ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೈಸೂರು ದಸರಾಕ್ಕೆ ಆಕಾಶದ ಅತಿಥಿಗಳು: ಇಂದು, ನಾಳೆ ಸೂರ್ಯಕಿರಣ್ ಸಾಹಸ ವೈಮಾನಿಕ ಪ್ರದರ್ಶನ

ಭಾರತೀಯ ವಾಯುಪಡೆಯ ಸೂರ್ಯಕಿರಣ್ ತಂಡವು ತನ್ನ ನಿಖರ ಹಾರಾಟ, ವಿಮಾನಗಳ ನಡುವಿನ ಅದ್ಭುತ ಸಮನ್ವಯ ಹಾಗೂ ಮೈನವಿರೇಳಿಸುವ ವೈಮಾನಿಕ ಕಸರತ್ತುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲಿದೆ. ಗಗನದಲ್ಲಿ ವಿಮಾನಗಳು ಬಿಡಿಸುವ ಬಣ್ಣದ ರೇಖೆಗಳು, ವೇಗದ ಚಲನೆಗಳು ಮತ್ತು ಸಾಹಸಮಯ ಹಾರಾಟಗಳು ದಸರಾ ಸಂಭ್ರಮಕ್ಕೆ ಹೊಸ ಮೆರುಗು ನೀಡಲಿವೆ.

ಮೈಸೂರು ದಸರಾಕ್ಕೆ ಆಕಾಶದ ಅತಿಥಿಗಳು:

-

Profile
Ashok Nayak Oct 18, 2026 1:01 PM

ಕೆ.ಜೆ.ಲೋಕೇಶ್ ಬಾಬು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ(Mysore Dasara) ಮಹೋತ್ಸವದ ಸಂಭ್ರಮಕ್ಕೆ ಈ ಬಾರಿ ಆಕಾಶದ ಸಾಹಸವೂ ಸಾಥ್ ನೀಡಲಿದೆ. ಬಣ್ಣಬಣ್ಣದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಂಪ್ರದಾಯಿಕ ಮೆರವಣಿಗೆಗಳು ಹಾಗೂ ದೀಪಾಲಂಕಾರದ ವೈಭವದ ನಡುವೆ ಭಾರತೀಯ ವಾಯುಪಡೆಯ ಪ್ರತಿಷ್ಠಿತ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡವು ತನ್ನ ಸಾಹಸಮಯ ವೈಮಾನಿಕ ಪ್ರದರ್ಶನದ ಮೂಲಕ ಪ್ರೇಕ್ಷಕರ ಮೈನವಿರೇಳಿಸಲು ಸಜ್ಜಾಗಿದೆ. ಅ.18 ಮತ್ತು 19ರಂದು ಮೈಸೂರಿನ ಬನ್ನಿಮಂಟಪ ಮೈದಾನ ದಲ್ಲಿ ಅದ್ಧೂರಿ ವೈಮಾನಿಕ ಪ್ರದರ್ಶನ ಮೈನವಿರೇಳಿಸಲಿದೆ. ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಇದು ದಸರಾ ಸಂಭ್ರಮದ ವಿಶೇಷ ಆಕರ್ಷಣೆ ಯಾಗಲಿದೆ.

ಆಕಾಶದಲ್ಲಿ ಸಾಹಸದ ಚಿತ್ತಾರ: ಭಾರತೀಯ ವಾಯುಪಡೆಯ ಸೂರ್ಯಕಿರಣ್ ತಂಡವು ತನ್ನ ನಿಖರ ಹಾರಾಟ, ವಿಮಾನಗಳ ನಡುವಿನ ಅದ್ಭುತ ಸಮನ್ವಯ ಹಾಗೂ ಮೈನವಿರೇಳಿಸುವ ವೈಮಾನಿಕ ಕಸರತ್ತುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲಿದೆ. ಗಗನದಲ್ಲಿ ವಿಮಾನಗಳು ಬಿಡಿಸುವ ಬಣ್ಣದ ರೇಖೆಗಳು, ವೇಗದ ಚಲನೆಗಳು ಮತ್ತು ಸಾಹಸಮಯ ಹಾರಾಟಗಳು ದಸರಾ ಸಂಭ್ರಮಕ್ಕೆ ಹೊಸ ಮೆರುಗು ನೀಡಲಿವೆ. ಕಳೆದ ವರ್ಷದಂತೆ ಈ ಬಾರಿಯೂ ಆಕಾಶದಲ್ಲಿ ಲೋಹದ ಹಕ್ಕಿಗಳ ಚಿತ್ತಾರವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ ಎಂಬ ನಿರೀಕ್ಷೆ ಸಾರ್ವಜನಿಕರಲ್ಲಿ ಮೂಡಿದೆ.

ರಾಜ್ಯದ ಮನವಿಗೆ ಕೇಂದ್ರದ ಅಸ್ತು: ದಸರಾ ಮಹೋತ್ಸವದಲ್ಲಿ ಭಾರತೀಯ ರಕ್ಷಣಾ ಪಡೆಗಳ ಪಾಲ್ಗೊಳ್ಳುವಿಕೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಸಕ್ತಿ ತೋರಿದ್ದರು. ಈ ಸಂಬಂಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ವೈಮಾನಿಕ ಪ್ರದರ್ಶನ ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಲಾಗಿತ್ತು. ಇದೀಗ ಕೇಂದ್ರ ಸರಕಾರ ಸಮ್ಮತಿ ಸೂಚಿಸಿದ್ದು, ಮೈಸೂರಿ ನಲ್ಲಿ ಸೂರ್ಯಕಿರಣ್ ತಂಡದ ಪ್ರದರ್ಶನಕ್ಕೆ ಹಾದಿ ಸುಗಮವಾಗಿದೆ.

ಇದನ್ನೂ ಓದಿ: Dasara Sanjeevini Santhe: ಅ.18, 19ರಂದು ಜಿಲ್ಲೆಯಾದ್ಯಂತ ದಸರಾ ಸಂಜೀವಿನಿ ಸಂತೆ

ಇಂದಿನಿಂದ ಕಂಬಳ ಆರಂಭ : ಬಹುನಿರೀಕ್ಷಿತ ಮೈಸೂರು ಕಂಬಳ ಇಂದಿನಿಂದ 2 ದಿನ ನಡೆಯಲಿದೆ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕಂಬಳ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್ ಪಾಟೀಲ್, ಎಂಎಲ್‌ಸಿ ಸಲೀಂ ಅಹ್ಮದ್ ಉಪಸ್ಥಿತರಿರಲಿದ್ದಾರೆ.

ಸಾರಂಗ್‌ಗೆ ಈ ಬಾರಿ ನಿರಾಸೆ: ಸೂರ್ಯಕಿರಣ್ ತಂಡದ ಜತೆಗೆ ಭಾರತೀಯ ವಾಯುಪಡೆಯ ಸಾರಂಗ್ ಹೆಲಿಕಾಪ್ಟರ್ ಏರೋಬ್ಯಾಟಿಕ್ ತಂಡದ ಪ್ರದರ್ಶನವನ್ನೂ ಈ ಬಾರಿ ನಿರೀಕ್ಷಿಸಲಾಗಿತ್ತು. ಆದರೆ, ಪೂರ್ವನಿಗದಿತ ಕಾರ್ಯಕ್ರಮಗಳ ಕಾರಣದಿಂದ ಸಾರಂಗ್ ತಂಡವನ್ನು ಮೈಸೂರಿಗೆ ನಿಯೋಜಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಬಾರಿ ಸೂರ್ಯಕಿರಣ್ ತಂಡದ ವೈಮಾನಿಕ ಪ್ರದರ್ಶನವೇ ಪ್ರಮುಖ ಆಕರ್ಷಣೆಯಾಗಲಿದೆ.

ಇಂದಿನಿಂದ ಕಂಬಳ ಆರಂಭ : ಬಹುನಿರೀಕ್ಷಿತ ಮೈಸೂರು ಕಂಬಳ ಇಂದಿನಿಂದ 2 ದಿನ ನಡೆಯಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(D K Shivakumar) ಕಂಬಳ ಕಾರ್ಯಕ್ರಮದ ಉದ್ಘಾಟನೆ ಮಾಡಲಿ ದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್(Dr G Parameshwar), ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(H D Kumaraswamy), ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್ ಪಾಟೀಲ್(G S Patil), ಎಂಎಲ್‌ಸಿ ಸಲೀಂ ಅಹ್ಮದ್ ಉಪಸ್ಥಿತರಿರಲಿದ್ದಾರೆ.

ಏರ್ ಶೋ ವೇಳೆ ಡ್ರೋನ್ ಹಾರಾಟ ನಿಷೇಧ ಏರ್ ಷೋ ಪ್ರದರ್ಶದ ವೇಳೆ ಬಾಲಭವನದ ಪ್ರದೇಶದ ಸುತ್ತಲೂ 10 ನಾಟಿಕಲ್ ಮೈಲ್ ವ್ಯಾಪ್ತಿಯಲ್ಲಿ ಅಕ್ಟೋಬರ್ 17 ರಿಂದ 19 ರವರೆಗೆ ಪ್ರತಿದಿನ ಬೆಳಿಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಡ್ರೋನ್ ಹಾರಾಟವನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿ ಅನಧಿಕೃತವಾಗಿ ಹಾಗೂ ಆಕ್ಷೇಪಾರ್ಹವಾಗಿ ಡ್ರೋನ್ ಹಾರಾಡಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮೈಸೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ

ದಸರಾ ವೈಭವಕ್ಕೆ ಆಕಾಶದ ಹೊಸ ಮೆರುಗು

ನಾಡಹಬ್ಬ ದಸರಾ ಎಂದರೆ ಅರಮನೆಯ ವೈಭವ, ಜಂಬೂಸವಾರಿ, ಸಾಂಸ್ಕೃತಿಕ ಕಾರ್ಯಕ್ರಮ ಗಳು ಮತ್ತು ಜನಸಾಗರದ ಸಂಭ್ರಮ. ಈ ಬಾರಿ ಅದಕ್ಕೆ ವಾಯುಪಡೆಯ ಸಾಹಸಮಯ ಪ್ರದರ್ಶನವೂ ಸೇರ್ಪಡೆಯಾಗುತ್ತಿದೆ. ಸೂರ್ಯಕಿರಣ್ ತಂಡದ ಹಾರಾಟವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಹಾಗೂ ಮೈಸೂರು ಜನತೆ ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಈ ಆಕಾಶದ ಸಂಭ್ರಮವನ್ನು ಎಷ್ಟು ಜನಸಾಮಾನ್ಯರು ನೇರವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ ಎಂಬುದು ಪಾಸ್ ವಿತರಣೆಯ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ. ದಸರಾ ಎಲ್ಲರ ಹಬ್ಬ ಎಂಬ ಆಶಯಕ್ಕೆ ತಕ್ಕಂತೆ ಪ್ರವೇಶ ವ್ಯವಸ್ಥೆ ಪಾರದರ್ಶಕವಾಗಿರಬೇಕು ಎಂಬುದು ಸಾರ್ವಜನಿಕರ ನಿರೀಕ್ಷೆ. ಆಕಾಶದಲ್ಲಿ ಸೂರ್ಯಕಿರಣ್‌ನ ಸಾಹಸ, ನೆಲದ ಮೇಲೆ ದಸರಾ ಸಂಭ್ರಮ ಈ ಎರಡರ ಸಂಗಮಕ್ಕೆ ಮೈಸೂರು ಸಜ್ಜಾಗಿದೆ.