Anushka Shetty: ಮಧೂರು ದೇಗುಲದಲ್ಲಿ ನಟಿ ಅನುಷ್ಕಾ ಶೆಟ್ಟಿಯಿಂದ ಮೂಡಪ್ಪ ಸೇವೆ
ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ(Anushka Shetty) ಅವರು ಕೇರಳದ ಅತ್ಯಂತ ಪುರಾತನ ಕ್ಷೇತ್ರ ದಲ್ಲಿ ಒಂದಾದ ಮಧೂರು ಮದನಂತೇಶ್ವರ ಸಿದ್ಧಿ ವಿನಾಯಕ ದೇಗುಲದಲ್ಲಿ ಅಷ್ಟ ದ್ರವ್ಯ ಮಹಾಗಣಪತಿ ಯಾಗ ಮತ್ತು ಮೂಡಪ್ಪ ಸೇವೆಯನ್ನು ಮಾಡಿಸಿದ್ದಾರೆ. ಅವರು ಕಾರಣಾಂತರಗಳಿಂದ ದೇಗುಲಕ್ಕೆ ಭೇಟಿ ನೀಡಲು ಸಾಧ್ಯವಾಗಿಲ್ಲದಿದ್ದರೂ ಇವರ ಹೆಸರಿನಲ್ಲಿ 128 ತೆಂಗಿನಕಾಯಿ ಅಷ್ಟ ದ್ರವ್ಯ ಮಹಾಗಣಪತಿ ಯಾಗ ಮಾಡಲಾಗಿದೆ


ಕಾಸರಗೋಡು: ಕಾಂತಾರಾ ಸಿನಿಮಾ(Kantara Movie) ಪ್ಯಾನ್ ಇಂಡಿಯಾ ಮಟ್ಟಕ್ಕೆ ಹಿಟ್ ಆದ ಬಳಿಕ ಸಾಮಾನ್ಯ ಜನರು ಮಾತ್ರವಲ್ಲದೆ ಸೆಲೆಬ್ರಿಟಿಗಳೂ ದೈವ , ದೇವರಿನ ಮೊರೆ ಹೋಗುತ್ತಿದ್ದಾರೆ. ಇತ್ತೀಚೆಗಷ್ಟೆ ನಟಿ ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್, ಅಶ್ವಿನಿ ಪುನೀತ್ ರಾಜ್ ಕುಮಾರ್ , ರಕ್ಷಿತ್ ಶೆಟ್ಟಿ ಇತರರು ಕಾಪು ಮಾರಿಗುಡಿ ದೇಗುಲಕ್ಕೆ ಭೇಟಿ ನೀಡಿದ್ದರು. ಬಳಿಕ ಕಾಂತಾರಾ ಚಾಪ್ಟರ್ 1 ನಲ್ಲಿ ಬ್ಯುಸಿಯಾಗಿದ್ದ ರಿಷಭ್ ಶೆಟ್ಟಿ ಅವರು ಪಂಜುರ್ಲಿ ದೈವಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆದುಕೊಂಡಿದ್ದರು. ಇದೀಗ ಇದರ ಬೆನ್ನಲೇ ಮಂಗಳೂರು ಬೆಡಗಿ ನಟಿ ಅನುಷ್ಕಾ ಶೆಟ್ಟಿ (Anushka Shetty) ಕೇರಳದ ಕಾಸರಗೋಡಿನ ದೇಗುಲದಲ್ಲಿ ಮೂಡಪ್ಪ ಸೇವೆ ನೀಡಿ ವಿಶೇಷ ಪೂಜೆಯನ್ನು ಸಮರ್ಪಿಸಿದ್ದಾರೆ. ಕರಾವಳಿ ಮೂಲದ, ಕುಟುಂಬ ಹಿನ್ನೆಲೆಯುಳ್ಳ ಸಿನಿಮಾ ನಟಿಯರಿಗೆ ತಮ್ಮ ಮೂಲ ನೆಲೆಯ ದೇವರ ಆರಾಧನೆಯಲ್ಲಿ ಪಾಲ್ಗೊಳ್ಳುವುದು ಕೂಡ ಒಂದು ಸಂಭ್ರಮವಿದ್ದಂತೆ. ಈ ನಿಟ್ಟಿನಲ್ಲಿ ನಟಿ ಅನುಷ್ಕಾ ಕೂಡ ಈ ಹಿಂದಿನಿಂದಲೂ ಮಂಗಳೂರು ಪ್ರಸಿದ್ಧ ದೇಗುಲಗಳಿಗೆ ಭೇಟಿ ನೀಡುತ್ತಿದ್ದರು. ಇದೀಗ ಕಾಸರಗೋಡಿನ ಮಧೂರು ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ್ದಾರೆ.
ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಅವರು ಕೇರಳದ ಅತ್ಯಂತ ಪುರಾತನ ಕ್ಷೇತ್ರದಲ್ಲಿ ಒಂದಾದ ಮಧೂರು ಮದನಂತೇಶ್ವರ ಸಿದ್ಧಿ ವಿನಾಯಕ ದೇಗು ಲದಲ್ಲಿ ಅಷ್ಟ ದ್ರವ್ಯ ಮಹಾಗಣಪತಿ ಯಾಗ ಮತ್ತು ಮೂಡಪ್ಪ ಸೇವೆಯನ್ನು ಮಾಡಿಸಿದ್ದಾರೆ. ಅವರು ಕಾರಣಾಂತರಗಳಿಂದ ದೇಗುಲಕ್ಕೆ ಭೇಟಿ ನೀಡಲು ಸಾಧ್ಯ ವಾಗಿಲ್ಲದಿದ್ದರೂ ಇವರ ಹೆಸರಿನಲ್ಲಿ 128 ತೆಂಗಿನ ಕಾಯಿ ಅಷ್ಟ ದ್ರವ್ಯ ಮಹಾಗಣಪತಿ ಯಾಗ ಮಾಡಲಾಗಿದೆ. ಅಷ್ಟ ದ್ರವ್ಯ ಗಣಪತಿ ಯಾಗ ವನ್ನು ಸಂಪತ್ತು ವೃದ್ಧಿಯಾಗಲು, ಜೀವನ ಮಟ್ಟ ಸುಧಾರಿಸಲು, ವ್ಯಾಪಾರ ವ್ಯವಹಾರದಲ್ಲಿ ಶ್ರೇಯೋಭಿವೃದ್ಧಿಗಾಗಿ ಮಾಡಿಸಲಾಗುತ್ತಿದ್ದು ನಟಿ ಅನುಷ್ಕಾ ಕೂಡ ಈ ಸೇವೆ ಮಾಡಿಸಿದ್ದಾರೆ.
ಅತ್ಯಂತ ಪುರಾತನ ಕ್ಷೇತ್ರ:
ಕೇರಳದ ಕಾಸರಗೋಡಿನ ಅತ್ಯಂತ ಜನಪ್ರಿಯ ಕಾರಣಿಕ ಕ್ಷೇತ್ರ ಇದಾಗಿದೆ. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಬ್ರಹ್ಮ ಕಲಶೋತ್ಸವದ ಸಂಭ್ರಮ ನೆರೆವೇರಿದ್ದು ಹದಿನಾಲ್ಕು ವರ್ಷಗಳ ಬಳಿಕ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿದೆ. ಅದೇ ರೀತಿ ಈ ಬಾರಿ 33 ವರ್ಷಗಳ ಬಳಿಕ ಮೂಡಪ್ಪ ಸೇವೆ ನಡೆಸಿರುವುದು ವಿಶೇಷವಾಗಿದೆ. ಮಾರ್ಚ್ 27 ರಿಂದ ಎಪ್ರಿಲ್ 7 ರವರೆಗೆ ಈ ಬ್ರಹ್ಮಕಲಶೋತ್ಸವ ಕಾರ್ಯ ಕ್ರಮಗಳು ಮತ್ತು ಮೂಡಪ್ಪ ಸೇವೆ ನೆರವೇರಿದೆ. ಈ ಭಾರೀ ಸಂಖ್ಯೆಯ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸುವ ಮೂಲಕ ದೇವರಿಗೆ ಸೇವೆ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ನಟಿ ಅನುಷ್ಕಾ ಶೆಟ್ಟಿ ತನ್ನ ಸಹೋದರನ ಮೂಲಕ ದೇಗುಲದಲ್ಲಿ ಮೂಡಪ್ಪ ಸೇವೆ ಸಲ್ಲಿಕೆ ಮಾಡಿದ್ದಾರೆ.
ಇದನ್ನು ಓದಿ: Anusha Rai: ಊರ ಹಬ್ಬದಲ್ಲಿ ಕೆಂಡ ತುಳಿದು ಹರಕೆ ತೀರಿಸಿದ ಅನುಷಾ ರೈ: ವಿಡಿಯೋ ನೋಡಿ
ನಟಿ ಅನುಷ್ಕಾ ಶೆಟ್ಟಿ ಸದ್ಯ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದ ಕೀರ್ತಿಯನ್ನು ಹೊಂದಿದ್ದಾರೆ. ಬಾಹುಬಲಿಯಂತಹ ಪ್ಯಾನ್ ಇಂಡಿಯಾ ಸಿನಿಮಾದಲ್ಲಿಯೂ ಲೀಡ್ ರೋಲ್‌ನಲ್ಲಿ ಅಭಿನಯಿಸಿ ಸಿನಿಪ್ರಿಯರ ಮನ ಗೆದ್ದಿದ್ದರು. ಇತ್ತೀಚೆಗೆ ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಕೊನೆಯದಾಗಿ ನಟಿಸಿದ್ದು ಇದು ಸಹ ಹಿಟ್ ಲಿಸ್ಟ್ ಸೇರಿದೆ. ಸದ್ಯ ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾದಲ್ಲಿ ಅನುಷ್ಕಾ ಬ್ಯುಸಿಯಾಗಿದ್ದು ಈ ನಡುವೆಯೇ ಕಾಸರಗೋಡಿನ ದೇಗುಲದಲ್ಲಿ ಅಷ್ಟ ದ್ರವ್ಯ ಮಹಾಗಣಪತಿ ಯಾಗ ಮಾಡಿಸಿದ್ದಾರೆ.