ರೇಷ್ಮೆ ನಿಗಮದಲ್ಲಿ ರೇಷ್ಮೆ ಸೀರೆಗೆ ಬರ
ಮೈಸೂರು ರಾಜಮನೆತನದ ಅವಶ್ಯಕತೆಗಳನ್ನು ಮತ್ತು ಅಲಂಕಾರಿಕ ಬಟ್ಟೆಗಳನ್ನು ಸಿದ್ಧಪಡಿಸಲು ಅಂದಿನ ಪ್ರಗತಿಪರ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಕೆಎಸ್ ಐಸಿ ಸಂಸ್ಥೆ ಸ್ಥಾಪಿಸಿದ್ದರು. ಈಗ 100 ವರ್ಷಗಳನ್ನು ಪೂರೈಸಿರುವ ಈ ಸಂಸ್ಥೆ ದೇಶದ ಅತ್ಯುತ್ತಮ ರೇಷ್ಮೆ ಉದ್ಯಮ ಸಂಸ್ಥೆ. ಸಂಸ್ಥೆ ರೇಷ್ಮೆ ಸೀರೆಗಳು, ಶರ್ಟ್ ಗಳು, ಕುರ್ತಾಗಳು, ಸಿಲ್ಕ್ ಧೋತಿಗಳನ್ನು ಉತ್ಪಾದಿಸುತ್ತಿದ್ದು, ಇದಕ್ಕಾಗಿ ರಾಜ್ಯಾದ್ಯಂತ 20ಕ್ಕೂ ಹೆಚ್ಚು ಮಗ್ಗಗಳನ್ನು ಹಾಗೂ 14 ಮಾರಾಟ ಮಳಿಗೆಗಳನ್ನು ಕಾರ್ಯ ನಿರ್ವಹಿಸುತ್ತಿವೆ.

-

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಕೆಎಸ್ಐಸಿ ಮಳಿಗೆಗಳಲ್ಲಿ ಸೀರೆಗಿಂತ ಸಿಬ್ಬಂದಿ ಸಂಖ್ಯೆಯೇ ಹೆಚ್ಚು
ರಾಜ್ಯ ಸರಕಾರ ಎರಡು ವರ್ಷಗಳ ನಂತರ ಉಳಿಕೆ 39 ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ಪಟ್ಟಿ ಪ್ರಕಟಿಸುತ್ತಿದ್ದಂತೆ ಇಂದು ನಿಗಮದಲ್ಲಿ ತೀರಾ ಕಣ್ಣೀರು ಹಾಕುತ್ತಿದೆ. ಈ ನಿಗಮ ವಾರ್ಷಿಕ 400 ಕೋಟಿ ರು.ಗಳಷ್ಟು ಲಾಭದಲ್ಲಿದೆ. ಆದರೂ ದಾರಿದ್ರ್ಯ ಮಾತ್ರ ತಪ್ಪಿಲ್ಲ. ಅಂದ ಹಾಗೆ ಇದು ರಾಜ್ಯ ರೇಷ್ಮೆ ಉದ್ಯಮಗಳ ನಿಗಮದ (ಕೆಎಸ್ ಐಸಿ) ನಯವಾದ ಕಣ್ಣೀರ ಕಥೆ. ಈ ಸಂಸ್ಥೆ ಉತ್ಪಾದಿಸುವ ಐತಿಹಾಸಿಕ ಮೈಸೂರು ರೇಷ್ಮೆ ಸೀರೆಗೆ ಕರ್ನಾಟಕ ಮಾತ್ರವಲ್ಲದೆ, ದೇಶ ವಿದೇಶಗಳಲ್ಲೂ ಬೇಡಿಕೆ ಇದ್ದು ನಿತ್ಯ ನೂರಾರು ಮಂದಿ ಸೀರೆ ಖರೀದಿಗೆ ಪರದಾಡುತ್ತಿದ್ದಾರೆ.
ದಿನವಿಡೀ ಸರದಿಯಲ್ಲಿ ನಿಂತು ಕಾದವರಿಗೆ ಸಿಗುವುದು ಬರೀ ಒಂದು ಸೀರೆ ಮಾತ್ರ. ಅಂದರೆ ಕೆಎಸ್ಐಸಿ ತನ್ನ ಸೀರೆಗಳಿಗೆ ಇರುವ ಬೇಡಿಕೆಗೆ ತಕ್ಕಂತೆ ಸೀರೆ ಉತ್ಪಾದನೆ ಮಾಡುವುದನ್ನು ನಿಲ್ಲಿಸಿ ದ್ದು, ಇದನ್ನು ಕೃತಕ ಅಭಾವವೋ ಅಥವಾ ಮಾರಾಟದ ತಂತ್ರವೇ ಎಂಬ ಅನುಮಾನ ಮೂಡಿದೆ.
ಸದ್ಯ ಸೀರೆ ಬೇಕಾದವರು ಮಂತ್ರಿಗಳು, ಶಾಸಕರು ಹಾಗೂ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಪ್ರಭಾವ ಬಳಸಬೇಕಾದ ಅನಿವಾರ್ಯ ಎದುರಾಗಿದ್ದು, ಇದನ್ನು ಸರಿಪಡಿಸಬೇಕಾದ ನಿಗಮದ ಅಧ್ಯಕ್ಷರು ದಿವ್ಯ ಮೌನ ವಹಿಸಿದ್ದಾರೆ. ಕಾಲ ಕಾಲಕ್ಕೆ ಈ ಬಗ್ಗೆ ಗಮನ ಹರಿಸಿ ಸರಕಾರದ ಸಹಕಾರ ಪಡೆದು ನಿಗಮದ ಅಭಿವೃದ್ದಿ ಮಾಡಬೇಕಾದ ಅಧ್ಯಕ್ಷರು ಕಳೆದ ಎರಡು ವರ್ಷಗಳಿಂದ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ್ದಕ್ಕಿಂತ ವಿರಮಿಸಿದ್ದೇ ಹೆಚ್ಚು.
ಇದನ್ನೂ ಓದಿ: Kiran Upadhyay Column: ನಿಮಗೆ ಜ್ಞಾನಪೀಠವಲ್ಲ, ಸುಜ್ಞಾನಪೀಠವೂ ಕಡಿಮೆಯೇ
ಇತ್ತೀಚೆಗೆ ಮೈಸೂರು ಸಿಲ್ಕ್ ಸೀರೆ ಮಾದರಿಯ ನಕಲಿ ರೇಷ್ಮೆ ಸೀರೆಗಳ ಮಾರಾಟ ಕಂಡು ಬರುತ್ತಿದೆ. ನೂರಾರು ಮಂದಿ ನಕಲಿ ರೇಷ್ಮೆ ಖರೀದಿಸಿ ಮೋಸ ಹೋಗುತ್ತಿದ್ದು ಇದು ಸರಕಾರದ ಗಮನಕ್ಕೂ ಬಂದಿದೆ ಎಂದು ಮಾರಾಟ ಮಳಿಗೆ ಸಿಬ್ಬಂದಿ ಹೇಳಿದ್ದಾರೆ.
ಮೈಸೂರು ರಾಜಮನೆತನದ ಅವಶ್ಯಕತೆಗಳನ್ನು ಮತ್ತು ಅಲಂಕಾರಿಕ ಬಟ್ಟೆಗಳನ್ನು ಸಿದ್ಧಪಡಿಸಲು ಅಂದಿನ ಪ್ರಗತಿಪರ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಕೆಎಸ್ ಐಸಿ ಸಂಸ್ಥೆ ಸ್ಥಾಪಿಸಿದ್ದರು. ಈಗ 100 ವರ್ಷಗಳನ್ನು ಪೂರೈಸಿರುವ ಈ ಸಂಸ್ಥೆ ದೇಶದ ಅತ್ಯುತ್ತಮ ರೇಷ್ಮೆ ಉದ್ಯಮ ಸಂಸ್ಥೆ. ಸಂಸ್ಥೆ ರೇಷ್ಮೆ ಸೀರೆಗಳು, ಶರ್ಟ್ ಗಳು, ಕುರ್ತಾಗಳು, ಸಿಲ್ಕ್ ಧೋತಿಗಳನ್ನು ಉತ್ಪಾದಿಸುತ್ತಿದ್ದು, ಇದಕ್ಕಾಗಿ ರಾಜ್ಯಾದ್ಯಂತ 20ಕ್ಕೂ ಹೆಚ್ಚು ಮಗ್ಗಗಳನ್ನು ಹಾಗೂ 14 ಮಾರಾಟ ಮಳಿಗೆಗಳನ್ನು ಕಾರ್ಯ ನಿರ್ವಹಿಸುತ್ತಿವೆ.
ಇತ್ತೀಚೆಗೆ ಮೈಸೂರು ಸಿಲ್ಕ್ ಸೀರೆಯನ್ನು ಉಡುಗೆಯಾಗಿ ನೀಡುವ ಪರಿಪಾಠ ಹೆಚ್ಚಾಗಿದ್ದು, ಮಂತ್ರಿ ಗಳು, ಶಾಸಕರು ಹಾಗೂ ಅಧಿಕಾರಿಗಳು ಹಾಗೂ ಉದ್ಯಮಗಳು ಗಣ್ಯರಿಗೆ, ಆಪ್ತರಿಗೆ ಮೈಸೂರು ಸಿಲ್ಕ್ ಖರೀದಿಸಲು ಮುಗಿ ಬೀಳುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಪ್ರಭಾವ ಬಳಸಿದರೂ ಸಿಗುತ್ತಿಲ್ಲ ಎಂದು ನಿಗಮದ ಅಧಿಕಾರಿಗಳು ಹೇಳಿದ್ದಾರೆ.
ಸಚಿವರು, ಅಧ್ಯಕ್ಷರಿಗೇಕೆ ನಿರಾಸಕ್ತಿ ?: ಕೆಎಸ್ಐಸಿ ಹೊಂದಿರುವ ಯಂತ್ರೋಪಕರಣಗಳು ಹಳೆಯ ತಂತ್ರಜ್ಞಾನದಿಂದ ಕೂಡಿದ್ದು, ಇದನ್ನು ಪ್ರಸ್ತುತ ಸವಾಲಿಗೆ ತಕ್ಕಂತೆ ಬದಲಾಯಿಸಬೇಕಿದೆ. ಅಂದರೆ ಸುಧಾರಿತ ತಂತ್ರಜ್ಞಾನದ ಯಂತ್ರೋಪಕರಣಗಳು ಹಾಗೂ ಇದನ್ನು ಅರಿತ ತಾಂತ್ರಿಕ ಸಿಬ್ಬಂದಿ ನೇಮಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ರೇಷ್ಮೆ ಸಚಿವ ಶಿವಾನಂದ ಪಾಟೀಲರು ಅಷ್ಟಾಗಿ ಆಸಕ್ತಿ ವಹಿಸಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಅಧ್ಯಕ್ಷೆ ಕನೀಝಾ ಫಾತೀಮಾ ಅವರು ಸೀರೆಗಳ ಬೇಡಿಕೆ ಸಮಸ್ಯೆಗಳಿಗೂ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂಸ್ಥೆಯನ್ನು ಮೇಲ್ದರ್ಜೆಗೇರಿಸಿ, ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ಎರಡು ಸಭೆಗಳನ್ನು ನಡೆಸಲಾಗಿದೆ. ಆದರೆ ವಿದೇಶದಿಂದ ಯಂತ್ರೋ ಪಕರಣಗಳನ್ನು ಖರೀದಿಸಿ ಸಂಸ್ಥೆಯನ್ನು ಉನ್ನತ ಮಟ್ಟಕ್ಕೇರಿಸುವ ಅವರ ಪ್ರಯತ್ನಕ್ಕೆ ಹೆಚ್ಚಿನ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.
ಸಂಸ್ಥೆಯಲ್ಲಿರುವ ಹಳೆಯ ತಂತ್ರಜ್ಞಾನದಿಂದ ನಿತ್ಯ ಕೇವಲ 500 ಸೀರೆಗಳನ್ನು (ದಿನನಿತ್ಯದ ಬೇಡಿಕೆ 6000 ಸೀರೆ) ಮಾತ್ರ ಉತ್ಪಾದಿಸಲಾಗುತ್ತಿದೆ. ಇದನ್ನು ಇರುವ 14 ಮಳಿಗೆಗಳಿಗೆ ಹಂಚಿಕೆ ಮಾಡಿದರೆ ನಿತ್ಯ 20 ಸೀರೆಗಳು ಸಿಕ್ಕರೇ ಅದೇ ಹೆಚ್ಚು. ಹೀಗಾಗಿ ಮೈಸೂರು ಸಿಲ್ಕ ಸೀರೆಗಳ ಕಾಳ ಸಂತೆ ಮಾರಾಟದ ಜತೆಗೆ ನಕಲಿ ಮೈಸೂರು ಸಿಲ್ಕ್ ಸೀರೆಗಳ ಹಾವಳಿಯೂ ಹೆಚ್ಚಾಗಿದೆ. ಇದರ ಪರಿಣಾಮ ಮೈಸೂರು ಸಿಲ್ಕ್ ಸೀರೆ ಮಳಿಗೆಗಳಲ್ಲಿ ಬೆರಳೆಣಿಕೆ ಸೀರೆಗಳು ಮಾತ್ರ ಕಾಣಸಿಗುತ್ತಿದ್ದು, ಮಳಿಗೆಗಳಲ್ಲಿ ಸೀರೆಗಿಂತ ಸಿಬ್ಬಂದಿಯೇ ಹೆಚ್ಚು ಎನ್ನುವಂತಾಗಿದೆ.
ಕೋಟಿ ಲಾಭವಿದ್ದರೂ ಕಷ್ಟ ತಪ್ಪಿಲ್ಲ !
ಕೆಎಸ್ಐಸಿ ವಾರ್ಷಿಕ 90 ಸಾವಿರ ಸೀರೆಗಳನ್ನು ಉತ್ಪಾದಿಸುತ್ತಿದ್ದು, ಕಳೆದ ವರ್ಷ 1.10 ಲಕ್ಷ ಸೀರೆಗಳ ಉತ್ಪಾದನೆಯಾಗಿದೆ. ಇದರಿಂದ ವಾರ್ಷಿಕ 332 ಕೋಟಿ ರು. ವಹಿವಾಟು ನಡೆದಿದೆ. ಈ ವರ್ಷ 362 ಕೋಟಿ ರು. ಗೆ ಹೆಚ್ಚಿಸಬೇಕೆನ್ನುವ ಗುರಿ ಹೊಂದಲಾಗಿದ್ದರೂ ಇದಕ್ಕೆ ತಕ್ಕಂತೆ ಸೀರೆಗಳ ಉತ್ಪಾದನೆ ನಡೆದಿಲ್ಲ. ನಿಗಮ ವಾರ್ಷಿಕ ಸುಮಾರು 400 ಕೋಟಿ ರು.ಗಳಿಗೂ ಅಧಿಕ ಲಾಭ ಗಳಿಸುತ್ತಿದ್ದರೂ ಅದನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಗಮನಾರ್ಹ ಹೆಜ್ಜೆ ಇಡುತ್ತಿಲ್ಲ. ಹೀಗಾದರೆ ಸಂಸ್ಥೆ ಭವಿಷ್ಯದಲ್ಲಿ ಆರ್ಥಿಕ ಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.