#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Chhaava Movie: ರಿಲೀಸ್​ಗೂ ಮುನ್ನವೇ ದಾಖಲೆ ಬರೆದ ಛಾವಾ! ಅಡ್ವಾನ್ಸ್‌ ಬುಕ್ಕಿಂಗ್‌ನಲ್ಲೇ ದಾಖಲೆಯ ಕಲೆಕ್ಷನ್

ಛತ್ರಪತಿ ಸಂಭಾಜಿ ಮಹಾರಾಜನ ಕಥಾ ಹಂದರ ಇರುವ ಛಾವಾ ಸಿನಿಮಾ ರಿಲೀಸ್ ಗೆ ಕೆಲವೇ ದಿನಗಳು ಬಾಕಿ ಇದ್ದು ಅಡ್ವಾನ್ಸ್‌ ಬುಕ್ಕಿಂಗ್ ನಲ್ಲಿ ಸಿನಿಮಾ ಬಹುನಿರೀಕ್ಷೆ ಹುಟ್ಟಿಸಿದೆ‌. ಮೊದಲ ದಿನವೇ ಬರೋಬ್ಬರಿ 1.4 ಲಕ್ಷ ಟಿಕೆಟ್ ಗಳು ಬುಕ್ ಆಗಿದ್ದು 5.46 ಕೋಟಿ ರೂಪಾಯಿ ಗಳಿಸಿದೆ. ವರದಿ ಒಂದರ ಪ್ರಕಾರ ಈ ಸಿನಿಮಾಕ್ಕೆ ಮಹಾರಾಷ್ಟ್ರ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಅತೀ ಹೆಚ್ಚು ಟಿಕೆಟ್ ಬುಕ್ ಆಗಿದೆ ಎನ್ನಲಾಗಿದೆ.

ಅಡ್ವಾನ್ಸ್‌ ಬುಕಿಂಗ್‌ನಲ್ಲೇ ದಾಖಲೆ ಬರೆದ ಛಾವಾ!

Chhaava

Profile Pushpa Kumari Feb 11, 2025 5:34 PM

ಮುಂಬೈ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಕ್ಕಿ ಕೌಶಲ್ ಅಭಿನಯದ ಛಾವ (Chhaava) ಸಿನಿಮಾ ತೆರೆ ಮೇಲೆ ಬರಲು ಇನ್ನೇನು ಕೆಲವೇ ದಿನ ಬಾಕಿ ಇದ್ದು ಬಿಡುಗಡೆಗೂ ಮೊದಲೇ ಬಹಳಷ್ಟು ಕ್ರೇಜ್ ಹುಟ್ಟಿಸಿದೆ. ಬಹುತೇಕ ಸ್ಟಾರ್ ನಟ ನಟಿಯರ ಸಂಗಮವಿರುವ ಈ ಸಿನಿಮಾ ರಿಲೀಸ್ ಗೂ ಮುನ್ನವೇ ಸಾಕಷ್ಟು ವಿಚಾರದಿಂದ ಬಹಳಷ್ಟು ಚರ್ಚೆಯಲ್ಲಿದ್ದು ಫೆಬ್ರವರಿ 14 ರಂದು ಈ ಸಿನಿಮಾ ರಿಲೀಸ್ ಗೆ ರೆಡಿ ಯಾಗಿದೆ. ಈಗಾಗಲೇ ಚಿತ್ರದ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಆರಂಭ ವಾಗಿದೆ. ರಿಲೀಸ್​ಗೂ ಮೊದಲೇ ದಾಖಲೆ ಸೃಷ್ಟಿಸಿದ್ದು ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದ್ದು ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್‌ ಮಾಡುವುದರಲ್ಲಿ ಡೌಟೇ ಇಲ್ಲ.

ಛತ್ರಪತಿ ಸಂಭಾಜಿ ಮಹಾರಾಜನ ಕಥಾ ಹಂದರ ಇರುವ ಛಾವಾ ಸಿನಿಮಾ ರಿಲೀಸ್ ಗೆ ಕೆಲವೇ ದಿನಗಳು ಬಾಕಿ ಇದ್ದು ಮೊದಲ ದಿನದ ಬುಕ್ಕಿಂಗ್ ನಲ್ಲಿ ಸಿನಿಮಾ ಬಹುನಿರೀಕ್ಷೆ ಹುಟ್ಟಿಸಿದೆ‌. ಮೊದಲ ದಿನವೇ ಬರೋಬ್ಬರಿ 1.4 ಲಕ್ಷ ಟಿಕೆಟ್ ಗಳು ಬುಕ್ ಆಗಿದ್ದು  5.46 ಕೋಟಿ ರೂಪಾಯಿ ಗಳಿಸಿದೆ. ವರದಿ ಒಂದರ ಪ್ರಕಾರ ಈ ಸಿನಿಮಾಕ್ಕೆ ಮಹಾ ರಾಷ್ಟ್ರ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಅತೀ ಹೆಚ್ಚು ಟಿಕೆಟ್ ಬುಕ್ ಆಗಿದೆ ಎನ್ನಲಾಗಿದೆ.

1681ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಸಂಭಾಜಿ ಮಹಾರಾಜರ ಪಟ್ಟಾಭಿಷೇಕ ಆದ ಬಳಿಕ ಅವರ ಆಳ್ವಿಕೆ, ಪರಾಕ್ರಮ ಇತ್ಯಾದಿಗಳು ಈ ಸಿನಿಮಾದ ಮುಖ್ಯ ಎಳೆಗಳಾಗಿವೆ. ದೆಹಲಿ ಸುಲ್ತಾನರ ವಿರುದ್ಧ ಮರಾಠ ಸಾಮ್ರಾಜ್ಯದ ವೈಭವ ಕಾಪಾಡುವ ನೆಲೆಯಲ್ಲಿ ಸಂಭಾಜಿಯ ನೀತಿ ನಿರ್ಣಯಗಳು ಈ ಸಿನಿಮಾದ ಹೈಲೈಟ್ ಆಗಲಿವೆ.

ಇದನ್ನು ಓದಿ: Viral News: ವಿಡಿಯೋ ಶೋದಲ್ಲಿ ಅಶ್ಲೀಲ ಮಾತುಕತೆ: ಯುಟ್ಯೂಬರ್‌ಗಳ ಮೇಲೆ ಬಿತ್ತು ಕೇಸ್

ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್ ಅಭಿನಯಿಸಿದ್ದಾರೆ. ಪ್ರತಿಸ್ಪರ್ಧಿಯಾಗಿ ಮೊಘಲ್ ಸಾಮ್ರಾಜ್ಯದ ಕುಖ್ಯಾತ ಆಡಳಿತಗಾರರಲ್ಲಿ ಒಬ್ಬರಾದ ಔರಂಗಜೇಬ್ ಪಾತ್ರದಲ್ಲಿ ಅಕ್ಷಯ್ ಖನ್ನಾ ಅಭಿನಯಿಸಿದ್ದಾರೆ. ಬಹುಭಾಷಾ ನಟಿ, ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಸಂಭಾಜಿ ಪತ್ನಿ ಯೇಸುಬಾಯಿ ಭೋನ್ಸಾಲೆ ಪಾತ್ರದಲ್ಲಿ ಅಭಿನಯಿ ಸಿದ್ದಾರೆ. ಅಶುತೋಷ್ ರಾಣಾ, ದಿವ್ಯಾ ದತ್ತಾ ಸೇರಿದಂತೆ ಇನ್ನು ಅನೇಕ ತಾರಾಗಣ ಸಂಗಮ ಈ ಸಿನೆಮಾದಲ್ಲಿದೆ. ಯುದ್ಧ, ತ್ಯಾಗ ಬಲಿದಾನಗಳು ಇತಿಹಾಸ ಪುಟ ಸೇರಿದ್ದ ಅನೇಕ ವಿಚಾರಗಳ ಬಗೆಗೆ ಲಕ್ಷ್ಮಣ್ ಉಟೇಕರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇಬ್ಬರು ಮಹಾನಟರ ಜಿದ್ದಾ ಜಿದ್ದಿ ಫೈಟ್ ಅಭಿಮಾನಿಗಳನ್ನು ರಂಜಿಸಲು ಸಿದ್ಧಗೊಂಡಿದೆ. ಈ ಮೂಲಕ ಛಾವಾ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಸಿದ್ಧವಾಗಿದ್ದು ಅಭಿಮಾನಿಗಳಿಗೆ ಕುತೂಹಲ ಇಮ್ಮಡಿಗೊಳಿಸುತ್ತಿದೆ.