ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Thorium discovered in Gundlupet: ಗುಂಡ್ಲುಪೇಟೆಯಲ್ಲಿ ಥೋರಿಯಂ ನಿಕ್ಷೇಪ ಪತ್ತೆ

ಗಡಿಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನಲ್ಲಿ ಚಿನ್ನದ ನಿಕ್ಷೇಪದ ಜತೆ ಇದೀಗ ಅಣು ವಿದ್ಯುತ್‌ನ ಉತ್ಪಾದನೆಗೆ ಬೇಕಾಗಿರುವ ಥೋರಿಯಂ ನಿಕ್ಷೇಪ ಪತ್ತೆಯಾಗಿದ್ದು, ಈಗಾಗಲೇ ಹರಾಜು ಪ್ರಕ್ರಿಯೆ ಹಂತದಲ್ಲಿ ಯೋಜನೆ ಇದೆ. ಹಿಂದುಳಿದ ಜಿಲ್ಲೆ ಎಂದೇ ಕರೆಸಿಕೊಳ್ಳುವ ಗಡಿ ಜಿಲ್ಲೆ ಚಾಮರಾಜ ನಗರ, ಅಭಿವೃದ್ಧಿ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ತೀರ ಹಿಂದುಳಿದಿದೆ.

ಗುಂಡ್ಲುಪೇಟೆಯಲ್ಲಿ ಥೋರಿಯಂ ನಿಕ್ಷೇಪ ಪತ್ತೆ

-

Profile
Ashok Nayak Jul 6, 2026 8:18 AM

ದೇವನೂರು ಶ್ರೀನಿವಾಸ್ ಚಾಮರಾಜನಗರ

ಭಾರತ ಭೌಗೋಳಿಕ ಸಮೀಕ್ಷಾ ಸಂಸ್ಥೆಯಿಂದ ಸರ್ವೇ

ಶೀಘ್ರದಲ್ಲೇ ಗಣಿಗಾರಿಕೆ ಸಾಧ್ಯತೆ

ಗಡಿಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನಲ್ಲಿ ಚಿನ್ನದ ನಿಕ್ಷೇಪದ ಜತೆ ಇದೀಗ ಅಣು ವಿದ್ಯುತ್‌ನ ಉತ್ಪಾದನೆಗೆ ಬೇಕಾಗಿರುವ ಥೋರಿಯಂ ನಿಕ್ಷೇಪ ಪತ್ತೆಯಾಗಿದ್ದು, ಈಗಾಗಲೇ ಹರಾಜು ಪ್ರಕ್ರಿಯೆ ಹಂತದಲ್ಲಿ ಯೋಜನೆ ಇದೆ. ಹಿಂದುಳಿದ ಜಿಲ್ಲೆ ಎಂದೇ ಕರೆಸಿಕೊಳ್ಳುವ ಗಡಿ ಜಿಲ್ಲೆ ಚಾಮರಾಜನಗರ, ಅಭಿವೃದ್ಧಿ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ತೀರ ಹಿಂದುಳಿದಿದೆ. ಹೇಗೆ ಜಿಲ್ಲೆಯ ಅಭಿವೃದ್ಧಿ ಎನ್ನುವ ವೇಳೆ ಜಿಲ್ಲೆಯ ಎರಡು ಕಡೆ ಎರಡು ನಿಕ್ಷೇಪಗಳು ದೊರೆಯುತ್ತಿರುವುದು ಜಿಲ್ಲೆಗೆ ಸಂತಸದ ಸುದ್ದಿಯಾಗಿದೆ. ಹನೂರು ತಾಲ್ಲೂಕಿನಲ್ಲಿ ಚಿನ್ನದ ನಿಕ್ಷೇಪ ದೊರೆತರೆ, ಗುಂಡ್ಲು ಪೇಟೆ ಪಟ್ಟಣದ ಕೂಗಾಳತೆಯಲ್ಲೇ ಅಪರೂಪದ ಥೋರಿಯಂ ನಿಕ್ಷೇಪ ಸಿಕ್ಕಿರುವುದು ಜಿಲ್ಲೆ ಕಿರೀಟ ದಂತ್ತಾಗಿದೆ. ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಚಾಮರಾಜನಗರ ಹಿರಿಯ ಭೂ ವಿಜ್ಞಾನಿ ರಾಜೇಶ್ ಮಾಹಿತಿ ನೀಡಿದ್ದು, ಜಿಯಾಲಜಿಕಲ್ ಸರ್ವೇ ನಡೆದು ಅದರಲ್ಲಿ ಗುಂಡ್ಲು ಪೇಟೆ ತಾಲೂಕಿನ ಕೂತನೂರು ಮತ್ತು ಗುಂಡ್ಲುಪೇಟೆ ಪಟ್ಟಣದ ಹೊರವಲಯದಲ್ಲಿ ಅಪರೂಪದ ಖನಿಜ ನಿಕ್ಷೇಪವಾಗಿರುವ ಮೋನೋಜೈಟ್ ಪತ್ತೆಯಾಗಿದೆ.

ಇದನ್ನೂ ಓದಿ: Ganesh Bhat Column: ಭಾರತದ ಜೆನ್ ಝೀ ಮುಂದಿನ ದಾರಿ ಯಾವುದು?

700 ಎಕರೆ ಪ್ರದೇಶದಲ್ಲಿ ಸರ್ವೇ ನಡೆಸಲಾಗಿದ್ದು 20 ಎಕರೆ ಪ್ರದೇಶವನ್ನು ಕೋರ್ ಏರಿ ಯಾಯಾಗಿ ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ಥೋರಿಯಂ ನಿಕ್ಷೇಪ ಪತ್ತೆಯಾದ ಬಳಿಕ ಕೇಂದ್ರ ಸರ್ಕಾರವು ಗಣಿಗಾರಿಕೆಗೆ ಹರಾಜು ನಡೆಯಲಿದ್ದು ಹರಾಜು ಪ್ರಕ್ರಿಯೆಯಲ್ಲಿದೆ, ಯಾವ ಪ್ರಮಾಣದಲ್ಲಿ ಥೋರಿಯಂ ನಿಕ್ಷೇಪ ಇದೆ ಎಂಬ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ ಎಂದರು.

ಇನ್ನು, ಹನೂರು ತಾಲೂಕಿನ ರಾಮಾಪುರ, ಅಜ್ಜೀಪುರ ಭಾಗದಲ್ಲಿ ಚಿನ್ನದ ನಿಕ್ಷೇಪ ಇರುವ ಬಗ್ಗೆ ಪ್ರಾಥಮಿಕ ಸರ್ವೇ ನಡೆದಿದ್ದು ವರದಿ ಬಂದ ಬಳಿಕ ಎರಡನೇ ಹಂತದ ಸರ್ವೇ ನಡೆಯಲಿದೆ ಎಂದು ತಿಳಿಸಿದರು.

ಥೋರಿಯಂನಿಂದ ವಿದ್ಯುತ್ ಉತ್ಪಾದನೆ: ಮೋನೋಜೈಟ್ ಎನ್ನುವುದು ಕೆಂಪು-ಕಂದು ಬಣ್ಣದ ಖನಿಜವಾಗಿದ್ದು, ಭಾರತದಲ್ಲಿ ಹೇರಳ ವಾಗಿ ಕಂಡುಬರುವ ಪ್ರಮುಖ ನೈಸರ್ಗಿಕ ಸಂಪನ್ಮೂಲ ವಾಗಿದೆ. ಇದು ಅತ್ಯಂತ ಮೌಲ್ಯಯುತ ವಾದ ಅಪರೂಪದ ಖನಿಜ ಸಂಪತ್ತು. ಇದು ‘ಥೋರಿಯಂ’ ಹಾಗೂ ‘ಯುರೇನಿಯಂ’ಗಳ ಮುಖ್ಯ ಮೂಲ ವಾಗಿದೆ. ಅತ್ಯಾಧುನಿಕ ಪರಮಾಣು ತಂತ್ರಜ್ಞಾನದ ಮೂಲಕ ಅಣು ವಿದ್ಯುತ್ ಶಕ್ತಿ ಉತ್ಪಾದನೆಗೆ ಈ ಥೋರಿಯಂ ಬಳಕೆಯಾಗಲಿದೆ.

720 ಎಕರೆಯಲ್ಲಿ ಥೋರಿಯಂ ನಿಕ್ಷೇಪ ಜಿಯೋಲಜಿಕಲ್ ಸರ್ವೇ ಆಫ್ ಇಂಡಿಯಾ ಮಾಡಿದ ಸರ್ವೆ ಕಾರ್ಯದಲ್ಲಿ 720 ಎಕರೆಯಲ್ಲಿ ಅತಿ ಅಪರೂಪದ ಥೋರಿಯಂ ಮಿನರಲ್ಸ್ ಸಿಕ್ಕಿದ್ದು ದೇಶಕ್ಕೆ ಹೊಸ ಶಕ್ತಿಯೆ ದೊರತಂತಾಗಿದೆ. ಪರಮಾಣು ಶಕ್ತಿ ವಿಕೇಂದ್ರೀಕರಣ ಹಾಗೂ ವೆಲ್ಡಿಂಗ್ ವಿದ್ಯುದ್ವಾರಗಳು ಅಂದ್ರೆ ಟಂಗ್ಸನ್ ಜೊತೆ ಮಿಶ್ರಲೋಹವನ್ನಾಗಿ ಬಳಕೆ ಮಾಡಬಹುದು ಇದರ ಜೊತೆಗೆ ಏರೋ ಸ್ಪೇಸ್ ಮಿಶ್ರಲೋಹಗಳು ಮತ್ತು ವೇಗವರ್ಧಕಗಳು ಜೆಟ್ ಇಂಜಿನ್ ಗಳಲ್ಲಿಯೂ ಈ ಥೋರಿಯಂನ ಬಳಸಲಾಗುತ್ತೆ ಈ ಅತಿ ಅಪರೂಪದ ಖನಿಜ ಸಂಪನ್ಮೂಲದಿಂದ ದೇಶದ ಅಭಿವೃದ್ಧಿ ಹಾಗೂ ಮಿಲಿಟರಿ ವ್ಯವಸ್ಥೆಗೆ ಭಾರಿ ಪ್ರಯೋಜನವಾಗಲಿದೆ. ಕಳೆದ ವರ್ಷ ಜಿಯೋಲಾ ಜಿಕಲ್ ಸರ್ವೇ ಆಫ್ ಇಂಡಿಯಾವು ದೇಶದ ವಿವಿಧೆಡೆ ಖನಿಜ ನಿಕ್ಷೇಪಗಳ ಲಭ್ಯತೆ ಬಗ್ಗೆ ಸರ್ವೇ ನಡೆಸಿತ್ತು ಆ ವೇಳೆ ಗುಂಡ್ಲುಪೇಟೆಯಲ್ಲಿ ಥೋರಿಯಂ ನಿಕ್ಷೇಪ ಇರುವುದು ಪತ್ತೆಯಾಗಿದೆ. ಈಗಾಗಲೇ, ಗಣಿಗಾರಿಕೆ ಹರಾಜು ಪ್ರಕ್ರಿಯೆಯ ಹಂತದಲ್ಲಿದ್ದು ಕೆಲವೇ ತಿಂಗಳು‌ ಗಳಲ್ಲಿ ಗಣಿಗಾರಿಕೆ ಆರಂಭಗೊಳ್ಳುವ ನಿರೀಕ್ಷೆ ಇದೆ.