ಪ್ರವಾಸೋದ್ಯಮಕ್ಕೆ ಎರವಾದ ʼಸಫಾರಿʼ ಬಂದ್
ಕಾಡುಪ್ರಾಣಿ-ಮಾನವ ಸಂಘರ್ಷ ತಡೆಯಬೇಕೆಂಬ ಉದ್ದೇಶದಿಂದ ಅರಣ್ಯ ಇಲಾಖೆ ಸಫಾರಿಯನ್ನು ನಿರ್ಬಂಧಿಸುವ ತೀರ್ಮಾನ ಮಾಡಿತ್ತು. ಇದು ರಾಜ್ಯ ಸರಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದ ನಷ್ಟವಾಗುತ್ತಿದೆ ಎನ್ನುವ ಮಾತುಗಳು ಶುರುವಾಗಿದೆ. ಕೆಲ ತಿಂಗಳಿನಿಂದ ಮೈಸೂರು ಭಾಗದಲ್ಲಿ ಜನರ ಮೇಲೆ ಹುಲಿ, ಚಿರತೆ ದಾಳಿಯ ವರದಿಯಾಗುತ್ತಿದೆ.
-
ರಂಜಿತ್ ಎಚ್.ಅಶ್ವತ್ಥ, ಬೆಳಗಾವಿ
ನಾಗರಹೊಳೆ, ಬಂಡೀಪುರ ಸಫಾರಿ ರದ್ದಿನಿಂದ ಸರಕಾರಕ್ಕೆ ದಿನ 25 ಲಕ್ಷ ರು. ನಷ್ಟ
ಕಾಡುಪ್ರಾಣಿ-ಮಾನವ ಸಂಷಘ ತಡೆಯಬೇಕೆಂಬ ಉದ್ದೇಶದಿಂದ ಅರಣ್ಯ ಇಲಾಖೆ ಸಫಾರಿಯನ್ನು ನಿರ್ಬಂಧಿಸುವ ತೀರ್ಮಾನ ಮಾಡಿತ್ತು. ಇದು ರಾಜ್ಯ ಸರಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದ ನಷ್ಟವಾಗುತ್ತಿದೆ ಎನ್ನುವ ಮಾತುಗಳು ಶುರುವಾಗಿದೆ. ಕೆಲ ತಿಂಗಳಿನಿಂದ ಮೈಸೂರು ಭಾಗದಲ್ಲಿ ಜನರ ಮೇಲೆ ಹುಲಿ, ಚಿರತೆ ದಾಳಿಯ ವರದಿಯಾಗುತ್ತಿದೆ.
ಇದನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರಕಾರ ಬಂಡೀಪುರ, ನಾಗರಹೊಳೆ ಸಫಾರಿಯನ್ನು ನಿರ್ಬಂಧಿಸಿದೆ. ಆದರೆ ಈ ನಿಷೇಧದಿಂದ ನಿತ್ಯ ೨೫ ಲಕ್ಷ ರುಪಾಯಿ ನಷ್ಟವಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.ಈ ಭಾಗಕ್ಕೆ ಬಹುತೇಕ ಪ್ರವಾಸಿಗರು ಬರುವುದೇ ಸಫಾರಿಯನ್ನು ಸವಿಯ ಲೆಂದು. ಆದರೆ ಈಗ ಸಫಾರಿ ನಿರ್ಬಂಧಿಸಿರುವುದರಿಂದ ನಿತ್ಯ ೨೫ ಲಕ್ಷ ಅಂದರೆ ತಿಂಗಳಿಗೆ ಏಳೂವರೆ ಯಿಂದ ೮ ಕೋಟಿ ರು. ಸಫಾರಿ ಟಿಕೆಟ್‌ನಿಂದಲೇ ನಷ್ಟವಾಗುತ್ತಿದೆ.
ಇದಿಷ್ಟೇ ಅಲ್ಲದೇ ಸಫಾರಿ ಇಲ್ಲ ಎನ್ನುವ ಕಾರಣಕ್ಕೆ ಮೈಸೂರು ಭಾಗಕ್ಕೆ ಬರುವ ಶೇ.೯೦ರಷ್ಟು ಪ್ರವಾಸಿಗರ ಸಂಖ್ಯೆ ತಗ್ಗಿರುವುದರಿಂದ ಈ ಭಾಗದ ಜಂಗಲ್ ರೆಸಾರ್ಟ್, ಹೋಟೆಲ್, ಲಾಡ್ಜ್, ಟ್ಯಾಕ್ಸಿ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ ಎಂದು ವಿಶ್ಲೇಷಿಸಲಾಗಿದೆ.
ಇದನ್ನೂ ಓದಿ: Ranjith H Ashwath Column: ಗೊಂದಲ ಮೀರಿ ಸದನದಲ್ಲಿ ಒಗ್ಗಟ್ಟು ಸಾಧ್ಯವೇ ?
ಪರೋಕ್ಷ ಹೊಡೆತ ಹೆಚ್ಚು: ಸಫಾರಿ ನಿರ್ಬಂಧ ದಿಂದ ಪರೋಕ್ಷವಾಗಿ ಹೋಟೆಲ್ ಬುಕಿಂಗ್, ಕ್ಯಾಬ್ ಸೇವೆ ಸೇರಿದಂತೆ ವಿವಿಧ ರೀತಿಯಲ್ಲಿ ವ್ಯಾಪಾರವಾಗುತ್ತಿತ್ತು. ಇದರಿಂದ ಪರೋಕ್ಷವಾಗಿ ಸರಕಾರದ ಬೊಕ್ಕಸಕ್ಕೆ ಹಣ ಹರಿದು ಬರುತ್ತಿತ್ತು. ಆದರೆ ಅರಣ್ಯ ಇಲಾಖೆಯ ಈ ತೀರ್ಮಾನದಿಂದ ಈ ಎಲ್ಲ ವ್ಯವಹಾರಗಳಿಗೂ ಬ್ರೇಕ್ ಬಿದ್ದಿದೆ. ಇದರೊಂದಿಗೆ ವಿದೇಶಿ ಪ್ರವಾಸಿಗರು ಆರು ತಿಂಗಳ ಮೊದಲೇ ಬುಕಿಂಗ್ ಮಾಡಿಕೊಂಡು ಬರುತ್ತಿರುತ್ತಾರೆ. ಆದರೀಗ, ಸಫಾರಿ ಇಲ್ಲ ಎಂದರೆ ಬಂಡೀ ಪುರ, ನಾಗರ ಹೊಳೆಗೆ ಇರುವ ಅಂತಾರಾಷ್ಟ್ರೀಯ ಮಾನ್ಯತೆಗೆ ಧಕ್ಕೆ ಬರಲಿದೆ ಎನ್ನುವ ಆತಂಕ ಸ್ಥಳೀಯ ಉದ್ಯಮಿಗಳದ್ದಾಗಿದೆ.
ಮಾನವ-ಪ್ರಾಣಿಗಳ ಸಂಘರ್ಷವನ್ನು ತಡೆಯಲು ಸರಕಾರ ಕ್ರಮವಹಿಸಬೇಕು. ಆದರೆ ಅದರ ನೆಪದಲ್ಲಿ ಪ್ರವಾಸೋದ್ಯ ಮಕ್ಕೆ ಹೊರೆಯಾಗಬಾರದು. ಟ್ರಾವೆಲ್ ಏಜೆಂಟ್‌ಗಳು, ಪ್ರವಾಸಿ ವಾಹನ ಚಾಲಕರು, ಹೋಟೆಲ್ ಮಾಲೀಕರು, ಪ್ರವಾಸಿ ಗೈಡ್ʼಗಳೆಲ್ಲರೂ ನಿಯಮದ ಪ್ರಕಾರ ಅಗತ್ಯವಿರುವ ಮಾನ್ಯತೆಗಳನ್ನೆ ಪಡೆದು ಕೆಲಸ ಮಾಡುತ್ತಿದ್ದಾರೆ. ಆದರೆ ಈಗ ಸಫಾರಿ ಸ್ಥಗಿತ ಗೊಂಡಿರುವ ಕಾರಣ ಎಲ್ಲರ ಮೇಲೂ ಆರ್ಥಿಕ ಹೊಡೆತ ಬೀಳುತ್ತಿದೆ. ಆದ್ದರಿಂದ ರೈತರಿಗೆ ಅನುಕೂಲವಾಗುವಂತೆ ನೂತನ ಮಾರ್ಗಸೂಚಿ ರಚನೆ ಮಾಡಿ, ಸಫಾರಿ ನಡೆಸಲು ಅವಕಾಶ ನೀಡಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ.
ಸಾವಿರಾರು ಮಂದಿಗೆ ನಿರುದ್ಯೋಗ ಭೀತಿ: ಸಫಾರಿಗೆ ನಿರ್ಬಂಧ ಹೇರಿರುವುದರಿಂದ ಮೈಸೂರು, ಚಾಮರಾಜ ನಗರ, ಕೊಡಗು ಭಾಗದ ಬಹುತೇಕ ರೆಸಾರ್ಟ್‌ಗಳು ಖಾಲಿ ಹೊಡೆಯುತ್ತಿವೆ. ಇದರೊಂದಿಗೆ ಕ್ಯಾಬ್ ಚಾಲಕರಿಗೂ ಟ್ರಿಪ್‌ಗಳು ಸಿಗುತ್ತಿಲ್ಲ. ಸಫಾರಿ ಇಲ್ಲ ಎನ್ನುವ ಕಾರಣಕ್ಕೆ ಅನೇಕರು ತಮ್ಮ ಪ್ರವಾಸವನ್ನು ರದ್ದುಪಡಿಸಿದ್ದಾರೆ. ಸರಕಾರಕ್ಕೆ ಸಫಾರಿ ಸ್ಥಗಿತದಿಂದ ನಿತ್ಯ ೨೫ ಲಕ್ಷ ರು. ನಷ್ಟ ನೇರವಾಗಿ ಆಗುತ್ತಿದ್ದರೂ, ಪರೋಕ್ಷವಾಗಿ ಕೋಟ್ಯಂತರ ರುಪಾಯಿ ವ್ಯವಹಾರಕ್ಕೆ ಹೊಡೆತ ಬಿದ್ದಿದೆ. ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನದಲ್ಲಿ ಸಾವಿರಾರು ಮಂದಿ ನಿರುದ್ಯೋಗಿ ಗಳಾಗುವ ಆತಂಕವಿದೆ.
ಸಫಾರಿ ಅವಧಿಯಲ್ಲಿ ದಾಳಿಯಾಗಿಲ್ಲ: ಮಾನವ-ಪ್ರಾಣಿಗಳ ಸಂಘರ್ಷವನ್ನು ತಡೆಯಲು ಸಫಾರಿ ಯನ್ನು ನಿರ್ಬಂಧಿಸಿರುವುದಾಗಿ ಹೇಳಿದೆ. ಆದರೆ ಈವರೆಗೆ ಸಫಾರಿಗೆ ಹೋಗಿದ್ದವರ ಮೇಲೆ ಕಾಡು ಪ್ರಾಣಿಯಿಂದ ದಾಳಿಯಾಗಿ ರುವ ಉದಾಹರಣೆ ಇಲ್ಲ. ಅರಣ್ಯದೊಳಗೆ ಅಥವಾ ಅರಣ್ಯ ದಂಚಿನಲ್ಲಿ ಪ್ರಾಣಿಗಳಿಂದ ದಾಳಿಯಾಗಿದೆ. ಆದ್ದರಿಂದ ಇದಕ್ಕೆ ಇಲಾಖೆ ಕ್ರಮವಹಿಸಬೇಕು. ಅದನ್ನು ಬಿಟ್ಟು ಸಫಾರಿಯನ್ನೇ ರದ್ದುಗೊಳಿಸುವುದು ಸರಿಯಲ್ಲ ಎನ್ನುವ ಮಾತುಗಳನ್ನು ಹೋಟೆಲ್ ಉದ್ಯಮಿ ದಾರರು ಹೇಳಿದ್ದಾರೆ.
ನಿರ್ಬಂಧದಿಂದ ಸಮಸ್ಯೆಗಳೇನು?
ಈಗಾಗಲೇ ಸಫಾರಿ ಬುಕಿಂಗ್ ಮಾಡಿರುವ ವಿದೇಶಿ ಪ್ರವಾಸಿಗರಿಗೆ ನಿರಾಸೆ
ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಪ್ರವಾಸೋದ್ಯಮಕ್ಕೆ ಪೆಟ್ಟು
ಮೈಸೂರು ಭಾಗದ ಶೇ.80ರಷ್ಟು ಕ್ಯಾಬ್ ಚಾಲಕರಿಗೆ ಸಿಗುತ್ತಿಲ್ಲ ಕೆಲಸ
ಕಾಡಿನೊಳಗೆ ಇರುವ ಬಹುತೇಕ ರೆಸಾರ್ಟ್‌ಗಳು ಖಾಲಿ ಖಾಲಿ,
ನಷ್ಟ ಪರಿಸ್ಥಿತಿ ಸರಿಪಡಿಸಲು ಹೋಟೆಲ್ ಮಾಲಿಕರು, ಟ್ಯಾಕ್ಸಿ ಚಾಲಕರ ಒತ್ತಾಯ
*
ಮೈಸೂರು ಭಾಗದ ರೆಸಾರ್ಟ್ ಗಳಿಗೆ ಬರುವ ಬಹುತೇಕ ಪ್ರವಾಸಿಗರು ಸಫಾರಿ ರೈಡ್‌ಗೆ ಆಗಮಿಸು ತ್ತಾರೆ. ಆದರೆ ಈಗ ಸಫಾರಿಯನ್ನು ನಿರ್ಬಂಧಿಸಿರುವುದರಿಂದ ಶೇ.85ರಿಂದ 90ರಷ್ಟು ಪ್ರವಾಸಿಗರು ಬುಕಿಂಗ್ ರದ್ದುಪಡಿಸುತ್ತಿದ್ದಾರೆ. ಇದರಿಂದ ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟು ಬೀಳುವುದಷ್ಟೇ ಅಲ್ಲದೇ, ಸರಕಾರಕ್ಕೂ ಭಾರಿ ನಷ್ಟವಾಗಿದೆ. ಸರಕಾರ ಸಫಾರಿಗಳ ಮೇಲೆ ವಿಧಿಸಿರುವ ನಿರ್ಬಂಧ ವನ್ನು ಕೂಡಲೇ ತೆರವುಗೊಳಿಸಬೇಕು.
-ಪ್ರಶಾಂತ್, ಅಧ್ಯಕ್ಷರು, ಮೈಸೂರು ಟ್ರಾವೆಲ್ಸ್ ಸಂಸ್ಥೆ ಅಧ್ಯಕ್ಷ