ವಿಶ್ವ ಗೆಲ್ಲಲು 'ವಿಶ್ವವಿಜೇತರ ಸಮರ
ಅಮೆರಿಕದ ನ್ಯೂಜೆರ್ಸಿಯ ಮೆಟ್ಲೈಫ್ ಸ್ಟೇಡಿಯಂನಲ್ಲಿ ಭಾನುವಾರ ಮಧ್ಯರಾತ್ರಿ ಹಾಲಿ ಚಾಂಪಿಯನ್ ತಂಡವಾಗಿರುವ ಅರ್ಜೆಂಟೀನಾ ಮತ್ತು ಸ್ಪೈನ್ ತಂಡಗಳ ಮಧ್ಯೆ ಈ ಬಾರಿಯ ಫಿಫಾ ಫೈನಲ್ ಕಾದಾಟ ನಡೆಯಲಿದೆ. 4 ವರ್ಷಕ್ಕೊಮ್ಮೆ ನಡೆಯುವ ಈ ಕ್ರೀಡಾ ಮಹೋತ್ಸವದ 23ನೇ ಆವೃತ್ತಿಯ ಫೈನಲ್ ಪಂದ್ಯ ಇದಾಗಿದೆ.
-
ನರೇಂದ್ರ ಪಾರೆಕಟ್
ವಿಶ್ವದಲ್ಲೇ ಅತ್ಯಂತ ಹೆಚ್ಚು ವೀಕ್ಷಕರನ್ನು ಹೊಂದಿರುವ ಫುಟ್ಬಾಲ್ ಕ್ರೀಡೆಯ 23ನೇ ಆವೃತ್ತಿಯ ಫಿಫಾ ವಿಶ್ವಕಪ್ ಫೈನಲ್ ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ. ಈ ಬಾರಿ ವಿಶ್ವದ ಅಗ್ರಮಾನ್ಯ 48 ತಂಡಗಳಿಗೆ ಫಿಫಾ ವಿಶ್ವಕಪ್ನಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದೆ. ಈಗಾಗಲೇ 3 ಬಾರಿ ಚಾಂಪಿಯನ್ ಆಗಿರುವ ಅರ್ಜೆಂಟೀನಾ ಮತ್ತು 1 ಬಾರಿ ಟ್ರೋಫಿ ಗೆದ್ದಿರುವ ಸ್ಪೇನ್ ಈ ಸಲದ ಅಂತಿಮ ಹಣಾಹಣಿಯಲ್ಲಿ ಪರಸ್ಪರ ಕಾದಾಡಲು ಸಿದ್ಧವಾಗಿದೆ.-
ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಇನ್ನು ಬಾಕಿ ಉಳಿದಿರುವುದು ಕೇವಲ ಕೆಲವೇ ಗಂಟೆಗಳು ಮಾತ್ರ. ವಿಶ್ವಾದ್ಯಂತದ ಕೋಟ್ಯಂತರ ಫುಟ್ಬಾಲ್ ಪ್ರೇಮಿಗಳು ಇದೀಗ ಕುತೂಹಲದಿಂದ ಪಂದ್ಯದ ರೋಚಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾತರರಾಗಿ ಕಾಯು ತ್ತಿದ್ದಾರೆ.
ಅಮೆರಿಕದ ನ್ಯೂಜೆರ್ಸಿಯ ಮೆಟ್ಲೈಫ್ ಸ್ಟೇಡಿಯಂನಲ್ಲಿ ಭಾನುವಾರ ಮಧ್ಯರಾತ್ರಿ ಹಾಲಿ ಚಾಂಪಿಯನ್ ತಂಡವಾಗಿರುವ ಅರ್ಜೆಂಟೀನಾ ಮತ್ತು ಸ್ಪೈನ್ ತಂಡಗಳ ಮಧ್ಯೆ ಈ ಬಾರಿಯ ಫಿಫಾ ಫೈನಲ್ ಕಾದಾಟ ನಡೆಯಲಿದೆ. 4 ವರ್ಷಕ್ಕೊಮ್ಮೆ ನಡೆಯುವ ಈ ಕ್ರೀಡಾ ಮಹೋತ್ಸವದ 23ನೇ ಆವೃತ್ತಿಯ ಫೈನಲ್ ಪಂದ್ಯ ಇದಾಗಿದೆ.
2010ರ ಆವೃತ್ತಿಯಲ್ಲಿ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿದ್ದ ಸ್ಪೇನ್ ತಂಡವು ಫಿಫಾ ಟೂರ್ನಿ ಯಲ್ಲಿ ಏಕೈಕ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಆದರೆ ಅರ್ಜೆಂಟೀನಾ 1978, 1986 ಮತ್ತು 2022ರ ಟೂರ್ನಿಯಲ್ಲಿ ಟ್ರೋಫಿಯನ್ನು ಹಿಡಿದೆತ್ತಿದ್ದು, ಇದೀಗ ತನ್ನ ನಾಲ್ಕನೇ ಟ್ರೋಫಿಗೆ ಮುತ್ತಿಡಲು ಮುಂದಾಗಿದೆ.
ಈ ವಿಶ್ವಕಪ್ನಲ್ಲಿ ಅರ್ಜೆಂಟೀನಾದ ಪಯಣ: ಈ ವಿಶ್ವಕಪ್ನಲ್ಲಿ ತಾನಾಡಿದ ಎಲ್ಲಾ ಪಂದ್ಯ ಗಳಲ್ಲೂ ಅರ್ಜೆಂಟೀನಾ ಅಜೇಯವಾಗಿ ತನ್ನ ಫೈನಲ್ ಪಂದ್ಯದತ್ತ ದಾಪುಗಾಲಿಟ್ಟಿದೆ. ಗುಂಪು ಹಂತದ ತನ್ನ ಮೊದಲ ಪಂದ್ಯದಲ್ಲಿ ಅದು ಅಲ್ಜೀರಿಯಾವನ್ನು 3-0 ಅಂತರದಲ್ಲಿ ಮಣಿಸಿದರೆ, 2ನೇ ಪಂದ್ಯದಲ್ಲಿ ಆಸ್ಟ್ರಿಯಾವನ್ನು 2-0 ಅಂತದಲ್ಲಿ ಮಣಿಸಿತ್ತು. 3ನೇ ಪಂದ್ಯದಲ್ಲಿ ಜೋರ್ಡಾನ್ ಅನ್ನು 3-1 ಅಂತರದಲ್ಲಿ ಮಣಿಸಲು ಅರ್ಜೆಂಟಿನಾಕ್ಕೆ ಸಾಧ್ಯವಾಗಿದೆ.
ಇದನ್ನೂ ಓದಿ: FIFA World Cup 2026| ಹಾಲಿ ಚಾಂಪಿಯನ್ ಅರ್ಜೆಂಟೀನಾಗೆ ಸ್ಪೇನ್ ಸವಾಲ್; ವಿಶ್ವಕಪ್ ಕಿರೀಟಕ್ಕಾಗಿ ಮಹಾ ಕದನ!
32ರ ಘಟ್ಟದ ಪಂದ್ಯದಲ್ಲಿ ತನಗೆದುರಾದ ಕೇಪ್ ವರ್ಡೆಯನ್ನು 3-2 ಅಂತರದಲ್ಲಿ, ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ಈಜಿಪ್ಟ್ ವಿರುದ್ಧ 3-2 ಅಂತರದಲ್ಲಿ ಅರ್ಜೆಂಟೀನಾ ಗೆಲುವು ಪಡೆದಿತ್ತು. ಕ್ವಾ. ಫೈನಲ್ನಲ್ಲಿ ಸ್ವಿಟ್ಜರ್ಲೆಂಡ್ ವಿರುದ್ಧ 3-1 ಮತ್ತು ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 2-1 ಅಂತರದ ಗೆಲುವಿನ ಮೂಲಕ ಅರ್ಜೆಂಟೀನಾ ಈ ಬಾರಿ ಫೈನಲ್ ಪ್ರವೇಶಿಸಿದೆ.
ಈ ವಿಶ್ವಕಪ್ನಲ್ಲಿ ಸ್ಪೇನ್ ಪಯಾಣ: ಸ್ಪೇನ್ ತಂಡ ಈ ಬಾರಿ ತನ್ನ ಮೊದಲ ಪಂದ್ಯದಲ್ಲಿ ಕೇಪ್ ವರ್ಡೆ ವಿರುದ್ಧ 0-0 ಅಂತರದಲ್ಲಿ ಪಂದ್ಯ ಡ್ರಾಗೊಳಿಸುವ ಮೂಲಕ ಅತ್ಯಂತ ನಿರಶಾದಾಯಕ ಆರಂಭ ಪಡೆಯಿತು. ಆದರೆ ಆ ಪಂದ್ಯದ ಬಳಿಕ ಪುಟಿದೆದ್ದ ಸ್ಪೇನ್ ತಂಡ ಆ ನಂತರದ ಪ್ರತೀ ಪಂದ್ಯಗಳಲ್ಲೂ ತನ್ನ ಸಾಮರ್ಥ್ಯ ಮೆರೆದು ಎಲ್ಲಾ ಪಂದ್ಯಗಳಲ್ಲೂ ಗೆಲುವನ್ನು ಕಂಡುಕೊಡಿತು. 2ನೇ ಪಂದ್ಯದಲ್ಲಿ ಸೌದಿ ಅರೇಬಿಯಾವನ್ನು ಅದು 4-0 ಅಂತರದಲ್ಲಿ ಸೋಲಿಸಿದರೆ, 3ನೇ ಪಂದ್ಯ ದಲ್ಲಿ ಉರುಗ್ವೇ ವಿರುದ್ಧ 1-0 ಅಂತರದಲ್ಲಿ ಗೆದ್ದಿತು.
ತನ್ನ 32ನೇ ಘಟ್ಟದ ಪಂದ್ಯದಲ್ಲಿ ಆಸ್ಟ್ರಿಯಾ ವಿರುದ್ಧ 3-0, 16ನೇ ಸುತ್ತಿನ ಪಂದ್ಯದಲ್ಲಿ ಪೋರ್ಚು ಗಲ್ ವಿರುದ್ಧ 1-0 ಅಂತರದಲ್ಲಿ ಗೆಲುವನ್ನು ಸಾಧಿಸಿತ್ತು. ಕ್ವಾ. ಫೈನಲ್ನಲ್ಲಿ ಬೆಲ್ಜಿಯಂ ವಿರುದ್ಧ 2-1 ಅಂತದಲ್ಲಿ ಸ್ಪೇನ್ ಗೆದ್ದರೆ, ಸೆಮಿಫೈನಲ್ನಲ್ಲಿ 2-0 ಅಂತರದಲ್ಲಿ ಫ್ರಾನ್ಸ್ ವಿರುದ್ಧ ಗೆದ್ದು ಇದೀಗ ಫೈನಲ್ ಹಣಾಹಣಿಗೆ ಸಿದ್ಧವಾಗಿದೆ.
ಫಿಫಾ ವಿಶ್ವಕಪ್ಗಳಲ್ಲಿ ಅರ್ಜೆಂಟೀನಾ ಪ್ರದರ್ಶನ
1934: 9ನೇ ಸ್ಥಾನ
1958: 13ನೇ ಸ್ಥಾನ
1962: 10ನೇ ಸ್ಥಾನ
1966: 5ನೇ ಸ್ಥಾನ
1974: 8ನೇ ಸ್ಥಾನ
*1978: ಚಾಂಪಿಯನ್ಸ್
1982: 11ನೇ ಸ್ಥಾನ
*1986: ಚಾಂಪಿಯನ್ಸ್
1990: ರನ್ನರ್ಸ್ ಅಪ್
1994: 10ನೇ ಸ್ಥಾನ
1998: 6ನೇ ಸ್ಥಾನ
2002: 18ನೇ ಸ್ಥಾನ
2006: 6ನೇ ಸ್ಥಾನ
2010: 5ನೇ ಸ್ಥಾನ
2014: ರನ್ನರ್ಸ್ ಅಪ್
2018: 16ನೇ ಸ್ಥಾನ
*2022: ಚಾಂಪಿಯನ್ಸ್
*2026: ಫೈನಲ್ ಪ್ರವೇಶ
ಫಿಫಾ ವಿಶ್ವಕಪ್ಗಳಲ್ಲಿ ಸ್ಪೇನ್ ತಂಡದ ಪ್ರದರ್ಶನ
1935: 5ನೇ ಸ್ಥಾನ
1950: 4ನೇ ಸ್ಥಾನ
1962: 12ನೇ ಸ್ಥಾನ
1966: 10ನೇ ಸ್ಥಾನ
1978: 10ನೇ ಸ್ಥಾನ
1982: 12ನೇ ಸ್ಥಾನ
1986: 7ನೇ ಸ್ಥಾನ
1990: 10ನೇ ಸ್ಥಾನ
1994: 8ನೇ ಸ್ಥಾನ
1998: 17ನೇ ಸ್ಥಾನ
2002: 5ನೇ ಸ್ಥಾನ
2006: 9ನೇ ಸ್ಥಾನ
*2010: ಚಾಂಪಿಯನ್
2014: 23ನೇ ಸ್ಥಾನ
2018: 10ನೇ ಸ್ಥಾನ
2022: 13ನೇ ಸ್ಥಾನ
*2026: ಫೈನಲ್ ಪ್ರವೇಶ
ಮೆಸ್ಸಿ: ಫೈನಲ್ ಆಕರ್ಷಣೆ
ಅರ್ಜೆಂಟೀನಾ ತಂಡದ ನಾಯಕ ಮೆಸ್ಸಿ ಫೈನಲ್ ಪಂದ್ಯದಲ್ಲೂ ಹೆಚ್ಚಿನ ವೀಕ್ಷಕರ ಅಭಿಮಾನದ ಕ್ರೀಡಾಳು. ಈಗಾಗಲೇ ಅರ್ಜೆಂಟೀನಾ ಪರ ಏಳು ವಿಶ್ವಕಪ್ಗಳಲ್ಲಿ ಮೆಸ್ಸಿ ಪಾಲ್ಗೊಂಡವರು. ಆದರೆ ಈ ಸಲದ ಫಿಫಾ ವಿಶ್ವಕಪ್ನಲ್ಲಿ ಅವರು ಪಡೆದ ಗೋಲುಗಳ ಸಂಖ್ಯೆ ಹೆಚ್ಚು-8.
2006ರ ತನ್ನ ಮೊದಲ ಪಂದ್ಯದಲ್ಲಿ ಮೆಸ್ಸಿ 1 ಗೋಲ್ ಹೊಡೆದರೆ, 2010ರ ವಿಶ್ವಕಪ್ನಲ್ಲಿ ಒಂದೇ ಒಂದು ಗೋಲ್ ಅವರಿಂದ ಬಂದಿರಲಿಲ್ಲ. 2014ರಲ್ಲಿ 4, 2018ರಲ್ಲಿ 1, 2022ರಲ್ಲಿ 7 ಮತ್ತು ಈ ಸಲದ ಫೈನಲ್ ವರೆಗೆ 8 ಗೋಲುಗಳನ್ನು ಸಂಪಾದಿಸಿ ಫಿಫಾ ವಿಶ್ವಕಪ್ನಲ್ಲಿ ಒಟ್ಟು 21 ಗೋಲ್ ಗಳನ್ನು ಸಂಪಾದಿಸಿದ ಆಟಗಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಹಾಗಾಗಿ ಈ ಫೈನಲ್ ಪಂದ್ಯ ದಲ್ಲೂ ಎಲ್ಲರ ಕಣ್ಣು ಮೆಸ್ಸಿ ಮೇಲೆ ನೆಟ್ಟಿದೆ.