ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Devil Movie: ಈ ವರ್ಷವೇ 'ಡೆವಿಲ್' ಬಿಡುಗಡೆ? ಸಿಕ್ತು ಹೊಸ ಅಪ್ಡೇಟ್!

The Devil Movie: ದರ್ಶನ್ ಅವರು ‘ದಿ ಡೆವಿಲ್’ ಸಿನಿಮಾದ ಚಿತ್ರೀಕರಣ ಕೂಡ ಕಂಪ್ಲೀಟ್ ಮಾಡಿ ದ್ದಾರೆ. ಈಗಾಗಲೇ ಚಿತ್ರ ಬಿಡುಗಡೆಗೂ ಸಿದ್ದವಾಗಿತ್ತು. ಇದೀಗ ದರ್ಶನ್ ಜೈಲು ಪಾಲಾದ ಬೆನ್ನಲ್ಲೇ ಡೆವಿಲ್ ಚಿತ್ರ ರಿಲೀಸ್ ಆಗುತ್ತಾ ? "ಮಿಲನಾ ಪ್ರಕಾಶ್'' ಮತ್ತು ತಂಡ ಚಿತ್ರವನ್ನು ತೆರೆಗೆ ತರಲು ಮುಂದಾ ಗುತ್ತಾ? ಎನ್ನುವ ಪ್ರಶ್ನೆ ಕೂಡ ಎಲ್ಲರಲ್ಲೂ ಇದೆ. ಇದೀಗ ಈ ಬಗ್ಗೆ ನಿರ್ಮಾಪಕರ ಸಂಘದ ಅಧ್ಯಕ್ಷ ರಾಗಿರುವ ''ಉಮೇಶ್ ಬಣಕಾರ್'' ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್ ಇಲ್ಲದೆಯೇ ಬಿಡುಗಡೆ ಆಗುತ್ತಾ ಡೆವಿಲ್?

Profile Pushpa Kumari Aug 19, 2025 4:05 PM

ಬೆಂಗಳೂರು: ನಟ ದರ್ಶನ್ (Darshan) ಅವರು ಇದೀಗ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್ ಮುಂತಾದವರ ಜಾಮೀನನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ರದ್ದು ಮಾಡಿದ್ದು ದರ್ಶನ್ ಮತ್ತೆ ಜೈಲಿನಲ್ಲಿ ಸಮಯ ಕಳೆಯ ಬೇಕಾದ ಸಂದರ್ಭ ಬಂದಿದೆ.‌ ಅದಕ್ಕೂ ಮುನ್ನ ದರ್ಶನ್ ಅವರು ‘ದಿ ಡೆವಿಲ್’ (The Devil Movie) ಸಿನಿಮಾದ ಚಿತ್ರೀಕರಣ ಕೂಡ ಕಂಪ್ಲೀಟ್ ಮಾಡಿದ್ದಾರೆ.ಈಗಾಗಲೇ ಚಿತ್ರ ಬಿಡುಗಡೆಗೂ ಸಿದ್ದವಾಗಿತ್ತು. ಇದೀಗ ದರ್ಶನ್ ಜೈಲು ಪಾಲಾದ ಬೆನ್ನಲ್ಲೇ ಡೆವಿಲ್ ಚಿತ್ರ ರಿಲೀಸ್ ಆಗುತ್ತಾ ? "ಮಿಲನಾ ಪ್ರಕಾಶ್'' ಮತ್ತು ತಂಡ ಚಿತ್ರವನ್ನು ತೆರೆಗೆ ತರಲು ಮುಂದಾಗುತ್ತಾ? ಎನ್ನುವ ಪ್ರಶ್ನೆ ಕೂಡ ಎಲ್ಲರಲ್ಲೂ ಇದೆ. ಇದೀಗ ಈ ಬಗ್ಗೆ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿರುವ ''ಉಮೇಶ್ ಬಣಕಾರ್'' ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್ ತಮ್ಮ ಬಾಲ್ಯದ ಸ್ನೇಹಿತನಾಗಿರುವ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ''ಕಾಡು ಶಿವು'' ಜೊತೆ ಡೆವಿಲ್ ಸಿನಿಮಾದ ಕುರಿತು ಚರ್ಚೆ ಮಾಡಿದ್ದಾರೆ. ಈ ಸಿನಿಮಾಕ್ಕೆ ಸಂಬಂಧ ಪಟ್ಟಂತೆ ದರ್ಶನ್ ತಮ್ಮ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಡಬ್ಬಿಂಗ್ ಕೂಡ ಮುಗಿಸಿದ್ದಾರೆ. "ನನ್ನೆಲ್ಲಾ ಕರ್ತವ್ಯವನ್ನು ನಾನು ಪೂರ್ಣ ಮಾಡಿದ್ದೇನೆ. ಮುಂದೇನಾಗುತ್ತೋ ಏನೋ ಗೊತ್ತಿಲ್ಲ. ಆದ್ದರಿಂದ ಯಾರು ಕಷ್ಟ ಅನುಭವಿಸುವುದು ಬೇಡ'' ಎಂದು ದರ್ಶನ್ ಹೇಳಿದ್ದರಂತೆ ಎಂದು ಉಮೇಶ್ ಬಣಕಾರ್ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Actor Darshan: ಜೈಲಿನಲ್ಲಿನ ದರ್ಶನ್‌ ಪೋಟೊ ವೈರಲ್‌ ಮಾಡಿದ್ಯಾರು?; ಪೊಲೀಸರಿಗೆ ಪುನೀತ್‌ ಕೆರೆಹಳ್ಳಿ ಪ್ರಶ್ನೆ

ಮಿಲನ ಪ್ರಕಾಶ್ ಹೇಳಿದಂತೆ ಆದಷ್ಟು ಬೇಗ ಸಿನಿಮಾ ರಿಲೀಸ್ ಮಾಡ್ತೀವಿ ಎಂದು ಹೇಳಿದ್ದರು. ಅದೇ ರೀತಿ ಡೆವಿಲ್ ಚಿತ್ರ ಇದೇ ವರ್ಷ ಅಕ್ಟೋಬರ್-23 ರಂದು ರಿಲೀಸ್ ಆಗಲಿದೆ ಎನ್ನ ಲಾಗುತ್ತಿದೆ. ಆದರೆ, ಮಿಲನ ಪ್ರಕಾಶ್ ಈ ಒಂದು ಡೇಟ್ ಅನ್ನು ಅಧಿಕೃತವಾಗಿಯೇ ಘೋಷಣೆ ಮಾಡಬೇಕಿದೆ. 'ಡೆವಿಲ್’ ಸಿನಿಮಾ ಬಿಡುಗಡೆಗೆ ನಿರ್ಮಾಪಕರು ಸಿದ್ಧರಾಗಿದ್ದು ಇದೀಗ ದರ್ಶನ್ ಇಲ್ಲದೆ ‘ಡೆವಿಲ್’ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ ಎನ್ನಲಾಗುತ್ತಿದೆ.

ಡೆವಿಲ್ ಚಿತ್ರದಲ್ಲಿ ದರ್ಶನ್ ಪಾತ್ರ ಹೇಗಿದೆ ಅನ್ನುವ ಕುತೂಹಲ ಪ್ರತಿಯೊಬ್ಬರಿಗೂ ಕೂಡ ಇದೆ. ಡೆವಿಲ್ ಚಿತ್ರದಲ್ಲಿ ದರ್ಶನ್‌ಗೆ ರಚನಾ ರೈ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಬಾಲಿವುಡ್‌ ನಟ ಮಹೇಶ್ ಮಾಂಜ್ರೇಕರ್ ಅಭಿನಯಿಸಿದ್ದಾರೆ. ಮುಖೇಶ್ ರಿಷಿ ಸೇರಿದಂತೆ ಇನ್ನು ಅನೇಕ ಖ್ಯಾತ ನಟರು ಕೂಡ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು ಸುಧಾಕರ್ ಎಸ್.ರಾಜ್ ಕ್ಯಾಮರಾವರ್ಕ್ ಮಾಡಿದ್ದಾರೆ. ಸದ್ಯ ದರ್ಶನ್ ಡೆವಿಲ್ ಸಿನಿಮಾದ ಬಗ್ಗೆ ನಿರೀಕ್ಷೆ ಕೂಡ ಹೆಚ್ಚಾಗುವಂತೆ ಮಾಡಿದೆ.