ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜೆಜೆಎಂ ಗುತ್ತಿಗೆದಾರರ ವಿರುದ್ಧ ಜನಾಕ್ರೋಶ

ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಮುನ್ನಚ್ಚರಿಕೆ ವಹಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಮುಂಜಾಗ್ರತಾ ಸಭೆಯಲ್ಲಿ ಸಾಕಷ್ಟು ಬಾರಿ ಸೂಚಿಸಿದರು ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಜೆಜೆಎಂ ಗುತ್ತಿಗೆದಾರರ ವಿರುದ್ಧ ಜನಾಕ್ರೋಶ

-

Profile
Ashok Nayak May 25, 2026 10:27 AM

ಚನ್ನಬಸವ ಮೋಕ್ತೆದಾರ ಬೀದರ್

ಗುತ್ತಿಗೆದಾರರು, ಅಧಿಕಾರಿಗಳ ನಿರ್ಲಕ್ಷ್ಯ

ಬೋರ್‌ವೆಲ್ ಕೊರೆಸಿದರೂ ಮೋಟಾರ್ ಅಳವಡಿಸಿಲ್ಲ

ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಮುನ್ನಚ್ಚರಿಕೆ ವಹಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಮುಂಜಾಗ್ರತಾ ಸಭೆಯಲ್ಲಿ ಸಾಕಷ್ಟು ಬಾರಿ ಸೂಚಿಸಿದರು ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಔರಾದ್ ತಾಲೂಕಿನ ಕೌಡಗಾಂವ ಗ್ರಾಮದಲ್ಲಿ ಜೆಜೆಎಮ್ ಕಾಮಗಾರಿ ಕೈಗೊಳ್ಳಲಾಗಿದೆ. ಬೋರ್‌ವೆಲ್ ಕೊರೆಸಿ ಆರು ತಿಂಗಳು ಕಳೆದಿವೆ ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಇಲ್ಲಿಯವರೆಗೆ ಮೋಟಾರ್‌ಅಳವಡಿಸಿಲ್ಲ ಎಂದು ಅಧಿಕಾರಿಗಳ ವಿರುದ್ದ ಸ್ಥಳೀಯ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: Kiran Updhyay Column: ಮೆಲೊಡಿ ಕೊಟ್ಟಿದ್ದಕ್ಕೇ ಹೀಗೆ, ಇನ್ನು ಅದನ್ನು ಕೊಟ್ಟಿದ್ದರೆ...

ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಕೂಡ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಬೋರ್‌ವೆಲ್ ಎಸ್ಟಿಮೆಂಟ್ ನಲ್ಲಿ ಇಲ್ಲ ಎನ್ನುತ್ತಾರೆ ಆದರೆ ಕಾಮಗಾರಿಯಲ್ಲಿ ಇಲ್ಲದೇ ಬೋರ್‌ವೆಲ್ ಯಾಕೆ ಕೊರೆಸಲಾಗಿದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಸರಕಾರದ ಅನುದಾನ ಖರ್ಚಾದರು ಜನರಿಗೆ ಉಪಯೋಗವಿಲ್ಲ. ಬೇಸಿಗೆ ಕಾಲ ಮುಗಿದ ಮೇಲೆ ಮಳೆಗಾಲದಲ್ಲಿ ಮೋಟಾರ್ ಅಳವಡಿಸುತ್ತಾರೆ ಇದರಿಂದ ಜನರಿಗೆ ಉಪಯೋ ಗವಿಲ್ಲ. ಬೇಸಿಗೆಯಲ್ಲಿ ಮೊಟಾರ್‌ಅಳವಡಿಸಿ ನೀರು ಪೂರೈಸಿದರೆ ಸರಕಾರದ ಅನುದಾನ ಸಾರ್ಥಕವಾಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ. ಶೀಘ್ರದಲ್ಲೇ ಬೋರ್‌ವೆಲ್ ಗೆ ಮೋಟಾರ್ ಅಳವಡಿಸಬೇಕು. ನೀರು ಪೂರೈಕೆ ಮಾಡಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

image

ಕೌಡಗಾಂವ ಗ್ರಾಮದಲ್ಲಿ ಬೋರ್‌ವೆಲ್ ಗೆ ಮೋಟಾರ್‌ಅಳವಡಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ನೋಟಿಸ್ ನೀಡಲಾಗಿದೆ. ಎರಡು ದಿವಸಗಳಲ್ಲಿ ಮೋಟಾರ್ ಅಳವಡಿಸ ಲಾಗುವುದು. ಇಲ್ಲವಾದರೆ ಗುತ್ತಿಗೆದಾರರ ಹೆಸರು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ಕೂಡ ನೀಡಲಾಗಿದೆ.

-ಮಾರುತಿ ರಾಠೋಡ್, ಎಇಇ
image

ಜೆಜೆಎಮ್ ಕಾಮಗಾರಿ ಕೈಗೊಂಡು ಒಂದು ವರ್ಷವಾದರು ಕೂಡ ಗ್ರಾಮದಲ್ಲಿ ನೀರು ಪೂರೈಕೆಯಿಲ್ಲ. ಬೋರ್‌ವೆಲ್ ಕೊರೆಸಿ ಆರು ತಿಂಗಳಾದರು ಮೋಟಾರ್‌ ಅಳವಡಿಸಿಲ್ಲ. ತಾಲೂಕಿನ ಅನೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ದಿನೇ ದಿನೇ ಗಂಭಿರವಾಗುತ್ತಿದೆ. ಜನ ಹಾಗೂ ಜಾನುವಾರುಗಳಿಗೆ ಸಮಸ್ಯೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

-ಸತೀಶ್ ವಗ್ಗೆ, ಗ್ರಾಮದ ನಿವಾಸಿ
image

ಕೌಡಗಾಂವ ಗ್ರಾಮದಲ್ಲಿ ಜೆಜೆಎಮ್ ಕಾಮಗಾರಿಯಲ್ಲಿ ಬೋರ್‌ವೆಲ್ ಕೊರೆಸಿರುವುದು ನಿಜ ಆದರೆ ಮೋಟಾರ್ ಅಳವಡಿಸಿಲ್ಲ. ಕಾಮಗಾರಿಯು ಗ್ರಾಪಂಗೆ ಹಸ್ತಾಂತರ ಮಾಡಿಲ್ಲ. ಗ್ರಾಮಕ್ಕೆ ನದಿಯಿಂದ ಹಾಗೂ ಒಂದು ಬೋರ್‌ವೆಲ್ ನಿಂದ ನೀರು ಪೂರೈಕೆ ಮಾಡಲಾಗುತ್ತಿದೆ.

-ರಘುನಾಥ ರೆಡ್ಡಿ, ಪಿಡಿಒ ಗ್ರಾಪಂ ಕೌಠಾ