ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಕೊನೆ ಎಂದು? ಮುಂಬೈಯಲ್ಲಿ ಅಸಭ್ಯವಾಗಿ ವರ್ತಿಸಿದ ಆಟೋ ಚಾಲಕನ ವಿಡಿಯೊ ವೈರಲ್

Viral News: ದೇಶದ ಅತ್ಯಂತ ಸುರಕ್ಷತೆ ಹಾಗೂ ಜನಸಂದಣಿ ಸೇರುವ ಮುಖ್ಯ ನಗರ ಮುಂಬೈನಲ್ಲೇ ಮಹಿಳಾ ಪ್ರಯಾಣಿಕರೊಬ್ಬರಿಗೆ ಮರೆಯಲಾಗದ ಘಟನೆ ನಡೆದಿದೆ. ಆಟೋ ಚಾಲಕನು ಮಹಿಳೆ ಯೊಬ್ಬರ ಜೊತೆ ಅಸಭ್ಯವಾಗಿ ಮಾತನಾಡಿ ಕಿರುಕುಳ ನೀಡಲು ಮುಂದಾಗಿದ್ದಾನೆ. ಈ ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಭಾರೀ ಆಕ್ರೋಶ ವ್ಯಕ್ತ ವಾಗಿದೆ.

ಮಹಿಳಿಗೆ ಲೈಂಗಿಕ ಕಿರುಕುಳ ನೀಡಿದ ಆಟೋ ಚಾಲಕ: ನೆಟ್ಟಿಗರ ಆಕ್ರೋಶ

ಮುಂಬೈಯಲ್ಲಿ ಮಹಿಳೆಗೆ ಕಿರುಕುಳ ನೀಡಿದ ಆಟೋ ಚಾಲಕ -

Profile
Pushpa Kumari Jun 5, 2026 8:01 PM

ಮುಂಬೈ, ಜೂ. 5: ಇತ್ತೀಚೆಗೆ ಮಹಿಳೆಯರಿಗೆ ಸಾರ್ವಜನಿಕ ಸ್ಥಳದಲ್ಲೂ ಸುರಕ್ಷತೆ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಅತ್ಯಂತ ಸುರಕ್ಷಿತ ಹಾಗೂ ಜನಸಂದಣಿ ಇರುವ ಮುಖ್ಯ ನಗರ ಮುಂಬೈಯಲ್ಲೇ ಮಹಿಳೆಯೊಬ್ಬರಿಗೆ ಕಹಿ ಅನುಭವವಾಗಿದೆ. ಆಟೋ ಚಾಲಕ ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ಮಾತನಾಡಿ ಕಿರುಕುಳ ನೀಡಿದ್ದಾನೆ. ಈ ಆಘಾತಕಾರಿ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News) ಆಗಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ.

ಈ ದೃಶ್ಯವು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ಉಂಟು ಮಾಡಿದೆ. ಆಟೋ ಚಾಲಕ ಮಹಿಳೆ ವಾಹನದಿಂದ ಹೊರಬರುತ್ತಿದ್ದಂತೆ ಅತ್ಯಂತ ಅಸಭ್ಯವಾಗಿ ಮಾತನಾಡಿ, ಆಕೆಯ ಗೌರವಕ್ಕೆ ದಕ್ಕೆ ತಂದಿದ್ದಾನೆ. "ಮುಟ್ಟಿ ನೋಡಿ" ಎಂಬ ಅಸಭ್ಯ ಪದವನ್ನು ಬಳಕೆ ಮಾಡಿದ್ದಾನೆ.

ವಿಡಿಯೊ ನೋಡಿ:



ಈ ಘಟನೆಯು ಮಹಿಳೆಯರು ಎದುರಿಸುತ್ತಿರುವ ಕಿರುಕುಳದ ಬಗ್ಗೆ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಚಾಲಕನು ಲೈಂಗಿಕ ಕೃತ್ಯ ಎಸಗುವ ರೀತಿಯಲ್ಲಿ ಮಹಿಳೆಯನ್ನು ಪ್ರಚೋದಿಸಿದ್ದಾನೆ. ​ಈ ಕಾಮುಕನ ಮನಸ್ಥಿತಿಯನ್ನು ನೆಟ್ಟಿಗರು ತೀವ್ರವಾಗಿ ಖಂಡಿಸಿದ್ದು, ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಂಬೈ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಸುರಂಗದಲ್ಲಿ ಕೆಟ್ಟು ನಿಂತ ಚೆನ್ನೈ ಮೆಟ್ರೋ ರೈಲು; ಪ್ರಯಾಣಿಕರು ಸುಸ್ತೋ ಸುಸ್ತು

ವಿಡಿಯೊ ವೈರಲ್ ಆದ ಬೆನ್ನಲ್ಲೇ ಮುಂಬೈ ಪೊಲೀಸರು, ಇದನ್ನು ಪೋಸ್ಟ್ ಮಾಡಿದ ಮಹಿಳೆಯನ್ನು ಸಂಪರ್ಕಿಸಿದ್ದಾರೆ. ಪೊಲೀಸರು ದಯವಿಟ್ಟು ಸಂಪರ್ಕ ವಿವರಗಳನ್ನು ತಿಳಿಸಿಕೊಡಿ ಎಂದು ಹೇಳಿದ್ದಾರೆ. ಇಂತಹ ಮೌಖಿಕ ಕಿರುಕುಳಗಳು ಮಹಿಳೆಯರ ಮೇಲೆ ಪರಿಣಾಮ ಬೀರುತ್ತವೆ ಎಂದು ಅನೇಕರು ಆಕ್ರೋಶ ಹೊರಹಾಕಿದ್ದಾರೆ. ಒಬ್ಬರು, ʼʼಈ ಕಾಮುಕನಿಗೆ ಸರಿಯಾದ ಶಿಕ್ಷೆ ವಿಧಿಸಬೇಕುʼʼ ಎಂದು ಕಮೆಂಟ್ ಮಾಡಿದ್ದಾರೆ.