ವರ್ತಕರಿಗೆ ಬಿಸಿ ಮುಟ್ಟಿಸಿದ ಮುನ್ಸಿಪಾಲ್ ಕಮಿಷನರ್
ಚಿಂತಾಮಣಿ ನಗರದ ಜೋಡಿ ರಸ್ತೆಯ ಐ ಡಿ ಎಸ್ ಎಂ ಟಿ ಮಾರುಕಟ್ಟೆಯಲ್ಲಿರುವ ನಗರ ಸಭೆಯ ಅಂಗಡಿ ಮಳಿಗೆಗಳು ಸುಮಾರು ಜನರು ಹರಾಜಿಗೆ ಪಡೆದು ಬೇರೆ ವ್ಯಕ್ತಿಗಳಿಗೆ ದುಪಟ್ಟು ಬಾಡಿಗೆಗೆ ನೀಡಿದ್ದು ಅವರು ಸಮಯಕ್ಕೆ ಸರಿಯಾಗಿ ಲಕ್ಷಾಂತರ ರೂಪಾಯಿ ಬಾಡಿಗೆ ನೀಡದೆ ತೆರಿಗೆ ಕಟ್ಟದೆ ನಿರ್ಲಕ್ಷ ಮಾಡಿದ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಮೂರು ಬಾರಿ ನಗರಸಭೆಯಿಂದ ಎಚ್ಚರಿಕೆ ಕೊಡಲಾಗಿತ್ತು.