ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kamal Haasan: ಬ್ರಾಹ್ಮಣನಾಗಿದ್ದರೂ 2 ಮದುವೆ ಯಾಕೆ ಎಂದು ಕೇಳಿದವನಿಗೆ ಕಮಲ್ ಹಾಸನ್ ಹೇಳಿದ್ದೇನು?

ನಾನು ರಾಮನನ್ನು, ಅವನ ಮಾರ್ಗವನ್ನೂ ಅನುಸರಿಸುವುದಿಲ್ಲ. ಆದರೆ ಬಹುಶಃ ನಾನು ಮೂವರು ಹೆಂಡತಿಯರನ್ನು ಹೊಂದಿದ್ದ ರಾಮನ ತಂದೆ ದಶರಥನನ್ನು ಅನುಸರಿಸುತ್ತೇನೆ ಎಂದು ತಮಿಳಿನ ಹಿರಿಯ ನಟ ಕಮಲ್ ಹಾಸನ್ ಹೇಳಿದ್ದಾರೆ. 2 ಮದುವೆಯಾದ ಬಗ್ಗೆ ಅವರು ನೀಡಿರುವ ಉತ್ತರ ಸದ್ಯ ವೈರಲ್‌ ಆಗಿದೆ.

ನಾನು ರಾಮನನ್ನು ಅನುಸರಿಸುವುದಿಲ್ಲ: ಕಮಲ್ ಹಾಸನ್

ಚೆನ್ನೈ: ನಾನು ರಾಮನನ್ನು, ಅವನ ಮಾರ್ಗವನ್ನೂ ಅನುಸರಿಸುವುದಿಲ್ಲ. ಆದರೆ ಬಹುಶಃ ನಾನು ಮೂವರು ಹೆಂಡತಿಯರನ್ನು ಹೊಂದಿದ್ದ ರಾಮನ ತಂದೆ ದಶರಥನನ್ನು ಅನುಸರಿಸುತ್ತೇನೆ ಎಂದು ತಮಿಳಿನ ಹಿರಿಯ ನಟ (Veteran Tamil actor) ಕಮಲ್ ಹಾಸನ್ (Kamal Haasan) ಹೇಳಿದರು. ತಮ್ಮ ಮುಂಬರುವ ಚಿತ್ರ 'ಥಗ್ ಲೈಫ್' (Thug Life) ಪ್ರಚಾರದಲ್ಲಿ ತೊಡಗಿರುವ ನಟ ಕಮಲ್ ಹಾಸನ್ ಅವರು ಶುಕ್ರವಾರ ದಶಕದ ಹಿಂದೆ ಸಂಸತ್ ಸದಸ್ಯ ಜಾನ್ ಬ್ರಿಟಾಸ್ ಅವರೊಂದಿಗೆ ನಡೆದ ಘಟನೆಯನ್ನು ನೆನಪಿಸಿಕೊಂಡರು. ತಮ್ಮ ಮದುವೆಗೆ ಸಂಬಂಧಿಸಿ ಅವರು ಕೇಳಿದ ಪ್ರಶ್ನೆಗೆ ತಾವು ನೀಡಿದ ಉತ್ತರವನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.

ʼಥಗ್ ಲೈಫ್ʼ ಚಿತ್ರದ ಪ್ರಚಾರದಲ್ಲಿ ಸಕ್ರಿಯರಾಗಿರುವ ನಟ ಕಮಲ್ ಹಾಸನ್ ಇತ್ತೀಚೆಗೆ ತಮ್ಮ ಮದುವೆಗಳಿಗೆ ಸಂಬಂಧಿಸಿ ನಡೆದ ಚರ್ಚೆ ಮತ್ತು ಕೆಲವರು ನೀಡಿರುವ ತೀರ್ಪುಗಳನ್ನು ನೆನಪಿಸಿಕೊಂಡು, ತಾವು ಬ್ರಾಹ್ಮಣನಾಗಿದ್ದು ರಾಮನ ಅನುಯಾಯಿಯಾಗಿದ್ದರೂ ಎರಡು ಬಾರಿ ಏಕೆ ವಿವಾಹವಾದಿರಿ ಎಂದು ಕೇಳಲಾದ ಘಟನೆಯ ನೆನಪನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.

ಇದು ಸುಮಾರು 10–15 ವರ್ಷಗಳ ಹಿಂದೆ ನಡೆದ ಘಟನೆ. ನನ್ನ ಆಪ್ತಮಿತ್ರರಾದ ಸಂಸದ ಬ್ರಿಟಾಸ್ ಅವರು ಒಮ್ಮೆ ಕಾಲೇಜು ವಿದ್ಯಾರ್ಥಿಗಳ ಗುಂಪಿನ ಮುಂದೆ ನೀವು ಒಳ್ಳೆಯ ಬ್ರಾಹ್ಮಣ ಕುಟುಂಬದಿಂದ ಬಂದವರು. ಆದರೂ ನೀವು ಎರಡು ಬಾರಿ ಹೇಗೆ ಮದುವೆಯಾಗಿದ್ದೀರಿ ಎಂದು ಪ್ರಶ್ನಿಸಿದ್ದರು. ಅದಕ್ಕೆ ನಾನು, ಒಳ್ಳೆಯ ಕುಟುಂಬದಿಂದ ಬಂದವರಿಗೂ ಮದುವೆಗೂ ಏನು ಸಂಬಂಧ ಎಂದು ಉತ್ತರಿಸಿದ್ದೆ.

ಅದಕ್ಕೆ ಪ್ರತಿಯಾಗಿ ಅವರು, ನಾನು ರಾಮನನ್ನು ಪ್ರಾರ್ಥಿಸುವುದರಿಂದ ನಾನು ಅವನಂತೆ ಬದುಕಬೇಕು ಎಂದು ಹೇಳಿದರು. ನಾನು ಯಾವುದೇ ದೇವರನ್ನು ಪ್ರಾರ್ಥಿಸುವುದಿಲ್ಲ ಅಥವಾ ರಾಮನ ಮಾರ್ಗವನ್ನು ಅನುಸರಿಸುವುದಿಲ್ಲ ಎಂದು ಆಗ ನಾನು ಅವರಿಗೆ ಸ್ಪಷ್ಟಪಡಿಸಿದೆ. ಬಹುಶಃ ನಾನು ಮೂವರು ಹೆಂಡತಿಯರನ್ನು ಹೊಂದಿದ್ದ ಅವನ ತಂದೆ ದಶರಥನನ್ನು ಅನುಸರಿಸುತ್ತೇನೆ ಎಂದು ಹೇಳಿದೆ ಎಂಬುದನ್ನು ಅವರು ನೆನಪಿಸಿಕೊಂಡರು.

ಇದನ್ನೂ ಓದಿ: Aishwarya Rai: ಮತ್ತೆ ತಾಯಿಯಾಗ್ತಿದ್ದಾರಾ ಐಶ್ವರ್ಯ ರೈ? ಎರಡನೇ ಮಗುವಿನ ಬಗ್ಗೆ ಕೇಳಿದಾಗ ಅಭಿಷೇಕ್‌ ಹೇಳಿದ್ದೇನು?

ಚಿತ್ರದ ಕಲಾವಿದರಾದ ತ್ರಿಶಾ ಕೃಷ್ಣನ್, ಸಿಲಂಬರಸನ್ ಟಿ.ಆರ್. ಅವರಿಗೂ ಮದುವೆಯ ಬಗ್ಗೆ ಅವರ ದೃಷ್ಟಿಕೋನಗಳ ಬಗ್ಗೆ ಕೇಳಲಾಯಿತು. ತ್ರಿಶಾ ಅವರು ನನಗೆ ಮದುವೆಯಲ್ಲಿ ನಂಬಿಕೆ ಇಲ್ಲ. ಅದು ನಡೆದರೂ, ನಡೆಯದಿದ್ದರೂ ಪರವಾಗಿಲ್ಲ ಎಂದು ಬಹಿರಂಗವಾಗಿಯೇ ತಮ್ಮ ಅಭಿಪ್ರಾಯ ಹಂಚಿಕೊಂಡರು.

1975ರಲ್ಲಿ 'ಮೆಲ್ನಾಟು ಮರುಮಗಳು' ಚಿತ್ರದಲ್ಲಿ ಕಮಲ್ ಹಾಸನ್ ಅವರೊಂದಿಗೆ ಕೆಲಸ ಮಾಡಿದ್ದ ಶಾಸ್ತ್ರೀಯ ನೃತ್ಯಗಾರ್ತಿ ವಾಣಿ ಗಣಪತಿ ಅವರನ್ನು 1978ರಲ್ಲಿ ವಿವಾಹವಾದರು. 1988ರಲ್ಲಿ ಇಬ್ಬರೂ ಬೇರೆಯಾದರು. ಅನಂತರ ಕಮಲ್ ಹಾಸನ್ ಅವರು ನಟಿ ಸಾರಿಕಾ ಅವರೊಂದಿಗೆ ಸಂಬಂಧ ಬೆಳೆಸಿದರು. ಈ ದಂಪತಿಗೆ ಮೊದಲ ಮಗಳು ಶ್ರುತಿ ಹಾಸನ್ 1986ರಲ್ಲಿ ಜನಿಸಿದರು.

ಸಾರಿಕಾ ಮತ್ತು ಕಮಲ್ ಹಾಸನ್ ದಂಪತಿ 1988ರಲ್ಲಿ ವಿವಾಹವಾದರು ಮತ್ತು 1991ರಲ್ಲಿ ತಮ್ಮ ಎರಡನೇ ಮಗಳು ಅಕ್ಷರಾಳನ್ನು ಸ್ವಾಗತಿಸಿದರು. 2002ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಂಪತಿಗೆ 2004ರಲ್ಲಿ ಪ್ರತ್ಯೇಕವಾದರು. ಅನಂತರ ಕಮಲ್ 2005ರಿಂದ 2016ರವರೆಗೆ ನಟಿ ಗೌತಮಿಯೊಂದಿಗೆ ಡೇಟಿಂಗ್ ಮಾಡಿದರು.