವನ್ನು ನಿಷ್ಠುರವಾಗಿ ಖಂಡಿಸುವ ಧೈರ್ಯ ಇರಲಿಲ್ಲ.
ಉಗ್ರರಿಗೆ ಶಿಕ್ಷೆಯಾಗುವ ನಂಬಿಕೆ ಇರಲಿಲ್ಲ. ವಾಜಪೇಯಿ ಪೋಖ್ರಾನ್ ಟೆಸ್ಟ್ ಮತ್ತು ಕಾರ್ಗಿಲ್ ಯುದ್ಧದ ಮೂಲಕ ತಮ್ಮ ಮಿತಿಯಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದರು. ಮಿಕ್ಕವರ ಬಗ್ಗೆ ಕೇಳೋದೇ ಬೇಡ. ಡೀಮಾನಿಟೈಸೇಷನ್‌ಗೆ ಮುನ್ನ ಹತ್ತು ವರ್ಷಗಳಲ್ಲಿ ಆದ ಭೀಕರ ಉಗ್ರಕೃತ್ಯಗಳ ಸಂಖ್ಯೆ ಬರೋಬ್ಬರಿ 40. ಅದರಲ್ಲಿ ತಾಜ್ ಅಟ್ಯಾಕ್, ಪಾರ್ಲಿಮೆಂಟ್ ಅಟ್ಯಾಕ್, ಕಂದಹಾರ ಹೈಜಾಕ್ ಸೇರಿವೆ.
ಡೀಮಾನಿಟೈಸೇಷನ್ ನಂತರ ನಡೆದದ್ದು ಬೆರಳಣಿಕೆಯಷ್ಟು. ಅವೆಲ್ಲದಕ್ಕೂ ಬಡ್ಡಿಸಮೇತ ಉತ್ತರ ಕೊಡಲಾಗಿದೆ. ಈ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತಿರುವ ಚಿತ್ರ ಬಾಯ್ಕಾಟ್ ಆಗಬೇಕಾ? ಬಹಿಷ್ಕರಿಸುವವರನ್ನು ಪಾಕಿಸ್ತಾನಿಗಳು ಅಂತಲ್ಲದೇ ಬೇರೇನು ಕರೆಯಬಹುದು? ನೈಜ ಪಾಕಿಸ್ತಾನ ವನ್ನು, ಅಲ್ಲಿನ ರಾಜಕಾರಣವನ್ನು, ಭಾರತದ ವಿರುದ್ಧ ಕಾರ್ಯಾಚರಣೆ ನಡೆಸಲೆಂದೇ ಇರುವ ಅಂಡರ್‌ವಲ್ಡ ಅನ್ನು ನೇರವಾಗಿ ದಿಟ್ಟವಾಗಿ ಎಕ್ಸ್ʼಪೋಸ್ ಮಾಡುತ್ತಿರುವ ಚಿತ್ರವನ್ನು ಬಾಯ್ಕಾಟ್ ಮಾಡಬೇಕೆನ್ನುತ್ತಾರೆ ಅಂದರೆ ಇವರು ಪಾರ್ಟಿಷನ್ ಟೈಮಲ್ಲಿ ದಾರಿ ತಪ್ಪಿ ಈ ಕಡೆ ಬಂದವರೇ ಆಗಿರುತ್ತಾರೆ.
ಎನಿವೇಸ್, ಶ್ವಾನರೋದನೆ ವ್ಯರ್ಥವಾಗಿದೆ. ಆನೆ ನಡೆದದ್ದೇ ದಾರಿ ಎಂಬಂತೆ ಧುರಂಧರ್ ಯಶಸ್ವಿ ಯಾಗಿ ಮುನ್ನುಗ್ಗುತ್ತಿದೆ. ಇನ್ನೂ ನೋಡಿಲ್ಲದವರು ನೋಡಿ ಬಿಡಿ.