Banu Mushtaq: ಬಾನು ಮುಷ್ತಾಕ್ ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ್ದರೆ ಉತ್ತಮವಾಗುತ್ತಿತ್ತು: ನಟ ಅವಿನಾಶ್
ತೀವ್ರ ವಿರೋಧದ ನಡುವೆಯೂ ಸೆಪ್ಟೆಂಬರ್ 22ರಂದು ನಡೆಯಲಿರುವ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಬಾನು ಮುಷ್ತಾಕ್ ಅವರಿಗೆ ಮೈಸೂರು ಜಿಲ್ಲಾಡಳಿತ ಅಧಿಕೃತ ಆಹ್ವಾನ ನೀಡಿದೆ. ಈ ಮಧ್ಯೆ ಇದರ ಪರ-ವಿರುದ್ಧ ಚರ್ಚೆಗಳು ನಡೆಯುತ್ತಿದ್ದು, ಇದರ ಬಗ್ಗೆ ಹಿರಿಯ ನಟ ಅವಿನಾಶ್ ಮಾತಾನಾಡಿದ್ದಾರೆ.

ನಟ ಅವಿನಾಶ್ -

ಮೈಸೂರು: ಮೈಸೂರಿನ ದಸರಾ (Mysuru Dasara) ಉದ್ಘಾಟನೆಗೆ ಬುಕರ್ ಪ್ರಶಸ್ತಿ (Booker Prize) ವಿಜೇತೆ ಬಾನು ಮುಷ್ತಾಕ್ (Banu Mushtaq) ಅವರನ್ನು ಮುಖ್ಯ ಅತಿಥಿಯಾಗಿ ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವು ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ನಟ ಅವಿನಾಶ್ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಸರಾ ಉತ್ಸವವು ಸೆಪ್ಟೆಂಬರ್ 22ರಿಂದ 11 ದಿನಗಳ ಕಾಲ ನಡೆಯಲಿದೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾನು ಮುಷ್ತಾಕ್ ಅವರನ್ನು ‘ಪ್ರಗತಿಪರ ಚಿಂತಕಿ’ ಎಂದು ಕೊಂಡಾಡಿ, ಅವರ ಇಂಟರ್‌ನ್ಯಾಷನಲ್ ಬುಕರ್ ಪ್ರಶಸ್ತಿ ಗೆಲುವಿಗಾಗಿ ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದಾರೆ. ಆದರೆ, ಬಾನು ಅವರ ಹಿಂದಿನ ಹೇಳಿಕೆಯೊಂದರಲ್ಲಿ ಕನ್ನಡ ಭಾಷೆಯನ್ನು ‘ದೇವಿ ಭುವನೇಶ್ವರಿ’ ಎಂದು ಪೂಜಿಸುವ ಬಗ್ಗೆ ಪ್ರಶ್ನಿಸಿದ್ದು ವಿವಾದಕ್ಕೆ ಕಾರಣವಾಗಿದೆ. ನಟ ಅವಿನಾಶ್, “ಬಾನು ಮುಷ್ತಾಕ್ ಅವರು ಅದ್ಭುತ ಲೇಖಕಿ, ಬೂಕರ್ ಪ್ರಶಸ್ತಿ ಪಡೆದಿದ್ದಾರೆ ಅದರ ಬಗ್ಗೆ ಪ್ರಶ್ನೇ ಮಾಡುವಂತಿಲ್ಲ. ಆದರೆ ನಾನು ಮೈಸೂರಿನ ವ್ಯಕ್ತಿ, ನಾನು ದಸರಾ ನೋಡಲು ಹೋಗುತ್ತಿದ್ದಿದ್ದು ಮೆರವಣಿಗೆ ನೋಡಲು ಅಲ್ಲ, ಮಹಾರಾಜರನ್ನು ನೋಡಲು ಹೋಗುತ್ತಿದ್ದೆ ಎಂದಿದ್ದಾರೆ.
“ಮಹಾರಾಜರು ಅಂಬಾರಿಯಲ್ಲಿ ಕುಳಿತುಕೊಂಡು ಬರುತ್ತಿದ್ದರು. ಅವರನ್ನು ನೋಡಲು ಲಕ್ಷಾಂತರ ಜನರು ಸೇರುತ್ತಿದ್ದರು. ಚಾಮುಂಡಿ ಬೆಟ್ಟಕ್ಕೆ ಹೋಗುವುದು ಪೂಜೆ ಸಲ್ಲಿಸುವುದು ನೂರಾರು ವರ್ಷಗಳ ಸಂಪ್ರದಾಯ. ಎಲ್ಲೋ ಒಂದು ಕಡೆ ಬಾನು ಮುಷ್ತಾಕ್ ಅವರು ದೇವರ ಬಗ್ಗೆ ನಂಬಿಕೆ ಇಲ್ಲ. ಭುವನೇಶ್ವರಿ ಬಗ್ಗೆ ನಂಬಿಕೆ ಇಲ್ಲ ಎಂದು ಹೇಳಿದ್ದು, ಅವರಿಗೆ ನಂಬಿಕೆ ಇಲ್ಲ ಎಂದಾದರೆ ಅವರಾಗೆ ನಾನು ದಸರಾ ಉದ್ಘಾಟನೆ ಮಾಡಲ್ಲ ಎಂದು ಆಹ್ವಾನ ತಿರಸ್ಕರಿಸಿದ್ದರೆ ಉತ್ತಮವಾಗಿರುತ್ತಿತ್ತು” ಎಂದಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಊಟ ಹೇಗಿದೆ ಎಂದು ಕೇಳಿದ ವೇಟರ್‌ಗೆ ಮಹಿಳೆ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ
ಬಿಜೆಪಿ ನಾಯಕರು ಸೇರಿದಂತೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಪ್ರಮೋದಾ ದೇವಿ ಒಡೆಯರ್ ಕೂಡ ಈ ಆಯ್ಕೆಯನ್ನು ಪ್ರಶ್ನಿಸಿದ್ದಾರೆ. “ಬಾನು ಅವರು ಚಾಮುಂಡೇಶ್ವರಿ ಮತ್ತು ಭುವನೇಶ್ವರಿಯ ಬಗ್ಗೆ ತಮ್ಮ ಗೌರವವನ್ನು ಸ್ಪಷ್ಟಪಡಿಸಬೇಕು,” ಎಂದು ಯದುವೀರ ಒತ್ತಾಯಿಸಿದ್ದಾರೆ. ಬಿಜೆಪಿ ಶಾಸಕ ಸಿ.ಟಿ. ರವಿ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಈ ಆಯ್ಕೆಯನ್ನು ‘ಹಿಂದೂ ಸಂಪ್ರದಾಯಕ್ಕೆ ಅಗೌರವ’ ಎಂದು ಟೀಕಿಸಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯನವರು, “ದಸರಾ ನಾಡಹಬ್ಬವಾಗಿದ್ದು, ಯಾವುದೇ ಧರ್ಮಕ್ಕೆ ಸೀಮಿತವಲ್ಲ,” ಎಂದು ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅವಿನಾಶ್, ದಿವಂಗತ ನಟ ವಿಷ್ಣುವರ್ಧನ್ ಅವರಿಗೆ ಸ್ಮಾರಕದ ವಿಷಯದಲ್ಲಿಯೂ ಮಾತನಾಡಿದ್ದಾರೆ. “ಮೈಸೂರಿನಲ್ಲಿ ಸರ್ಕಾರ ಸ್ಮಾರಕವನ್ನು ನಿರ್ಮಿಸಿದೆ, ಆದರೆ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ಆಗಿದ್ದರೆ ಒಳಿತಾಗಿತ್ತು. ಕಾನೂನು ತೊಡಕುಗಳಿವೆ, ಆದರೆ ಸುದೀಪ್ ಅವರ ಸ್ಮಾರಕ ಯೋಜನೆ ಯಶಸ್ವಿಯಾದರೆ ಸಂತೋಷವಾಗುತ್ತದೆ,” ಎಂದಿದ್ದಾರೆ. ಜೊತೆಗೆ, ವಿಷ್ಣುವರ್ಧನ್‌ಗೆ ಕರ್ನಾಟಕ ರತ್ನ ಮತ್ತು ಪದ್ಮಭೂಷಣ ಗೌರವ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.