ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಸವನವಾಗೇವಾಡಿ ಪುರಸಭೆಯಿಂದ ಸಾವಿನ ಗುಂಡಿಗೆ ಸ್ವಾಗತ !

ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಬೇಸತ್ತ ಜಾವೀಧ್, ಊಟ ತಯಾರಿದೆ ಎಂದು ಖಾನಾವಳಿ ಮುಂಭಾಗದಲ್ಲಿ ನಿಲ್ಲಿಸುವ ಬೋರ್ಡ ಮಾದರಿಯಲ್ಲಿ ಪುರಸಭೆ ಯಿಂದ ಸಾವಿನ ಗುಂಡಿಗೆ ಸ್ವಾಗತ, ನಿಧಾನವಾಗಿ ಚಲಿಸಿ ಎಂಬ ಬರಹದೊಂದಿಗೆ ಬೋರ್ಡ್ ನಿಲ್ಲಿಸಿ ಆಕ್ರೋಶ ಹೊರ ಹಾಕಿದ್ದಾನೆ. ನಂತರ ಮಧ್ಯಾಹ್ನದ ಹೊತ್ತಿಗೆ ಪುರಸಭೆ ಅಧಿಕಾರಿಗಳು ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಪ್ರಯತ್ನ ಮಾಡಿದ್ದಾರೆ.

ಬಸವನವಾಗೇವಾಡಿ ಪುರಸಭೆಯಿಂದ ಸಾವಿನ ಗುಂಡಿಗೆ ಸ್ವಾಗತ !

-

Ashok Nayak
Ashok Nayak Jan 11, 2026 11:25 AM

ಮಂಜು ಕಲಾಲ ವಿಜಯಪುರ

ಅಧಿಕಾರಿಗಳ ನಡೆಗೆ ಬೇಸತ್ತ ಜಾವೀದ್

ಕ್ರಮಕ್ಕೆ ಮುಂದಾಗದ ಪುರಸಭೆ ಅಧಿಕಾರಿಗಳು

ಜಾತ್ರೆ ಉತ್ಸವಗಳಲ್ಲಿ ಸ್ವಾಗತ ಕೋರುವ ಬ್ಯಾನರ್ ಗಳನ್ನ ನೋಡಿದ್ದೆವೆ ಆದರೆ ಇಲ್ಲೊಬ್ಬ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ದೊರಣೆಗೆ ಬೆಸತ್ತು ಅಂಗಡಿ ಮುಂದೆ ಪುರಸಭೆಯಿಂದ ಸಾವಿನ ಗುಂಡಿಗೆ ಸ್ವಾಗತ, ನಿಧಾನವಾಗಿ ಚಲಿಸಿ ಎಂಬ ನಾಮಫಲಕವನ್ನು ಅಂಗಡಿ ಮುಂದೆ ನಿಲ್ಲಿಸುವ ಮೂಲಕ ಪುರಸಭೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾನೆ.

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ತರಕಾರಿ ಮಾರುಕಟ್ಟೆ ಪಕ್ಕದ ಹರಳಯ್ಯ ಕಾಲೋನಿಯಲ್ಲಿ ಪಟ್ಟಣಶೆಟ್ಟಿ ಲೇಔಟ್ ಮುಂಭಾಗದ ಮುಖ್ಯ ರಸ್ತೆಯಲ್ಲಿ ಜಾವೀಧ್ ಹಡಗಿನಾಳ ಎಂಬುವರ ಅಂಗಡಿ ಮುಂಭಾಗದ ಚರಂಡಿ ಮೇಲೆ ದೊಡ್ಡ ಗಾತ್ರದಲ್ಲಿ ಗುಂಡಿ ಬಿದ್ದಿದೆ ರಸ್ತೆಯಲ್ಲಿ ಪ್ರತಿನಿತ್ಯ ಅಪಾರ ಸಂಖ್ಯೆಯ ಜನರು, ವಾಹನಗಳು ಸಂಚರಿಸುತ್ತವೆ. ಪುರಸಭೆ ಅಧಿಕಾರಿಗಳು ಅಪಘಾತಗಳು ಸಂಭವಿಸುವ ಮುನ್ನವೇ ಗುಂಡಿಯನ್ನು ಮುಚ್ಚುವಂತೆ ಜಾವೀಧ್ ಹಲವಾರು ಬಾರಿ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾನೆ ಆದರೆ ಪುರಸಭೆ ಅಧಿಕಾರಿಗಳು ಮಾತ್ರ ಸಂಭಂದವೇ ಇಲ್ಲ ಎಂಭಂತೆ ಬೇಜವಾಬ್ದಾರಿ ತೊರಿದ್ದಾರೆ.

ಇದನ್ನೂ ಓದಿ: Basavanagudi Kadalekai Parishe: ಸ್ಟ್ರೀಟ್ ಶಾಪಿಂಗ್ ಪ್ರಿಯರ ಸ್ವರ್ಗವಾದ ಬಸವನಗುಡಿ ಕಡಲೆಕಾಯಿ ಪರಿಷೆ!

ಇನ್ನೂ ಜಾವೀಧ್ ಅಂಗಡಿಗೆ ಹೋಗುವ ವೇಳೆ ಸ್ವತಃ ತಾನೇ ಗುಂಡಿಗೆ ಬಿದ್ದು ಗಾಯ ಮಾಡಿಕೊಂಡಿ ದ್ದಾನೆ. ಸದ್ಯ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಬೇಸತ್ತ ಜಾವೀಧ್, ಊಟ ತಯಾರಿದೆ ಎಂದು ಖಾನಾವಳಿ ಮುಂಭಾಗದಲ್ಲಿ ನಿಲ್ಲಿಸುವ ಬೋರ್ಡ ಮಾದರಿಯಲ್ಲಿ ಪುರಸಭೆಯಿಂದ ಸಾವಿನ ಗುಂಡಿಗೆ ಸ್ವಾಗತ, ನಿಧಾನವಾಗಿ ಚಲಿಸಿ ಎಂಬ ಬರಹದೊಂದಿಗೆ ಬೋರ್ಡ್ ನಿಲ್ಲಿಸಿ ಆಕ್ರೋಶ ಹೊರ ಹಾಕಿದ್ದಾನೆ. ನಂತರ ಮಧ್ಯಾಹ್ನದ ಹೊತ್ತಿಗೆ ಪುರಸಭೆ ಅಧಿಕಾರಿಗಳು ತಾತ್ಕಾಲಿಕ ವಾಗಿ ಗುಂಡಿ ಮುಚ್ಚುವ ಪ್ರಯತ್ನ ಮಾಡಿದ್ದಾರೆ. ಇದು ಕೇವಲ ಪಟ್ಟಣದ ಒಂದು ಕಾಲೋನಿಯ ಮುಂಭಾಗದ ಸಮಸ್ಯೆಯಾದರೆ ಇನ್ನೂ ಪಟ್ಟದ ಹಲವಾರು ಕಡೆಗಳಲ್ಲಿ ಹಲವಾರು ಬಗೆಗಳಲ್ಲಿ ಸಮಸ್ಯೆಗಳಿವೆ ಆದರೆ ಪುರಸಭೆ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ, ಸದ್ಯ ಪುರಸಭೆ ಅಧಿಕಾರಿಗಳ ಕಾರ್ಯ ವೈಕರಿಗೆ ಜಾವೀಧ್ ಅಸಮಧಾನ ವ್ಯಕ್ತಪಡಿಸಿದ್ದಾನೆ. ಮುಂಭರುವ ದಿನಗಳಲ್ಲಿ ಸಾರ್ವಜನಿಕರು ಅಧಿಕಾರಿಗಳು ಮೇಲೆ ಛೀಮಾರಿ ಹಾಕುವ ಕಾಲ ದೂರವಿಲ್ಲ ಇನ್ನಾದರೂ ಪುರಸಭೆ ಅಧಿಕಾರಿಗಳು ಎಚ್ಚೆತ್ತು ಸಾರ್ವಜನಿಕರ ಸಮಸ್ಯಗೆ ಸ್ಪಂದಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎನ್ನುವುದು ನಮ್ಮ- ಆಶಯ.

ಕಳೆದ ಆರು ತಿಂಗಳಿಂದ ಚರಂಡಿ ಮೇಲೆ ಗುಂಡಿ ಬಿದ್ದಿದೆ, ಸ್ವತಃ ಪುರಸಭೆ ಮುಖ್ಯಧಿಕಾರಿಗಳೇ ಬಂದು ನೋಡಿದ್ದಾರೆ ಆದರೆ ಇದನ್ನು ಮುಚ್ಚುವ ಕಾರ್ಯ ಮಾಡಿಲ್ಲ, ಮೂರು ದಿನದ ಹಿಂದೆ ನಾನೇ ಇಲ್ಲಿ ಬಿದ್ದು ಗಾಯಮಾಡಿಕೊಂಡಿದ್ದೆ, ಬೋರ್ಡ ಹಾಕಿದ ತುಂಬ ಗಂಟೆಯ ನಂತರ ಪುರಸಭೆಯವರು ಬಂದು ಗುಂಡಿಯ ಮೇಲೆ ಪರಸಿಕಲ್ಲನ್ನು ಹಾಕಿ ಮುಚ್ಚಿದ್ದಾರೆ ಮುಂದೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎನ್ನುವುದು ನನ್ನ ಆಗ್ರಹ.

- ಜಾವೀಧ್ ಹಡಗಿನಾಳ, ಬೋರ್ಡ ಹಾಕಿದ ವ್ಯಕ್ತಿ.

ಪುರಸಭೆ ಅಧಿಕಾರಿಗಳಿಗೆ ಹೇಳುವರೂ ಕೇಳುವರೂ ಯಾರು ಇಲ್ಲದಂತಾಗಿದೆ, ನಮ್ಮ ಲೇಔಟ್ನಲ್ಲಿ ಸುಮಾರು ದಿನಗಳಿಂದ ವಿದ್ಯುತ ಕಂಬದಲ್ಲಿನ ಲೈಟ್ ಹಾಕುವಂತೆ ಹೇಳಿದರು ಹಾಕಲಿಲ್ಲ ನಂತರ ನಾನೇ ಸ್ವತಃ ಲೈಟ್ ಹಾಕಿಕೊಂಡಿರುವೆ, ಇನ್ನೂ ಮುಂದೆ ನಾವು ಇದೇ ತರ ಬೊರ್ಡ ಹಾಕಿ ಮೌನ ಪ್ರತಿಭಟನೆ ಮಾಡುತ್ತೆವೆ.

-ರಾಜು ಪಟ್ಟಣಶೆಟ್ಟಿ, ಸ್ಥಳೀಯ.