Bhavana Ramanna: ಮಗು ಕಳೆದುಕೊಂಡ ಬಗ್ಗೆ ಭಾವನಾ ರಾಮಣ್ಣ; ಭಾವುಕರಾಗಿ ಹೇಳಿದ್ದೇನು?
Bhavana Ramanna: ನಟಿ ಭಾವನ ರಾಮಣ್ಣಗೆ ಎರಡು ವಾರಗಳ ಹಿಂದೆಯಷ್ಟೇ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದ್ರೆ ಅವಳಿ ಮಕ್ಕಳಲ್ಲಿ ಒಂದು ಮಗು ನಿಧನವಾಗಿದೆ. ಮದುವೆ ಆಗದೆಯೇ ಭಾವನಾ ಮಗು ಮಾಡಿಕೊಳ್ಳಲು ನಿರ್ಧಾರ ಮಾಡಿದ್ದು ಈ ಬಗ್ಗೆ ಸೋಷಿಯಲ್ ಮೀಡಿಯಾ ದಲ್ಲೂ ಬಹಳಷ್ಟು ಚರ್ಚೆಯಾಗಿತ್ತು.. ಸದ್ಯ ನಟಿ ಭಾವನಾ ತಮ್ಮ ಹೆರಿಗೆ ಹೇಗೆ ನಡೆಯಿತು ಮತ್ತು ಮಗು ಕಳೆದುಕೊಂಡ ನೋವನ್ನು ಅವರೇ ಸ್ವತಃ ಹಂಚಿಕೊಂಡಿದ್ದಾರೆ.

Bhavana Ramanna -

ಬೆಂಗಳೂರು: (Bhavana Ramanna) ಐವಿಎಫ್ ಮೂಲಕ 40ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿ ಅವಳಿ ಮಕ್ಕಳಿಗೆ ಜನ್ಮ ನೀಡುವ ಖುಷಿಯಲ್ಲಿದ್ದ ನಟಿ ಭಾವನಾ ರಾಮಣ್ಣ ಒಂದು ಮಗುವನ್ನು ಕಳೆದುಕೊಂಡ ಬೇಸರದಲ್ಲಿದ್ದಾರೆ. ಹೌದು ನಟಿ ಭಾವನ ರಾಮಣ್ಣಗೆ ಎರಡು ವಾರಗಳ ಹಿಂದೆಯಷ್ಟೇ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದ್ರೆ ಅವಳಿ ಮಕ್ಕಳಲ್ಲಿ ಒಂದು ಮಗು ನಿಧನವಾಗಿದೆ. ಮದುವೆ ಆಗದೆಯೇ ಭಾವನಾ ಮಗು ಮಾಡಿಕೊಳ್ಳಲು ನಿರ್ಧಾರ ಮಾಡಿದ್ದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಬಹಳಷ್ಟು ಚರ್ಚೆಯಾಗಿತ್ತು.. ಸದ್ಯ ನಟಿ ಭಾವನಾ ತಮ್ಮ ಹೆರಿಗೆ ಹೇಗೆ ನಡೆಯಿತು ಮತ್ತು ಮಗು ಕಳೆದುಕೊಂಡ ನೋವನ್ನು ಅವರೇ ಸ್ವತಃ ಹಂಚಿಕೊಂಡಿದ್ದಾರೆ.
ಮದುವೆಯಾಗದೆಯೇ ತಾಯ್ತನವನ್ನ ಅನುಭವಿಸಬೇಕು, ತನಗೂ ಮಗು ಬೇಕು ಎನ್ನುವ ದಿಟ್ಟ ನಿರ್ಧಾರದ ಮೇರೆಗೆ ನಟಿ ಭಾವನಾ ರಾಮಣ್ಣ ತಾಯಿಯಾಗಿದ್ದರು. ವೀರ್ಯದಾನ ಪಡೆದು 40ನೇ ವಯಸ್ಸಿನಲ್ಲಿ ಐವಿಎಫ್ ಮೂಲಕ ಭಾವನಾ ರಾಮಣ್ಣ ಗರ್ಭಿಣಿಯಾದರು. ಅವಳಿ ಮಕ್ಕಳಿಗೆ ಭಾವನಾ ರಾಮಣ್ಣ ಜನ್ಮ ಕೂಡ ನೀಡಿದ್ದರು. ಸದ್ಯ ಒಂದು ಮಗುವನ್ನು ಕಳೆದುಕೊಂಡ ಬಗ್ಗೆ ಭಾವನಾ ನೋವನ್ನು ಹಂಚಿಕೊಂಡಿದ್ದಾರೆ. ನಾನು ಅವಳಿ ಮಕ್ಕಳ ನಿರೀಕ್ಷೆ ಮಾಡಿದ್ದೆ..ಆದರೆ ದುರಾದೃಷ್ಟವಶಾತ್ ಒಂದು ಮಗು ಬದುಕು ಉಳಿದಿಲ್ಲ.. ಈ ಬಗ್ಗೆ ಬಹಳಷ್ಟು ಬೇಸರ ನನ್ನಲ್ಲಿ ಇದೆ.. ಇನ್ನೂ ಆ ನೋವನ್ನು ಮರೆಯಲು ಸಾಧ್ಯ ಇಲ್ಲ.. ಸದ್ಯದ ನನ್ನ ಸಂದರ್ಭವನ್ನು ನಿಭಾಯಿಸು ವುದನ್ನು ನಾನು ಕಲಿಯಲು ಪ್ರಯತ್ನಿಸುತ್ತಿದ್ದೇನೆ ಎಂದು ಭಾವನಾ ಹೇಳಿಕೊಂಡಿದ್ದಾರೆ.
ಇದನ್ನು ಓದಿ:Daiva Movie: ಮಂಜುನಾಥ್ ಜಯರಾಜ್ ನಟನೆ, ನಿರ್ದೇಶನದ ʼದೈವʼ ಚಿತ್ರದ ಟೀಸರ್ ರಿಲೀಸ್
ಸೀಮಂತ ಬಳಿಕ ತನಗೆ ಕುಳಿತುಕೊಳ್ಳಲು ಕೂಡ ಕಷ್ಟವಾಗ್ತ ಇತ್ತು. ಆ ನಂತರ ರಕ್ತಸ್ರಾವ ಕೂಡ ಶುರುವಾಯ್ತು ಎಂದು ಹೇಳಿದ್ದಾರೆ. ಇನ್ನು ವೈದ್ಯರ ಬಳಿ ತೆರಳಿದಾಗ ಒಂದು ಮಗುವಿನ ತೂಕ ಕೂಡ ಕಡಿಮೆಯಾಗಿರುವ ವಿಚಾರ ತಿಳಿಯಿತು. ಅಲ್ಲದೇ ಆ ಮಗುವಿನ ಹೃದಯದ ಬಡಿತ ಕೂಡ ಕಡಿಮೆಯಾಗಿತ್ತು. ಹೀಗಾಗಿ 32ವಾರಕ್ಕೆ ನಾನು ಶಸ್ತ್ರ ಚಿಕಿತ್ಸೆಗೆ ಒಳಗಾಗ ಬೇಕಾಯ್ತು, ಆದರೆ ಇನ್ನೊಂದು ಮಗು ಉಳಿಸಿಕೊಳ್ಳುವ ಬಗ್ಗೆ ತಾನು ದೇವರಲ್ಲಿ ಪ್ರಾರ್ಥನೆ ಮಾಡಿದೆ ಆದರೆ ಫಲ ಸಿಗಲಿಲ್ಲ ಎಂದು ನೋವು ಹಂಚಿಕೊಂಡರು. ಇನ್ನು ಹೆಣ್ಣು ಮಗು ಆಗಿದ್ದಕ್ಕೆ ಬಹಳ ಖುಷಿ ಇದೆ. ಆದರೆ ಇದೇ ಸಮಯದಲ್ಲಿ ಮತ್ತೊಂದು ಮಗು ನನ್ನ ಮಡಿಲು ಸೇರಲಿಲ್ಲವಲ್ಲಾ ಎನ್ನುವ ಕೊರಗು ಕೂಡ ಇದೆ ಅಂದರು..