ಮಗನ ಆರೈಕೆಗಾಗಿ ಕೆಲಸ ಬಿಡಲು ಮುಂದಾದ ಉದ್ಯೋಗಿ: ಮಾಲೀಕನ ಮಾನವೀಯತೆಗೆ ನೆಟ್ಟಿಗರು ಫಿದಾ!
Viral News: ಕೆಲವೊಮ್ಮೆ ಉತ್ತಮ ಕಂಪನಿಯಲ್ಲಿ ಕೆಲಸ ದೊರೆತರೂ ವೈಯಕ್ತಿಕ ಕಾರಣದಿಂದ ಕೆಲಸ ಬೀಡುವ ಸನ್ನಿವೇಶಗಳು ಬರುತ್ತವೆ. ಇದೀಗ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಉದ್ಯೋಗಿ ಯೊಬ್ಬರು ಮಗನ ಅನಾರೋಗ್ಯದ ವಿಚಾರವಾಗಿ ಕೆಲಸಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಆದರೆ ಇದನ್ನು ಅರಿತ ಮಾಲೀಕರು ಮಾನವೀಯತೆ ಮೆರೆಯುವ ಮೂಲಕ ಉದ್ಯೋಗಿಯ ರಾಜೀನಾಮೆಯನ್ನೇ ಸ್ವೀಕರಿಸಲು ನಿರಾಕರಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಜೂ.5: ಉದ್ಯೋಗ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯ. ಕೆಲವೊಮ್ಮೆ ಉತ್ತಮ ಕಂಪನಿಯಲ್ಲಿ ಕೆಲಸ ದೊರೆತರೂ ವೈಯಕ್ತಿಕ ಕಾರಣದಿಂದ ಕೆಲಸ ಬೀಡುವ ಸನ್ನಿವೇಶಗಳು ಬರುತ್ತವೆ. ಇದೀಗ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ಮಗನ ಅನಾರೋಗ್ಯದ ವಿಚಾರವಾಗಿ ಕೆಲಸಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಆದರೆ ಇದನ್ನು ಅರಿತ ಮಾಲೀಕರು ಮಾನವೀಯತೆ ಮೆರೆಯುವ ಮೂಲಕ ಉದ್ಯೋಗಿಯ ರಾಜೀನಾಮೆಯನ್ನೇ ಸ್ವೀಕರಿಸಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ ಈ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವ ಮೂಲಕ ನೆರವು ನೀಡಿದ್ದಾರೆ. ಸದ್ಯ ಮಾಲೀಕನ ಈ ನಡತೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Viral News) ಮೆಚ್ಚುಗೆ ವ್ಯಕ್ತ ವಾಗುತ್ತಿದೆ.
ಅಸ್ವಸ್ಥ ಮಗನ ಆರೈಕೆಗಾಗಿ ಉದ್ಯೋಗಿಯೊಬ್ಬರು ಕೆಲಸ ತ್ಯಜಿಸಲು ಮುಂದಾಗಿದ್ದರು. ಆದರೆ ಅವರ ನೆರವಿಗೆ ನಿಂತು ಮಾನವೀಯತೆ ಮೆರೆದ ಮಾಲೀಕನ ಸ್ಪಂದನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತ ವಾಗುತ್ತಿದೆ. ಅಂಕಿತ್ ಪಾಂಡೆ ಎನ್ನುವ ವ್ಯಕ್ತಿ ತಮ್ಮ ಖಾತೆಯಲ್ಲಿ ಈ ಭಾವುಕ ಕಥೆಯನ್ನು ಶೇರ್ ಮಾಡಿಕೊಂಡಿದ್ದಾರೆ. ಅವರದೇ ಕಂಪನಿಯಲ್ಲಿ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಉದ್ಯೋಗಿ ಸಡನ್ ಆಗಿ ಕೆಲಸಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು.
ಅವರ ರಾಜೀನಾಮೆ ನಿರ್ಧಾರದ ಹಿಂದಿನ ಕಾರಣದ ಬಗ್ಗೆ ಕೇಳಿದಾಗ, ಉದ್ಯೋಗಿ ತಮ್ಮ ಮಗ ತೀವ್ರವಾಗಿ ಅಸ್ವಸ್ಥ ನಾಗಿದ್ದಾನೆ ಎಂದು ಬಹಿರಂಗಪಡಿಸಿದ್ದಾರೆ. ನನ್ನ ಮಗನ ಸ್ಥಿತಿ ತುಂಬಾ ಗಂಭೀರವಾಗಿದೆ. ವೈದ್ಯರು ಅವನ ಚೇತರಿಕೆಗೆ ಬಹಳ ಕಡಿಮೆ ಭರವಸೆ ನೀಡಿದ್ದಾರೆ. ಈಗ ನಾನು ಅವನೊಂದಿಗೆ ನನ್ನ ಎಲ್ಲಾ ಸಮಯವನ್ನು ಕಳೆಯಲು ಬಯಸುತ್ತೇನೆ ಎಂದು ಈ ನಿರ್ಧಾರ ತೆಗೆದುಕೊಂಡರು.
ಉದ್ಯೋಗಿ ತನ್ನ ಮಗನ ಸ್ಥಿತಿಗೆ ಅವನ ಸಂಪೂರ್ಣ ಗಮನ ನೀಡಬೇಕಿತ್ತು. ಹೀಗಾಗಿ ಕೆಲಸಕ್ಕೆ ರಾಜೀನಾಮೆ ನೀಡಲು ಮುಂದಾದರು. ಆದರೆ ಮಾಲೀಕರು ರಾಜೀನಾಮೆ ಸ್ವೀಕರಿಸುವ ಬದಲು, ಬೇರೆ ಮಾರ್ಗವನ್ನು ಆರಿಸಿಕೊಂಡರು. ಮೊದಲು ವರ್ಕ್ ಫ್ರಮ್ ಹೋಮ್ ಅವಕಾಶ ನೀಡಿದ್ದರೂ ಉದ್ಯೋಗಿ ನಿರಾಕರಣೆ ಮಾಡಿದಾಗ ಮಗನನ್ನು ನೋಡಿಕೊಳ್ಳಲು ಸಂಪೂರ್ಣ ರಜೆಯನ್ನೇ ನೀಡಿ, ಅವರ ಉದ್ಯೋಗ ಸುರಕ್ಷಿತ ಎಂಬ ಭರವಸೆ ಕೂಡ ನೀಡಿದರು.
ಅಷ್ಟೇ ಅಲ್ಲದೆ ಕೆಲಸಕ್ಕೆ ಬಾರದಿದ್ದರೂ ಆರ್ಥಿಕ ಸಂಕಷ್ಟ ಎದುರಾಗಬಾರದು ಎಂದು ಕೆಲಸ ಮಾಡದಿದ್ದರೂ ವೇತನ ನೀಡಲು ಮುಂದಾಗಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಾಲೀಕನ ಮಾನವೀಯ ಗುಣವನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದಾರೆ. ಬಳಕೆದಾರರೊಬ್ಬರು ಕೆಲಸದ ಸ್ಥಳವು ತನ್ನ ಎಲ್ಲಾ ಉದ್ಯೋಗಿಗಳನ್ನು ಕುಟುಂಬದ ವರಂತೆ ಪರಿಗಣಿಸಬೇಕು, ಏಕೆಂದರೆ ಅವರು ಕಂಪನಿಯ ಅಭಿವೃದ್ಧಿಗಾಗಿ ಹೋರಾಡುತ್ತಾರೆ ಎಂದರು. ಮತ್ತೊಬ್ಬರು ನಿಜಕ್ಕೂ ಇಂತಹ ಮಾಲೀಕರು ಉದ್ಯೋಗಿಗಳಿಗೆ ಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.