ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಾಡಗೀತೆಗೆ ಬೌದ್ಧಪದ ಜೋಡಿಸಿ

ಇಂತಹ ವಾಗ್ವಾದ, ಭಿನ್ನಾಭಿಪ್ರಾಯಗಳು ಎಲ್ಲಿವರೆಗೂ ಇರುತ್ತವೆಯೋ, ಅಲ್ಲಿಯವರೆಗೂ ನಾವು ಜೀವಂತವಾಗಿರುತ್ತೇವೆ. ಕುವೆಂಪು ಅವರು ಹಲವು ಬಾರಿ ಈ ನಾಡಗೀತೆಯನ್ನು ತಿದ್ದುಪಡಿಗೆ ಒಳಪಡಿಸಿ ದ್ದಾರೆ. ಕೆಲವರು ಈ ಹಾಡಿನಲ್ಲಿ ಮಹಿಳೆಯರ ಹೆಸರು ಬರಬೇಕು ಎಂದರೆ ಮತ್ತೆ ಕೆಲವರು ಬುದ್ಧರ ಹೆಸರು ಬಂದಿಲ್ಲ ಎಂದು ಹೇಳಿದ್ದಾರೆ. ಕೇಳಿ ಬಂದ ಪದಗಳನ್ನೆ ಸೇರಿಸುತ್ತ ಹೋದರೆ ಅದು ಸ್ತುತಿ ಗೀತೆಯಾಗುತ್ತದೆ

ನಾಡಗೀತೆಗೆ ಬೌದ್ಧಪದ ಜೋಡಿಸಿ

-

Ashok Nayak Ashok Nayak Sep 24, 2025 12:16 PM

ಕೆ.ಜೆ.ಲೋಕೇಶ್ ಬಾಬು ಮೈಸೂರು

ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಆಶಯ

ಏಕಕಾಲಕ್ಕೆ 15 ಸಾವಿರ ಮಂದಿಯಿಂದ ನಾಡ ಗೀತೆ ಗಾಯನ

ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಯಲ್ಲಿ ಬೌದ್ಧರನ್ನು ಸೇರ್ಪಡೆ ಮಾಡಬೇಕು ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಆಶಿಸಿದರು. ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಮಂಗಳವಾರ ಮೈಸೂರು ದಸರಾ ಕವಿಗೋಷ್ಠಿ ಉಪ ಸಮಿತಿ ವತಿಯಿಂದ ಆಯೋಜಿಸಿದ್ದ ನಾಡಗೀತೆಗೆ ನೂರರ ಸಂಭ್ರಮ-ಸಾವಿರಾರು ಸ್ವರಗಳ ಸಂಗಮ ಮತ್ತು ಪಂಚಕಾವ್ಯ ದೌತಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೌದ್ಧರೂದ್ಯಾನ ಶಬ್ದವನ್ನು ನಾಡಗೀತೆಗೆ ಜೋಡಿಸುವುದರಿಂದ ನಾಡಿಗೂ ಗೌರವವಾಗುತ್ತದೆ ಮತ್ತು ನಾಡಿನ ಸಂಕೇತಕ್ಕೆ ಸೂಚಕವಾಗಿ ನಿಂತುಕೊಳ್ಳುತ್ತದೆ. ಮಾತ್ರವಲ್ಲ, ಬೌದ್ಧ ಎನ್ನುವ ಹೆಸರನ್ನು ಸೇರ್ಪಡೆ ಮಾಡುವುದರಿಂದ ಹಾಡಲಿಕ್ಕೆ ಯಾವುದೇ ತೊಂದರೆ ಇಲ್ಲ. ಹೀಗಾಗಿ ಬೌದ್ಧ ಹೆಸರನ್ನು ನಾಡಗೀತೆಗೆ ಸೇರ್ಪಡೆ ಮಾಡಬೇಕು ಮನವಿ ಮಾಡಿದರು.

ಕುವೆಂಪು ಅವರು ಜೈನರೂದ್ಯಾನ ಎಂಬ ಮಾತನ್ನು ಬಳಸುವ ಮುನ್ನ ಬೌದ್ಧರೂದ್ಯಾನ ಎಂಬ ಮಾತನ್ನು ಬಳಸಿದ್ದರು. ಆದರೆ, ಆ ಶಬ್ದವನ್ನು ಯಾವ ಕಾರಣಕ್ಕೆ 70ರ ದಶಕದಲ್ಲಿ ಕೈಬಿಟ್ಟರೋ ಗೊತ್ತಿಲ್ಲ ಎಂದು ಹೇಳಿದರು. ಸ್ತುತಿ ಗೀತೆಯಾಗಬಾರದು: ನಾಡಗೀತೆಗೆ ಸಂಬಂಧಿಸಿದಂತೆ ಸಾಕಷ್ಟು ವಾಗ್ವಾದ, ಭಿನ್ನಾಭಿಪ್ರಾಯಗಳಿವೆ.

ಇದನ್ನೂ ಓದಿ: Janamejaya Umarji Column: ಬಸವ ಸಂಸ್ಕೃತಿ ಅಭಿಯಾನ: ಪ್ರಚಾರವೋ ವಿಭಜನೆಯೋ ?

ಇಂತಹ ವಾಗ್ವಾದ, ಭಿನ್ನಾಭಿಪ್ರಾಯಗಳು ಎಲ್ಲಿವರೆಗೂ ಇರುತ್ತವೆಯೋ, ಅಲ್ಲಿಯವರೆಗೂ ನಾವು ಜೀವಂತವಾಗಿರುತ್ತೇವೆ. ಕುವೆಂಪು ಅವರು ಹಲವು ಬಾರಿ ಈ ನಾಡಗೀತೆಯನ್ನು ತಿದ್ದುಪಡಿಗೆ ಒಳಪಡಿಸಿದ್ದಾರೆ. ಕೆಲವರು ಈ ಹಾಡಿನಲ್ಲಿ ಮಹಿಳೆಯರ ಹೆಸರು ಬರಬೇಕು ಎಂದರೆ ಮತ್ತೆ ಕೆಲವರು ಬುದ್ಧರ ಹೆಸರು ಬಂದಿಲ್ಲ ಎಂದು ಹೇಳಿದ್ದಾರೆ. ಕೇಳಿ ಬಂದ ಪದಗಳನ್ನೆ ಸೇರಿಸುತ್ತ ಹೋದರೆ ಅದು ಸ್ತುತಿ ಗೀತೆಯಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ನಾಡಗೀತೆಗೆ ಪರಂಪರೆ ಇದೆ: ನಮ್ಮ ರಾಜ್ಯದ ನಾಡಗೀತೆಗೆ ಪರಂಪರೆಯೇ ಇದೆ. ಮೈಸೂರು ಸಂಸ್ಥಾನದಲ್ಲಿ 1881ರ ನಾಡಗೀತೆಯನ್ನು ಹಾಡಲಾಗುತ್ತಿತ್ತು. ಕಾಯೌ ಶ್ರೀ ಗೌರಿ.. ಹಾಡು ಸಂಸ್ಥಾನದ ಗೀತೆಯಾಗಿತ್ತು. ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಹುಯಿಲಗೋಳ ನಾರಾಯಣರಾಯರು ಬರೆದ ಉದಯವಾಗಲಿ ಚಲುವ ಕನ್ನಡ ನಾಡು ಹಾಡನ್ನು ಸ್ವಾಗತ ಗೀತೆಯಾಗಿ ಹಾಡಲಾಗಿತ್ತು. ಇದನ್ನೇ ನಾಡಗೀತೆಯಾಗಿ ಮುಂದುವರೆಸಲಾಗಿತ್ತು. ಬಳಿಕ 1970ರಲ್ಲಿ ಕುವೆಂಪು ಅವರ ಜಯ ಭಾರತ ಜನನಿಯ ತನುಜಾತೆ ಕವಿತೆಯನ್ನು ನಾಡಗೀತೆಯಾಗಿ ಹಾಡಲು ಶುರು ಮಾಡಲಾಯಿತು. ಪರಂಪರೆಯ ಮುಖವಾಣಿಯಾಗಿ ಕುವೆಂಪು ಅವರ ನಾಡಗೀತೆ ನಮ್ಮ ಕಣ್ಣ ಮುಂದಿದೆ ಎಂದರು.

ವೇದಿಕೆಯಲ್ಲಿ ಶಾಸಕರಾದ ಕೆ.ಹರೀಶ ಗೌಡ ಟಿ.ಎಸ್. ಶ್ರೀವತ್ಸ, ಜಿ.ಟಿ. ದೇವೇಗೌಡ, ಡಿ.ರವಿಶಂಕರ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಕಸಪಾ ಜಿಲ್ಲಾ ಅಧ್ಯಕ್ಷ ಮಡ್ಡಿಕೆರೆ ಗೋಪಾಲ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಕವಿಗೋಷ್ಠಿ ಸಮಿತಿ ಉಪ ವಿಶೇಷಾಧಿಕಾರಿ ಜಿ.ಎಸ್. ಸೋಮಶೇಖರ್, ಕಾರ್ಯಾಧ್ಯಕ್ಷ ಪ್ರೊ.ಎನ್.ಕೆ.ಲೋಲಾಕ್ಷಿ ಮತ್ತಿತರರು ಹಾಜರಿದ್ದರು.

ಗೋಷ್ಠಿಗಳಿಗೆ ವಿಶ್ವದ ಕವಿಗಳನ್ನು ಆಹ್ವಾನಿಸಿ

ದಸರೆಯ ಅಂಗವಾಗಿ ನಡೆಯುವ ಕವಿಗೋಷ್ಠಿಯನ್ನು ವಿಶ್ವವಿಖ್ಯಾತ ಎನ್ನುತ್ತಾರೆ. ಅದು ವಿಶ್ವಮಾನ್ಯವಾಗಬೇಕಾದರೆ ವಿಶ್ವದ ಕವಿಗಳನ್ನು ಗೋಷ್ಠಿಗೆ ಆಹ್ವಾನಿಸಬೇಕು. ಈಗ ಹಮ್ಮಿಕೊಂಡಿ ರುವ ಪಂಚ ಕವಿಗೋಷ್ಠಿಗಳು ಕೂಡ ಬಹಳ ಉತ್ತಮವಾದ ಗೋಷ್ಠಿಗಳೇ. ಆದರೆ, ದಸರೆಯ ವಿಶ್ವಖ್ಯಾತಿ ವಿಶ್ವಮಟ್ಟಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತಲುಪಬೇಕು. ಅದಕ್ಕಾಗಿ ಪ್ರತಿವರ್ಷ ವಿಶ್ವ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಬೇರೆ-ಬೇರೆ ದೇಶದ, ನಮ್ಮ ದೇಶದ ಸುಮಾರು ಏಳೆಂಟು ಮಂದಿಯನ್ನು ಆಹ್ವಾನಿಸಿ ಕವಿಗೋಷ್ಠಿಯಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಮನವಿ ಮಾಡಿದರು.

*

ಯುವ ಸಮೂಹವು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಆ ಸಮಯದಲ್ಲಿ ಉತ್ತಮ ಪುಸ್ತಕ ಗಳನ್ನು, ಗ್ರಂಥಗಳನ್ನು ಓದಬೇಕು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇರುವ ಹಳೇ ತಾಳೆಗರಿಗಳ ವಿಷಯಗಳನ್ನು ಡಿಜಿಟಲೀಕರಣ ಮಾಡುವುದಕ್ಕೆ ಸರಕಾರವು ಒಂದು ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸಿದೆ.

- ಶಿವರಾಜ್ ತಂಗಡಗಿ ಸಚಿವ