ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dasara Sanjeevini Santhe: ಅ.18, 19ರಂದು ಜಿಲ್ಲೆಯಾದ್ಯಂತ ದಸರಾ ಸಂಜೀವಿನಿ ಸಂತೆ

ಗ್ರಾಮೀಣ ಮಹಿಳೆಯರ ಉದ್ಯಮಶೀಲತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲಾ ಪಂಚಾ ಯಿತಿ ಹಾಗೂ ಸಂಜೀವಿನಿ–ಡೇ-ಎನ್‌ಆರ್‌ಎಲ್‌ಎಂ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದ ಸಂಯುಕ್ತಾ ಶ್ರಯದಲ್ಲಿ ಅ.18 ಮತ್ತು 19ರಂದು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ದಸರಾ ಸಂಜೀವಿನಿ ಮಾಸಿಕ ಸಂತೆಗಳನ್ನು ಆಯೋಜಿಸಲಾಗಿದೆ.

ಅ.18, 19ರಂದು ಜಿಲ್ಲೆಯಾದ್ಯಂತ ದಸರಾ ಸಂಜೀವಿನಿ ಸಂತೆ

-

Profile
Ashok Nayak Oct 17, 2026 8:34 PM

ಚಿಕ್ಕಬಳ್ಳಾಪುರ: ದಸರಾ(Dasara) ಹಾಗೂ ವಿಜಯದಶಮಿ(Vijayadashami) ಹಬ್ಬದ ಪ್ರಯುಕ್ತ ಗ್ರಾಮೀಣ ಮಹಿಳೆಯರ ಉದ್ಯಮಶೀಲತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲಾ ಪಂಚಾ ಯಿತಿ ಹಾಗೂ ಸಂಜೀವಿನಿ–ಡೇ-ಎನ್‌ಆರ್‌ಎಲ್‌ಎಂ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದ ಸಂಯುಕ್ತಾಶ್ರಯದಲ್ಲಿ ಅ.18 ಮತ್ತು 19ರಂದು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ದಸರಾ ಸಂಜೀವಿನಿ ಮಾಸಿಕ ಸಂತೆಗಳನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ: Chikkaballapur News: ಸಾದಲಿ ಪಶು ಆಹಾರ ಘಟಕದ ವಿರುದ್ಧ ಕೋಲಾರ, ಚಿಕ್ಕಬಳ್ಳಾಪುರ ರೈತರಿಂದ ಅ.17ರಂದು ಬೃಹತ್ ಪ್ರತಿಭಟನೆ

ಸ್ವಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ ಹಬ್ಬದ ಉತ್ಪನ್ನಗಳು, ಪೂಜಾ ಸಾಮಗ್ರಿಗಳು, ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳು ಹಾಗೂ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ನೇರ ಮಾರಾಟಕ್ಕೆ ಸಂತೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು, ಮಾರಾಟ ಹೆಚ್ಚಿಸುವುದು ಮತ್ತು ಆರ್ಥಿಕ ಸ್ವಾವಲಂಬನೆಗೆ ನೆರವಾಗುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

1369572 dasara

ಜಿಲ್ಲೆಯ ಸಾರ್ವಜನಿಕರು ಸಂತೆಗಳಿಗೆ ಭೇಟಿ ನೀಡಿ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅವರ ಪರಿಶ್ರಮಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮನವಿ ಮಾಡಿದೆ.

ದಸರಾ ಸಂಜೀವಿನಿ ಸಂತೆಗಳ ಸ್ಥಳಗಳ ವಿವರ

| ಕ್ರಮ | ತಾಲ್ಲೂಕು | ಸಂತೆ ನಡೆಯುವ ಸ್ಥಳ |

| 1 | ಬಾಗೇಪಲ್ಲಿ | ತಾಲ್ಲೂಕು ಪಂಚಾಯಿತಿ ಮುಖ್ಯಭಾಗ |

| 2 | ಚೇಳೂರು | ಬಸ್ ನಿಲ್ದಾಣ |

| 3 | ಚಿಕ್ಕಬಳ್ಳಾಪುರ | ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಖ್ಯಭಾಗ |

| 4 | ಚಿಂತಾಮಣಿ | ಮೇಲಾಂಡಹಳ್ಳಿ ಗೇಟ್, ಕುರುಬೂರು |

| 5 | ಗೌರಿಬಿದನೂರು | ಗಾಂಧಿ ಸರ್ಕಲ್ |

| 6 | ಗುಡಿಬಂಡೆ | ಸಂತೆ ಆವರಣ, ಸೋಮೇನಹಳ್ಳಿ |

| 7 | ಮಂಚೇನಹಳ್ಳಿ | ಬಸ್ ನಿಲ್ದಾಣದ ಆವರಣ |

| 8 | ಶಿಡ್ಲಘಟ್ಟ | ಸಂತೆ ಮೈದಾನ |

ದಿನಾಂಕ: ಅಕ್ಟೋಬರ್ 18 ಮತ್ತು 19, 2026.

ಸಂತೆಗಳಲ್ಲಿ ಸ್ವಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ ವಿವಿಧ ಉತ್ಪನ್ನಗಳು ಲಭ್ಯವಿರ ಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹಿಳೆಯರ ಸ್ವಾವಲಂಬನೆಗೆ ಬೆಂಬಲ ನೀಡುವಂತೆ ಜಿಲ್ಲಾ ಪಂಚಾಯಿತಿ ಮನವಿ ಮಾಡಿದೆ.