Ration Shop scam: ಉಳಿಕೆ ಅಕ್ಕಿ ಕೊಡುವಲ್ಲಿ ಕಳ್ಳಾಟ !
ಕಳೆದ ತಿಂಗಳಿನಿಂದ (ಫೆಬ್ರವರಿ) ನಗದಿನ ಬದಲಿಗೆ ಐದು ಕೆ.ಜಿ. ಅಕ್ಕಿಯನ್ನೇ ನೀಡಲು ತೀರ್ಮಾ ನಿಸಿತ್ತು. ಆದರೆ ಫೆಬ್ರವರಿಯಲ್ಲಿ ಅಗತ್ಯವಿರುವಷ್ಟು ಅಕ್ಕಿಯ ಕೊರತೆ ಇದ್ದಿದ್ದರಿಂದ ಮಾರ್ಚ್ ನಲ್ಲಿ ಬಾಕಿ ಐದು ಕೆಜಿ ಅಕ್ಕಿ ನೀಡಲು ಆದೇಶಿಸಲಾಗಿದೆ. ಮಾರ್ಚ್‌ನಲ್ಲಿ ರಾಜ್ಯದ ಬಹುತೇಕ ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿವ್ಯಕ್ತಿಗೆ ಮಾರ್ಚ್‌ನಲ್ಲಿ ನೀಡ ಬೇಕಿದ್ದ ೧೫ ಕೆ.ಜಿ ಅಕ್ಕಿಯ ಬದಲು ಕೇವಲ 10 ಕೆ.ಜಿ. ನೀಡುತ್ತಿದ್ದಾರೆ


ಜಯಂತ್ ಬಸವರಾಜ್ ಬೆಂಗಳೂರು
ಫೆಬ್ರವರಿ ತಿಂಗಳ ಹೆಚ್ಚುವರಿ 5 ಕೆಜಿ ಕೊಡುವುದಕ್ಕೆ ಹಿಂಜರಿತ
ಸರಕಾರದಿಂದ ಅಕ್ಕಿ ಪಡೆದು, ಗ್ರಾಹಕರಿಗೆ ನೀಡದ ಹಲವು ನ್ಯಾಯಬೆಲೆ ಅಂಗಡಿ ಮಾಲೀಕರು
15 ಕೆ.ಜಿ. ಬದಲು 10 ಕೆ.ಜಿ. ಪಡಿತರ ದಾನ್ಯ ವಿತರಣೆ: ಜನರ ಅಸಮಾಧಾನ
ರಾಜ್ಯ ಸರಕಾರದ ಪಂಚಗ್ಯಾರಂಟಿಯಲ್ಲಿ ಪ್ರಮುಖ ಘೋಷಣೆಯಾಗಿದ್ದ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಐದು ಕೆಜಿ ಕೊಡಲು ಸರಕಾರ ಮುಂದಾದರೂ, ಅರ್ಹರಿಗೆ ತಲುಪಿಸುವಲ್ಲಿ ನ್ಯಾಯಬೆಲೆ ಅಂಗಡಿಗಳ ಮಾಲೀಕರು ತಲುಪಿಸುವ ಬದಲು ಮೋಸ ಮಾಡುತ್ತಿರುವ ಹಲವು ಆರೋಪಗಳು ಕೇಳಿ ಬಂದಿವೆ. ಹೌದು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪಂಚ ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಘೋಷಿಸ ಲಾಗಿತ್ತು. ಆದರೆ ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿ ಐದು ಕೆಜಿ ಅಕ್ಕಿ ನೀಡಲು ಅಕ್ಕಿಯ ಕೊರತೆಯಾಗಿದ್ದರಿಂದ ಅಕ್ಕಿ ಬದಲಿಗೆ ನಗದು ನೀಡಲು ತೀರ್ಮಾನಿಸಲಾಗಿತ್ತು.
ಕಳೆದ ತಿಂಗಳಿನಿಂದ (ಫೆಬ್ರವರಿ) ನಗದಿನ ಬದಲಿಗೆ ಐದು ಕೆ.ಜಿ. ಅಕ್ಕಿಯನ್ನೇ ನೀಡಲು ತೀರ್ಮಾನಿಸಿತ್ತು. ಆದರೆ ಫೆಬ್ರವರಿಯಲ್ಲಿ ಅಗತ್ಯವಿರುವಷ್ಟು ಅಕ್ಕಿಯ ಕೊರತೆ ಇದ್ದಿದ್ದ ರಿಂದ ಮಾರ್ಚ್‌ನಲ್ಲಿ ಬಾಕಿ ಐದು ಕೆಜಿ ಅಕ್ಕಿ ನೀಡಲು ಆದೇಶಿಸಲಾಗಿದೆ. ಮಾರ್ಚ್‌ನಲ್ಲಿ ರಾಜ್ಯದ ಬಹುತೇಕ ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿವ್ಯಕ್ತಿಗೆ ಮಾರ್ಚ್‌ನಲ್ಲಿ ನೀಡ ಬೇಕಿದ್ದ ೧೫ ಕೆ.ಜಿ ಅಕ್ಕಿಯ ಬದಲು ಕೇವಲ 10 ಕೆ.ಜಿ. ನೀಡುತ್ತಿದ್ದಾರೆ.
ಇದನ್ನೂ ಓದಿ: Dr Murli Mohan Chuntaru Column: ಮರಳಿ, ಮರಳಿ ಬರುತ್ತಿದೆ ಕ್ಷಯ ರೋಗ
ಈ ಮೂಲಕ ಫೆಬ್ರವರಿ ತಿಂಗಳ ೫ ಕೆ.ಜಿ. ಅಕ್ಕಿಯನ್ನು ಗ್ರಾಹಕರಿಗೆ ನೀಡದೇ ಅಕ್ರಮ ಎಸಗು ತ್ತಿವೆ ಎನ್ನುವ ಆರೋಪ ಕೇಳಿಬಂದಿದೆ. ಆದರೆ ಫೆಬ್ರವರಿಯಲ್ಲಿ ಪ್ರತಿ ವ್ಯಕ್ತಿಯಿಂದ ಬಾಕಿ ಉಳಿಸಿಕೊಂಡಿದ್ದ ಐದು ಕೆ.ಜಿ ಅಕ್ಕಿಯನ್ನು ಮಾರ್ಚ್‌ನಲ್ಲಿ ನೀಡಬೇಕು ಎಂದು ಹಾರ ಮತ್ತು ನಾಗರಿಕ ಇಲಾಖೆ ಆದೇಶ ಹೊರಡಿಸಿದೆ. ಆದರೂ, ಹಲವು ನ್ಯಾಯಬೆಲೆ ಅಂಗಡಿ ಮಾಲೀಕರು ಈ ಐದು ಕೆಜಿ ಅಕ್ಕಿಯನ್ನು ನೀಡದೇ, ಮೋಸ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಅಧಿಕಾರಿಗಳ ಗಮನಕ್ಕೆ ಬಾರದ ಅಕ್ರಮ
ಪ್ರತಿಯೊಬ್ಬ ಪಡಿತರ ಚೀಟಿಯ ಸದಸ್ಯರಿಂದ ಐದು ಕೆ.ಜಿ ಅಕ್ಕಿ ಉಳಿಸಿಕೊಳ್ಳುತ್ತಿರುವ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಈ ಅಕ್ರಮ ಅಧಿಕಾರಿಗಳ ಗಮನಕ್ಕೆ ಬಾರದಂತೆ ನಡೆಸುತ್ತಿದ್ದಾರೆ. ಕೆಲವೆಡೆ ಸ್ಥಳೀಯ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಅಂಗಡಿಗಳ ಮಾಲೀಕರು ಈ ರೀತಿಯ ಅಕ್ರಮದಲ್ಲಿ ತೊಡಗಿಸಿ ಕೊಳ್ಳಲು ಮತ್ತೊಂದು ಕಾರಣವೆಂದರೆ, ಬಹುತೇಕ ಪಡಿತರದಾರರಿಗೆ ಕಳೆದ ತಿಂಗಳ ಹೆಚ್ಚುವರಿ ಐದು ಕೆ.ಜಿ.ಅಕ್ಕಿಯನ್ನು ಮಾರ್ಚ್‌ನಲ್ಲಿ ನೀಡಲಾಗುತ್ತದೆ ಎನ್ನುವ ಮಾಹಿತಿಯೇ ಇಲ್ಲ. ಆದ್ದರಿಂದ ಬಹುತೇಕರು 10 ಕೆ.ಜಿ. ಸಿಕ್ಕಿದೆ ಎನ್ನುವ ಖುಷಿಯಲ್ಲಿಯೇ ವಾಪಸಾಗು ತ್ತಿದ್ದಾರೆ. ಮಾಹಿತಿ ತಿಳಿದಿರುವವರು ಅಂಗಡಿ ಮಾಲೀಕರನ್ನು ಪ್ರಶ್ನಿಸಿದರೆ, ಹೆಚ್ಚುವರಿ ಅಕ್ಕಿ ಕೇಳಿದರೆ, ಪಡಿತರ ಚೀಟಿಯನ್ನು ರದ್ದುಗೊಳಿಸುವ ಎಚ್ಚರಿಕೆ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ.
ನೀಡುವ ಅಕ್ಕಿಯ ತೂಕದಲ್ಲಿ ಮೋಸ
ಫೆಬ್ರವರಿ ತಿಂಗಳ ಉಳಿಕೆ ಐದು ಕೆಜಿ ಅಕ್ಕಿಯನ್ನು ಮಾರ್ಚ್‌ನ 10 ಕೆಜಿ ಸೇರಿಸಿ ಒಟ್ಟು 15 ಕೆಜಿ ವಿತರಿಸುಂತೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ನಿಗದಿಪಡಿಸಿದ್ದರೂ ಸೂಕ್ತ ಪ್ರಮಾಣದಲ್ಲಿ ನೀಡುತ್ತಿಲ್ಲ. ಇನ್ನು ಕೆಲ ಅಂಗಡಿಗಳಲ್ಲಿ ಮಾಲೀಕರು ಗ್ರಾಂ ಲೆಕ್ಕದಲ್ಲಿ ತೂಕ ಕಡಿಮೆ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ. ಬಡವರ್ಗದ ಆಹಾರ ಭತ್ಯೆಗಾಗಿ ಸರಕಾರ ಜಾರಿಗೆ ತಂದಿರುವ ಉಚಿತ ಪಡಿತರ ಆಹಾರ ಧಾನ್ಯ ವಿತರಣೆ ಮಾಡಬೇಕಾದ ನ್ಯಾಯಬೆಲೆ ಅಂಗಡಿಗಳು ವಸೂಲಿ ಗಿಳಿದಿವೆ.
ನ್ಯಾಯಬೆಲೆ ಅಂಗಡಿ ಮಾಲೀಕರು ವಿತರಿಸುವ 10 ಕೆಜಿ ಅಕ್ಕಿಗೆ 15 ರು.ಗಳಂತೆ ಸರಕಾರ ದಿಂದ ಕಮಿಷನ್ ನೀಡಲಾಗುವುದು. ಈಗಿದ್ದರೂ ದುರಾಸೆಗಿಳಿದ ಅಂಗಡಿ ಮಾಲೀಕರು ಪ್ರತಿ ಪಡಿತರ ಕಾರ್ಡ್‌ಗೆ 20 ರಿಂದ 100 ರು.ಗಳವರೆಗೆ ಹಣ ಪಡೆಯುತ್ತಿದ್ದಾರೆ ಎಂದು ಫಲಾನು ಭವಿಗಳು ಆರೋಪಿಸಿದ್ದಾರೆ.
*
ಇಡೀ ತಿಂಗಳು ಅಕ್ಕಿ ವಿತರಿಸಬೇಕು ಎನ್ನುವ ನಿಯಮವಿದ್ದರೂ ಬಹುತೇಕ ನ್ಯಾಯಬೆಲೆ ಅಂಗಡಿಯವರು ತಿಂಗಳಲ್ಲಿ 2-3 ದಿನ ಅಕ್ಕಿ ವಿತರಿಸುತ್ತಾರೆ. ಉಚಿತ ಅಕ್ಕಿ ತರಬೇಕೆಂದರೆ ನಾವು ಇಡೀ ದಿನ ವ್ಯರ್ಥ ಮಾಡಬೇಕೆಂಬ ಪರಿಸ್ಥಿತಿಯಿದೆ. ಬೆಳಗ್ಗೆ 7 ಗಂಟೆಗೆ ಸಾಲಿನಲ್ಲಿ ನಿಂತರೆ ಕನಿಷ್ಠ 3 ಗಂಟೆಯಾದರೂ ಬೇಕು ನಮ್ಮ ಸರತಿಗೆ ಕಾದರೂ, ಊಟಕ್ಕೆಂದು ಸರ್ವರ್ ಇಲ್ಲವೆಂದು ಹೇಳಿ ಕಳುಹಿಸುತ್ತಿದ್ದಾರೆ.
- ಮಂಜುನಾಥ, ಗ್ರಾಹಕ,
ರಾಜ್ಯ ಸರಕಾರ ಹೆಚ್ಚುವರಿ ಐದು ಕೆ.ಜಿ ಅಕ್ಕಿ ಪಡೆಯಲು ಅವಕಾಶ ನೀಡಿದ್ದರೂ ನ್ಯಾಯ ಬೆಲೆ ಅಂಗಡಿಯವರು ಅನುಮತಿ ನೀಡುತ್ತಿಲ್ಲ. ಉಚಿತ ಅಕ್ಕಿ ಪಡೆಯುವುದು ಭಾರಿ ಕಷ್ಟದ ಕೆಲಸವಾಗಿದೆ. ದೇವರು ವರ ಕೊಟ್ಟರೂ ಪೂಜಾರಿ ವರ ಕೊಡುವುದಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿ ತಿಂಗಳು ಅಕ್ಕಿ ಪಡೆಯುವಾಗ ವಿತರಕರಿಗೆ ಹಣ ನೀಡಬೇಕಿದೆ. ಪ್ರಶ್ನೆ ಮಾಡಲು ಹೋದರೆ ಪಡಿತರ ಚೀಟಿ ರದ್ದುಮಾಡುವುದಾಗಿ ಹೆದರಿಸುತ್ತಾರೆ.
- ಸೌಜನ್ಯ, ಗ್ರಾಹಕಿ