BBK 11: 5 ಮಂದಿ ನಾಮಿನೇಟ್: ಕುತೂಹಲ ಕೆರಳಿಸಿದ ವಾರದ ಕತೆ ಕಿಚ್ಚನ ಜೊತೆ
ಮನೆಯೊಳಗಿರುವ ಏಳು ಸ್ಪರ್ಧಿಗಳ ಪೈಕಿ ಐದು ಮಂದಿ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಇಬ್ಬರು ಎಲಿಮಿನೇಟ್ ಆಗಲಿದ್ದಾರೆ. ಉಳಿದ ಐದು ಸ್ಪರ್ಧಿಗಳು ಫಿನಾಲೆ ವಾರಕ್ಕೆ ಕಾಲಿಡಲಿದ್ದಾರೆ. ಕಿಚ್ಚನ ಸಾರಥ್ಯದಲ್ಲಿ ಇಂದು ಮಹತ್ವದ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಕೊನೆಯ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮ ಇಂದು ನಡೆಯಲಿದೆ. ಮುಂದಿನ ವಾರ ಫಿನಾಲೆ ಆಗಿರುವ ಕಾರಣ ಇದು ಸೀಸನ್ 11ರ ಕೊನೆಯ ಪಂಚಾಯಿತಿ ಆಗಿದೆ. ಹೀಗಾಗಿ ಎಲ್ಲರ ಚಿತ್ತ ಇಂದಿನ ಎಪಿಸೋಡ್ ಮೇಲೆ ನೆಟ್ಟಿದೆ. ಮತ್ತೊಂದು ವಿಶೇಷ ಎಂದರೆ ಎಲ್ಲ ಸ್ಪರ್ಧಿಗಳಿಗೆ ಇಂದಿನದು ಮಹತ್ವದ ದಿನವಾಗಿದೆ. ಯಾಕೆಂದರೆ ಈ ವೀಕೆಂಡ್ ಡಬಲ್ ಎಲಿಮಿನೇಷನ್ ನಡೆಯಲಿದೆ. ಸದ್ಯ ಮನೆಯಲ್ಲಿರುವ ಏಳು ಸ್ಪರ್ಧಿಗಳ ಪೈಕಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಆಚೆ ಬರಲಿದ್ದಾರೆ. ಮನೆಯಿಂದ ಹೊರಹೋಗಲು 5 ಮಂದಿ ನಾಮಿನೇಟ್ ಕೂಡ ಆಗಿದ್ದಾರೆ. ಹಾಗಾದರೆ, ನಾಮಿನೇಟ್ ಆದ ಐದು ಸ್ಪರ್ಧಿಗಳು ಯಾರು?, ಇಂದು ಯಾರು ಎಲಿಮಿನೇಟ್ ಆಗಬಹುದು?. ಇಲ್ಲಿದೆ ನೋಡಿ ಮಾಹಿತಿ.
ಮನೆಯೊಳಗಿರುವ ಏಳು ಸ್ಪರ್ಧಿಗಳ ಪೈಕಿ ಐದು ಮಂದಿ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಇಬ್ಬರು ಎಲಿಮಿನೇಟ್ ಆಗಲಿದ್ದಾರೆ. ಉಳಿದ ಐದು ಸ್ಪರ್ಧಿಗಳು ಫಿನಾಲೆ ವಾರಕ್ಕೆ ಕಾಲಿಡಲಿದ್ದಾರೆ. ಕಿಚ್ಚನ ಸಾರಥ್ಯದಲ್ಲಿ ಇಂದು ಮಹತ್ವದ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಈ ವಾರ ಮನೆಯಿಂದ ಆಚೆ ಹೋಗಲು ಉಗ್ರಂ ಮಂಜು, ಗೌತಮಿ ಜಾಧವ್, ಧನರಾಜ್ ಆಚಾರ್, ರಜತ್ ಕಿಶನ್, ಭವ್ಯಾ ಗೌಡ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಯಾರಿಬ್ಬರು ಹೊರಹೋಗುತ್ತಾರೆ ಎಂಬುದು ನೋಡಬೇಕಿದೆ.
ನಾಮಿನೇಷನ್ ಪ್ರಕ್ರಿಯೆಯಲ್ಲಿ ಭವ್ಯಾ ಅವರನ್ನು ಹೊರತುಪಡಿಸಿ ಇನ್ಯಾರೂ ಕೂಡ ತ್ರಿವಿಕ್ರಮ್ ಅವರ ಹೆಸರನ್ನು ತೆಗೆದುಕೊಂಡೇ ಇಲ್ಲ. ನಾಮಿನೇಟ್ ಆಗಬೇಕು ಎಂದರೆ ಕನಿಷ್ಠ ಎರಡು ವೋಟ್ ಬೀಳಬೇಕು. ಒಂದು ವೋಟ್ ಬಿದ್ದರೆ ಬಿಗ್ ಬಾಸ್ ಅದನ್ನು ಪರಿಗಣಿಸುವುದಿಲ್ಲ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಭವ್ಯಾ ವೋಟ್ ಬಿಟ್ಟು ಮತ್ಯಾರೂ ತ್ರಿವಿಕ್ರಮ್ ಅವರನ್ನು ನಾಮಿನೇಟ್ ಮಾಡಿರಲಿಲ್ಲ. ಹೀಗಾಗಿ, ಅವರು ನಾಮಿನೇಷನ್‌ನಿಂದ ಪಾರಾಗಿ ಫಿನಾಲೆ ವಾರ ತಲುಪಿದರು.
ಇನ್ನು ಅಲ್ಟಿಮೇಟ್ ಕ್ಯಾಪ್ಟನ್ ಹನುಮಂತು ಅವರಿಗೆ ಬಿಗ್ ಬಾಸ್ ವಿಶೇಷ ಅಧಿಕಾರ ಕೊಟ್ಟರು. ಹನುಮಂತುಗೆ ಬಿಗ್ ಬಾಸ್ ಈ ಸೀಸನ್‌ನ ಉತ್ತಮ ಸ್ಪರ್ಧಿಯನ್ನು ನೀವು ನಾಮಿನೇಷನ್‌ನಿಂದ ಪಾರು ಮಾಡಬೇಕು. ನಿಮ್ಮ ಆಯ್ಕೆಯನ್ನು ಯೋಚಿಸಿ ಘೋಷಿಸಿ ಎನ್ನಲಾಗಿತ್ತು. ಆಗ ಅಲ್ಟಿಮೇಟ್ ಕ್ಯಾಪ್ಟನ್ ಹನುಮಂತ ಅವರು ಬಿಗ್ ಬಾಸ್ ನಾನು ಮೋಕ್ಷಿತಾಕ್ಕನ ನಾಮಿನೇಷನ್‌ನಿಂದ ಪಾರು ಮಾಡುತ್ತಿದ್ದೇನೆ ಎಂದು ಘೋಷಣೆ ಮಾಡುತ್ತಾರೆ.
ಕ್ಯಾಪ್ಟನ್ ಹನುಮಂತು ಅವರ ಈ ನಿರ್ಧಾರ ಎಲ್ಲರಿಗೂ ಶಾಕಿಂಗ್ ಆಗಿದ್ದು ಮೋಕ್ಷಿತಾ ಅವರ ಕಣ್ಣೀರು ಸುರಿಸಿದರು. ಸೂಕ್ತ ಕಾರಣ ನೀಡಿದ ಹನುಮಂತು, ಈ ಮನೆಯಲ್ಲಿ ಮೋಕ್ಷಿತಾ ಎಂಟರ್ಟೈನ್ ಮೆಂಟ್ ಚೆನ್ನಾಗಿತ್ತು. ಯಾವುದೇ ಕಲ್ಮಶ ಇಲ್ಲದೇ ಆಟ ಚೆನ್ನಾಗಿ ಆಡುತ್ತಾರೆ. ತಪ್ಪು ಮಾಡಿದ್ದನ್ನ ಒಪ್ಪಿಕೊಂಡು ಚೆನ್ನಾಗಿ ಆಡಿದ್ದಾರೆ. ಹೀಗಾಗಿ ಮೋಕ್ಷಿತಾ ಅಕ್ಕನ ನಾಮಿನೇಷನ್‌ನಿಂದ ಪಾರು ಮಾಡಲು ಇಷ್ಟಪಡುತ್ತೇನೆ ಎಂದಿದ್ದಾರೆ. ಹೀಗೆ ಇವರು ಕೂಡ ಫಿನಾಲೆ ವಾರ ತಲುಪಿದ್ದಾರೆ.
BBK 11: ಕಿಚ್ಚನ ಸಾರಥ್ಯದಲ್ಲಿ ಇಂದು ನಡೆಯಲಿದೆ ಒಂದು ಮಹತ್ವದ ಎಲಿಮಿನೇಷನ್