ನಾಳೆ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಹಗುರ ಮಳೆ ನಿರೀಕ್ಷೆ
ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಮುಂಜಾನೆ ವೇಳೆ ದಟ್ಟ ಮಂಜು, ಮೈಕೊರೆವ ಚಳಿ ಕಂಡುಬರುತ್ತಿದೆ. ಇದರಿಂದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶದ ಪ್ರಮಾಣ ಇಳಿಕೆಯಾಗಿದೆ. ಕಳೆದ ಎರಡು ವಾರದಿಂದ ಕಡಿಮೆಯಾಗಿದ್ದ ಹಿಂಗಾರು ಮಳೆ ಮತ್ತೆ ತೀವ್ರಗೊಳ್ಳುವ ಮುನ್ಸೂಚನೆ ಸಿಕ್ಕಿದ್ದು, ನ.21 ಹಲವೆಡೆ ಮಳೆಯಾಗುವ ನಿರೀಕ್ಷೆ ಇದೆ.