ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌ಪೈಪ್‌ ಲೈನ್‌ ಸಮಸ್ಯೆ ತಡೆಗೆ ಬರಲಿವೆ ರೊಬೋಟ್

ಜಲಮಂಡಳಿಯ ಈ ರೊಬೋಟ್ ತಂತ್ರಜ್ಞಾನದಲ್ಲಿ ಆಟಿಕೆ ಕಾರಿನ ಗ್ರಾತದ ರೋಬೋಟ್‌ ನ್ನು ಪೈಪಿನ ಒಳಕಳುಹಿಸಿ ಮೇಲಿನಿಂದ ನಿಂತು ಕಾರ್ಯನಿರ್ವಹಿಸಬಹುದಾಗಿದೆ. ಇದರಿಂದ ಕಾರ್ಮಿ ಕರು ಹೋಗಲು ಕಷ್ಟಕರವಾಗಿರುವ ಪೈಪಿನಲ್ಲಿಯೂ ಸರಾಗವಾಗಿ ಈ ರೋಬೋಟ್‌ನ್ನು ಕಳುಹಿಸಬಹುದು. ಈ ರೋಬೋಟ್‌ನಲ್ಲಿ ಎಚ್‌ಡಿ ವಿಡಿಯೊ ಸಂಗ್ರಹಿಸುವ ಕ್ಯಾಮೆರಾ ಇರುವು ದರಿಂದ ಪೈಪಿನ ಒಳಭಾಗದ ಸ್ಪಷ್ಟ ಚಿತ್ರಣವನ್ನು ನೀಡಲಿದೆ.

ಪೈಪ್‌ ಲೈನ್‌ ಸಮಸ್ಯೆ ತಡೆಗೆ ಬರಲಿವೆ ರೊಬೋಟ್

-

Ashok Nayak
Ashok Nayak Nov 16, 2025 1:18 PM

ಅಪರ್ಣಾ ಎ.ಎಸ್ ಬೆಂಗಳೂರು

ನೀರಿನ ಸೋರಿಕೆ, ಅನಧಿಕೃತ ಜಲಸಂಪರ್ಕ ತಡೆಗೆ ಎಐ ಮೊರೆ ಹೋದ ಜಲಮಂಡಳಿ

ನೀರಿನ ಪೈಪಿನಲ್ಲಿನ ಸಮಸ್ಯೆ ಬಗ್ಗೆ ಪೋಟೋ ಸಮೇತ ಮಾಹಿತಿ ನೀಡಲಿರುವ ರೊಬೊ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸೋರಿಕೆಯನ್ನು ತಡೆಗಟ್ಟಲು ಹಲವು ಕ್ರಮ ವಹಿಸಿದ್ದರೂ ಸೋರಿಕೆ ತಡೆಯುವಲ್ಲಿ ಸಾಧ್ಯವಾಗಿಲ್ಲ. ಈ ನಡುವೆ ಇದೀಗ ತಂತ್ರಜ್ಞಾನ ವನ್ನು ಬಳಸಿಕೊಂಡು, ನೀರಿನ ಸೋರಿಕ ಹಾಗೂ ಅನಧಿಕೃತ ಸಂಪರ್ಕಕ್ಕೆ ಬ್ರೇಕ್ ಹಾಕುವ ಮಹತ್ವದ ಯೋಜನೆಗೆ ಬೆಂಗಳೂರು ಜಲಮಂಡಳಿ ಕೈಹಾಕಿದೆ.

ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಜಲ ಮಂಡಳಿ ನೀರಿನ ಸೋರಿಕೆಯ ಮೇಲೆ ಕಣ್ಗಾವಲು ಇಡಲು ಮುಂದಾಗಿದ್ದು, ಇದಕ್ಕಾಗಿ ಐಐಟಿ ಮದ್ರಾಸ್ ಹಾಗೂ ಕೆಲ ಸ್ಟಾರ್ಟ್ ಅಪ್‌ಗಳು ಸಿದ್ಧಪಡಿಸಿರುವ ರೋಬೋಟ್‌ಗಳನ್ನು ಬಳಸಲು ತೀರ್ಮಾನಿಸಿದೆ.

ಕಾಲಕಾಲಕ್ಕೆ ಜಲಮಂಡಳಿಯ ಪ್ರಮುಖ ಪೈಪ್‌ಗಳಲ್ಲಿ ಈ ರೋಬೋಟ್‌ಗಳನ್ನು ಕಳುಹಿಸಿ ದಾಗ ಪೈಪಿನಲ್ಲಿ ಮಣ್ಣು ತುಂಬಿದೆಯೇ? ಕಸ ಯಾವ ಪ್ರಮಾಣದಲ್ಲಿದೆ? ನಿಗದಿತ ಪೈಪ್‌ನಿಂದ ಎಷ್ಟು ಮನೆಗಳು ಸಂಪರ್ಕ ಪಡೆದಿವೆ ಎನ್ನುವ ಬಗ್ಗೆ ರಿಯಲ್ ಟೈಮ್‌ನಲ್ಲಿ ಮಾಹಿತಿ ಸಂಗ್ರಹವಾಗಲಿದೆ. ಇದರೊಂದಿಗೆ ಅನಧಿಕೃತವಾಗಿ ನೀರಿನ ಸಂಪರ್ಕವನ್ನು ಯಾವುದಾದರೂ ಕಟ್ಟಡಕ್ಕೆ ಹೋಗಿದ್ದರೆ ನೀರಿನ ಹರಿವಿನ ಆಧಾರದಲ್ಲಿ ಎಐ ತಂತ್ರಜ್ಞಾನ ದ ಮೂಲಕ ಇದನ್ನು ಪತ್ತೆ ಹಚ್ಚಬಹುದು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Vishweshwar Bhat Column: ಕಿಬೂತ್: ಇಸ್ರೇಲಿನ ಮರುಭೂಮಿಯಲ್ಲಿ ಹುಟ್ಟಿದ ಸಮಾಜದ ಮಾದರಿ

ಜಲಮಂಡಳಿಯ ಈ ರೊಬೋಟ್ ತಂತ್ರಜ್ಞಾನದಲ್ಲಿ ಆಟಿಕೆ ಕಾರಿನ ಗ್ರಾತದ ರೋಬೋಟ್‌ ನ್ನು ಪೈಪಿನ ಒಳಕಳುಹಿಸಿ ಮೇಲಿನಿಂದ ನಿಂತು ಕಾರ್ಯನಿರ್ವಹಿಸಬಹುದಾಗಿದೆ. ಇದರಿಂದ ಕಾರ್ಮಿಕರು ಹೋಗಲು ಕಷ್ಟಕರವಾಗಿರುವ ಪೈಪಿನಲ್ಲಿಯೂ ಸರಾಗವಾಗಿ ಈ ರೋಬೋಟ್‌ನ್ನು ಕಳುಹಿಸಬಹುದು. ಈ ರೋಬೋಟ್‌ನಲ್ಲಿ ಎಚ್‌ಡಿ ವಿಡಿಯೊ ಸಂಗ್ರಹಿ ಸುವ ಕ್ಯಾಮೆರಾ ಇರುವುದರಿಂದ ಪೈಪಿನ ಒಳಭಾಗದ ಸ್ಪಷ್ಟ ಚಿತ್ರಣವನ್ನು ನೀಡಲಿದೆ. ಇದರೊಂದಿಗೆ ವೇಗವಾಗಿ ನೀರು ಹರಿಯುತ್ತಿದ್ದರೂ, ಸಣ್ಣ ಜಾಗದಲ್ಲಿ ತೂರುವುದಕ್ಕೆ ಸಾಧ್ಯವಿದೆ. ಈ ರೋಬೋಟ್‌ಗಳು ನೀಡುವ ಫೋಟೋ, ವಿಡಿಯೊ ಆಧರಿಸಿ ಸಿಬ್ಬಂದಿ ಕಾರ್ಯನಿರ್ವಹಿಸಬಹುದಾಗಿದೆ.

ಕೀ ಮೂಲಕ ಸಮಯ ಹಾಗೂ ಹಣ ಎರಡು ಉಳಿತಾಯವಾಗಲಿದೆ ಎನ್ನುವುದು ಅಧಿಕಾರಿ ಗಳ ಲೆಕ್ಕಾಚಾರವಾಗಿದೆ. ನಗರದಲ್ಲಿ ನೀರಿನ ಮಿತಬಳಕೆಗೆ ಜಲಮಂಡಳಿಯು ಹೆಚ್ಚು ಒತ್ತು ಕೊಡುತ್ತಿದ್ದು, ನೀರು ಪೋಲಾಗುವುದನ್ನು ತಡೆಯಲು ಹಲವು ಕ್ರಮಗಳನ್ನು ಅನುಸರಿಸು ತ್ತಿದೆ.

ಜತೆಗೆ ನೀರನ್ನು ಕುಡಿಯುವ ಉದ್ದೇಶದ ಹೊರತಾಗಿ ಅನ್ಯ ಬಳಕೆ ಮಾಡುವವರು ಹಾಗೂ ಅನಧಿಕೃತ ಸಂಪರ್ಕವನ್ನು ಪಡೆದುಕೊಳ್ಳುವವರ ವಿರುದ್ಧ ಕ್ರಮವನ್ನೂ ಕೈಗೊಳ್ಳಲು ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ.

ರೋಬೊ ನೀಡುವ ವರದಿ ಆಧರಿಸಿ ಬ್ಲೂ ಫೋರ್ಸ್ ನಿರ್ವಹಣೆ: ಜಲಮಂಡಳಿ ಪರಿಚಯಿ ಸುತ್ತಿರುವ ಈ ಎಐ ಆಧಾರಿತ ರೊಬೊಟ್‌ಗಳ ಮಾಹಿತಿಯನ್ನು ಆಧರಿಸಿ ಕಾರ್ಯ ನಿರ್ವಹಿಸಲು ಜಲಮಂಡಳಿ ಬ್ಲೂ ಫೋರ್ಸ್ ಎನ್ನುವ ತಂಡವನ್ನು ಆರಂಭಿಸ ಲಿದ್ದು, ಈ ತಂಡಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ಚಾಲನೆ ನೀಡಲಿದ್ದಾರೆ. ಈ ಪಡೆ ರೋಬೋಟ್ ಹಾಗೂ ಎಐಗಳು ನೀಡುವ ಚಿತ್ರ ಹಾಗೂ ಡೆಟಾ ಆಧರಿಸಿ ಕಾರ್ಯ ಚರಣೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೂರು ಕೋಟಿ ದಂಡ ಸಂಗ್ರಹ

ಅನಧಿಕೃತ ನೀರಿನ ಸಂಪರ್ಕ ಪಡೆದಿರುವ ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಲಾಗಿತ್ತು. ಈ ಅಭಿಯಾನದಲ್ಲಿ ೪೩ ಸಾವಿರ ಆಸ್ತಿಗೆ ಸಂಬಂಧಿಸಿದ ೬ ಸಾವಿರ ಅನಧಿಕೃತ ಸಂಪರ್ಕಗಳು ಪತ್ತೆಯಾಗಿತ್ತು. ಅನಧಿಕೃತವಾಗಿ ಸಂಪರ್ಕ ಪಡೆದ ಕಟ್ಟಡ, ಅಪಾರ್ಟ್‌ಮೆಂಟ್ ಹಾಗೂ ವಾಣಿಜ್ಯ ಕಟ್ಟಡಗಳಿಗೆ ನೋಟಿಸ್ ನೀಡಿ ನೂರು ಕೋಟಿ ರು. ದಂಡ ವಿಧಿಸಲಾಗಿತ್ತು.

ಲಾಭವೇನು?

ನಿಗದಿತ ಪರಿಶೀಲನೆಯಿಂದ ತುರ್ತು ನಿರ್ವಹಣೆಯ ಒತ್ತಡ ಬರುವುದಿಲ್ಲ ಸಿಬ್ಬಂದಿಗಳಿಂದ ಪರಿಶೀಲನೆ ನಡೆಸುವುದಕ್ಕಿಂತ ೧೦ಪಟ್ಟು ವೇಗವಾಗಿ ಪರಿಶೀಲಿಬಹುದು ತಂತ್ರಜ್ಞಾನದ ಸಹಾಯದಿಂದ ಪರಿಶೀಲಿಸುವುದರಿಂದ ದುಂದುವೆಚ್ಚವನ್ನು ತಗ್ಗಿಸಬಹುದು ಗುಂಡಿ ತೋಡುವುದನ್ನು ತಗ್ಗಿಸುವ ಮೂಲಕ ಸಾರ್ವಜನಿಕರಿಗೆ ಆಗುವ ಅನಾನುಕೂಲ ತಗ್ಗಿಸಲು ಸಹಕಾರಿ ಸ್ಪಷ್ಟ ಡೆಟಾ ಸಿಗುವುದರಿಂದ, ಭವಿಷ್ಯದಲ್ಲಿ ನಿರ್ವಹಣೆ ಸುಲಭ ಐಐಟಿ ಮದ್ರಾಸ್ ಹಾಗೂ ಕೆಲ ಸ್ಟಾರ್ಟ್ ಅಪ್ ಗಳು ಸಿದ್ಧಪಡಿಸಿರುವ ರೋಬೋಟ್ ರೋಬೋ ಗಳನ್ನು ಪೈಪಿನೊಳಗೆ ಬಿಟ್ಟು, ಸ್ಪಷ್ಟ ಚಿತ್ರಗಳನ್ನು ಪಡೆಯಬಹುದು ರೋಬೋ ಆಪರೇಟರ್‌ಗಳಿರುವ ಜಾಗದಿಂದ 500 ಮೀಟರ್‌ವರೆಗೆ ಕಾರ್ಯಚರಣೆ ಈ ರೋಬೋಟ್‌ ಗಳು ಸಂಗ್ರಹಿಸುವ ಚಿತ್ರದಿಂದ ಪೈಪಿನಲ್ಲಿ ನೀರಿನ ಹರಿವು ಹಾಗೂ ಅನಧಿಕೃತ ಸಂಪರ್ಕದ ಬಗ್ಗೆ ಸ್ಪಷ್ಟ ಮಾಹಿತಿ.

*

ಐಐಟಿ ಮದ್ರಾಸ್ ಹಾಗೂ ಸ್ಟಾರ್ಟ್ ಅಪ್‌ಗಳು ಸಿದ್ಧಪಡಿಸಿರುವ ಈ ರೊಬೋಟ್ಗಳಿಂದ ನೀರಿನ ಪೈಪಿನೊಳಗಿರುವ ಸಮಸ್ಯೆಯನ್ನು ರಿಯಲ್ ಟೈಮ್‌ನಲ್ಲಿ ಅರಿಯಬಹುದು. ಆಟಿಕೆ ಕಾರಿನ ಗಾತ್ರದಲ್ಲಿರುವ ಈ ರೊಬೊಗಳು ಸುಮಾರು ಅರ್ಧ ಕಿಮೀ ದೂರದವರೆಗೆ ಕ್ರಮ ವಹಿಸಲಿದೆ. ಇದರ ಸಹಾಯದಿಂದ ನೀರಿನ ಸೋರಿಕೆ ಮಾತ್ರವಲ್ಲದೇ ಅನಧಿಕೃತ ಸಂಪರ್ಕ ದ ಮಾಹಿತಿಯೂ ಲಭಿಸಲಿದೆ.

-ರಾಮ್ ಪ್ರಸಾತ್ ಮನೋಹರ್

ಅಧ್ಯಕ್ಷರು, ಬೆಂಗಳೂರು ಜಲಮಂಡಳಿ