ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಲಸ್ಟೈರ್‌ ಕುಕ್‌ಗೆ ತಲೆ ಇಲ್ಲ - ಅರ್‌ಸಿಬಿಯಲ್ಲೇ ಆಡುವಂತೆ ಜೇಕಬ್‌ ಬೆಥೆಲ್‌ಗೆ ಕೆವಿನ್‌ ಪೀಟರ್ಸನ್‌ ಸಲಹೆ!

ಡಿಫೆಂಡಿಂಗ್‌ ಚಾಂಪಿಯನ್ಸ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 2026ರ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ಮುಂದುವರಿಸಿದೆ. ಆದರೆ, ತಂಡದ ಯುವ ಬ್ಯಾಟರ್‌ ಜೇಕಬ್‌ ಬೆಥೆಲ್‌ಗೆ ಟೂರ್ನಿ ಮಧ್ಯದಲ್ಲೇ ಆರ್‌ಸಿಬಿ ತಂಡದವನ್ನು ತೊರೆಯುವಂತೆ ಇಂಗ್ಲೆಂಡ್‌ನ ಮಾಜಿ ನಾಯಕ ಅಲಸ್ಟೈರ್‌ ಕುಕ್‌ ಅಚ್ಚರಿಯ ಸಲಹೆ ನೀಡಿದ್ದಾರೆ.

ಕುಕ್‌ಗೆ ಐಡಿಯಾ ಇಲ್ಲ! ಅರ್‌ಸಿಬಿಯಲ್ಲೇ ಆಡುವಂತೆ ಬೆಥೆಲ್‌ಗೆ ಕೆಪಿ ಸಲಹೆ

ಅಲಸ್ಟೈರ್‌ ಕುಕ್‌ ಮತ್ತು ಜೇಕಬ್‌ ಬೆಥೆಲ್‌ -

Vijeth Kumar DN
Vijeth Kumar DN Apr 23, 2026 5:40 PM

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ (Indian Premier League) ಬಗ್ಗೆ ಇಂಗ್ಲೆಂಡ್‌ನ ಮಾಜಿ ನಾಯಕ ಅಲಸ್ಟೈರ್‌ ಕುಕ್ ನೀಡಿದ್ದ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಐಪಿಎಲ್‌ನಲ್ಲಿ ಆಡಿರುವ ಅನುಭವ ಇಲ್ಲದ ಕುಕ್, ಲೀಗ್‌ನ ಸ್ವರೂಪ ಮತ್ತು ಆಟಗಾರರ ಅಭಿವೃದ್ಧಿ ಬಗ್ಗೆ ಕೆಲವು ಸಂಶಯಗಳನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮತ್ತೊಬ್ಬ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್, ಯುವ ಪ್ರತಿಭೆ ಜೇಕಬ್ ಬೆಥೆಲ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಐಪಿಎಲ್‌ನಲ್ಲಿ ಆಡುತ್ತಿರುವ ಅನುಭವ ಯುವ ಆಟಗಾರರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.

ವಿಶೇಷವಾಗಿ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಅವಕಾಶ ಪಡೆದಿರುವ ಬೆಥೆಲ್ ಬಗ್ಗೆ ಪೀಟರ್ಸನ್ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದ್ದಾರೆ. "ಐಪಿಎಲ್‌ ಅಂತಹ ದೊಡ್ಡ ವೇದಿಕೆಯಲ್ಲಿ ಆಡೋದು ಆಟಗಾರನಿಗೆ ಅಮೂಲ್ಯ ಅನುಭವ ನೀಡುತ್ತದೆ. ಜೇಕಬ್‌ ಬೆಥೆಲ್‌ ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು," ಎಂದಿದ್ದಾರೆ.

IPL 2026: ಲಖನೌ ಸೂಪರ್‌ ಜಯಂಟ್ಸ್‌ ವೈಫಲ್ಯಕ್ಕೆ ಬಲವಾದ ಕಾರಣ ತಿಳಿಸಿದ ಸೈಮನ್‌ ದುಲ್‌!

ಐಪಿಎಲ್ ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಟಿ20 ಲೀಗ್ ಆಗಿದ್ದು, ಇಲ್ಲಿ ವಿಶ್ವದ ಶ್ರೇಷ್ಠ ಆಟಗಾರರ ಜೊತೆ ಆಟ ಆಡುವುದು ಯುವ ಕ್ರಿಕೆಟಿಗರಿಗೆ ದೊಡ್ಡ ಅವಕಾಶ ಮ್ತು ಅಪಾರ ಅನುಂಬ ತಂದುಕೊಡುತ್ತದೆ. ಇದೇ ಕಾರಣಕ್ಕೆ ಅನೇಕ ಮಾಜಿ ಆಟಗಾರರು ಐಪಿಎಲ್ ಅನುಭವವನ್ನು ಅತ್ಯಂತ ಮಹತ್ವದದ್ದು ಎಂದು ಪರಿಗಣಿಸುತ್ತಾರೆ.

ಒಟ್ಟಾರೆ, ಕುಕ್ ನೀಡಿದ ಅಭಿಪ್ರಾಯ ಚರ್ಚೆಗೆ ಕಾರಣವಾದರೂ, ಪೀಟರ್ಸನ್ ಯುವ ಆಟಗಾರರ ಬೆಂಬಲಕ್ಕೆ ನಿಂತಿದ್ದು, ಬೆಥೆಲ್‌ ಭವಿಷ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

IPL 2026: ಸಹೋದರ ಪಾಂಡ್ಯ ಜತೆಗೆ ಬಿರುಕು; ವದಂತಿಗಳ ಬಗ್ಗೆ ಕೃನಾಲ್ ಸ್ಪಷ್ಟನೆ!

ಅಲಸ್ಟೈರ್‌ ಕುಕ್‌ ಹೇಳಿದ್ದೇನು?

ಇಂಗ್ಲೆಂಡ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾದ ಅಲಸ್ಟೈರ್‌ ಕುಕ್‌, ಐಪಿಎಲ್‌ ಬಗ್ಗೆ ಮಾತನಾಡಿ ಇಂಗ್ಲೆಂಡ್‌ನ ಯುವ ಪ್ರತಿಭೆ ಜೇಕಬ್‌ ಬೆಥೆಲ್‌ ಕೇವಲ ಬೆಂಚ್‌ ಕಾಯುತ್ತಿದ್ದಾರೆ. ಆರ್‌ಸಿಬಿ ತಂಡದಲ್ಲಿದ್ದು ಕೇವಲ ಬೆಂಚ್‌ ಬಿಸಿ ಮಾಡುವುದಕ್ಕಿಂತಲೂ, ಟೂರ್ನಿಯನ್ನು ಅರ್ಧಕ್ಕೇ ತೊರೆದು ತಾಯ್ನಾಡಿಗೆ ಹಿಂದಿರುಗಬೇಕು. ಇಲ್ಲಿ ಕೌಂಟಿ ಕ್ರಿಕೆಟ್‌ ಆಡಿ ಇಂಗ್ಲೆಂಡ್‌ ಕ್ರಿಕೆಟ್‌ ಅಭಿವೃದ್ಧಿ ಪಡಿಸುವ ಕಡೆಗೆ ಗಮನ ನೀಡಬೇಕು. ಐಪಿಎಲ್‌ ವೇಸ್ಟ್‌ ಆಫ್‌ ಟೈಮ್‌ ಎಂದೆಲ್ಲಾ ಕುಕ್‌ ಟೀಕೆ ಮಾಡಿದ್ದರು.

ಇನ್ನು ಐಪಿಎಲ್‌ ಆಯ್ಕೆ ಮಾಡಿಕೊಂಡಿದ್ದಕ್ಕೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿಂದ ಒತ್ತಾಯ ಪೂರ್ವಕವಾಗಿ ನಿವೃತ್ತಿ ತೆಗೆದುಕೊಂಡ ಕೆವಿನ್‌ ಪೀಟರ್ಸನ್‌, ಯುವ ಆಟಗಾರ ಜೇಕಬ್‌ ಬೆಥಲ್‌ಗೆ ಯಾವುದೇ ಕಾರಣಕ್ಕೂ ತಪ್ಪು ನಿರ್ಧಾರ ತೆಗೆದುಕೊಳ್ಳದಂತೆ ಸಲಹೆ ನೀಡಿದ್ದಾರೆ. ಕೆವಿನ್‌ ಪೀಟರ್ಸನ್‌ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಕ್ಯಾಪ್ಟನ್‌ ಆಗಿದ್ದರು ಕೂಡ.

IPL 2026: ಆರ್‌ಸಿಬಿ ತಂಡದ ಹೀಗೊಬ್ಬ ಅಭಿಮಾನಿ; ವಿಡಿಯೊ ವೈರಲ್‌

ಬೆಥೆಲ್‌ಗೆ ಅವಕಾಶ ಸಿಕ್ಕಿಲ್ಲ ಏಕೆ?

ಇನ್ನು 21 ವರ್ಷದ ಯುವ ಎಡಗೈ ಬ್ಯಾಟರ್‌ ಜೇಕಬ್‌ ಬೆಥೆಲ್‌, ಇತ್ತೀಚೆಗೆ ನಡೆದ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ವಿರುದ್ಧದ ಸೆಮಿಫೈನಲ್‌ ಹಣಾಹಣಿಯಲ್ಲಿ ಸ್ಪೋಟಕ ಶತಕ ಬಾರಿಸಿ ವಿಶ್ವ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ್ದರು. ಆದರೂ, ಅವರಿಗೆ ಆರ್‌ಸಿಬಿ ತಂಡದ ಆಡುವವ 11ರ ಬಳಗದಲ್ಲಿ ಸ್ಥಾನ ಲಭ್ಯವಾಗುತ್ತಿಲ್ಲ.

ಪ್ಲೇಯಿಂಗ್‌ 11 ಆಯ್ಕೆ ಮಾಡುವಾಗ 4 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ಇರುತ್ತದೆ. ಸದ್ಯಕ್ಕೆ ಫಿಲಿಪ್‌ ಸಾಲ್ಟ್‌, ಟಿಮ್‌ ಡೇವಿಡ್‌, ರೊಮಾರಿಯೊ ಶೆಫರ್ಡ್ ಮತ್ತು ಜೇಕಬ್‌ ಡಫೀ ಅಥವಾ ಜಾಶ್ ಹೇಝಲ್‌ವುಡ್‌ ಮೊದಲ ಆಯ್ಕೆಯ ಆಟಗಾರರಾಗಿ ಸ್ಥಾನ ಪಡೆಯುತ್ತಿದ್ದಾರೆ. ಹೀಗಾಗಿ ಟಾಪ್‌ ಆರ್ಡರ್‌ ಬ್ಯಾಟರ್‌ ಬೆಥೆಲ್‌ಗೆ ಅವಕಾಶ ಸಿಗುತ್ತಿಲ್ಲ. ಈ ನಡುವೆ ಔಟ್‌ಆಫ್‌ ಫಾರ್ಮ್ ಶೆಪರ್ಡ್‌ನ ಕೈಬಿಟ್ಟು ಬೆಥೆಲ್‌ಗೆ ಅವಕಾಶ ನೀಡಬೇಕು ಎಂಬ ಕೂಗು ಕೂಡ ಸೋಷಿಯಲ್‌ ಮೀಡಿಯಾಗಳಲ್ಲಿ ಕೇಳಿಬಂದಿದೆ.