ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೊಬೈಲ್ ನೀಡಿಲ್ಲ ಎಂದು ಬ್ಯಾಟ್‌ನಿಂದ ಹೊಡೆದ ಬಾಲಕ; ಮುಂದೆ ಆಗಿದ್ದೇನು?

Viral News: ಮಕ್ಕಳಿಗೆ ಮೊಬೈಲ್ ನೀಡುವ ಪೋಷಕರಿಗಂತೂ ತಜ್ಞರು ಎಚ್ಚರಿಕೆಯನ್ನು ನೀಡುತ್ತಲೇ ಇರುತ್ತಾರೆ. ಇಂದು ಮೊಬೈಲ್ ನೀಡಿಲ್ಲ ಅನ್ನೋ ಕಾರಣಕ್ಕೆ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದು, ಊಟ- ತಿಂಡಿ ತಿನ್ನದೆ ಇರುವುದು ಹೀಗೆ ಇಂತಹ ಅಭ್ಯಾಸಗಳು ಹೆಚ್ಚಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಮೊಬೈಲ್ ಫೋನ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಸಣ್ಣ ವಯಸ್ಸಿನ ಬಾಲಕನೊಬ್ಬ ತನ್ನ ತಾಯಿಗೆ ಬ್ಯಾಟ್ ನಿಂದ ಹೊಡೆದ ಘಟನೆಯೊಂದು ನಡೆದಿದೆ. ಸದ್ಯ ಈ ಆಘಾತಕಾರಿ ವೀಡಿಯೊ ಭಾರೀ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ದಿಗ್ಭ್ರಮೆಗೊಳಿಸಿದೆ.

ಮೊಬೈಲ್ ಹಠಕ್ಕೆ ಬಿದ್ದು ತಾಯಿಗೆ ಬ್ಯಾಟ್ ನಿಂದ ಹೊಡೆದ ಬಾಲಕ: ವಿಡಿಯೊ ವೈರಲ್

ತಾಯಿಗೆ ಬ್ಯಾಟ್ ನಿಂದ ಹೊಡೆದ ಬಾಲಕ -

Profile
Pushpa Kumari Jun 4, 2026 4:41 PM

ನವದೆಹಲಿ,ಜೂ.4: ಇತ್ತೀಚೆಗೆ ಮೊಬೈಲ್ ಗೀಳು ಅನ್ನೋದು ಹೆಚ್ಚಾಗಿದೆ. ಅದರಲ್ಲೂ ಮಕ್ಕಳಿಗೆ ಮೊಬೈಲ್ ನೀಡುವ ಪೋಷಕರಿಗಂತೂ ತಜ್ಞರು ಎಚ್ಚರಿಕೆಯನ್ನು ನೀಡುತ್ತಲೇ ಇರುತ್ತಾರೆ..ಇಂದು ಮೊಬೈಲ್ ನೀಡಿಲ್ಲ ಅನ್ನೋ ಕಾರಣಕ್ಕೆ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದು, ಊಟ- ತಿಂಡಿ ತಿನ್ನದೆ ಇರುವುದು ಹೀಗೆ ಇಂತಹ ಅಭ್ಯಾಸಗಳು ಹೆಚ್ಚಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಮೊಬೈಲ್ ಫೋನ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಸಣ್ಣ ವಯಸ್ಸಿನ ಬಾಲಕನೊಬ್ಬ ತನ್ನ ತಾಯಿಗೆ ಬ್ಯಾಟ್ ನಿಂದ ಹೊಡೆದ ಘಟನೆಯೊಂದು ನಡೆದಿದೆ. ಸದ್ಯ ಈ ಆಘಾತಕಾರಿ ವೀಡಿಯೊ ಭಾರೀ ವೈರಲ್ (Viral News) ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ದಿಗ್ಭ್ರಮೆಗೊಳಿಸಿದೆ.

ಮೊಬೈಲ್ ಫೋನ್ ನೀಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಾಲಕನು ತನ್ನ ತಾಯಿಗೆ ಬ್ಯಾಟ್‌ನಿಂದ ಬಲವಾಗಿ ಹೊಡೆದಿದ್ದಾನೆ. ಇದರಿಂದ ತಾಯಿಯೂ ಪ್ರಜ್ಞೆ ತಪ್ಪಿ ಬಿದ್ದಿದ್ದು ಬಳಕೆದಾರರನ್ನು ಅಚ್ಚರಿಗೆ ಒಳಪಡಿಸಿದೆ. ಮಕ್ಕಳಿಗೆ ಫೋನ್ ನೀಡಿವ ಪೋಷಕರು ಈಗ ನೂರು ಭಾರೀ ಯೋಚನೆ ಮಾಡಬೇಕು ಎಂದು ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.

ವಿಡಿಯೋ ನೋಡಿ:



ಮಕ್ಕಳಲ್ಲಿ ಇಂದು ಮೊಬೈಲ್ ದಾಸತ್ವ ಅನ್ನೋದು ಅಷ್ಟರ ಮಟ್ಟಿಗೆ ಜಾಸ್ತಿಯಾಗಿ ಬಿಟ್ಟಿದೆ. ​ವೈರಲ್ ಆಗಿರುವ ದೃಶ್ಯದಲ್ಲಿ ಮಹಿಳೆಯೊಬ್ಬರು ನೆಲದ ಮೇಲೆ ಕುಳಿತು ಮೊಬೈಲ್‌ನಲ್ಲಿ ಮಾತ ನಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪುಟ್ಟ ಬಾಲಕ ತಾಯಿಯ ಹಿಂದೆ ಬ್ಯಾಟ್ ಹಿಡಿದುಕೊಂಡು ಇದ್ದಕ್ಕಿದ್ದಂತೆ ತಾಯಿಯ ತಲೆಗೆ ಜೋರಾಗಿ ಹೊಡೆಯುತ್ತಾನೆ. ಪೆಟ್ಟಿನ ಪರಿಣಾಮಕ್ಕೆ ತಾಯಿ ತಕ್ಷಣವೇ ನೆಲಕ್ಕೆ ಕುಸಿದು ಪ್ರಜ್ಞೆ ಕಳೆದುಕೊಳ್ಳುತ್ತಾರೆ.

Viral Video: ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!

ಮಹಿಳೆ ತಕ್ಷಣವೇ ಕುಸಿದು ಬೀಳುತ್ತಾಳೆ, ಆದರೆ ಹುಡುಗ ತನ್ನ ಕೈಯಿಂದ ಫೋನ್ ತೆಗೆದುಕೊಂಡು ಶಾಂತವಾಗಿ ಅದನ್ನು ಬಳಸಲು ಕುಳಿತುಕೊಳ್ಳುತ್ತಾನೆ. ಈ ಗೊಂದಲದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಹಲವು ಪ್ರತಿಕ್ರಿಯೆಗಳು ಬಂದಿವೆ.​ ನೆಟ್ಟಿಗರೊಬ್ಬರು ಮಾನವೀಯತೆ ಮರೆಸಿದ ಮೊಬೈಲ್. ಮಾನವ ಸಂಬಂಧಗಳಿಗಿಂತ ಫೋನ್ ಹೆಚ್ಚು ಮುಖ್ಯ ವಾದದ್ದು ಎಂದು ಬರೆದಿದ್ದಾರೆ. ಮತ್ತೊಬ್ಬರು ತಾಯಿಗೆ ಹೊಡೆದದ್ದಕ್ಕಿಂತ ಹೆಚ್ಚಾಗಿ, ಆ ಘಟನೆಯ ನಂತರ ಮಗು ವರ್ತಿಸಿದ ರೀತಿ ನಿಜಕ್ಕೂ ಬೇಸರ ತರಿಸಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.