ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಮ್ಮ ಮೆಟ್ರೋದಲ್ಲಿ ಹೆಚ್ಚುತ್ತಿವೆ ದುರಂತಗಳು

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹಳಿ ಹಾರುವ ಅಥವಾ ಆಕಸ್ಮಿಕವಾಗಿ ಬೀಳುವವರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ನಿಗ್ರಹಿಸಲು ಪ್ರತ್ಯೇಕ ಸಿಬ್ಬಂದಿಗಳನ್ನು ನಿಯೋಜಿಸಿ ದರೂ, ಹಳಿಗೆ ಬೀಳುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಆದ್ದರಿಂದ ಈ ಸಮಸ್ಯೆಗೆ ಪರಿಹಾರವಾಗಿ ಪಿಎಸ್‌ಡಿ ಡೋರ್‌ಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ.

ನಮ್ಮ ಮೆಟ್ರೋದಲ್ಲಿ ಹೆಚ್ಚುತ್ತಿವೆ ದುರಂತಗಳು

-

Ashok Nayak
Ashok Nayak Dec 8, 2025 9:48 PM

ಅಪರ್ಣಾ ಎ.ಎಸ್ ಬೆಂಗಳೂರು

ಮೆಟ್ರೋ ನಿಲ್ದಾಣಗಳಲ್ಲಿ ಆಮೆಗತಿಯಲ್ಲಿ ಸಾಗುತ್ತಿರುವ ಪಿಎಸ್‌ಡಿ ಅಳವಡಿಕೆ

ಆರ್ಥಿಕ ಹೊರೆ ನೆಪದಲ್ಲಿ ಯೋಜನೆ ಮುಂದೂಡುತ್ತಿರುವ ಬಿಎಂಆರ್‌ಸಿಎಲ್

ರಾಜಧಾನಿ ಬೆಂಗಳೂರಿಗರ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿರುವ ನಮ್ಮ ಮೆಟ್ರೋ ನಿಲ್ದಾಣ ದಲ್ಲಿರುವ ಸುರಕ್ಷತೆ ಗೊಂದಲ ಮುಂದುವರೆದಿದೆ. ಪಿಎಸ್‌ಡಿ ಡೋರ್‌ಗಳ ಅಳವಡಿಕೆ ಪ್ರಕ್ರಿಯೆ ಬಗ್ಗೆ ವರ್ಷಗಳಿಂದ ಚರ್ಚೆಯಾಗುತ್ತಿದ್ದರೂ, ಕಾರ್ಯಗತಗೊಂಡಿಲ್ಲ.

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹಳಿ ಹಾರುವ ಅಥವಾ ಆಕಸ್ಮಿಕವಾಗಿ ಬೀಳುವವರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ನಿಗ್ರಹಿಸಲು ಪ್ರತ್ಯೇಕ ಸಿಬ್ಬಂದಿಗಳನ್ನು ನಿಯೋಜಿಸಿ ದರೂ, ಹಳಿಗೆ ಬೀಳುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಆದ್ದರಿಂದ ಈ ಸಮಸ್ಯೆಗೆ ಪರಿಹಾರವಾಗಿ ಪಿಎಸ್‌ಡಿ ಡೋರ್‌ಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ. ಆದರೆ ಆರ್ಥಿಕ ಹೊರೆಯ ನೆಪ ನೀಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಬಿಎಂಆರ್‌ಸಿಎಲ್ ಹಿಂದೇಟು ಹಾಕುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ಪಿಎಸ್‌ಡಿ ಡೋರ್ ಅಳವಡಿಸುವುದರಿಂದ ಪ್ರಯಾಣಿಕರಿಗೆ ಮೆಟ್ರೋ ಹಳಿಗೆ ಬೀಳುವ ಅವಕಾಶ ವಿರುವುದಿಲ್ಲ. ಇದರಿಂದ ಅವಘಡಗಳನ್ನು ತಡೆಯಬಹುದು ಎನ್ನುವ ಲೆಕ್ಕಾಚಾರದಲ್ಲಿ ಬಿಎಂಆರ್‌ ಸಿಎಲ್ ಪಿಎಸ್‌ಡಿ ಡೋರ್‌ಗಳ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಆದರೆ, ಪ್ರಸ್ತಾವನೆ ಕಾರ್ಯಗತ ಗೊಳಿಸಿಲ್ಲ. ಎಂಜಿ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಮಾಡಿದ್ದರೂ, ಅದನ್ನು ಮುಂದುವರೆಸಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: Namma Metro Yellow Line: ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಇನ್ನಷ್ಟು ರೈಲು, ಬಿಇಎಂಎಲ್‌ ಜೊತೆ ಒಪ್ಪಂದ

ದೆಹಲಿ ಮೆಟ್ರೋದಲ್ಲಿ ಪಿಎಸ್‌ಡಿ ಡೋರ್: ಈಗಾಗಲೇ ದೆಹಲಿ, ಮುಂಬೈ ಮೆಟ್ರೋದಲ್ಲಿ ಪಿಎಸ್‌ಡಿ ಡೋರ್‌ಗಳನ್ನು ಅಲ್ಲಿನ ಮೆಟ್ರೋ ಅಳವಡಿಸಿಕೊಂಡಿವೆ. ಆದರೆ ಬೆಂಗಳೂರಿನಲ್ಲಿ ಅಳವಡಿಸಲು ಆರ್ಥಿಕ ಹೊರೆಯ ನೆಪವನ್ನು ನೀಡುತ್ತಿದೆ. ಪ್ರತಿ ಬಾರಿ ಅವಘಡ ಸಂಭವಿಸಿದಾಗ, ಪಿಎಸ್‌ಡಿ ಪ್ರಸ್ತಾ ವನೆ ತರುವ ಬಿಎಂಆರ್‌ಸಿಎಲ್ ಬಳಿಕ ಈ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎನ್ನಲಾಗುತ್ತಿದೆ.

ಘಟನೆ ನಡೆದಾಗಷ್ಟೆ ವಿಷಯ ಮುನ್ನಲೆಗೆ: ನಮ್ಮ ಮೆಟ್ರೋ ಹಳಿಗೆ ಹಾರುವ ಅಥವಾ ಆಕಸ್ಮಿಕವಾಗಿ ಬೀಳುವುದು ಇದೇ ಮೊದಲಲ್ಲ. ಈ ಹಿಂದೆ ಹಲವು ಬಾರಿ ಈ ರೀತಿಯ ಘಟನೆಗಳು ನಡೆದಾಗಲೆಲ್ಲ, ಪಿಎಸ್‌ಡಿ ಡೋರ್‌ಗಳ ಬಗ್ಗೆ ನಮ್ಮ ಮೆಟ್ರೋ ಪ್ರಸ್ತಾಪಿಸುತ್ತದೆ. ಆದರೆ ಘಟನೆ ಮಾಸಿದ ಬಳಿಕ ಅಳವಡಿಕೆ ಬಗ್ಗೆ ಮೆಟ್ರೋ ಅಧಿಕಾರಿಗಳು ಕ್ಷಿರೆಯುತ್ತಿದ್ದಾರೆ. ಘಟನೆ ಮರುಕಳಿಸಿ ದಾಗ, ವಿಷಯ ಮುನ್ನಲೆಗೆ ಬರುತ್ತಿದೆ ಹೊರತು, ತಾರ್ತಿಕ ಅಂತ್ಯ ಸಿಗುತ್ತಿಲ್ಲ ಎನ್ನುವ ಬೇಸರವನ್ನು ಸಾರ್ವಜನಿಕರು ಹೊರಹಾಕಿದ್ದಾರೆ.

ಏನಿದು ಪಿಎಸ್‌ಡಿ ವ್ಯವಸ್ಥೆ?: ಪಿಎಸ್‌ಡಿ ಎಂದರೆ ಪ್ಲಾಟ್ ಫಾರಂ ಸ್ಕ್ರೀನ್ ಡೋರ್ ಆಗಿದ್ದು, ಮೆಟ್ರೋ ನಿಲ್ದಾಣದ ಪ್ಲಾಟ್ ಫಾರಂ ಮತ್ತು ರೈಲಿನ ನಡುವೆ ಇರುವ ಸುರಕ್ಷತಾ ಬಾಗಿಲುಗಳ ವ್ಯವಸ್ಥೆಯಾಗಿದೆ. ಇದು ಪ್ರಯಾಣಿಕರು ಆಕಸ್ಮಿಕವಾಗಿ ಹಳಿಗೆ ಜಾರುವುದನ್ನು ಹಾಗೂ ಆತ್ಮಹತ್ಯೆ ಗಳನ್ನು ತಡೆಯಲು ಮತ್ತು ರೈಲು ಸಂಚಾರದ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯಕ ವಾಗಲಿದೆ. ಇದು ರೈಲು ಬಂದಾಗ ಮತ್ತು ನಿಂತಾಗ ಮಾತ್ರ ಸ್ವಯಂಚಾಲಿತವಾಗಿ ತೆರೆದುಕೊಳ್ಳಲಿದ್ದು, ರೈಲು ಹೊರಡುವಾಗ ಮುಚ್ಚಿಕೊಳ್ಳುತ್ತದೆ.

ಈ ಹಿಂದಿನ ಘಟನೆಗಳು

ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಕೆಲ ತಿಂಗಳುಗಳಿಂದ ಆಗುತ್ತಿರುವ ಅವಾಂತರಗಳನ್ನು ನೋಡಿದರೆ, ಪಿಎಸ್‌ಡಿ ಡೋರ್ ಅತ್ಯಂತ ಅಗತ್ಯವಿದೆ. ಎರಡು ವರ್ಷಗಳಲ್ಲಿ, ಆಯತಪ್ಪಿ ನಾಲ್ಕು ಮಂದಿ ಬಿದ್ದಿದ್ದೂ ಸೇರಿದಂತೆ ೧೫ ಪ್ರಕರಣಗಳು ನಡೆದಿವೆ. ಉದ್ದೇಶ ಪೂರ್ವಕವಾಗಿ ಹಳಿಗೆ ಬಿದ್ದಿದ್ದ ೧೧ ಮಂದಿಯಲ್ಲಿ ಮೂವರು ಮೃತಪಟ್ಟಿದ್ದರು. ಕಳೆದ ವರ್ಷ ಮತ್ತು ಈ ವರ್ಷ ಮೆಟ್ರೋ ಟ್ರ್ಯಾಕಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದವರು.

೧ ಜನವರಿ ೨೦೨೪: ಇಂದಿರಾ ನಗರ ಮೆಟ್ರೋ ನಿಲ್ದಾಣ ಮಹಿಳೆಯೊಬ್ಬರು ಮೊಬೈಲ್ ತೆಗೆಯಲು ಟ್ರ್ಯಾಕ್‌ಗೆ ಇಳಿದಿದ್ದರು. ಇದನ್ನು ಗಮನಿಸಿದ ಮೆಟ್ರೋ ಸಿಬ್ಬಂದಿ ತಕ್ಷಣ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದಾರೆ. ಬಳಿಕ ಮಹಿಳೆಯನ್ನು ಮೇಲಕ್ಕೆ ಎಳೆದುಕೊಂಡಿದ್ದಾರೆ. ಇದರ ಪರಿಣಾಮ ವಾಗಿ ಪೀಕ್ ಅವರ್ ನಲ್ಲಿ ೧೫ ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡಿತ್ತು.

೫ ಜನವರಿ ೨೦೨೪: ಜಾಲಹಳ್ಳಿ ಮೆಟ್ರೋ ನಿಲ್ದಾಣ ೨೩ ವರ್ಷದ ಶ್ಯಾರೊನ್ ಎನ್ನುವ ಕೇರಳ ಮೂಲದ ಯುವಕ ಆತ್ಮಹತ್ಯೆಗೆ ಆತ್ಮಹತ್ಯೆಗೆ ಯತ್ನಿಸಿದ್ದ. ಸ್ನೇಹಿತನ ಜತೆ ಜಾಲಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ಶ್ಯಾರೊನ್ ಮೆಜೆಸ್ಟಿಕ್‌ಗೆ ಹೋಗಲು ಟಿಕೆಟ್ ಸಹ ಪಡೆದುಕೊಂಡಿದ್ದ. ಮೆಟ್ರೊ ಟ್ರೈನ್ ಬಂದಾಗ ಏಕಾಏಕಿ ಹಳಿಗೆ ಶ್ಯಾರೊನ್ ಧುಮುಕಿದ್ದು,ಈ ವೇಳೆ ಮೆಟ್ರೋ ಟ್ರೈನ್ ಡಿಕ್ಕಿ ಹೊಡೆದಿದ್ದು ಅವತ್ತು ಹಸಿರು ಮಾರ್ಗದಲ್ಲಿ ಕೆಲಕಾಲ ಸಂಚಾರ ಸ್ಥಗಿತವಾಗಿತ್ತು.

೬ ಜನವರಿ ೨೦೨೪: ಜೆ.ಪಿ.ನಗರ ಮೆಟ್ರೋ ನಿಲ್ದಾಣ ಮೆಟ್ರೋ ಟ್ರ್ಯಾಕ್ ಮೇಲೆ ಬೆಕ್ಕು ಕಾಣಿಸಿ ಕೊಂಡಿತ್ತು. ಕೂಡಲೇ ಪ್ರಯಾಣಿಕರು ಸಿಬ್ಬಂದಿ ಗಮನಕ್ಕೆ ತಂದರು. ವಿದ್ಯುತ್ ಸಂಪರ್ಕ ಕಡಿತ ಗೊಳಿಸಿ ಟ್ರ್ಯಾಕ್‌ನಲ್ಲಿದ್ದ ಬೆಕ್ಕನ್ನು ಓಡಿಸಲು ಸಿಬ್ಬಂದಿ ಮುಂದಾದರು. ಮೆಟ್ರೋ ಸಿಬ್ಬಂದಿ ನಡೆಗೆ ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

೧೨ ಮಾರ್ಚ್ ೨೦೨೪: ಜ್ಞಾನ ಭಾರತಿ ಮೆಟ್ರೋ ನಿಲ್ದಾಣ ಜ್ಞಾನಭಾರತಿ ಮೆಟ್ರೋ ಸ್ಟೇಷನ್ ನಿಂದ ಪಟ್ಟಣಗೆರೆ ಮೆಟ್ರೋ ಸ್ಟೇಷನ್ ನಡುವಿನ ವಯಾಡಕ್ಟ ನಲ್ಲಿ ಅಪರಿಚಿತ ವ್ಯಕ್ತಿ ಕಾಣಿಸಿಕೊಂಡಿದ್ದ. ಹಲವು ಮೆಟ್ರೋ ರೈಲುಗಳ ಸಂಚಾರವನ್ನೇ ಸ್ಥಗಿತಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಸಾವಿರಾರು ಜನ ಪರದಾಡಿದ ಘಟನೆ ನಡೆದಿತ್ತು.

೨೧ ಮಾರ್ಚ್ ೨೦೨೪: ಅತ್ತಿಗುಪ್ಪೆ ಮೆಟ್ರೋ ಹಳಿ ಮೇಲೆ ಬಿದ್ದು ಧ್ರುವ್ ಟಕ್ಕರ್ ಎನ್ನುವ ೧೯ ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ. ಈತ ನ್ಯಾಷನಲ್ ಲಾ ಕಾಲೇಜಿನಲ್ಲಿ ಮೊದಲನೇ ವರ್ಷ ವ್ಯಾಸಂಗ ಮಾಡ್ತಿದ್ದ ಎಂದು ತಿಳಿದುಬಂದಿದೆ.

೩ ಆಗಸ್ಟ್ ೨೦೨೪ : ದೊಡ್ಡಕಲ್ಲಸಂದ್ರ ಹಸಿರು ಮಾರ್ಗದ ನಾಗಸಂದ್ರ ಟು ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೋ ಹಳಿ ಮೇಲೆ ಬಿದ್ದು ೩೫ ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ರೈಲು ಬರುತ್ತಿರುವುದನ್ನು ತಿಳಿದು ಹಳಿಗೆ ಹಾರಿ ಪ್ರಾಣ ಬಿಟ್ಟಿದ್ದ.

೧೭ ಸೆಪ್ಟೆಂಬರ್ ೨೦೨೪: ಜ್ಞಾನಭಾರತಿ ಮೆಟ್ರೋ ಸ್ಟೇಷನ್ ನೇರಳೆ ಮಾರ್ಗದ ವೈಟ್ ಫೀಲ್ಡ್ ಟು ಚೆಲ್ಲಘಟ್ಟ ಮಾರ್ಗದಲ್ಲಿ ಬಿಹಾರ ಮೂಲದ ಯುವಕನೊಬ್ಬ ಹಳಿಗೆ ಜಿಗಿದಿದ್ದ. ಮೆಟ್ರೋ ಸೆಕ್ಯುರಿಟಿ ಗಾರ್ಡ್ ರಶ್ಮಿ ಇಪಿಎಸ್ ( ಎಮರ್ಜೆನ್ಸಿ ಸ್ಟಾಪ್ ಪ್ಲಂಗರ್ ) ಬಟನ್ ಆಫ್ ಮಾಡಿ ಸಿದ್ದಾರ್ಥ ಜೈನ್ ಪ್ರಾಣ ಉಳಿಸಿದ್ದರು.

೨೦ ಜನವರಿ ೨೦೨೫: ಜಾಲಹಳ್ಳಿ ಮೆಟ್ರೋ ನಿಲ್ದಾಣ ಹಸಿರು ಮಾರ್ಗದ ಜಾಲಹಳ್ಳಿ ಮೆಟ್ರೋ ಸ್ಟೇಷನ್ ನಲ್ಲಿ ಟ್ರೈನ್ ಬರುತ್ತಿದ್ದಂತೆ ಟ್ರ್ಯಾಕಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ವ್ಯಕ್ತಿಯೋರ್ವ ಯತ್ನಿಸಿದ್ದ. ಎರಡು ಟ್ರ್ಯಾಕ್‌ಗಳ ಮಧ್ಯೆ ಮಲಗಿದ್ದ ೪೯ ವರ್ಷದ ವ್ಯಕ್ತಿ ಅನಿಲ್ ಕುಮಾರ್ ಪಾಂಡೆ ನಿವೃತ್ತ ವಾಯುಸೇನಾ ಯೋಧ. ಮೆಟ್ರೋ ಸೆಕ್ಯುರಿಟಿ ಗಾರ್ಡ್ ಎಮರ್ಜೆನ್ಸಿ ಟ್ರಿಪ್ ಸಿಸ್ಟಮ್ ( ಇಟಿಎಸ್ ) ಬಟನ್ ಪ್ರೆಸ್ ಮಾಡಿದ್ದರಿಂದ ವ್ಯಕ್ತಿಯ ಜೀವ ಉಳಿದಿದೆ.

೧೧ ಆಗಸ್ಟ್ ೨೦೨೫: ಸೋಮವಾರ ದಂದು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ ೧೦.೦೪ ಕ್ಕೆ ೨೯ ಜಯಂತ್ ಎನ್ನುವ ಯುವಕ ರೈಲು ಬರುವ ವೇಳೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ಕೂಡಲೇ ಮೆಟ್ರೋ ಸಿಬ್ಬಂದಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿ ರಕ್ಷಿಸಿದರು. ಹಸಿರು ಮಾರ್ಗದ ರೇಷ್ಮೆ ಸಂಸ್ಥೆ ಕಡೆಗೆ ತೆರಳುವ ಮಾರ್ಗದಲ್ಲಿ ಘಟನೆ ನಡೆದಿದ್ದು, ಅರ್ಧಗಂಟೆ ಮೆಟ್ರೋ ಸಂಚಾರ ಸ್ಥಗಿತ ಗೊಳಿಸಲಾಗಿತ್ತು. ೧೦-೩೦ ರ ನಂತರ ಸಂಚಾರ ಪುನರ್ ಆರಂಭಗೊಂಡಿದೆ.

೨೬ ಆಗಸ್ಟ್ ೨೦೨೫: ಮಂಗಳವಾರ ನಮ್ಮ ಮೆಟ್ರೋದ ಹಳದಿ ಮಾರ್ಗದ ರಾಗಿಗುಡ್ಡ ಮೆಟ್ರೋ ಸ್ಟೇಷನ್ ಹಳಿಗೆ ೪೫ ರಮೇಶ್ ಭದ್ರತಾ ಸಿಬ್ಬಂದಿ ಬಿದ್ದಿದ್ದು, ಹಳಿ ಮೇಲೆ ಭದ್ರತಾ ಸಿಬ್ಬಂದಿ ಬೀಳು ತ್ತಿರುವುದನ್ನು ಗಮನಿಸಿದ ಮೆಟ್ರೋ ಸೆಕ್ಯುರಿಟಿ ಪವರ್ ಆಫ್ ಮಾಡಿ ಮೇಲಕ್ಕೆ ಎತ್ತಿದ್ದರು. ಆರು ನಿಮಿಷಗಳ ಮೆಟ್ರೋ ಸಂಚಾರ ಸ್ಥಗಿತ ಗೊಳಿಸಲಾಗಿತ್ತು.‌

೪ ಅಕ್ಟೋಬರ್ ೨೦೨೫: ಶನಿವಾರ ೦೩-೧೭ಕ್ಕೆ ನಾಡಪ್ರಭು ಕೆಂಪೇಗೌಡ ಮೆಟ್ರೋ ಸ್ಟೇಷನ್ ಪ್ಲಾಟ್ ಫಾರಂ- ೩ ರಲ್ಲಿ ಹಸಿರು ಮಾರ್ಗದ ಸಿಲ್ಲ್ ಇನ್ಸ್‌ಟಿಟ್ಯೂಟ್ ನಿಂದ ಮಾದವಾರಕ್ಕೆ ಹೊರಟ್ಟಿದ್ದ ರೈಲು ಬರುವ ವೇಳೆ ವಿಧಾನಸೌಧದಲ್ಲಿ ಡಿ ಗ್ರೂಪ್‌ನಲ್ಲಿ ನೌಕರನಾಗಿದ್ದ ವೀರೇಶ್ ( ೪೦ ) ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಟ್ರ್ಯಾಕಿಗೆ ಹಾರಿದ್ದ. ಆತನನ್ನು ರಕ್ಷಣೆ ಮಾಡಲಾಗಿತ್ತು.

೫ ಡಿಸೆಂಬರ್ ೨೦೨೫: ಕೆಂಗೇರಿ ಮೆಟ್ರೋ ಸ್ಟೇಷನ್ ಇತ್ತೀಚಿಗಷ್ಟೇ ಯುವಕನೊಬ್ಬ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ನಡೆದಿತ್ತು. ಪರಿಣಾಮವಾಗಿ ನೇರಳೆ ಮೆಟ್ರೋ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಗಿತ್ತು.